For Quick Alerts
  ALLOW NOTIFICATIONS  
  For Daily Alerts

  ಒಟ್ಟಿಗೆ ಕಾಣಿಸಿಕೊಂಡು ಸ್ಟೆಪ್ಸ್ ಹಾಕಿದ ಚಿರು, ಸಲ್ಮಾನ್ ಖಾನ್; ಗಾಡ್‌ಫಾದರ್ ಸಾಂಗ್ ಟೀಸರ್ ರಿಲೀಸ್

  |

  ಮಲಯಾಳಂ ಸೂಪರ್ ಹಿಟ್ ಲೂಸಿಫರ್ ಚಿತ್ರವನ್ನು ತೆಲುಗಿನಲ್ಲಿ ಗಾಡ್‌ಫಾದರ್ ಎಂದು ರಿಮೇಕ್ ಮಾಡಲಾಗಿದೆ. ಅಲ್ಲಿ ಮೋಹನ್ ಲಾಲ್ ನಿರ್ವಹಿಸಿದ್ದ ಲೀಡ್ ಪಾತ್ರವನ್ನು ಇಲ್ಲಿ ಮೆಗಾಸ್ಟಾರ್ ಚಿರಂಜೀವಿ ಮಾಡಿದ್ದು, ಮಂಜು ವಾರಿಯರ್ ನಿರ್ವಹಿಸಿದ್ದ ಪಾತ್ರಕ್ಕೆ ಇಲ್ಲಿ ಲೇಸಿ ಸೂಪರ್ ಸ್ಟಾರ್ ನಯನತಾರಾ ಜೀವ ತುಂಬಿದ್ದಾರೆ. ಇನ್ನು ಲೂಸಿಫರ್ ಚಿತ್ರವನ್ನು ನಿರ್ದೇಶಿಸಿ ವಿಶೇಷ ಪಾತ್ರದಲ್ಲಿಯೂ ನಟ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದರು. ಈ ಪಾತ್ರವನ್ನು ತೆಲುಗಿನ ರಿಮೇಕ್‌ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಿರ್ವಹಿಸಿದ್ದಾರೆ.

  ಇನ್ನು ಈ ಹಿಂದೆ ಗಾಡ್‌ಫಾದರ್‌ನ ಟೀಸರ್ ಬಿಡುಗಡೆಯಾದಾಗ ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ಟೀಸರ್‌ನ ಕೊನೆಯ ಕಾರ್ ಚೇಸ್ ದೃಶ್ಯವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಆ ದೃಶ್ಯದಲ್ಲಿ ಅಷ್ಟೊಂದು ನೈಜತೆ ಇರಲಿಲ್ಲ, ಅದೊಂದು ಸಂಪೂರ್ಣ ಗ್ರಾಫಿಕ್ ದೃಶ್ಯ ಎನಿಸಿತ್ತು. ಈ ಕಾರಣದಿಂದಾಗಿಯೇ ಆ ದೃಶ್ಯ ಟ್ರೋಲ್‌ಗೂ ಸಹ ಒಳಗಾಗಿತ್ತು. ಇನ್ನು ಇದೀಗ ಚಿತ್ರದ ಮೊದಲ ಹಾಡೊಂದರ ಟೀಸರ್ ಸರಿಗಮ ತೆಲುಗು ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಈ ಟೀಸರ್‌ನಲ್ಲಿ ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ಒಟ್ಟಿಗೆ ಸ್ಟೆಪ್ಸ್ ಹಾಕಿದ್ದಾರೆ.

  ಥಾರ್ ಮಾರ್ ಥಕ್ಕರ್ ಮಾರ್ ಎಂಬ ಹಾಡಿನ 43 ಸೆಕೆಂಡುಗಳ ಪ್ರೋಮೊ ಇದಾಗಿದ್ದು, ಎಸ್ ಥಮನ್ ಮತ್ತೊಂದು ಚಾರ್ಟ್‌ಬಸ್ಟರ್ ಹಾಡು ಕೊಡುವ ಸೂಚನೆ ನೀಡಿದ್ದಾರೆ. ಹಾಡಿಗೆ ಶ್ರೇಯಾ ಘೋಷಾಲ್ ದನಿ ನೀಡಿದ್ದು, ಅನಂತ ಶ್ರೀರಾಮ್ ಸಾಹಿತ್ಯವಿದೆ ಹಾಗೂ ಪ್ರಭುದೇವ ಈ ಹಾಡಿನ ನೃತ್ಯ ಸಂಯೋಜನೆ ಮಾಡಿರುವುದು ವಿಶೇಷವಾಗಿದೆ. ಸದ್ಯ ಪ್ರೋಮೊ ಮಾತ್ರ ಬಿಡುಗಡೆಯಾಗಿರುವ ಈ ಸಂಪೂರ್ಣ ಹಾಡು ಸೆಪ್ಟೆಂಬರ್ 15ರಂದು ಬಿಡುಗಡೆಯಾಗಲಿದೆ.

  ಇನ್ನು ಹಾಡು ಬಿಡುಗಡೆಯಾಗಬೇಕಿದ್ದ ಸಮಯಕ್ಕಿಂತ ತುಸು ಬಿಡುಗಡೆಯಾದದ್ದು ಕೆಲ ಕಾಲ ಅಭಿಮಾನಿಗಳಲ್ಲಿ ಬೇಸರವನ್ನುಂಟುಮಾಡಿತ್ತು ಮತ್ತು ಈ ರೀತಿಯ ಹಾಡು ಮೂಲ ಸಿನಿಮಾ ಲೂಸಿಫರ್‌ನಲ್ಲಿ ಇಲ್ಲದಿದ್ದು, ತೆಲುಗಿಗೆ ತಕ್ಕಂತೆ ಇಲ್ಲಿ ಚಿತ್ರಕತೆಯನ್ನು ಬದಲಿಸಿರುವ ಮುನ್ಸೂಚನೆ ನೀಡಿದ್ದಾರೆ ನಿರ್ದೇಶಕ ಮೋಹನ್ ರಾಜಾ. ಸದ್ಯ ಒಂದು ಟೀಸರ್ ಮತ್ತು ಹಾಡೊಂದರ ಪ್ರೋಮೊ ಬಿಡುಗಡೆ ಮಾಡಿರುವ ಚಿತ್ರತಂಡ ಸಿನಿಮಾವನ್ನು ದಸರಾ ಪ್ರಯುಕ್ತ ಇದೇ ಅಕ್ಟೋಬರ್ 5ಕ್ಕೆ ಬಿಡುಗಡೆ ಮಾಡಲಿದೆ.

  English summary
  Godfather first song promo: Chiranjeevi and Salman Khan shakes leg together
  Tuesday, September 13, 2022, 19:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X