'ಗೇಮ್ ಚೇಂಜರ್' ಫಸ್ಟ್ ಲುಕ್ ಪೋಸ್ಟರ್ ಔಟ್: ರಾಮ್‌ಚರಣ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್? ಫ್ಯಾನ್ಸ್ ಶಾಕ್!
ರಾಮ್‌ಚರಣ್ ಹುಟ್ಟುಹಬ್ಬದ ಸಂಭ್ರಮದಲ್ಲೇ 'ಗೇಮ್ ಚೇಂಜರ್' ಸಿನಿಮಾ ಪೋಸ್ಟರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ತಮಿಳು ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳ್ತಿದ್ದಾರೆ. ತಮಿಳು, ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣ ಆಗ್ತಿದ್ದು, ಫಸ್ಟ್ ಲುಕ್ ಪೋಸ್ಟರ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ದಿಲ್ ರಾಜು ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ಇನ್ನು ದಿನ 'RC15' ಹೆಸರಿನಲ್ಲಿ ಸಿನಿಮಾ ಕೆಲಸಗಳ ನಡೀತಿತ್ತು. ರಾಮ್‌ಚರಣ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬೆಳಗ್ಗೆ ಸಿನಿಮಾ ಟೈಟಲ್ ಅನೌನ್ಸ್ ಮಾಡಿದ್ದ ಚಿತ್ರತಂಡ ಈಗ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದೆ. ಶಂಕರ್ ಕಮರ್ಷಿಯಲ್ ಅಂಶಗಳ ಜೊತೆಗೆ ಸಿನಿಮಾ ಮೂಲಕ ಒಂದು ಮೆಸೇಜ್ ಕೂಡ ಹೇಳುತ್ತಿದ್ದಾರೆ. ಚಿತ್ರದಲ್ಲಿ ರಾಮ್‌ಚರಣ್ ಡಬಲ್ ರೋಲ್ ಪ್ಲೇ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಸದ್ಯ ರಿಲೀಸ್ ಆಗಿರೋ ಪೋಸ್ಟರ್‌ನಲ್ಲಿ ಬೈಕ್ ಏರಿ ಸ್ಟೈಲಿಶ್ ಲುಕ್‌ನಲ್ಲಿ ಮೆಗಾ ಪವರ್ ಸ್ಟಾರ್ ಮಿಂಚಿದ್ದಾರೆ.

ಸ್ವಲ್ಪ ಉದ್ದನೆಯ ಕೂದಲು ಬಿಟ್ಟು, ಕುರುಚಲು ಗಡ್ಡದಲ್ಲಿ ಕೂಲಿಂಗ್ ಗ್ಲಾಸ್ ತೊಟ್ಟು ಬೈಕ್ ಏರಿ ಹಿಂದೆ ತಿರುವು ನೋಡುತ್ತಿರುವ ರಾಮ್‌ಚರಣ್ ಲುಕ್ ಸಖತ್ ಆಗಿದೆ. ಡೆನಿಮ್ ಶರ್ಟ್, ಪ್ಯಾಂಟ್‌ನಲ್ಲಿ ಕಾಸ್ಟ್ಲಿ ಬೈಕ್ ಏರಿ ದರ್ಶನ ಕೊಟ್ಟಿದ್ದಾರೆ. ಆದರೆ ಒಂದು ಕೋನದಲ್ಲಿ ಚರಣ್, ರಾಕಿಂಗ್ ಸ್ಟಾರ್ ಯಶ್ ರೀತಿ ಕಾಣುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಸದ್ಯ ಪೋಸ್ಟರ್ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಕೆಲವರು ಯಶ್, ರಾಮ್‌ಚರಣ್ ತರ ಇದ್ದಾರೋ ಅಥವಾ ರಾಮ್‌ಚರಣ್, ಯಶ್ ತರ ಇದ್ದಾರೋ ಗೊತ್ತಿಲ್ಲ, ಒಟ್ನಲ್ಲಿ ದಿಢೀರನೇ ಪೋಸ್ಟರ್ ನೋಡಿದರೆ ಯಶ್ ತರ ಕಾಣುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಬರೀ ತೆಲುಗು ಅಭಿಮಾನಿಗಳು ಅಷ್ಟೇ ಅಲ್ಲ, ಕನ್ನಡ ಕೆಲ ಯಶ್ ಅಭಿಮಾನಿಗಳು ಕೂಡ ಈ ಪೋಸ್ಟರ್ ನೋಡಿ ಇದೇ ಮಾತು ಹೇಳುತ್ತಿದ್ದಾರೆ. ಯಶ್ ಬೈಕ್ ಏರಿ ಬರುತ್ತಿರುವ ಫೋಟೊ ಜೊತೆಗೆ 'ಗೇಮ್ ಚೇಂಜರ್' ಪೋಸ್ಟರ್ ಸೇರಿಸಿ ವೈರಲ್ ಮಾಡುತ್ತಿದ್ದಾರೆ. ಇನ್ನು ಕೆಲವರು ಏನಪ್ಪಾ 'ಗೇಮ್ ಚೇಂಜರ್' ಫಸ್ಟ್ ಲುಕ್ ಅಂತ ಹೇಳಿ ಯಶ್ ಪೋಸ್ಟರ್ ಬಿಟ್ಟಿದ್ದೀರಾ ಅಂತಲೂ ತಮಾಷೆಯಾಗಿ ಕಾಲೆಳೆಯುತ್ತಿದ್ದಾರೆ.ಇದೇ ವಿಚಾರ ಟ್ವಿಟರ್‌ನಲ್ಲಿ ಹೆಚ್ಚು ಚರ್ಚೆ ಆಗ್ತಿದ್ದು, ಇದ್ದಕ್ಕಿದಂತೆ 'ಗೇಮ್ ಚೇಂಜರ್' ಜೊತೆಗೆ ಯಶ್ ಹೆಸರು ಟ್ರೆಂಡ್ ಆಗಲು ಶುರುವಾಗಿದೆ.
ಈ ಹಿಂದೆ 'KGF' ಸಿನಿಮಾ ಪೋಸ್ಟರ್‌ಗಳನ್ನು ಕೂಡ ನೋಡಿ ಕೆಲವರು ಯಶ್, ರಾಮ್‌ಚರಣ್ ರೀತಿ ಕಾಣುತ್ತಿದ್ದಾರೆ ಎಂದಿದ್ದರು. 'ಗೇಮ್ ಚೇಂಜರ್' ಸಿನಿಮಾದಲ್ಲಿ ಮೆಗಾ ಪವರ್ ಸ್ಟಾರ್ ಚುನಾವಣಾ ಅಧಿಕಾರಿ ಪಾತ್ರ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಇನ್ನು ಬಿಳಿ ಅಂಗಿ, ಬಿಳಿ ಪಂಚೆಯಲ್ಲಿ ಚರಣ್ ಕಾಣಿಸಿಕೊಂಡಿರುವ ಮೇಕಿಂಗ್ ಸ್ಟಿಲ್ ಒಂದು ಕೂಡ ಈ ಹಿಂದೆ ವೈರಲ್ ಆಗಿತ್ತು. ಚಿತ್ರದಲ್ಲಿ ರಾಮ್‌ಚರಣ್ ಡಬಲ್ ರೋಲ್ ಪ್ಲೇ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಶಂಕರ್ ನಿರ್ದೇಶನದ ಸಿನಿಮಾ ಅಂದಮೇಲೆ ಹೀರೊ ಡಬಲ್ ರೋಲ್ ಮಾಡೋದು ಅಥವಾ ಒಂದೇ ಪಾತ್ರ ಹತ್ತು ಹಲವು ವೇಷಗಳಲ್ಲಿ ಕಾಣಿಸಿಕೊಳ್ಳೋದು ಕಾಮನ್.
ಸಂಕ್ರಾಂತಿ ಹಬ್ಬಕ್ಕೆ 'ಗೇಮ್ ಚೇಂಜರ್' ಸಿನಿಮಾ ರಿಲೀಸ್ ಮಾಡ್ತಾರೆ ಎನ್ನುವ ಮಾತು ಕೆಲ ದಿನಗಳ ಹಿಂದೆ ಕೇಳಿಬಂದಿತ್ತು. ಆದರೆ ಸುಗ್ಗಿ ಹಬ್ಬಕ್ಕೆ ಪ್ರಭಾಸ್ ನಟನೆಯ 'ಪ್ರಾಜೆಕ್ಟ್- K' ಹಾಗೂ ಮಹೇಶ್ ಬಾಬು ನಟನೆಯ 'SSMB28' ಸಿನಿಮಾಗಳು ರಿಲೀಸ್ ಆಗ್ತಿವೆ. ಹಾಗಾಗಿ 'ಗೇಮ್ ಚೇಂಜರ್' ಸಿನಿಮಾ ರಿಲೀಸ್ ಪ್ಲ್ಯಾನ್ ಚೇಂಜ್ ಮಾಡುವ ಸಾಧ್ಯತೆಯಿದೆ.


Click it and Unblock the Notifications











