ರಾಮ್ ಚರಣ್, ಕಿಯಾರ ಅಡ್ವಾನಿ ಅಭಿನಯದ 'ಗೇಮ್ ಚೇಂಜರ್' ಚಿತ್ರೀಕರಣ ರದ್ದು: ಕಾರಣ ಇಲ್ಲಿದೆ

ರಾಮ್ ಚರಣ್ ಮತ್ತು ನಿರ್ದೇಶಕ ಶಂಕರ್ ಅವರ ಬಹುನಿರೀಕ್ಷಿತ ಚಿತ್ರ, 'ಗೇಮ್ ಚೇಂಜರ್'. ಆರ್ಆರ್ಆರ್ ನಂತರ ರಾಮ್ ಚರಣ್ ಅವರ ಇತ್ತೀಚಿನ ದಿನಗಳಲ್ಲಿ ಅತ್ಯಂತ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲಿ ಇದು ಒಂದು. ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಸಿನಿಮಾದ ಸೆಪ್ಟೆಂಬರ್ ಶೆಡ್ಯೂಲ್ ಅನ್ನು ರದ್ದುಗೊಳಿಸಲಾಗಿದೆ

ಸಿನಿಮಾ ಪ್ರೊಡಕ್ಷನ್ ಹೌಸ್ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಗೇಮ್ ಚೇಂಜರ್ ಚಿತ್ರದ ಶೂಟಿಂಗ್ ರದ್ದಾಗಿರುವ ಬಗ್ಗೆ ಅಪ್‌ಡೇಟ್ ನೀಡಿದೆ. ಇನ್ನು, ಇತ್ತೀಚೆಗೆ ರಾಮ್ ಚರಣ್ ಅವರ ಮುಖಕ್ಕೆ ಗಾಯಗಳಾಗಿವೆ ಎಂದು ವರದಿಯೊಂದು ಓಡಾಡುತ್ತಿದೆ.

Game Changer: Ram Charan, Kiara Advani starrer Game Changer shoot cancelled

ರಾಮ್ ಚರಣ್ ಅಭಿನಯದ 'ಗೇಮ್ ಚೇಂಜರ್' ಶೂಟಿಂಗ್ ರದ್ದು

'ಆರ್‌ಆರ್‌ಆರ್' ಮತ್ತು 'ಆಚಾರ್ಯ' ನಂತರ ನಟ ರಾಮ್ ಚರಣ್ ಶಂಕರ್ ಅವರು 'ಗೇಮ್ ಚೇಂಜರ್' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚಿತ್ರವು 2024 ರಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗೆ, 'ಗೇಮ್ ಚೇಂಜರ್' ನ ಪ್ರಮುಖ ವೇಳಾಪಟ್ಟಿ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದೆ ಎಂದು ವರದಿಯಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಶೂಟಿಂಗ್ ಕ್ಯಾನ್ಸಲ್ ಆಗಿದೆ ಎಂದು ತಿಳಿದುಬಂದಿದೆ.

ನಿರ್ದೇಶಕ ಶಂಕರ್ ಗೇಮ್ ಚೇಂಜರ್ ಚಿತ್ರೀಕರಣವನ್ನು ರದ್ದುಗೊಳಿಸಿದ್ದಾರೆ ಎಂದು ಹಲವು ವರದಿಗಳು ಹೇಳಿವೆ. ಇದರ ಬೆನ್ನಲ್ಲೇ, ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಒಂದು ಅಪ್‌ಡೇಟ್ ಹಂಚಿಕೊಂಡಿದೆ. "ಕೆಲವು ಕಲಾವಿದರ ಅಲಭ್ಯತೆಯಿಂದಾಗಿ ಗೇಮ್ ಚೇಂಜರ್ ಸಿನಿಮಾದ ಸೆಪ್ಟೆಂಬರ್ ವೇಳಾಪಟ್ಟಿಯನ್ನು ರದ್ದುಗೊಳಿಸಲಾಗಿದೆ. ಚಿತ್ರೀಕರಣವು ಅಕ್ಟೋಬರ್ ಎರಡನೇ ವಾರದಲ್ಲಿ ಪುನರಾರಂಭಗೊಳ್ಳುತ್ತದೆ" ಎಂದು ಟ್ವೀಟ್ ಮಾಡಿದೆ.

Game Changer: Ram Charan, Kiara Advani starrer Game Changer shoot cancelled

ಶೂಟಿಂಗ್‌ಗೂ ಮುನ್ನ ರಾಮ್ ಚರಣ್‌ಗೆ ಗಾಯ?

ಡೆಕ್ಕನ್ ಕ್ರಾನಿಕಲ್ ವರದಿಯ ಪ್ರಕಾರ, ನಟ ರಾಮ್ ಚರಣ್ ಶೂಟಿಂಗ್‌ಗೆ ಒಂದೆರಡು ದಿನಗಳ ಮೊದಲು ಅವರ ಮುಖಕ್ಕೆ ಗಾಯ ಮಾಡಿಕೊಂಡಿದ್ದಾರೆ ಎಂದಿದೆ. ಮೂಲವೊಂದನ್ನು ಉಲ್ಲೇಖಿಸಿರುವ ಡೆಕ್ಕನ್ ಕ್ರಾನಿಕಲ್, "ರಾಮ್ ಚರಣ್‌ಗೆ ತಕ್ಷಣದ ಪ್ರಥಮ ಚಿಕಿತ್ಸೆ ನೀಡಲಾಯಿತು. ವೈದ್ಯರು, ಅವರನ್ನು ಪರೀಕ್ಷಿಸಿದ ನಂತರ, ರಾಮ್ ಚರಣ್ ತಕ್ಷಣ ಶೂಟಿಂಗ್ ಪ್ರಾರಂಭಿಸುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ. ಆದ್ದರಿಂದ, ನಟನಿಗೆ 10 ದಿನಗಳ ಕಾಲ ವಿಶ್ರಾಂತಿ ನೀಡಲು ಸೂಚಿಸಲಾಗಿದೆ" ಎಂದಿದೆ.

ಹೀಗಾಗಿ ಗೇಮ್ ಚೇಂಜರ್ ಸಿನಿಮಾ ತಂಡವನ್ನು ಸೇರಿಕೊಳ್ಳಲು ರಾಮ್ ಚರಣ್‌ಗೆ ಇನ್ನು ಸಮಯ ಬಕು. ಇದೇ ಕಾರಣಕ್ಕೆ ಸಿನಿಮಾ ಶೂಟಿಂಗ್ ರದ್ದು ಮಾಡಲಾಗಿದೆ. ಆದರೆ, ಸಿನಿಮಾ ಪ್ರೊಡಕ್ಷನ್ ಹೌಸ್ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಕೆಲವು ಕಲಾವಿದರ ಅಲಭ್ಯತೆಯಿಂದ ಚಿತ್ರೀಕರಣ ಮುಂದೂಡಲಾಗಿದೆ ಎಂದಿದೆ.

ಗೇಮ್ ಚೇಂಜರ್

ಎಸ್ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಸಿನಿಮಾದಲ್ಲಿ ರಾಮ್ ಚರಣ್ ಹೊರತಾಗಿ, ನಟಿ ಕಿಯಾರಾ ಅಡ್ವಾಣಿ, ಅಂಜಲಿ, ಎಸ್‌ಜೆ ಸೂರ್ಯ, ಜಯರಾಮ್, ನವೀನ್ ಚಂದ್ರ, ಸಮುದ್ರಕಣಿ ಮತ್ತು ನಾಸರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎಸ್ ಶಂಕರ್ ಎರಡು ದೊಡ್ಡ ಬಜೆಟ್ಟಿನ ಸ್ಟಾರ್ ಚಿತ್ರಗಳ ಚಿತ್ರೀಕರಣವನ್ನು ಏಕಕಾಲದಲ್ಲಿ ನಡೆಸುತ್ತಿದ್ದಾರೆ.

ಒಂದು ಗೇಮ್ ಚೇಂಜರ್ ಮತ್ತು ಇನ್ನೊಂದು ಇಂಡಿಯನ್ 2. ಗೇಮ್ ಚೇಂಜರ್ ಹೊಸ ಚಿತ್ರವಾಗಿದ್ದರೇ, ಕಮಲ್ ಹಾಸನ್ ಅವರ ಇಂಡಿಯನ್ 2 1996 ರಲ್ಲಿ ಬಿಡುಗಡೆಯಾಗಿದ್ದ ಇಂಡಿಯನ್‌ನ ಸೀಕ್ವೆಲ್ ಆಗಿದೆ. ಎಸ್ ಶಂಕರ್ ಅವರ ವೃತ್ತಿಜೀವನದಲ್ಲಿ ಇದು ಬಹುದೊಡ್ಡ ಪ್ರಾಜೆಕ್ಟ್ ಆಗಿದೆ.

More from Filmibeat

English summary
Ram Charan, Kiara Advani starrer 'Game Changer' shoot cancelled.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X