For Quick Alerts
  ALLOW NOTIFICATIONS  
  For Daily Alerts

  ಹೇಳಿದ್ದ ದಿನಕ್ಕಿಂತ ಒಂದು ವಾರ ತಡವಾಗಿ ಚಿರು-ಸಲ್ಲು ಹಾಡು ಬಿಡುಗಡೆ; ನಂಬಿಕೆ ಇಲ್ಲ ಎಂದ ಫ್ಯಾನ್ಸ್!

  |

  ಮೆಗಾಸ್ಟಾರ್ ಚಿರಂಜೀವಿ ಹಾಗೂ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಗಾಡ್ ಫಾದರ್ ಚಿತ್ರದ ಥಾರ್ ಮಾರ್ ಥಕ್ಕರ್ ಮಾರ್ ಹಾಡಿನ ಪ್ರೋಮೊ ಇದೇ ತಿಂಗಳ 13ರಂದು ಬಿಡುಗಡೆಗೊಂಡಿತ್ತು. ಎಲ್ಲಾ ಯೋಜನೆಯ ಪ್ರಕಾರವೇ ನಡೆದಿದ್ದರೆ ಇದೇ ತಿಂಗಳ 15ರಂದು ಥಾರ್ ಮಾರ್ ಥಕ್ಕರ್ ಮಾರ್ ಪೂರ್ತಿ ಹಾಡು ಬಿಡುಗಡೆಗೊಳ್ಳಬೇಕಿತ್ತು. ಆದರೆ, ಈ ಹಾಡು ಆ ದಿನ ಬಿಡುಗಡೆಗೊಳ್ಳಲಿಲ್ಲ. ಹಾಡಿಗಾಗಿ ಕಾಡು ಕುಳಿತಿದ್ದ ಚಿರು ಹಾಗೂ ಸಲ್ಮಾನ್ ಖಾನ್ ಅಭಿಮಾನಿಗಳು ಚಿತ್ರ ತಂಡದ ವಿರುದ್ಧ ಕಿಡಿಕಾರಿದ್ದರು.

  ತಾಂತ್ರಿಕ ದೋಷ ಎಂಬ ಕಾರಣವನ್ನು ನೀಡಿದ್ದ ಚಿತ್ರತಂಡ ಅಂದು ಹಾಡನ್ನು ಬಿಡುಗಡೆ ಮಾಡದೆಯೇ ಒಂದು ವಾರವನ್ನೂ ಕಳೆದಿದೆ. ಹೀಗೆ ಒಂದು ವಾರ ಹಾಡನ್ನು ಬಿಡುಗಡೆ ಮಾಡದೇ ಇದ್ದ ಚಿತ್ರತಂಡ ಇಂದು ( ಸೆಪ್ಟೆಂಬರ್ 21 ) ಬಿಡುಗಡೆ ಮಾಡಲು ಮುಂದಾಗಿದೆ. ಇಂದು ಸಂಜೆ 4.05ಕ್ಕೆ ಈ ಚಿತ್ರದ ಹಾಡು ಬಿಡುಗಡೆ ಆಗಲಿದೆ ಎಂಬ ಪೋಸ್ಟರ್ ಅನ್ನು ಚಿತ್ರ ತಂಡ ಹಂಚಿಕೊಂಡಿದ್ದು, ಸಿನಿ ಪ್ರೇಕ್ಷಕರು ಈ ಬಾರಿಯಾದರೂ ನಿಜವಾಗಿ ಹಾಡು ಬಿಡುಗಡೆ ಮಾಡ್ತೀರಾ ಅಥವಾ ಪೋಸ್ಟರ್ ಬಿಡುಗಡೆ ಮಾಡಿ ಸುಮ್ಮನಾಗ್ತೀರ, ಈ ಘೋಷಣೆಯನ್ನು ನಾವು ನಂಬುವುದಿಲ್ಲ ಎಂದೆಲ್ಲಾ ಕಾಮೆಂಟ್ ಮಾಡಿ ಕಾಲೆಳೆದಿದ್ದಾರೆ.

  ಇನ್ನು ಈ ಹಾಡಿಗೆ ಶ್ರೇಯಾ ಘೋಷಾಲ್ ದನಿ ನೀಡಿದ್ದರೆ, ಎಸ್ ಥಮನ್ ಸಂಗೀತ ಸಂಯೋಜಿಸಿದ್ದಾರೆ ಹಾಗೂ ಸಲ್ಮಾನ್ ಖಾನ್ ಮತ್ತು ಚಿರಂಜೀವಿಗೆ ಪ್ರಭುದೇವ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರ ಈ ಬಾರಿಯ ದಸರಾ ಪ್ರಯುಕ್ತ ಅಕ್ಟೋಬರ್ 5ರಂದು ಬಿಡುಗಡೆಯಾಗಲಿದೆ. ಈ ಚಿತ್ರ ಮಲಯಾಳಂನ ಬ್ಲಾಕ್‌ಬಸ್ಟರ್ ಚಿತ್ರ ಲೂಸಿಫರ್‌ನ ರಿಮೇಕ್ ಆಗಿದ್ದು, ಅಲ್ಲಿ ಮೋಹನ್ ಲಾನ್ ನಿರ್ವಹಿಸಿದ್ದ ಪಾತ್ರವನ್ನು ಇಲ್ಲಿ ಚಿರಂಜೀವಿ ಹಾಗೂ ಅಲ್ಲಿ ಪೃಥ್ವಿರಾಜ್ ಸುಕುಮಾರನ್ ನಿರ್ವಹಿಸಿದ್ದ ಪಾತ್ರವನ್ನು ಇಲ್ಲಿ ಸಲ್ಮಾನ್ ಖಾನ್ ಮಾಡಿದ್ದಾರೆ.

  ಲೂಸಿಫರ್‌ನಲ್ಲಿ ಮಂಜು ವಾರಿಯರ್ ಮಾಡಿದ್ದ ಪಾತ್ರಕ್ಕೆ ಇಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಜೀವ ತುಂಬಿದ್ದು, ಚಿತ್ರದಲ್ಲಿ ಪುರಿ ಜಗನ್ನಾಥ್, ಸತ್ಯದೇವ್, ಸಮದ್ರಕಣಿ, ಸುನಿಲ್, ಬ್ರಹ್ಮಾಜಿ ಹಾಗೂ ಮುರಳಿ ಶರ್ಮಾ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಮೋಹನ್ ರಾಜಾ ಅವರ ನಿರ್ದೇಶನವಿದೆ.

  English summary
  Godfather's Thaar Maar Thakkar Maar full song is releasing today. Read on
  Wednesday, September 21, 2022, 14:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X