Bigg Boss Telugu 9 Winner: ರನ್ನರ್‌ ಅಪ್ ಆದ ಕನ್ನಡತಿ ತನುಜಾ; ತೆಲುಗು ಬಿಗ್‌ಬಾಸ್-9 ಟ್ರೋಫಿ ಗೆದ್ದ ಕಾಮನ್‌ಮ್ಯಾನ್

ಬಿಗ್‌ಬಾಸ್‌ ತೆಲುಗು ಸೀಸನ್ 9 ಗ್ರ್ಯಾಂಡ್ ಫಿನಾಲೆ ಮುಕ್ತಾಯವಾಗಿದೆ. ಕಾಮನ್‌ಮ್ಯಾನ್ ಆಗಿ ಮನೆ ಒಳಗೆ ಹೋಗಿದ್ದ ಕಲ್ಯಾಣ್ ಪದಾಲ ಟ್ರೋಫಿ ಗೆದ್ದು ಅಚ್ಚರಿ ಮೂಡಿಸಿದ್ದಾರೆ. ಸಂಜನಾ ಗರ್ಲಾನಿ, ಇಮಾನ್ಯುಯೆಲ್ ಸೇರಿ ಪ್ರಬಲ ಸ್ಪರ್ಧಿಗಳನ್ನೆಲ್ಲಾ ಹಿಂದಿಕ್ಕಿ ಗೆಲುವಿನ ನಗೆ ಬೀರಿದ್ದಾರೆ. ಸಾವಿರಾರು ಮಂದಿ ಜನಸಾಮಾನ್ಯರು(ಸೆಲೆಬ್ರೆಟಿ ಅಲ್ಲದವರು) ಈ ಬಾರಿ ತೆಲುಗು ಬಿಗ್‌ಬಾಸ್ ಮನೆ ಒಳಗೆ ಹೋಗಲು ಯತ್ನಿಸಿದ್ದರು. ಅವರನ್ನೆಲ್ಲಾ ಹಿಂದಿಕ್ಕಿ ಕಲ್ಯಾಣ್ ಅವಕಾಶ ಪಡೆದಿದ್ದರು. ಇದೀಗ ಟ್ರೋಫಿ ಗೆದ್ದಿದ್ದಾರೆ.

ಆರಂಭದಲ್ಲಿ ಕಲ್ಯಾಣ್ ವೀಕ್ಷಕರನ್ನು ನಿರಾಸೆಗೊಳಿಸಿದ್ದರು. ಆದರೆ 4ನೇ ವಾರದಿಂದ ಆಟದ ಗತಿ ಬದಲಿಸಿ ಫಿನಾಲೆವರೆಗೂ ಬಂದಿದ್ದರು. ಸಂಜನಾ ಗಲ್ರಾನಿ, ಕಲ್ಯಾಣ್, ಇಮಾನ್ಯುಯೆಲ್, ತನುಜಾ ಹಾಗೂ ಪವನ್ 5 ಮಂದಿ ಫಿನಾಲೆಗೆ ಬಂದಿದ್ದರು. ಸಂಜನಾ 4ನೇ ರನ್ನರ್ ಅಪ್‌ ಆಗಿ ಬಹಳ ಬೇಗ ಹೊರ ಬಂದಿದ್ದರು. ಈ ಹಿಂದೆ ಮಂದಿ ಮಂದಿಯಿಂದ ಎಲಿಮಿನೇಟ್ ಆಗಿ ಮತ್ತೆ ಮನೆ ಒಳಗೆ ಹೋಗುವ ಅವಕಾಶ ಪಡೆದಿದ್ದರು.

From Commoner to Champion Kalyan Padala Lifts Bigg Boss Telugu 9 Trophy as Tanuja Gowda Falls Short

ಬೆಂಗಳೂರು ಮೂಲದ ನಟಿ ತನುಜಾಗೌಡ ತಮ್ಮ ಆಟದಿಂದ ಬಿಗ್‌ಬಾಸ್ ಮನೆಯಲ್ಲಿ ಗಮನ ಸೆಳೆದಿದ್ದರು. ಕನ್ನಡದ ಬ್ಲಾಕ್ ಬಸ್ಟರ್ ಚಿತ್ರ '6-5=2' ಚಿತ್ರದಲ್ಲಿ ಆಕೆ ಕಾಣಿಸಿಕೊಂಡಿದ್ದರು. 'ಮುದ್ದ ಮಂದಾರಂ' ಎಂಬ ತೆಲುಗು ಧಾರಾವಾಹಿಯಲ್ಲಿ ನಟಿಸಿ ಟಾಲಿವುಡ್ ಅಂಗಳದಲ್ಲಿ ಜನಪ್ರಿಯರಾಗಿದ್ದರು. ಈ ಬಾರಿ ತನುಜಾ ಬಿಗ್‌ಬಾಸ್ ತೆಲುಗು ಟ್ರೋಫಿ ಗೆಲ್ತಾರೆ ಎಂದೇ ವೀಕ್ಷಕರು ಭಾವಿಸಿದ್ದರು. ಆದರೆ ಆಕೆ ಕನ್ನಡದವಳು, ತೆಲುಗು ಹುಡುಗಿ ಅಲ್ಲ ಎಂದು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟಾಕ್ಕಿದ್ದರು. ಅದೇ ಆಕೆಗೆ ಹಿನ್ನಡೆ ಆಯಿತು ಎನ್ನಲಾಗ್ತಿದೆ.

ಇನ್ನು ಟ್ರೋಫಿ ಗೆದ್ದ ಕಾಮನ್‌ಮ್ಯಾನ್ ಕಲ್ಯಾಣ್ ಪದಲ ಅವರಿಗೆ 35 ಲಕ್ಷ ರೂ. ಬಹುಮಾನದ ಹಣ ಸಿಕ್ಕಿದೆ. ಜೊತೆಗೆ ಒಂದು ಎಸ್‌ಯುವಿ ಕಾರ್ ಕೂಡ ಗೆದ್ದಿದ್ದಾರೆ. ಒಟ್ಟು 50 ಲಕ್ಷ ರೂ. ಬಹುಮಾನದ ಹಣದಲ್ಲಿ 2ನೇ ರನ್ನರ್ ಅಪ್ ಡೆಮನ್ ಪವನ್ 15 ಲಕ್ಷ ರೂ. ತೆಗೆದುಕೊಂಡು ಮನೆಯಿಂದ ಹೊರಬಂದಿದ್ದರು. ಇನ್ನು ಬಹುಮಾನದ ಹಣದ ಜೊತೆಗೆ ಸಂಭಾವನೆಯಾಗಿ ಕಲ್ಯಾಣ್ ಅವರಿಗೆ ಭಾರೀ ಮೊತ್ತ ಸಿಕ್ಕಿದೆ ಎನ್ನಲಾಗ್ತಿದೆ.

ಆಂಧ್ರದ ವಿಜಯನಗರದ ಮೂಲದ ಕಲ್ಯಾಣ್ ಪದಾಲ, ಭಾರತೀಯ ಸೈನ್ಯದಲ್ಲಿ ಕೆಲಸ ಪಡೆದಿದ್ದಾರೆ. 3 ವರ್ಷಗಳ ಕಾಲ ಸೈನಿಕನಾಗಿ ಸೇವೆ ಸಲ್ಲಿಸಿದ್ದರು. ಬಾಲ್ಯದಿಂದಲೂ ನಟನೆಯ ಬಗ್ಗೆ ಆಸಕ್ತಿ ಬೆಳಸಿಕೊಂಡಿದ್ದರು. ಹಾಹಾಗಿ ಬಿಗ್ ಬಾಸ್ ಕಡೆ ಮುಖ ಮಾಡಿದ್ದರು. ಕಾಮನ್‌ಮ್ಯಾನ್ ಆಗಿ ದೊಡ್ಮನೆ ಪ್ರವೇಶಿಸಿದ್ದರು, ಈಗ ಟ್ರೋಫಿ ಗೆದ್ದು ಹೊರ ಬಂದಿದ್ದಾರೆ. ಹಾಸ್ಯನಟ ಇಮ್ಯಾನ್ಯುಯೆಲ್ 3ನೇ ರನ್ನರ್ ಅಪ್ ಆಗಿದ್ದಾರೆ. ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿಕೊಂಡಿದ್ದ ಅವರಿಗೆ ಕೊನೆ ಹಂತದಲ್ಲಿ ಅದೃಷ್ಟ ಕೈಕೊಟ್ಟಿತ್ತು.

ಸೆಪ್ಟೆಂಬರ್ 7ರಂದು ಬಿಗ್‌ಬಾಸ್ ತೆಲುಗು ಸೀಸನ್-9 ಆರಂಭವಾಗಿತ್ತು. 15 ಮಂದಿ ಸ್ಪರ್ಧಿಗಳು ದೊಡ್ಮನೆ ಒಳಗೆ ಹೋಗಿದ್ದರು. ಅದರಲ್ಲಿ ಕಲ್ಯಾಣ್ ಸೇರಿ 6 ಮಂದಿ ಕಾಮನ್‌ನರ್ ಇದ್ದರು. 7 ಮಂದಿ ವೈಲ್ಡ್‌ ಕಾರ್ಡ್ ಎಂಟ್ರಿ ಪಡೆದಿದ್ದರು. ಈ ಬಾರಿ ಕೂಡ ನಟ ನಾಗಾರ್ಜುನ ಶೋ ನಿರೂಪಣೆ ಮಾಡಿದ್ದರು. ಒಟ್ಟು 106 ದಿನಗಳ ಕಾಲ ಈ ಬಾರಿ ಸೀಸನ್ ನಡೆದಿದೆ.

ರನ್ನರ್ ಅಪ್ ಆಗಿರುವ ಕನ್ನಡತಿ ತನುಜಾಗೆ ಯಾವುದೇ ಬಹುಮಾನದ ಮೊತ್ತ ಸಿಗಲಿಲ್ಲ. ಇದು ಸಹಜವಾಗಿಯೇ ನಿರಾಸೆ ಮೂಡಿಸಿದೆ. ಆದರೆ 106 ದಿನ ಮನೆ ಒಳಗೆ ಇದ್ದ ಆಕೆಗೆ ಒಳ್ಳೆ ಸಂಭಾವನೆ ಸಿಕ್ಕಿದೆ ಎನ್ನಲಾಗ್ತಿದೆ.

More from Filmibeat

Read more about: bigg boss tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X