For Quick Alerts
  ALLOW NOTIFICATIONS  
  For Daily Alerts

  ಬಂಧಿತ ಯೂಟ್ಯೂಬರ್‌ ಭಾರ್ಗವ್‌ನ ನಿಜ ರೂಪ ಬಹಿರಂಗಪಡಿಸಿ ಪೊಲೀಸರು

  |

  ತೆಲುಗಿನ ಜನಪ್ರಿಯ ಯೂಟ್ಯೂಬರ್‌ ಹಾಗೂ ನಟ ಚಿಪ್ಪಡ ಭಾರ್ಗವ್ ಅನ್ನು ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಪೊಲೀಸರು ಎರಡು ದಿನದ ಹಿಂದೆ ಬಂಧಿಸಿದ್ದಾರೆ.

  ಟಿಕ್‌ ಟಾಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ನಲ್ಲಿ ತಮಾಷೆಯ ಕಿರುವಿಡಿಯೋಗಳನ್ನು ಪ್ರಕಟಿಸಿ ಜನಪ್ರಿಯನಾಗಿದ್ದ ಭಾರ್ಗವ್ ಅಲಿಯಾಸ್ ಫನ್ ಬಕೆಟ್ ಭಾರ್ಗವ್‌ ಬಂಧನದ ಬಗ್ಗೆ ಇಂದು ವಿಶಾಖಪಟ್ಟಣ ಪೊಲೀಸರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

  ಅತ್ಯಾಚಾರ ಆರೋಪದಲ್ಲಿ ಭಾರ್ಗವ್ ಬಂಧನ: ಸಹ ನಟಿ 'ಓ ಮೈ ಗಾಡ್' ನಿತ್ಯಾ ಹೇಳಿದ್ದೇನು?ಅತ್ಯಾಚಾರ ಆರೋಪದಲ್ಲಿ ಭಾರ್ಗವ್ ಬಂಧನ: ಸಹ ನಟಿ 'ಓ ಮೈ ಗಾಡ್' ನಿತ್ಯಾ ಹೇಳಿದ್ದೇನು?

  ಕಿರು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದ 14 ವರ್ಷ ವಯಸ್ಸಿನ ಯುವತಿಗೆ ಮೆಸೆಜ್‌ ಮಾಡಿದ್ದ ಆರೋಪಿ ಭಾರ್ಗವ್‌ ಆಕೆಯೊಂದಿಗೆ ಪರಿಚಯ ಬೆಳೆಸಿಕೊಂಡು, ತಾನು ಮಾಡುವ ವಿಡಿಯೋಗಳಲ್ಲಿ ನಟಿಸುವಂತೆ ಕೇಳಿದ್ದಾನೆ.

  ಸಂತ್ರಸ್ತೆಯೂ ವಿಡಿಯೋಗಳನ್ನು ಮಾಡುತ್ತಿದ್ದ ಕಾರಣ ಈಗಾಗಲೇ ಸೆಲೆಬ್ರಿಟಿ ಯೂಟ್ಯೂರ್‌ ಆಗಿದ್ದ ಭಾರ್ಗವ್‌ ಜೊತೆ ವಿಡಿಯೋದಲ್ಲಿ ನಟಿಸುವ ಅವಕಾಶ ಸಿಕ್ಕ ಕಾರಣ ಯುವತಿ ಒಪ್ಪಿಕೊಂಡಿದ್ದಾಳೆ. ಆಕೆಯನ್ನು ಹೈದರಾಬಾದ್‌ನ ತನ್ನ ಕೋಂಪಲ್ಲಿಯ ಮನೆಗೆ ಕರೆಸಿಕೊಂಡು ಆಕೆಯ ಇಷ್ಟಕ್ಕೆ ವಿರುದ್ಧವಾಗಿ ಅತ್ಯಾಚಾರ ಮಾಡಿದ್ದಾನೆ. ಜೊತೆಗೆ ಆಕೆಯ ನಗ್ನ ವಿಡಿಯೋವನ್ನು ಸಹ ಚಿತ್ರಿಸಿಕೊಂಡು ಅತ್ಯಾಚಾರದ ಬಗ್ಗೆ ಹೊರಗೆ ಬಾಯಿಬಿಟ್ಟರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

  ಸಂತ್ರಸ್ತ ಯುವತಿಗೆ ಪದೇ-ಪದೇ ಬೆದರಿಕೆ ಹಾಕಿ ಹಲವಾರು ಬಾರಿ ಮನೆಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದಾನೆ. ಕೊನೆಗೆ ಆ ಹದಿನಾಲ್ಕರ ಯುವತಿ ಗರ್ಭಿಣಿ ಆಗಿದ್ದಾಳೆ. ವಿಷಯ ಮನೆಯವರಿಗೆ ತಿಳಿದು ಯುವತಿಯ ತಾಯಿ ವಿಶಾಖಪಟ್ಟಣಂನ ಪೆಂಡುರ್ತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಹೈದರಾಬಾದ್‌ಗೆ ಆಗಮಿಸಿ ಭಾರ್ಗವ್‌ ಅನ್ನು ಬಂಧಿಸಿ ಕರೆದೊಯ್ದಿದ್ದಾರೆ.

  ಅಪ್ರಾಪ್ತೆ ಮೇಲೆ ಅತ್ಯಾಚಾರ: ಖ್ಯಾತ ಯೂಟ್ಯೂಬರ್ ಬಂಧನಅಪ್ರಾಪ್ತೆ ಮೇಲೆ ಅತ್ಯಾಚಾರ: ಖ್ಯಾತ ಯೂಟ್ಯೂಬರ್ ಬಂಧನ

  ಆರೋಪಿ ಚಿಪ್ಪಡ ಭಾರ್ಗವ್‌ ಮೇಲೆ ಪೋಕ್ಸೊ ಕಾಯ್ದೆಯ ಸೆಕ್ಷನ್‌ 376, 354 ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ದಿಶಾ ಮಹಿಳಾ ಪೊಲೀಸ್ ಠಾಣೆಯ ಎಸಿಪಿ ಪ್ರೇಮ ಕಜಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

  ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅನುಪ್ರಭಾಕರ್ | Filmibeat Kannada

  ಭಾರ್ಗವ್‌ ಜೊತೆಗೆ ತಮಾಷೆಯ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ನಿತ್ಯಾ ಮೇಲೆಯೇ ಭಾರ್ಗವ್ ಅತ್ಯಾಚಾರ ಮಾಡಿದ್ದಾನೆ ಎಂಬ ಸುದ್ದಿಯೂ ಹರಿದಾಡಿತ್ತು. ಈ ಬಗ್ಗೆ ಇಂದು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ನಿತ್ಯಾ, 'ನಾನು ಸಂತ್ರಸ್ತೆ ಅಲ್ಲ. ನನ್ನ ಹೆಸರು, ಚಿತ್ರಗಳನ್ನು ಬಳಸಬೇಡಿ' ಎಂದು ಮನವಿ ಮಾಡಿದ್ದಾರೆ.

  English summary
  Visakhapatnam Police held press meet and briefed about Fun bucket Bhargav case today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X