ನಟಿ ಸಾಯಿ ಪಲ್ಲವಿಯನ್ನು ಹೊಗಳಿ ಕೊಂಡಾಡಿದ ಪ್ರಸಿದ್ಧ ಆಧಾತ್ಮಿಕ ಗುರು
ನಟಿ ಸಾಯಿ ಪಲ್ಲವಿ ದಕ್ಷಿಣ ಭಾರತದ ಅದರಲ್ಲೂ ತಮಿಳು, ತೆಲುಗು, ಮಲೆಯಾಳಂ ಸಿನಿಮಾ ರಂಗದ ಬೇಡಿಕೆಯ ನಟಿ. ಯಾವುದೇ ಗಾಡ್‌ಫಾದರ್‌ಗಳಿಲ್ಲದೆ ನಟನಾ ಪ್ರತಿಭೆಯಿಂದಲೇ ಮೇಲೆ ಬಂದ ನಟಿ ಸಾಯಿ ಪಲ್ಲವಿ.
Recommended Video
ತನ್ನ ನಟನೆ ಮಾತ್ರವಲ್ಲದೆ, ಸರಳತನದಿಂದಲೂ, ಸಾಮಾಜಿಕ ಜವಾಬ್ದಾರಿಯಿಂದಲೂ ಸಾಯಿ ಪಲ್ಲವಿ ಖ್ಯಾತರು. ನಿಜ ಜೀವನದಲ್ಲಿ ಮಾತ್ರವಲ್ಲ, ಸಿನಿಮಾಗಳಲ್ಲೂ ಕೆಲವು ಆದರ್ಶಗಳನ್ನು ಪಾಲಿಸುತ್ತಾ ಬಂದಿದ್ದಾರೆ ನಟಿ ಸಾಯಿ ಪಲ್ಲವಿ.
ನಟಿ ಸಾಯಿ ಪಲ್ಲವಿ, ಅಶ್ಲೀಲ ಎನಿಸುವ ದೃಶ್ಯಗಳಲ್ಲಿ ನಟಿಸುವುದಿಲ್ಲ. ಚುಂಬನ ದೃಶ್ಯಗಳಲ್ಲಿ, ಶೃಂಗಾರಮಯ ದೃಶ್ಯಗಳಲ್ಲಿ ನಟಿಸುವುದಿಲ್ಲ. ಅರೆ-ಬರೆ ಬಟ್ಟೆಗಳನ್ನು ಧರಿಸುವುದಿಲ್ಲ. ಇನ್ನೂ ಕೆಲವು ನಿಯಮಗಳನ್ನು ಸಾಯಿ ಪಲ್ಲವಿ ಪಾಲಿಸುತ್ತಾರೆ. ಈ ಕಾರಣಕ್ಕೆ ಅವರು ಕೌಟುಂಬಿಕ ಪ್ರೇಕ್ಷಕರಿಗೆ ಅಚ್ಚುಮೆಚ್ಚು. ಇತ್ತೀಚಿಗೆ, ಪ್ರಸಿದ್ಧ ಆಧ್ಯಾತ್ಮಿಕ ಗುರು ಒಬ್ಬರು ಸಾಯಿ ಪಲ್ಲವಿಯನ್ನು ಹಾಡಿ ಹೊಗಳಿದ್ದಾರೆ.

ಖ್ಯಾತ ಭಾಷಣಕಾರ ಗರಿಕಾಪತಿ ನರಸಿಂಹ ರಾವು
ಗರಿಕಾಪತಿ ನರಸಿಂಹ ರಾವು ಅವರು ತೆಲುಗಿನ ಪ್ರಸಿದ್ಧ ಆಧ್ಯಾತ್ಮಿಕ ಗುರು. ಟಿವಿಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಇವರ ಭಾಷಣ ಸಾಕಷ್ಟು ಖ್ಯಾತಿ ಗಳಿಸಿದೆ. ಹಲವಾರು ಸೆಲೆಬ್ರಿಟಿಗಳು ಸಹ ಇವರ ಸಲಹೆಗಳನ್ನು ಪಡೆದು ಪಾಲಿಸುತ್ತಾರೆ. ಇವರು ತಮ್ಮ ಕಾರ್ಯಕ್ರಮದಲ್ಲಿ ನಟಿ ಸಾಯಿ ಪಲ್ಲವಿಯನ್ನು ಮನಸಾರೆ ಹೊಗಳಿದ್ದಾರೆ. ಅಲ್ಲದೆ ಕೈ ಮುಗಿದು ನಮಸ್ಕರಿಸಿದ್ದಾರೆ.

ಕತೆ ಇಷ್ಟವಾಗದೆ ಸಿನಿಮಾ ಮಾಡುವುದಿಲ್ಲ ಸಾಯಿ ಪಲ್ಲವಿ
ನಟಿ ಸಾಯಿ ಪಲ್ಲವಿ ಕತೆ ಇಷ್ಟವಾಗದೆ ಸಿನಿಮಾ ಮಾಡುವುದಿಲ್ಲವಂತೆ. ಅಂಥಹವರು ತೆಲುಗು ಸಿನಿರಂಗಕ್ಕೆ ಅತ್ಯಂತ ಅವಶ್ಯಕತೆ ಇದೆ. ಆಕೆ ಅದ್ಭುತವಾದ ನಟಿ, ಆಕೆಯ ಅಭಿನಯ ಚಾತುರ್ಯ ಜನರನ್ನು ಸೂರೆಗೊಳಿಸಿದೆ ಎಂದು ಆಕೆಯ ಹಾಡಿನ ಒಂದು ಸಾಲನ್ನೂ ಹಾಡಿದ್ದಾರೆ ಗರಿಕಾಪತಿ ನರಸಿಂಹ ರಾವು.

'ನನ್ನ ತಂದೆ-ತಾಯಿ ನೋಡುವಂತಹಾ ಸಿನಿಮಾ ಮಾಡಬೇಕು'
ಆಕೆ ಸಿನಿಮಾಗಳಲ್ಲಿ ಅರೆ-ಬರೆ ಬಟ್ಟೆಗಳನ್ನು ಹಾಕದಿರುವ ನಿರ್ಣಯ ತಳೆದಿದ್ದಾರೆ. ನನ್ನ ಸಿನಿಮಾಗಳನ್ನು ನನ್ನ ತಂದೆ ತಾಯಿ, ಮುಂದೆ ನನ್ನ ಮಕ್ಕಳು ಸಂತೋಶದಿಂದ ನೋಡಬೇಕು. ಅವರು ನನ್ನ ಸಿನಿಮಾ ನೋಡಬೇಕಾದರೆ ಮುಜುಗರಕ್ಕೆ ಒಳಗಾಗಬಾರದು ಎಂದಿದ್ದಾರೆ ಸಾಯಿ ಪಲ್ಲವಿ. ಆಕೆಯ ನಿರ್ಣಯಕ್ಕೆ ನಾನು ಕೈ ಎತ್ತಿ ಮುಗಿಯುತ್ತೇನೆ ಎಂದಿದ್ದಾರೆ ನರಸಿಂಹ ರಾವು.

'ಮಗಳ ವಯಸ್ಸಾದರು ಕೈಮುಗಿಯುತ್ತೇನೆ ಸಾಯಿ ಪಲ್ಲವಿಗೆ'
ನಟಿ ಸಾಯಿ ಪಲ್ಲವಿ ನನ್ನ ಮಗಳ ವಯಸ್ಸಿನವಳು, ಆದರೆ ಆಕೆ ಮಾಡಿರುವ ನಿರ್ಣಯ ಕೇಳಿ ನಾನು ಆಕೆಗೆ ಕೈಮುಗಿಯುತ್ತಿದ್ದೇನೆ. ಆಕೆಗೆ ಆಯಸ್ಸು, ಐಶ್ವರ್ಯಾ ನೀಡಿ ದೇವರು ಕಾಪಾಡಲಿ ಎಂದು ನಾನು ಕೋರಿಕೊಳ್ಳುತ್ತಿದ್ದೇನೆ, ಸಾಯಿ ಪಲ್ಲವಿ ಅಂಥಹಾ ನಟಿಯರ ಸಂಖ್ಯೆ ಹೆಚ್ಚಾಗಲಿ ಎಂದಿದ್ದಾರೆ ನರಸಿಂಹ ರಾವು.

ಜಾಹೀರಾತುಗಳಲ್ಲಿ ನಟಿಸುವುದಿಲ್ಲ ಸಾಯಿ ಪಲ್ಲವಿ
ನಟಿ ಸಾಯಿ ಪಲ್ಲವಿ ಯಾವ ಜಾಹೀರಾತಿನಲ್ಲೂ ಕಾಣಿಸಿಕೊಳ್ಳುವುದಿಲ್ಲ. ಸಿನಿಮಾ ಹೊರತಾಗಿ ಇನ್ನಾವುದೇ ಖಾಸಗಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಸ್ಟಾರ್ ಪಾರ್ಟಿಗಳಿಗೆ ಹೋಗುವುದಿಲ್ಲ. ಸಿನಿಮಾಗಳಲ್ಲಿ ಗ್ಲಾಮರಸ್ ಆದ ಉಡುಪು ತೊಡುವುದಿಲ್ಲ. ಇನ್ನೂ ಕೆಲವು ಶಿಸ್ತಿನ ನಿಯಮಗಳನ್ನು ಸಾಯಿ ಪಲ್ಲವಿ ಪಾಲಿಸುತ್ತಾರೆ.


Click it and Unblock the Notifications











