'ಸರ್ಕಾರೋಡು' ಅಲ್ಲ, 'CEO' ಕೂಡ ಅಲ್ಲ: ಚರಣ್- ಶಂಕರ್ ಜೋಡಿ ಚಿತ್ರಕ್ಕೆ ಯಾರು ಊಹಿಸಿರದ ಟೈಟಲ್ ಫಿಕ್ಸ್
ಮೆಗಾ ಪವರ್ ಸ್ಟಾರ್ ರಾಮ್‌ಚರಣ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 'RRR' ನಂತರ ಚರಣ್ ತಮಿಳು ನಿರ್ದೇಶಕ ಶಂಕರ್ ನಿರ್ದೇಶನದ ಚಿತ್ರದಲ್ಲಿ ಕೆಲಸ ಮಾಡ್ತಿದ್ದಾರೆ. ಬಹುತೇಕ ಸಿನಿಮಾ ಚಿತ್ರೀಕರಣ ಕೂಡ ಕಂಪ್ಲೀಟ್ ಆಗಿದೆ. ಇದು ಚಿರು ತನಯನ 15ನೇ ಸಿನಿಮಾ. ಹಾಗಾಗಿ RC15 ಹೆಸರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಟಾಲಿವುಡ್ ಮಗಧೀರನ ಹುಟ್ಟುಹಬ್ಬಕ್ಕೆ ಸಿನಿಮಾ ಟೈಟಲ್ ಫೈನಲ್ ಆಗಿದೆ.
'RRR' ಸಿನಿಮಾದಲ್ಲಿ ಅಲ್ಲೂರಿ ಸೀತಾರಾಮರಾಜು ಆಗಿ ಚರಣ್ ಗ್ಲೋಬಲ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ಹಾಗಾಗಿ ಸಹಜವಾಗಿಯೇ ಮುಂದಿನ ಸಿನಿಮಾಗಳ ಬಗ್ಗೆ ನಿರೀಕ್ಷೆ ಗರಿಗೆದರಿದೆ. ಸದ್ಯ ಶಂಕರ್ ನಿರ್ದೇಶನದ ಚಿತ್ರದಲ್ಲಿ ಚರಣ್ ಪವರ್ ಫುಲ್ ರೋಲ್‌ನಲ್ಲಿ ನಟಿಸ್ತಿದ್ದಾರೆ ಎನ್ನಲಾಗ್ತಿದೆ. ಚಿತ್ರದಲ್ಲಿ ಡಬಲ್ ರೋಲ್‌ನಲ್ಲಿ ಮೆಗಾ ಪವರ್ ಸ್ಟಾರ್ ಸಿನಿರಸಿಕರಿಗೆ ಥ್ರಿಲ್ ಕೊಡೋಕೆ ಬರ್ತಿದ್ದಾರೆ ಎನ್ನುವ ಮಾತು ಇದೆ. ಚಿತ್ರಕ್ಕೆ ಇಷ್ಟು ದಿನ ಸಾಕಷ್ಟ ಹೆಸರಗಳು ಕೇಳಿಬಂದಿತ್ತು. ಅಭಿಮಾನಿಗಳು ಕೂಡ ಒಂದಷ್ಟು ಟೈಟಲ್‌ಗಳನ್ನು ಊಹಿಸಿದ್ದರು. ಆದರೆ ಅದೆಲ್ಲವನ್ನು ಬಿಟ್ಟು ಹೊಸ ಟೈಟಲ್ ಫಿಕ್ಸ್ ಆಗಿದೆ.

ಇಷ್ಟು ದಿನ ಚಿತ್ರಕ್ಕೆ 'ಸರ್ಕಾರೋಡು' ಅಥವಾ 'ಸಿಇಓ' ಟೈಟಲ್‌ಗಳನ್ನು ಚಿತ್ರತಂಡ ಪರಿಶೀಲನೆ ಮಾಡುತ್ತಿದೆ ಎನ್ನಲಾಗುತ್ತಿತ್ತು. ಅಭಿಮಾನಿಗಳು ಕೂಡ ಒಂದು ಟೈಟಲ್‌ಗಳನ್ನು ಸೂಚಿಸಿದ್ದರು. ಆದರೆ ಈಗ 'RC15' ಚಿತ್ರಕ್ಕೆ 'ಗೇಮ್ ಚೇಂಜರ್' ಎನ್ನುವ ಟೈಟಲ್ ಫೈನಲ್ ಆಗಿದೆ. ರಾಮ್‌ಚರಣ್ ಹುಟ್ಟುಹಬ್ಬದ ದಿನವೇ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಚಿತ್ರದಲ್ಲಿ ಚರಣ್ ಚುನಾವಣಾ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ. ರಾಜಕೀಯದ ಚದುರಂಗದಾಟದಲ್ಲಿ ನಾಯಕ ಹೇಗೆ 'ಗೇಮ್ ಚೇಂಜರ್' ಆಗುತ್ತಾನೆ ಅನ್ನೋದನ್ನು ಶಂಕರ್ ತೋರಿಸಲು ಬರ್ತಿದ್ದಾರೆ.
'ಗೇಮ್ ಚೇಂಜರ್' ಚಿತ್ರದಲ್ಲಿ ಬಾಲಿವುಡ್ ಬೆಡಗಿ ಕಿಯಾರಾ ಅದ್ವಾನಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಹಾಸ್ಯನಟ ಸುನೀಲ್, ಶ್ರೀಕಾಂತ್, ಅಂಜಲಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದಿಲ್ ರಾಜು ಬಹುಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. 'RRR' ಸಿನಿಮಾ ಆಸ್ಕರ್‌ಗೆ ನಾಮಿನೇಟ್ ಆದಮೇಲೆ ಚರಣ್ ಕೊಂಚ ಬಿಡುವು ಪಡೆದು ಆಸ್ಕರ್ ಪ್ರಮೋಷನ್‌ನಲ್ಲಿ ಭಾಗಿ ಆಗಿದ್ದರು. ಇದೀಗ ಮತ್ತೆ ಚಿತ್ರೀಕರಣಕ್ಕೆ ವಾಪಸ್ ಆಗಿದ್ದು ಇತ್ತೀಚೆಗೆ ಪ್ರಭುದೇವಾ ಕೊರಿಯೋಗ್ರಫಿಯಲ್ಲಿ ಸಾಂಗ್ ಶೂಟ್ ಮಾಡಿದ್ದಾರೆ.
'ಕಾದಲನ್', 'ಮುದಲ್ವನ್', 'ಇಂಡಿಯನ್', 'ಅನ್ನಿಯನ್', 'ರೋಬೊ' ರೀತಿಯ ಸೆನ್ಸೇಷನಲ್ ಸಿನಿಮಾಗಳನ್ನು ಕಟ್ಟಿಕೊಟ್ಟ ಶಂಕರ್ ಮ್ಯಾಜಿಕ್ ಇತ್ತೀಚೆಗೆ ನಡೀತಿಲ್ಲ. ಕಮರ್ಷಿಯಲ್ ಅಂಶಗಳ ಜೊತೆಗೆ ಒಂದೊಳ್ಳೆ ಮೆಸೇಜ್ ಶಂಕರ್ ಸಿನಿಮಾಗಳಲ್ಲಿ ಇರುತ್ತದೆ. 'ಗೇಮ್ ಚೇಂಜರ್' ಸಿನಿಮಾದಲ್ಲೂ ಇದನ್ನೇ ನಿರೀಕ್ಷೆ ಮಾಡಲಾಗುತ್ತಿದೆ. ಚರಣ್ ಕ್ರೇಜ್‌ಗೆ ತಕ್ಕಂತೆ ಬೊಂಬಾಟ್ ಸಿನಿಮಾ ಮೂಡಿ ಬರ್ತಿದೆ. ಚಿತ್ರದಲ್ಲಿ ಮೆಗಾ ಪವರ್ ಸ್ಟಾರ್ ಸಿಎಂ ಹಾಗೂ ಐಎಎಸ್ ಆಫೀಸರ್ ಆಗಿ ಎರಡು ಪಾತ್ರಗಳನ್ನು ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಆತನ ಆಗಮನದಿಂದ ರಾಜಕೀಯದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಎನ್ನುವುದೇ ಸಿನಿಮಾ ಕಥೆ ಅಂತೆ.

'ಗೇಮ್ ಚೇಂಜರ್' ಸಿನಿಮಾ ರಿಲೀಸ್ ಡೇಟ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ಹಿಂದೆ ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಆಗುತ್ತೆ ಎನ್ನಲಾಗುತ್ತಿತ್ತು. ಆದರೆ ಸುಗ್ಗಿ ಹಬ್ಬಕ್ಕೆ ಪ್ರಭಾಸ್ ನಟನೆಯ 'ಪ್ರಾಜೆಕ್ಟ್- K' ಹಾಗೂ ಮಹೇಶ್ ಬಾಬು ತ್ರಿವಿಕ್ರಮ್ ಜೋಡಿಯ 'SSMB28' ಸಿನಿಮಾಗಳು ರಿಲೀಸ್ ಆಗೋದು ಪಕ್ಕಾ ಆಗಿದೆ. ಈ ಎರಡು ಸಿನಿಮಾಗಳ ನಡುವೆ 'ಗೇಮ್ ಚೇಂಜರ್' ಕೂಡ ಬರ್ತಾನಾ? ಎನ್ನುವ ಅನುಮಾನ ಈಗ ಶುರುವಾಗಿದೆ. ಈ ಸಿನಿಮಾ ನಂತರ ರಾಮ್‌ಚರಣ್ ಬುಚ್ಚಿಬಾಬು ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.


Click it and Unblock the Notifications











