Game Changer Twitter Review ; 'ಪುಷ್ಪ'ಗೆ ಸೆಡ್ಡು ಹೊಡೆಯುತ್ತಾ ಗೇಮ್ ಚೇಂಜರ್, ಹೇಗಿದೆ ರಾಮ್ ಚರಣ್ ಸಿನಿಮಾ ?

ಆರ್.ಆರ್.ಆರ್ ಚಿತ್ರದ ಮೂಲಕ ಗ್ಲೋಬಲ್ ಸ್ಟಾರ್ ಆದ ರಾಮ್ ಚರಣ್ ತಮ್ಮ ಪ್ರತಿ ಹೆಜ್ಜೆಯನ್ನು ಇನ್ಮುಂದೆ ಎಚ್ಚರಿಕೆಯಿಂದ ಇಡ್ತಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ರಾಮ್‌ ಚರಣ್ ಆಚಾರ್ಯ ಚಿತ್ರವನ್ನು ಒಪ್ಪಿಕೊಂಡು ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡಿದರು. ತಾವು ಕೂಡ ಸೋಲನ್ನುಂಡರು.

ಇಂಥಾ ರಾಮ್ ಚರಣ್ ಈಗ ಗೇಮ್ ಚೇಂಜರ್ ಚಿತ್ರದ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಶಂಕರ್ ನಿರ್ದೇಶನವಿರುವ ಕಾರಣಕ್ಕೆ ಚಿತ್ರದ ಮೇಲೆ ತುಂಬಾನೇ ನಿರೀಕ್ಷೆ ಇದೆ. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯುವ ಭರವಸೆ ಕೂಡ ತೆಲುಗು ಚಿತ್ರರಂಗಕ್ಕೆ ಇದೆ. ಹಾಗಿದ್ದರೆ. ಗೇಮ್ ಚೇಂಜರ್ ಹೇಗಿದೆ. ? ಚಿತ್ರ ನೋಡಿದ ಪ್ರೇಕ್ಷಕರು ಚಿತ್ರದ ಕುರಿತು ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ

game-changer-twitter-review-ram-charan-shines-in-shankars-mass-entertainer-heres-what-netizens

ಹೆಸರಿಗೆ ತಕ್ಕಂತೆ ಇದೆ ಗೇಮ್ ಚೇಂಜರ್

ಎಸ್.ಜೆ.ಸೂರ್ಯ, ಅಂಜಲಿ, ಗೇಮ್ ಚೇಂಜರ್ ನ ಆಳವಾದ ಕಥೆಗೆ ಬಲ ತುಂಬಿದ್ದಾರೆ. ಅಂಜಲಿ ಈ ಚಿತ್ರದ ಮೂಲಕ ಭಾರತದೆಲ್ಲೆಡೆ ಮನೆ ಮಾತಾಗಲಿದ್ದಾರೆ ಎಂದಿರುವ ಪವನ್ ಕಲ್ಯಾಣ್ ಅವರ ಅಭಿಮಾನಿ ಗೇಮ್ ಚೇಂಜರ್ ಹೆಸರಿಗೆ ತಕ್ಕಂತೆ ಇದೆ ಎಂದು ಹೇಳಿದ್ದಾರೆ. ರಾಮ್ ಚರಣ್ ತೇಜಾ ಅವರ ಅಭಿನಯಕ್ಕೆ ಮನ ಸೋತಿದ್ಧಾರೆ. ರಂಗಸ್ಥಳಂ ಚಿತ್ರದಿಂದ ಇಲ್ಲಿಯವರೆಗೆ ರಾಮ್ ಚರಣ್ ಅಭಿನಯದಲ್ಲಿ ತುಂಬಾ ಮಾಗಿದ್ದಾರೆ ಎಂದು ಹೇಳಿದ್ದಾರೆ.

ಬ್ಲಾಕ್ ಬಸ್ಟರ್ ಗೇಮ್ ಚೇಂಜರ್

ಗೇಮ್ ಚೇಂಜರ್ ಚಿತ್ರದಲ್ಲಿ ಎಲ್ಲವೂ ಇದೆ. ಎಮೋಷನ್, ಆಕ್ಷನ್ ಮತ್ತು ಕಥೆ ಹೇಳಿರುವ ಶೈಲಿ ತುಂಬಾ ಚೆನ್ನಾಗಿದೆ. ರಾಮ್ ಚರಣ್ ಅವರ ದಿ ಬೆಸ್ಟ್ ಸಿನಿಮಾ ಇದು ಎಂದು ಹೇಳಿರುವ ವ್ಯಕ್ತಿಯೊಬ್ಬರು ಚಿತ್ರ ಬ್ಲಾಕ್ ಬಸ್ಟರ್ ಎಂದು ಹೇಳಿದ್ದಾರೆ. ಐದಕ್ಕೆ ನಾಲ್ಕೂವರೆ ಸ್ಟಾರ್ಸ್‌ಗಳನ್ನು ನೀಡಿದ್ದಾರೆ.

ಸಾಧಾರಣ ಸಿನಿಮಾ ಗೇಮ್ ಚೇಂಜರ್

ಗೇಮ್ ಚೇಂಜರ್ ಸಾಧಾರಣ ಸಿನಿಮಾ, ಮಾಸ್ ಟ್ರೈನ್ ಫೈಟ್‌ ದೃಶ್ಯದಿಂದ ಆರಂಭವಾಗುವ ಚಿತ್ರದಲ್ಲಿ ಆ ನಂತರ ರಾ ಮಚ್ಚಾ ಮಚ್ಚಾ ಹಾಡು ಬರುತ್ತೆ ಈ ಹಾಡಿನಲ್ಲಿ ರಾಮ್ ಚರಣ್ ಡ್ಯಾನ್ಸ್ ನೋಡುವುದೆ ಚೆಂದದ ಅನುಭವ ಎಂದಿರುವ ಒಬ್ಬರು ಕಿಯಾರಾ ಅಡ್ವಾಣಿ ಜೊತೆ ರಾಮ್ ಚರಣ್ ಅವರ ಲವ್ ಸ್ಟೋರಿ ಚಿತ್ರಕ್ಕೆ ಹಿನ್ನಡೆಯುಂಟು ಮಾಡಿದೆ ಎಂದು ಹೇಳಿದ್ದಾರೆ. ಪ್ರೇಮಕಥೆಯನ್ನು ಸುಖಾ ಸುಮ್ಮನೆ ಎಳೆಯಲಾಗಿದೆ ಎಂದಿದ್ದಾರೆ. ಇಂಟರ್‌ವಲ್ ಬ್ಲಾಕ್ ತುಂಬಾನೇ ಅನಿರೀಕ್ಷಿತವಾದದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಇವರು ದ್ವೀತಿಯಾರ್ಧದ ಫ್ಲಾಷ್‌ಬ್ಯಾಕ್ ನಿರೂಪಣೆ ಚಿತ್ರಕ್ಕೆ ಜೀವ ತುಂಬುತ್ತೆ ಆದರೆ ಇಲ್ಲಿಯೂ ಕೂಡ ಚಿತ್ರದ ವೇಗಕ್ಕೆ ಕಿಯಾರಾ ಮತ್ತು ರಾಮ್‌ ಚರಣ್ ಅವರ ಪ್ರೀತಿ-ಪ್ರೇಮ-ಪ್ರಣಯ ಬ್ರೇಕ್ ಹಾಕುತ್ತೆ ಎಂದು ಹೇಳಿದ್ದಾರೆ. ಚಿತ್ರದ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ.

ರಾಷ್ಟ್ರ ಪ್ರಶಸ್ತಿಗೆ ಪೈಪೋಟಿ

2025ರಲ್ಲಿ ಏನಾದರೂ ಪುಷ್ಪ 2 ಚಿತ್ರ ಬಿಡುಗಡೆಯಾಗಿದ್ದರೆ ರಾಷ್ಟ್ರ ಪ್ರಶಸ್ತಿಗೆ ತೀವೃವಾದ ಪೈಪೋಟಿ ನಡೆಯುತ್ತಿತ್ತು ಎಂದು ಹೇಳಿರುವ ಇನ್ನೊಬ್ಬರು ರಾಮ್ ಚರಣ್ ಅತ್ಯುತ್ತಮವಾಗಿ ಅಭಿನಯಿಸಿರುವ ಚಿತ್ರ ಇದು ಎಂದು ಹೇಳಿದ್ದಾರೆ.

ತಲೆ ನೋವು ಹೆಚ್ಚಿಸುವ ಭಯಾನಕ ಚಿತ್ರ

ತುಂಬಾ ಅಸಮಂಜಸ ಮತ್ತು ಭಯಾನಕವಾದ ಚಿತ್ರವನ್ನು ಮಾಡುವ ಮೂಲಕ ರಾಮ್ ಚರಣ್ ತಮ್ಮ ಸಮಯವನ್ನು ವ್ಯರ್ಥ ಮಾಡಿದ್ದಾರೆ ಎಂದಿರುವ ಒಬ್ಬರು ಶಂಕರ್ ದಯಮಾಡಿ ಹೊರಡಿ ಎಂದು ಪ್ರಾರ್ಥನೆಯನ್ನು ಮಾಡಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ಅವರ ಅಭಿಮಾನಿಗಳಿಗೆ ತುಂಬಾನೇ ಟಾರ್ಚರ್ ಕೊಡುವ ಚಿತ್ರ ಇದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

More from Filmibeat

Read more about: review ram charan shankar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X