ಕೀರ್ತಿ ಸುರೇಶ್‌ಗೆ ಬ್ಯಾಡ್‌ಲಕ್: 'ಗುಡ್ ಲಕ್ ಸಖಿ'ಗೆ ಪೈರಸಿ ಕಾಟ !
ನಟಿ ಕೀರ್ತಿ ಸುರೇಶ್ ಅವರನ್ನು ಮಹಾನಟಿ ಅಂತಲೇ ಕರೆಯಲಾಗುತ್ತದೆ. 'ಮಹಾನಟಿ' ಸಿನಿಮಾದ ಬಳಿಕ ಕೀರ್ತಿ ಸುರೇಶ್ ಅವರು ಸಿನಿಮಾರಂಗದಲ್ಲಿ ವಿಶೇಷಗಾಗಿ ಗಮನ ಸೆಳೆದರು. 'ಮಹಾನಟಿ'ಯಲ್ಲಿ ಕೀರ್ತಿ ಅಭಿನಯ ನೋಡಿದ ಮೇಲೆ ಅವರಿಗೆ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಈಗ ಕೀರ್ತಿ ಸುರೇಶ್ 'ಸಖಿ' ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ನಟಿ ಕೀರ್ತಿ ಸುರೇಶ್ ಅಭಿನಯದ ಹೊಸ ಸಿನಿಮಾ ರಿಲೀಸ್ ಆಗಿದೆ. ಕೀರ್ತಿ ಸುರೇಶ್ ಅವರು 'ಗುಡ್ ಲಕ್ ಸಖಿ' ಎನ್ನುವ ಸಿನಿಮಾದ ಮೂಲಕ ಮತ್ತೆ ಬೆಳ್ಳಿ ತೆರೆಯ ಮೇಲೆ ಹಾಜರಿ ಹಾಕಿದ್ದಾರೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯ ಪಾತ್ರಕ್ಕೆ ಬ್ಯಾಡ್ ಲಕ್ ಹುಡುಗಿ ಎನ್ನುವ ಕಳಂಕ ಅಂಟಿರುತ್ತದೆ. ಇದನ್ನು ಒಂದು ಹಾಡಿನಲ್ಲಿ ವರ್ಣಿಸಲಾಗಿದೆ.
ಅತ್ಯಂತ ಸಂತಸದಿಂದ ಸಿನಿಮಾ ರಿಲೀಸ್ ಮಾಡಿದ ಚಿತ್ರತಂಡಕ್ಕೆ ಈಗ ದೊಡ್ಡ ತಲೆನೋವು ಉಂಟಾಗಿದೆ. ಇದರಿಂದ ಸಿನಿಮಾ ತಂಡ ಕಂಗಾಲಾಗಿ ಹೋಗಿದೆ. 'ಗುಡ್ ಲಕ್ ಸಖಿ' ಸಿನಿಮಾ ಮೊದಲ ದಿನವೇ ಪೈರಸಿಗೆ ತುತ್ತಾಗಿದೆ.

ಕೀರ್ತಿ ಸುರೇಶ್‌ಗೆ ಬ್ಯಾಡ್ ಲಕ್: ಸಿನಿಮಾ ಪೈರಸಿ ಆಗೇ ಬಿಟ್ತು!
ರಿಲೀಸ್ ಆಗುವ ಹೊಸ ಸಿನಿಮಾಗಳಿಗೆ ಪೈರಸಿ ಭಯ ಇದ್ದೇ ಇರುತ್ತೆ. ಹಾಗಾಗಿ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ಸಿನಿಮಾ ತಂಡ ಚಿತ್ರವನ್ನು ರಿಲೀಸ್ ಮಾಡುತ್ತೆ. ಆದರೂ ಕೂಡ ಚಿತ್ರಗಳು ಒಂದಲ್ಲಾ ಒಂದು ಮಾರ್ಗದಲ್ಲಿ ಪೈರಸಿಗೆ ತುತ್ತಾಗಿ ಬಿಡುತ್ತವೆ. ಈಗ ನಟಿ ಕೀರ್ತಿ ಸುರೇಶ್ ಮತ್ತು ಆದಿ ಪಿನಿಶೆಟ್ಟಿ ಅಭಿನಯದ 'ಗುಡ್ ಲಕ್ ಸಖಿ' ಚಿತ್ರ ಕೂಡ ಪೈರಸಿ ಆಗಿದೆ. ಸಿನಿಮಾ ರಿಲೀಸ್ ಆದ ಮೊದಲ ದಿನವೇ ಸಿನಿಮಾ ಲೀಕ್ ಆಗಿ ಬಿಟ್ಟಿದೆ.

'ಗುಡ್ ಲಕ್ ಸಖಿ' ರಿಲೀಸ್ ದಿನವೇ ಪೈರಸಿ:
ಗುಡ್ ಲಕ್ ಸಖಿ ಸಿನಿಮಾ ಜನವರಿ 28ರಂದು ತೆರೆಕಂಡಿದೆ. ಈ ಚಿತ್ರಕ್ಕೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಪೈರಸಿ ಆಗಿ ಬಿಟ್ಟಿದೆ. ಸಂಪೂರ್ಣ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು, ಉಚಿತ ಡೌನ್‌ಲೋಡ್‌ಗೆ ಲಭ್ಯವಿದೆ. ಹಾಗಾಗಿ ಇದು ಸಿನಿಮಾದ ಕಲೆಕ್ಷನ್ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇದರಿಂದಾಗಿ ಮತ್ತೆ ಕೀರ್ತಿ ಸುರೇಶ್ ಸಿನಿಮಾಗೆ ಸಂಕಷ್ಟ ಎದುರಾದಂತಾಗಿದೆ.

ಕೀರ್ತಿ ಸುರೇಶ್ ಸೋಲಿನ ಸಾಲು ಸೇರುತ್ತಾ 'ಗುಡ್ ಲಕ್ ಸಖಿ'!
ಇನ್ನು ಈಗಾಗಲೇ ಕೀರ್ತಿ ಸುರೇಶ್ ಅವರಿಗೆ ಸಾಲು ಸಾಲು ಸಿನಿಮಾಗಳ ಸೋಲಿನ ನೋವು ಕಾಡುತ್ತಿದೆ. 'ಮಹಾ ನಟಿ' ಬಳಿಕ ಅಂತಹ ದೊಡ್ಡ ಹಿಟ್ ಕೊಡಲು ಕೀರ್ತಿ ಸಿನಿಮಾಗಳಿಗೆ ಸಾಧ್ಯ ಆಗಿಲ್ಲ. ಹಾಗಾಗಿ ಕೀರ್ತಿ ಅವರಿಗೆ ಬ್ಯಾಡ್ ಲಕ್ ಶುರುವಾಗಿದೆ ಎನ್ನುವ ಗುಸು ಗುಸು ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ. ಈಗ ಈ ಚಿತ್ರ ಕೂಡ ಬಾಕ್ಸಾಫೀಸ್‌ನಲ್ಲಿ ಸೋತರೆ ಕೀರ್ತಿ ಸುರೇಶ್‌ಗೆ ಸಿನಿಮಾ ಅವಕಾಶಗಳು ಕಡಿಮೆ ಆಗುವ ಸಾಧ್ಯತೆ ಕೂಡ ಇದೆ. ಹಾಗಾಗಿ ಈ ಚಿತ್ರ ತಕ್ಕಮಟ್ಟಿಗೆ ಯಶಸ್ಸು ಕಾಣುವ ಅನಿವಾರ್ಯತೆ ಇದೆ. ಆದರೆ ಪೈರಸಿ ಚಿತ್ರತಂಡಕ್ಕೆ ತಲೆನೋವಾಗಿದೆ.

'ಅಖಂಡ', 'ಲವ್ ಸ್ಟೋರಿ', 'ವಕೀಲ್ ಸಾಬ್' ಚಿತ್ರಗಳನ್ನು ಕಾಡಿದ್ದ ಪೈರಸಿ!
ಇನ್ನು ಲಾಕ್ ಡೌನ್ ಬಳಿಕ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಲಿದೆ. ಪ್ರೇಕ್ಷಕರು ಕೂಡ ಚಿತ್ರಮಂದಿರಗಳತ್ತ ಮುಖ ಮಾಡುತ್ತಲಿದ್ದಾರೆ. ಆದರೆ ಪೈರಸಿ ಕಾಟ ಮಾತ್ರ ಇನ್ನು ತಪ್ಪಿಲ್ಲ. ಸಿನಿಮಾಗಳು ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಸಿನಿಮಾ ಸೋರಿಕೆ ಆಗುತ್ತಿವೆ. ಈ ಹಿಂದೆ ರಿಲೀಸ್ ಆಗಿದ್ದ ನಂದಮೂರಿ ಬಾಲಕೃಷ್ಣ ಅಭಿನಯದ 'ಅಖಂಡ' ಸಿನಿಮಾ ಮೊದಲ ದಿನವೇ ಪೈರಸಿ ಆಗಿತ್ತು. ಅಲ್ಲದೇ 'ಪಾಗಲ್', 'ಲವ್ ಸ್ಟೋರಿ', 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್', 'ವಕೀಲ್ ಸಾಬ್' ಮತ್ತು 'ಎಸ್‌ಆರ್ ಕಲ್ಯಾಣ ಮಂಟಪ' ಚಿತ್ರಗಳು ಕೂಡ ಪೈರಸಿಗೆ ತುತ್ತಾಗಿವೆ.


Click it and Unblock the Notifications











