ಖ್ಯಾತ ನಿರ್ಮಾಪಕರು ನಿನ್ನ ನೋಡಬೇಕಂತೆ ರೆಸಾರ್ಟ್‌ಗೆ ಬಾ ; ತೆಲುಗು ಚಿತ್ರರಂಗದ ಕೊಳಕು ವ್ಯವಸ್ಥೆ ಬಯಲು ಮಾಡಿದ ಚೆಲುವೆ

ಬಣ್ಣದ ಲೋಕದಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಕಂಡರೆ ಮುಕ್ಕಿ ತಿನ್ನುವರು ತುಂಬಾ ಜನ ಇದ್ದಾರೆ. ಇಲ್ಲಿ ಬಹುತೇಕರಲ್ಲ ಆದರೆ ಕೆಲವರು ಮುಖವಾಡದ ಬದುಕನ್ನು ಬದುಕುತ್ತಾರೆ. ಕೆಲವರು ಪ್ರಚಾರದ ಹುಚ್ಚಿಗೆ ಬರುತ್ತಾರೆ, ಇನ್ನೂ ಕೆಲವರು ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡಲು ಬರುತ್ತಾರೆ.

ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಹೀಗೆ.. ಆ ಇಂಡಸ್ಟ್ರೀ ಈ ಇಂಡಸ್ಟ್ರೀ ಅಂತ ಅಲ್ಲ. ಎಲ್ಲ ಚಿತ್ರೋದ್ಯಮಗಳಲ್ಲಿ ಬಹುತೇಕ ಈ ಕಥೆ ಒಂದೇ. ಇದಕ್ಕೆ ಕೈಗನ್ನಡಿ ಎಂಬಂತೆ ಆ ನಿರ್ಮಾಪಕ ನೈಟ್ ಔಟಿಗೆ ಕರೆದ, ಈ ನಾಯಕ ಡೇಟಿಂಗ್ ಕರೆದ, ಚಿತ್ರೀಕರಣದ ಸಮಯದಲ್ಲಿ ಬೇಕಂತಲೇ ಬಿಗಿಯಾಗಿ ಅಪ್ಪಿದ, ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಹೇಳಿದ,

From NYC to Hyderabad The Viral Expos Shaking Tollywood s Foundation

ಹೀಗೆ ಚಿತ್ರರಂಗದ ಇನ್ನೊಂದು ಮುಖದ ಪರಿಚಯವನ್ನು ಮಾಡಿಸುವ ಮೂಲಕ ಅನೇಕ ನಟಿಯರು ತಮ್ಮ ಸಹ ನಟರು, ನಿರ್ಮಾಪಕರ ಹಾಗೂ ನಿರ್ದೇಶಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ. ಈ ಮೂಲಕ ಪ್ರೇಕ್ಷಕರಿಗೂ ಪ್ರತಿಷ್ಠಿತರ ಅಸಲಿಯತ್ತನ್ನು ಪರಿಚಯ ಮಾಡಿಸಿದ್ದಾರೆ.

ಆದರೂ ಕೂಡ ತಮ್ಮ ಕಾಮತೃಷೆಗೆ ನಾಯಕಿಯರ ಹಿಂದೆ ಬೀಳುವ ಕಾಮಾಂಧರ ಸಂತತಿ ಕಡಿಮೆಯಾಗುತ್ತಿಲ್ಲ. ಇಷ್ಟೆಲ್ಲಾ ಆದರೂ ಕೂಡ ಯಾರಲ್ಲಿಯೂ ಭಯ ಎನ್ನುವುದು ಇಲ್ಲ. ಇದಕ್ಕೆ ಪುರಾವೆ ಎನ್ನುವಂತೆ ತೆಲುಗು ಚಿತ್ರರಂಗದ ಕರಾಳ ಸತ್ಯವನ್ನು ಯುವತಿಯೊಬ್ಬರು ಹೇಳಿದ್ಧಾರೆ. ಸಾಮಾಜಿಕ ಜಾಲತಾಣದಲ್ಲಿ ತಮಗಾದ ಕಹಿ ಅನುಭವ ಹಂಚಿಕೊಂಡಿದ್ಧಾರೆ. ಈ ಯುವತಿಯ ಹೆಸರು ಪಿಕು ನೆಮಲಿ.

ಹೌದು, ಪಿಕು ನೆಮಲಿ.. ಮೂಲತಃ ತೆಲುಗು ಚೆಲುವೆ . ಆದರೆ ಬದುಕು ರೂಪಿಸಿಕೊಂಡಿದ್ದು ಅಮೆರಿಕಾದಲ್ಲಿ. ಸಪ್ತಸಾಗರದಾಚೆ ಇದ್ದರೂ ತಮ್ಮ ಭಾಷೆ ಮತ್ತು ಸಂಸ್ಕ್ರತಿಯ ಕುರಿತು ಪೋಸ್ಟ್ ಗಳನ್ನು ಹಂಚಿಕೊಳ್ಳುವ ಪಿಕು ನೆಮಲಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿ ಹೆಸರು ಮಾಡಿದ್ದಾರೆ.

ಆದರೆ ಇವರಿಗೆ ಚಿತ್ರರಂಗ ಪ್ರವೇಶ ಮಾಡುವ ಬಯಕೆ. ಹೀಗಾಗಿಯೇ ತೆಲುಗು ಚಿತ್ರರಂಗದ ಬಾಗಿಲು ಬಡಿಯುವ ಪ್ರಯತ್ನವನ್ನು ಪಿಕು ನೆಮಲಿ ಮಾಡಿದ್ದಾರೆ. ಚಿತ್ರರಂಗದ ಕರಾಳ ಮುಖ ಕಂಡು ಬೆಚ್ಚಿ ಬಿದ್ದಿದ್ದಾರೆ.

From NYC to Hyderabad The Viral Expos Shaking Tollywood s Foundation

ತಮಗಾದ ಈ ಕಹಿ ಅನುಭವವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿರುವ ಪಿಕು ನೆಮಲಿ, ಗೆಳೆಯರ ಸಹಾಯದಿಂದ ನನಗೆ ಸಹಾಯಕ ನಿರ್ದೇಶಕರ ನಂಬರ್ ಸಿಕ್ಕಿತ್ತು ಆ ಪೈಕಿ ಒಬ್ಬರ ಜೊತೆ ಮಾತನಾಡುವಾಗ ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕ್ರತಿಯ ಪರಿಚಯ ನನಗಾಯ್ತು ಎಂದಿದ್ದಾರೆ.

ನಿಮ್ಮ ಪೋರ್ಟ್‌ ಪೋಲಿಯೊ ಕಳಿಸಿ ಎಂದರು, ನಾನು ಕೂಡ ಅವರಿಗೆ ನನ್ನ ಫೋಟೊಗಳನ್ನು ಕಳಿಸಿದೆ ಎಂದಿರುವ ಪಿಕು ನೆಮಲಿ ಆ ನಂತರ ಅವರು ನನಗೆ ಕರೆ ಮಾಡಿ ಕಮಿಟ್‌ಮೆಂಟ್‌ಗೆ ನೀವು ರೆಡಿಯಲ್ವಾ..? ಎಂದು ಕೇಳಿದರು ಎಂದು ಹೇಳಿದ್ದಾರೆ.

ಕಮಿಟ್‌ಮೆಂಟ್‌ ಅಂದರೆ ನಾನು ಶಿಸ್ತು, ಬದ್ದತೆ, ನಟನೆಯ ಕುರಿತು ಕೇಳುತ್ತಿದ್ದಾರೆ ಎಂದುಕೊಂಡೆ, ಹೀಗಾಗಿ ನಾನು ಬಹಳ ಕಮಿಟ್​​ಮೆಂಟ್ ಇರುವ ಯುವತಿ, ನಾನು ಪಾತ್ರಕ್ಕಾಗಿ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತೇನೆ ಎಂದೆಲ್ಲ ಹೇಳಿದೆ ಎಂದಿರುವ ಪಿಕು ನೆಮಲಿ ಆ ನಂತರ ಆ ವ್ಯಕ್ತಿ ಮತ್ತೆ ಕರೆ ಮಾಡಿ ಖ್ಯಾತ ನಿರ್ಮಾಪಕರು ಭೇಟಿ ಮಾಡಲು ಬಯಸಿದ್ಧಾರೆ, ರೆಸಾರ್ಟ್ ಒಂದರಲ್ಲಿ ನಿಮ್ಮ ಮೀಟಿಂಗ್ ಫಿಕ್ಸ್ ಮಾಡಿದ್ದೇನೆ, ನೀವು ಫ್ಲೈಟ್ ಹತ್ತಿ ಬಂದುಬಿಡಿ ಎಂದ ಎಂದು ಹೇಳಿದ್ದಾರೆ. ಪರೋಕ್ಷವಾಗಿ ನಿರ್ಮಾಪಕನ ಜೊತೆಗೆ ಸಮಯ ಕಳೆಯಬೇಕು ಎಂದು ಕೂಡ ಅವನು ಹೇಳಿದ ಎಂದು ಪಿಕು ನೆಮಲಿ ತಮ್ಮ ವಿಡಿಯೋದಲ್ಲಿ ಹೇಳಿದ್ಧಾರೆ.

ಆತನ ಉದ್ಧೇಶ ಅರ್ಥ ಆಗುತ್ತಿದ್ದಂತೆ ಕಾಲ್ ಕಟ್ ಮಾಡಿ, ಬ್ಲಾಕ್ ಮಾಡಿದರೂ ಕೂಡ ಬೇರೆ ಬೇರೆ ಸಂಖ್ಯೆಗಳಿಂದ ಆ ವ್ಯಕ್ತಿ ಮತ್ತೆ ಕರೆ ಮಾಡಿದ ಎಂದು ಕೂಡ ಹೇಳಿರುವ ಪಿಕು ಚಿತ್ರರಂಗದ ಈ ಅಸುರಕ್ಷಿತ ಮತ್ತು ಭಯದ ವಾತಾವರಣದಿಂದ ಹಲವು ಯುವತಿಯರು ಚಿತ್ರರಂಗಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.ಕಾಸ್ಟಿಂಗ್ ಕೌಚ್ ಸಂಸ್ಕ್ರತಿ ವಿರುದ್ದ ಕಿಡಿ ಕಾರಿದ್ದಾರೆ.

ಸದ್ಯ ಇವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತೆಲುಗು ಚಿತ್ರರಂಗದ ನಟಿ ಮತ್ತು ಹೋರಾಟಗಾರ್ತಿ ಆಂಕರ್ ಝಾನ್ಸಿ ಅವರು ಪಿಕು ಅವರಿಗೆ ಬೆಂಬಲ ಸೂಚಿಸಿದ್ದಾರೆ. ಚಿತ್ರರಂಗದಲ್ಲಿರುವ ಲೈಂಗಿಕ ದೌರ್ಜನ್ಯ ತಡೆ ಸಮಿತಿಗೆ ಅಧಿಕೃತವಾಗಿ ದೂರು ನೀಡುವಂತೆ ಪಿಕು ಅವರಿಗೆ ಧೈರ್ಯ ತುಂಬಿದ್ದಾರೆ.ಝಾನ್ಸಿ ಈ ಸಮಿತಿಯ ಸದಸ್ಯೆ ಕೂಡ ಆಗಿದ್ದು, ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಭರವಸೆಯನ್ನು ಯುವತಿಗೆ ನೀಡಿದ್ದಾರೆ.

More from Filmibeat

English summary
"The glitter of Tollywood meets a harsh reality. A New York Telugu girl risks it all to expose the casting couch culture haunting the industry. Is the price of stardom too high? See the bold claims that have the entire Telugu film industry talking."
Read more about: casting couch tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X