For Quick Alerts
  ALLOW NOTIFICATIONS  
  For Daily Alerts

  'ವಕೀಲ್ ಸಾಬ್' ಜೊತೆ ಬರ್ತಾರೆ ಬಾಲಿವುಡ್ ನಟಿ ಆಲಿಯಾ ಭಟ್

  |

  ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ 'ವಕೀಲ್ ಸಾಬ್' ಸಿನಿಮಾ ಏಪ್ರಿಲ್ 9 ರಂದು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಹಿಂದಿಯ 'ಪಿಂಕ್' ಚಿತ್ರದ ರಿಮೇಕ್ ಆಗಿರುವ ಈ ಸಿನಿಮಾ ತೆಲುಗು ಭಾಷೆಯಲ್ಲಿ ಮಾತ್ರ ತೆರೆಗೆ ಬರ್ತಿದೆ.

  'ವಕೀಲ್ ಸಾಬ್' ಸಿನಿಮಾದ ಜೊತೆ ಬಾಲಿವುಡ್ ನಟಿ ಆಲಿಯಾ ಭಟ್ ಸರ್ಪ್ರೈಸ್ ಕೊಡ್ತಿದ್ದಾರೆ. ಪವನ್ ಕಲ್ಯಾಣ್ ಸಿನಿಮಾ ಪ್ರದರ್ಶನದ ಚಿತ್ರಮಂದಿರಗಳಲ್ಲಿ ಆಲಿಯಾ ಭಟ್ ಅಭಿನಯದ 'ಗಂಗುಬಾಯಿ ಕಥಿಯಾವಾಡಿ' ತೆಲುಗು ಟೀಸರ್ ರಿಲೀಸ್ ಮಾಡಲಾಗುತ್ತಿದೆ.

  'ಗಂಗೂಬಾಯಿ ಕಾಥಿಯಾವಾಡಿ' ಸಿನಿಮಾ ವಿವಾದ: ಅಲಿಯಾ ಮತ್ತು ಸಂಜಯ್ ಲೀಲಾ ಬನ್ಸಾಲಿಗೆ ಸಮನ್ಸ್

  ಈ ಕುರಿತು ಸ್ವತಃ ಆಲಿಯಾ ಭಟ್ ಮಾಹಿತಿ ನೀಡಿದ್ದು, 'ಪವನ್ ಕಲ್ಯಾಣ್ ಅವರ ಚಿತ್ರದ ಜೊತೆ ನಮ್ಮ ಟೀಸರ್ ಹಂಚಿಕೊಳ್ಳುತ್ತಿರುವುದು ನಿಜಕ್ಕೂ ಖುಷಿ' ಇದೆ ಎಂದು ವಿಡಿಯೋದಲ್ಲಿ ಧನ್ಯವಾದ ತಿಳಿಸಿದ್ದಾರೆ.

  ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಗಂಗುಬಾಯಿ ಕಥಿಯಾವಾಡಿ' ಹಿಂದಿ ಟೀಸರ್ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಈಗ ತೆಲುಗು ಭಾಷೆಯಲ್ಲಿ ಟೀಸರ್ ಬರ್ತಿದೆ.

  'ವಕೀಲ್ ಸಾಬ್‌'ಗಾಗಿ 'ಯುವರತ್ನ'ವನ್ನು ಬಲಿ ಪಡೆದ ಹೊಂಬಾಳೆ!

  ಗಂಗೂಬಾಯಿ ಕಾಥಿಯಾವಾಡಿ ಚಿತ್ರವು ಹುಸೈನ್ ಜೈದಿ ಎನ್ನುವವರು ಬರೆದ 'ಮಾಫಿಯಾ ಕ್ವೀನ್ ಆಫ್ ಮುಂಬೈ' ಪುಸ್ತಕವನ್ನು ಆಧರಿಸಿ ಮಾಡಲಾಗಿದೆ. ಗಂಗೂಬಾಯಿ ಪಾತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಜುಲೈ 30ಕ್ಕೆ ತೆರೆಗೆ ಬರುತ್ತಿದೆ.

  ಮತ್ತೊಂದೆಡೆ ರಾಜಮೌಳಿ ನಿರ್ದೇಶನ ಆರ್ ಆರ್ ಆರ್ ಚಿತ್ರದಲ್ಲಿ ಆಲಿಯಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ತೆಲುಗು ಚಿತ್ರದಲ್ಲಿ ಆಲಿಯಾ ಭಟ್ ಬಣ್ಣ ಹಚ್ಚಿದ್ದು, ಈ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ. ಇದರ ಜೊತೆ ರಣ್ಬೀರ್ ಕಪೂರ್, ಅಮಿತಾಭ್ ಬಚ್ಚನ್, ನಾಗಾರ್ಜುನ ಜೊತೆ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾನೂ ತೆರೆಗೆ ಬರಲು ಸಜ್ಜಾಗಿದೆ.

  English summary
  Releasing Gangubai Kathiawadi teaser in Telugu on the big screen with telugu movie Vakeel Saab in theaters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X