ರಾತ್ರಿಯಿಡೀ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿ ಬೆಳಗ್ಗೆ ಎದ್ದು ಮದುವೆ ಆಗಿದ್ದ ಖ್ಯಾತ ನಟಿ!

ಕಮರ್ಷಿಯಲ್ ಸಿನಿಮಾಗಳಲ್ಲಿ ಕಥೆ ಬಯಸುತ್ತೋ ಇಲ್ಲವೋ ಸ್ಪೆಷಲ್ ಸಾಂಗ್ ಇರಲೇಬೇಕು ಎನ್ನುವ ವಾದ ಕೆಲವರದ್ದು. ಇವತ್ತಿಗೂ ಐಟಂ ಸಾಂಗ್ಸ್ ಮೇಲಿನ ಕ್ರೇಜ್ ಕಮ್ಮಿ ಆಗಿಲ್ಲ. ಅತ್ತ ಬಾಲಿವುಡ್ ಹಾಗೂ ಇತ್ತ ಟಾಲಿವುಡ್‌ನಲ್ಲಿ ಇಂತಹ ಪ್ರಯತ್ನ ಹೆಚ್ಚಾಗಿ ನಡೆಯುತ್ತದೆ.

ಸ್ಟಾರ್ ನಟಿಯರೇ ಬಿಂದಾಸ್ ಡ್ಯಾನ್ಸಿಂಗ್ ನಂಬರ್‌ಗಳಿಗೆ ಹೆಜ್ಜೆ ಹಾಕುತ್ತಾರೆ. ಅದಕ್ಕಾಗಿ ಭರ್ಜರಿ ಸಂಭಾವನೆ ಕೂಡ ಪಡೆಯುತ್ತಾರೆ. ಬಾಲಿವುಡ್ ಅಂಗಳದಲ್ಲಿ ಶುರುವಾದ ಈ ಟ್ರೆಂಡ್ ಬಳಿಕ ದಕ್ಷಿಣದ ಸಿನಿಮಾಗಳಿಗೂ ಬಂತು. ಒಮ್ಮೆ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ರೆ, ಪದೇ ಪದೆ ಇದೇ ಆಫರ್ ಬರುತ್ತದೆ ಎಂದು ಭಯ ಪಡುವವರು ಇದ್ದಾರೆ. ಕೆಲವೊಮ್ಮೆ ಚಿತ್ರದ ನಾಯಕಿಯ ಸಾಂಗ್ ಅನ್ನು ಸ್ಪೆಷಲ್ ಸಾಂಗ್ ಎನ್ನುವಂತೆ ಚಿತ್ರಿಸುವುದು ಇದೆ.

From Wedding to Dance Floor How famous Actress Balanced Marriage and shoot

ದಕ್ಷಿಣ ಭಾರತದ ಖ್ಯಾತ ನಟಿ ಬೆಳಗ್ಗೆ ಮದುವೆ ಇಟ್ಟುಕೊಂಡು ರಾತ್ರಿ ಸ್ಪೆಷಲ್ ಸಾಂಗ್‌ಗೆ ಡ್ಯಾನ್ಸ್ ಮಾಡಿದ್ದರು. ಈ ವಿಚಾರವನ್ನು ಕಿರುತೆರೆ ಕಾರ್ಯಕ್ರಮದಲ್ಲಿ ಸ್ವತಃ ಆ ನಟಿಯೇ ಹೇಳಿಕೊಂಡಿದ್ದರು. ಮದುವೆ ಪ್ರತಿಯೊಬ್ಬರ ಜೀವನದಲ್ಲಿ ಬಹಳ ಪ್ರಮುಖವಾದ ಘಟ್ಟ. ಬದುಕಿನ ದೊಡ್ಡ ತಿರುವಿನ ಸಂಭ್ರಮದ ಸಮಯ. ಕೆಲವರು ತಿಂಗಳಗಟ್ಟಲೆ ಕೆಲಸಕ್ಕೆ ರಜೆ ಹಾಕಿ ಮದುವೆ ತಯಾರಿ ನಡೆಸುತ್ತಾರೆ. ತಮ್ಮ ಮದುವೆ ಬಗ್ಗೆ ಸಾಕಷ್ಟು ಕನಸುಗಳನ್ನು ಕಾಣುತ್ತಾರೆ.

ಕೆಲವರು ಮಾತ್ರ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಮದುವೆ ಆಗುವುದು ಇದೆ. ಚಿತ್ರರಂಗದ ನಟ, ನಟಿಯರು ಕೂಡ ಇದೇ ರೀತಿ ಮದುವೆ ಆಗಿರುವ ಉದಾಹರಣೆಗಳಿವೆ. ತಮಿಳು ನಟಿ ರಮ್ಯಾಕೃಷ್ಣ ಕೂಡ ಹಿಂದಿನ ದಿನ ರಾತ್ರಿ 2 ಗಂಟೆವರೆಗೆ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿ ಮರುದಿನ ತಮ್ಮ ಮದುವೆ ಶಾಸ್ತ್ರಗಳಲ್ಲಿ ಭಾಗವಹಿಸಿದ್ದರು. ನಿರ್ದೇಶಕ ಕೃಷ್ಣವಂಶಿ ಅವರನ್ನು ರಮ್ಯಾ ಮದುವೆ ಆಗಿದ್ದಾರೆ.

From Wedding to Dance Floor How famous Actress Balanced Marriage and shoot

2003, ಜೂನ್ 12ರಂದು ರಮ್ಯಾಕೃಷ್ಣ ಹಾಗೂ ಕೃಷ್ಣವಂಶಿ ಮದುವೆ ನಡೆದಿತ್ತು. ರಾಜಮೌಳಿ ನಿರ್ದೇಶನದ 'ಸಿಂಹಾದ್ರಿ' ಚಿತ್ರದಲ್ಲಿ ಜ್ಯೂ. ಎನ್‌ಟಿಆರ್ ಹೀರೊ ಆಗಿ ನಟಿಸಿದ್ದರು. ಅದೇ ಚಿತ್ರದಲ್ಲಿ ಒಂದು ಸ್ಪೆಷಲ್ ಸಾಂಗ್ ಇತ್ತು. 'ಚಿನ್ನದಮ್ಮೆ ಚೀಕುಲು' ಎಂದು ಶುರುವಾಗುವ ಹಾಡಿಗೆ ಎಂ. ಎಂ ಕೀರವಾಣಿ ಟ್ಯೂನ್ ಹಾಕಿದ್ದರು. ಮನೊ ಹಾಗೂ ಶ್ರೇಷಾ ಘೋಷಾಲ್ ಹಾಡು ಹಾಡಿದ್ದರು. ಅದ್ಧೂರಿ ಸೆಟ್ ಹಾಕಿ ಈ ಸಾಂಗ್ ಶೂಟ್ ಮಾಡಲಾಗಿತ್ತು. ಅದೇ ಮೊದಲ ಬಾರಿಗೆ ಅಂಥಾದೊಂದು ಡ್ಯಾನ್ಸಿಂಗ್ ನಂಬರ್‌ಗೆ ರಮ್ಯಾ ಹೆಜ್ಜೆ ಹಾಕಿದ್ದರು.

'ಬಾಹುಬಲಿ' ಚಿತ್ರದಲ್ಲಿ ಶಿವಗಾಮಿ ಆಗಿ ನಟಿಸುವುದಕ್ಕೂ ಮುನ್ನ ರಾಜಮೌಳಿ ನಿರ್ದೇಶನದ 'ಸಿಂಹಾದ್ರಿ' ಚಿತ್ರದ ಐಟಂ ಸಾಂಗ್‌ಗೆ ರಮ್ಯಾಕೃಷ್ಣ ಹೆಜ್ಜೆ ಹಾಕಿದ್ದರು. ಸಾಂಗ್ ಸೂಪರ್ ಹಿಟ್ ಆಗಿತ್ತು. ಕನ್ನಡ ಸಿನಿಮಾಗಳಲ್ಲಿ ಕೂಡ ರಮ್ಯಾಕೃಷ್ಣ ನಟಿಸಿದ್ದಾರೆ. 'ರಕ್ತಕಣ್ಣೀರು' ಹಾಗೂ 'ಬಾ ಬಾರೋ ರಸಿಕ' ಚಿತ್ರಗಳಲ್ಲಿ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದರು.

ಇವತ್ತಿಗೂ ಬಹುಬೇಡಿಕೆಯ ನಟಿಯಾಗಿ ರಮ್ಯಾಕೃಷ್ಣ ಗುರ್ತಿಸಿಕೊಂಡಿದ್ದಾರೆ. ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಳ್ಳುತ್ತಿದ್ದಾರೆ. 'ಬಾಹುಬಲಿ' ಚಿತ್ರದ ಶಿವಗಾಮಿ ಪಾತ್ರ ಆಕೆಗೆ ಅವಕಾಶಗಳ ಸುರಿಮಳೆ ಆಗುವಂತೆ ಮಾಡಿತು. 'ಅಂಜನಿಪುತ್ರ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ತಾಯಿ ಪಾತ್ರದಲ್ಲಿ ಆಕೆ ನಟಿಸಿದ್ದರು. ಕನ್ನಡದಲ್ಲಿ ಅದೇ ಆಕೆಯ ಕೊನೆಯ ಸಿನಿಮಾ.

ಸೂಪರ್ ಸ್ಟಾರ್ ರಜನಿಕಾಂತ್ ಮಡದಿ ಆಗಿ 'ಜೈಲರ್'-2 ಚಿತ್ರದಲ್ಲಿ ರಮ್ಯಾ ನಟಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ತೆಲುಗಿನ 'ಪುರುಷೋತ್ತಮುಡು' ಎಂಬ ಚಿತ್ರದಲ್ಲಿ ಕೂಡ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Read more about: song ramya krishnan tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X