twitter
    For Quick Alerts
    ALLOW NOTIFICATIONS  
    For Daily Alerts

    ಆಂಧ್ರದಲ್ಲಿ ಚಿತ್ರಮಂದಿರಗಳ ಮೇಲೆ ನಿರ್ಬಂಧ: 'ವಕೀಲ್‌ ಸಾಬ್‌'ಗೆ ಪೆಟ್ಟು

    |

    ನಟ ಪವನ್ ಕಲ್ಯಾಣ್ ನಟಿಸಿ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿರುವ 'ವಕೀಲ್ ಸಾಬ್' ಸಿನಿಮಾಕ್ಕೆ ಆಂಧ್ರ ಸರ್ಕಾರದ ನಿರ್ಣಯದಿಂದಾಗಿ ದೊಡ್ಡ ಹೊಡೆತವೊಂದು ಬಿದ್ದಿದೆ.

    ಕೊರೊನಾ ಪ್ರಕರಣದಲ್ಲಿ ಹೆಚ್ಚಾಗುತ್ತಿರುವ ಕಾರಣ ಆಂಧ್ರ ಪ್ರದೇಶದ ಚಿತ್ರಮಂದಿರಗಳ ಮೇಲೆ ನಿರ್ಬಂಧ ವಿಧಿಸಿದೆ ಜಗನ್ ನೇತೃತ್ವದ ಸರ್ಕಾರ.

    ಆಂಧ್ರ ರಾಜ್ಯದಾದ್ಯಂತ ಚಿತ್ರಮಂದಿರಗಳು ಒಟ್ಟು ಸೀಟು ಸಾಮರ್ಥ್ಯದ ಅರ್ಧದಷ್ಟನ್ನು ಮಾತ್ರವೇ ಬಳಸಿಕೊಳ್ಳಬೇಕು. 50% ಪ್ರೇಕ್ಷಕರಿಗಷ್ಟೆ ಸಿನಿಮಾ ವೀಕ್ಷಿಸಲು ಅವಕಾಶ ಕೊಡಬೇಕು ಎಂದು ಆದೇಶ ಹೊರಡಿಸಲಾಗಿದೆ.

    ಏಪ್ರಿಲ್ 9 ರಂದು ಪವನ್ ಕಲ್ಯಾಣ್ ನಟನೆಯ 'ವಕೀಲ್ ಸಾಬ್' ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾವು ಎರಡೂ ತೆಲುಗು ರಾಜ್ಯಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಆದರೆ ಈಗ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಿರುವ ಕಾರಣ ಸಿನಿಮಾದ ಕಲೆಕ್ಷನ್‌ಗೆ ಹೊಡೆತ ಬೀಳಲಿದೆ.

    ಜಗನ್‌ ಮೇಲೆ ಸಿಟ್ಟಾಗಿದ್ದ ಪವನ್ ಅಭಿಮಾನಿಗಳು

    ಜಗನ್‌ ಮೇಲೆ ಸಿಟ್ಟಾಗಿದ್ದ ಪವನ್ ಅಭಿಮಾನಿಗಳು

    'ವಕೀಲ್ ಸಾಬ್' ಸಿನಿಮಾ ಬಿಡುಗಡೆ ದಿನ ಆಯೋಜಿಸಲಾಗಿದ್ದ ವಿಶೇಷ ಶೋಗಳನ್ನು ಜಗನ್ ಸರ್ಕಾರವು ರದ್ದು ಮಾಡಿತ್ತು. ಆಗಿನಿಂದಲೂ ಪವನ್ ಅಭಿಮಾನಿಗಳು ಜಗನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಲೇ ಇದ್ದಾರೆ. ರಾಜಕೀಯ ದುರುದ್ದೇಶದಿಂದ ಜಗನ್ ಈ ನಿರ್ಣಯ ಕೈಗೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಕೆಲವು ಚಿತ್ರಮಂದಿರಗಳಲ್ಲಿ ದಾಂಧಲೆ ಸಹ ನಡೆಸಿದ್ದರು ಪವನ್ ಅಭಿಮಾನಿಗಳು. ಇದೀಗ ರಾಜ್ಯದಾದ್ಯಂತ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಿರುವುದರ ಬಗ್ಗೆ ಪವನ್ ಅಭಿಮಾನಿಗಳು ಸಿಟ್ಟಿಗೇಳುವುದು ಖಾತ್ರಿ.

    ತೆಲಂಗಾಣದಲ್ಲೂ ನಿರ್ಬಂಧ ಹೇರುವ ಸಾಧ್ಯತೆ

    ತೆಲಂಗಾಣದಲ್ಲೂ ನಿರ್ಬಂಧ ಹೇರುವ ಸಾಧ್ಯತೆ

    ಆಂಧ್ರದ ನೆರೆಯ ರಾಜ್ಯ ತೆಲಂಗಾಣದಲ್ಲಿ ಚಿತ್ರಮಂದಿರಗಳ ಮೇಲೆ ಯಾವುದೇ ನಿರ್ಬಂಧ ಹೇರಲಾಗಿಲ್ಲ. ಆದರೆ ಅಲ್ಲಿಯೂ ಶೀಘ್ರದಲ್ಲಿಯೇ ನಿರ್ಬಂಧ ಹೇರಲಾಗುತ್ತದೆ ಎನ್ನಲಾಗುತ್ತಿದೆ. ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರದೇ ಇರುವ ಬಗ್ಗೆ ತೆಲಂಗಾಣ ಹೈಕೋರ್ಟ್‌ ಕೆಸಿಆರ್‌ ನೇತೃತ್ವದ ಸರ್ಕಾರವನ್ನು ಕೆಲವು ದಿನಗಳ ಹಿಂದಷ್ಟೆ ತರಾಟೆಗೆ ತೆಗೆದುಕೊಂಡಿತ್ತು.

    117 ಕೋಟಿ ಗಳಿಸಿರುವ 'ವಕೀಲ್ ಸಾಬ್' ಸಿನಿಮಾ

    117 ಕೋಟಿ ಗಳಿಸಿರುವ 'ವಕೀಲ್ ಸಾಬ್' ಸಿನಿಮಾ

    'ವಕೀಲ್ ಸಾಬ್' ಸಿನಿಮಾ ಬಿಡುಗಡೆ ಆಗಿ 11 ದಿನವಾಗಿದ್ದು, ಈವರೆಗೆ ಸಿನಿಮಾವು 117 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ ಎನ್ನುತ್ತಿದೆ ಬಾಕ್ಸ್ ಆಫೀಸ್ ವರದಿ. ಆದರೆ ಇದೀಗ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಿರುವ ಕಾರಣ ಇನ್ನು ಮುಂದೆ ಕಲೆಕ್ಷನ್‌ ಇಳಿಮುಖವಾಗಲಿದೆ.

    Recommended Video

    ಫಸ್ಟ್ ಟೈಂ ನಾಯಕಿ ತುಟಿಗೆ ಕಿಸ್ ಮಾಡಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಸಲ್ಮಾನ್‌ಖಾನ್
    ಪವನ್‌ ಕಲ್ಯಾಣ್‌ಗೆ ಕೊರೊನಾ

    ಪವನ್‌ ಕಲ್ಯಾಣ್‌ಗೆ ಕೊರೊನಾ

    ಇನ್ನುಳಿದಂತೆ ನಟ ಪವನ್ ಕಲ್ಯಾಣ್ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಮೂಗಿಗೆ ನಳಿಕೆ ಅಳವಡಿಸಲಾಗಿತ್ತು. ಇಂದು ಪವನ್‌ ಅವರಿಗೆ ಕೊರೊನಾ ನೆಗೆಟಿವ್ ವರದಿ ಬಂದಿದೆಯಾದರೂ ವೈದ್ಯರ ಸಲಹೆಯಂತೆ ಇನ್ನೂ ಕೆಲವು ದಿನ ಅವರು ಆಸ್ಪತ್ರೆಯಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ.

    English summary
    Andhra Pradesh government orders 50% occupancy in theaters. Government took this decision due to raising COVID 19 cases in the state.
    Tuesday, April 20, 2021, 21:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X