Allu Arjun:'ಪುಷ್ಪರಾಜ್' ಮನೆಯಲ್ಲಿ ಅದ್ಧೂರಿ ಗಣೇಶೋತ್ಸವ, ಅಲ್ಲು ಅರ್ಜುನ್ ಮಗಳಿಂದ ಗಣಪನಿಗೆ ಪೂಜೆ
ಎರಡು ದಿನಗಳ ಗೌರಿ- ಗಣೇಶ ಹಬ್ಬವನ್ನು ಎಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಸಿನಿಮಾ ತಾರೆಯರು ಕೂಡ ತಮ್ಮ ಮನೆಗಳಲ್ಲಿ ಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ. ಪುಷ್ಪ ಸಿನಿಮಾದಿಂದ ದೇಶದೆಲ್ಲೆಡೆ ಅಭಿಮಾನಿಗಳನ್ನು ಹೊಂದಿರುವ ನಟ ಅಲ್ಲು ಅರ್ಜುನ್ ತಮ್ಮ ಕುಟುಂಬದೊಂದಿಗೆ ಗಣೇಶ ಚತುರ್ಥಿಯನ್ನು ಆಚರಿಸಿದ್ದಾರೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಅಲ್ಲು ಅರ್ಜುನ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಮನೆಯಲ್ಲಿ ನಡೆದ ಹಬ್ಬದ ಆಚರಣೆಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರು ಬಿಳಿ ಕುರ್ತಾ ಪೈಜಾಮಾ ಧರಿಸಿ ಪೂಜೆಯಲ್ಲಿ ಭಾಗಿಯಾಗಿದ್ದರೆ, ಅವರ ಪತ್ನಿ ಸ್ನೇಹಾ ರೆಡ್ಡಿ ಮತ್ತು ಮಕ್ಕಳಾದ ಅಯಾನ್ ಮತ್ತು ಅರ್ಹಾ ಅವರು ಹಳದಿ ಬಟ್ಟೆಗಳಲ್ಲಿ ಮಿಂಚಿದ್ದಾರೆ.

ಅಲ್ಲು ಅರ್ಜುನ್ ಮನೆಯಲ್ಲಿ ಗಣೇಶೋತ್ಸವ
ನಟ ಅಲ್ಲು ಅರ್ಜುನ್ ಮನೆಯಲ್ಲಿ ಗಣಪತಿಯನ್ನು ತಂದು ಹೂವಿನ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಗಿದೆ. ರಾಸಾಯನಿಕಗಳಿಲ್ಲದೇ ಮನ್ಣಿನಲ್ಲಿ ಮಾಡಿದ ಗೌರಿ, ಗಣೇಶನನ್ನು ಕೂರಿಸಲಾಗಿದೆ. ಬಾಳೆ ಎಲೆಯ ಮೇಲೆ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಮಾವಿನ ಎಲೆಗಳ ತೋರಣದಲ್ಲಿ ಸಿಂಗರಿಸಲಾಗಿದೆ.
ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹಾ ರೆಡ್ಡಿ ಮನೆಯಲ್ಲಿನ ಸಂಭ್ರಮಾಚರಣೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸೀರೆ ಧರಿಸಿರುವ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ದಂಪತಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮಗಳು ಅರ್ಹಾ ಹಳದಿ ಬಣ್ಣದ ಬಟ್ಟೆ ಧರಿಸಿ ಮನೆಯಲ್ಲಿ ಗಣಪನಿಗೆ ಪೂಜೆ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ. ಜೊತೆಗೆ ತನ್ನ ಅಣ್ಣನೊಂದಿಗೆ ಪೋಸ್ ನೀಡಿರುವ ಚಿತ್ರವನ್ನೂ ಹಂಚಿಕೊಂಡಿದ್ದಾರೆ.
ಅಲ್ಲು ಅರ್ಜುನ್ ಮಗಳ ಚೊಚ್ಚಲ ಚಿತ್ರ
ಅಲ್ಲು ಅರ್ಹಾ ಈ ವರ್ಷ ಸಮಂತಾ ರುತ್ ಪ್ರಭು ಅಭಿನಯದ ಶಾಕುಂತಲಂ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ. ಗುಣಶೇಖರ್ ಕರ್ರಿ ನಿರ್ದೇಶನದ ಈ ಚಿತ್ರದಲ್ಲಿ ಅರ್ಹಾ ರಾಜಕುಮಾರ ಭರತ, ಶಕುಂತಲಾ ಅವರ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ನಟ ಅಲ್ಲು ಅರ್ಜುನ್ ಮತ್ತು ಪುಷ್ಪ
ಕಳೆದ ತಿಂಗಳು, ಪುಷ್ಪ: ದಿ ರೈಸ್ ಚಿತ್ರದಲ್ಲಿನ ಅಭಿನಯಕ್ಕಾಗಿ ಅಲ್ಲು ಅರ್ಜುನ್ ಅವರಿಗೆ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಬಂದಿದೆ. ಜೊತೆಗೆ ಇದೇ ಸಿನಿಮಾಗಾಗಿ ದೇವಿ ಶ್ರೀ ಪ್ರಸಾದ್‌ಗಾಗಿ ಅತ್ಯುತ್ತಮ ಸಂಗೀತ ನಿರ್ದೇಶನ (ಹಾಡುಗಳು) ಪ್ರಶಸ್ತಿಯೂ ಅರಸಿ ಬಂದಿದೆ. ಸುಕುಮಾರ್ ನಿರ್ದೇಶನದ, ಆಕ್ಷನ್ ಥ್ರಿಲ್ಲರ್ ಸಿನಿಮಾ ರಕ್ತ ಚಂದನದ ಕಳ್ಳಸಾಗಣೆಯ ಹಿನ್ನೆಲೆಯಲ್ಲಿ ಕಳ್ಳಸಾಗಣೆದಾರರು ಮತ್ತು ಪೊಲೀಸರ ನಡುವೆ ನಡೆಯುವ ಹಿಂಸಾಚಾರ, ರಾಜಕೀಯದ ಸುತ್ತ ಸುತ್ತುತ್ತದೆ.
ಇನ್ನು, ಪುಷ್ಪ ಸೀಕ್ವೆಲ್ 'ಪುಷ್ಪ: ದಿ ರೂಲ್' ಆಗಸ್ಟ್ 15, 2024 ರಂದು ತೆರೆಗೆ ಬರಲಿದೆ. ಈ ಸಿನಿಮಾಗಾಗಿ ಅಲ್ಲು ಅರ್ಜುನ್ ಭಾರೀ ಕೆಲಸ ಮಾಡುತ್ತಿದ್ದು, ಅದರ ಎರಡೂ ಪೋಸ್ಟರ್‌ಗಳಲ್ಲಿ ಹಿಂದೆಂದೂ ನೋಡದ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಪೋಸ್ಟರ್‌ನಲ್ಲಿ ಚಿನ್ನಾಭರಣ ಹಾಗೂ ನಿಂಬೆಹಣ್ಣಿನ ಮಾಲೆ ಧರಿಸಿದ್ದ ಅವರು ಕೈಯಲ್ಲಿ ಗನ್ ಹಿಡಿದಿದ್ದರು. ಸೆಪ್ಟೆಂಬರ್ 11 ರಂದು ಬಿಡುಗಡೆಯಾದ ಇನ್ನೊಂದು ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ತಮ್ಮ ಪುಷ್ಪಾ ಶೈಲಿಯಲ್ಲಿ ಕುರ್ಚಿಯ ಮೇಲೆ ಕುಳಿತು ತಮ್ಮ ಕೈಯನ್ನು ಉಂಗುರಗಳು ಮತ್ತು ಬಳೆಗಳಿಂದ ಅಲಂಕರಿಸಿದ್ದಾರೆ. ಅದರಲ್ಲಿ ಕಿರುಬೆರಳು ಸಕತ್ ಅಟ್ರಾಕ್ಟಿವ್ ಆಗಿದೆ.
ತಿರುಪತಿ ಜೈಲಿನಿಂದ ಪರಾರಿಯಾದ ಪುಷ್ಪಾ ರಾಜ್ ಪಾತ್ರವನ್ನು ಉಲ್ಲೇಖಿಸಿ ವಾಯ್ಸ್ ಓವರ್ ಇರುವ ಪ್ರೋಮೋ ವಿಡಿಯೋ ಕೂಡ ಬಿಡುಗಡೆಯಾಗಿದೆ. ವೀಡಿಯೋದ ಕೊನೆಯಲ್ಲಿ ಅಲ್ಲು ಅರ್ಜುನ್ ಪುಷ್ಪ ಎಂಬಂತೆ ಶಾಲು ಹೊದಿಸಿ ಕಾಡಿನಲ್ಲಿ ಅಡಗಿಕೊಳ್ಳಲು ಹೋಗುವುದನ್ನು ತೋರಿಸಲಾಗಿತ್ತು.


Click it and Unblock the Notifications











