twitter
    For Quick Alerts
    ALLOW NOTIFICATIONS  
    For Daily Alerts

    ಪ್ರಭಾಸ್ ಪಾಲುದಾರರಾಗಿರುವ ಯುವಿ ಕ್ರಿಯೇಷನ್ಸ್ ಸಂಸ್ಥೆಗೆ ಜಿಎಸ್‌ಟಿ ಇಲಾಖೆ ಶಾಕ್!

    |

    ಟಾಲಿವುಡ್ ನಟ ಪ್ರಭಾಸ್ ಹೀರೊ ಆಗಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ಗುರ್ತಿಸಿಕೊಂಡಿದ್ದಾರೆ. ಯುವಿ ಕ್ರಿಯೇಷನ್ಸ್ ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ಪ್ರಭಾಸ್‌ ಕೂಡ ಪಾಲುದಾರರಾಗಿದ್ದಾರೆ. ನಿನ್ನೆ(ನವೆಂಬರ್ 1) ಜಿಎಸ್‌ಟಿ ಗುಪ್ತಚರ ವಿಭಾಗ ದಾಳಿ ನಡೆಸಿದ್ದು, ಹೈದರಾಬಾದ್‌ನ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಪರಿಶೀಲನೆಗಾಗಿ ಸಂಸ್ಥೆಗೆ ಸೇರಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

    ಟಾಲಿವುಡ್‌ನ ದೊಡ್ಡ ಪ್ರೊಡಕ್ಷನ್ ಹೌಸ್‌ಗಳಲ್ಲಿ ಒಂದಾಗಿರುವ ಯುವಿ ಕ್ರಿಯೇಷನ್ಸ್ ಸಂಸ್ಥೆ ಮೇಲೆ ಜಿಎಸ್‌ಟಿ ಅಧಿಕಾರಿಗಳ ದಾಳಿ ವಿಚಾರ ಫಿಲ್ಮ್ ನಗರ್‌ನಲ್ಲಿ ಹಾಟ್ ಟಾಪಿಕ್ ಆಗಿದೆ. ಯುವಿ ಕ್ರಿಯೇಷನ್ಸ್ ಸಂಸ್ಥೆ ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ಜಿಎಸ್‌ಟಿ ಅಧಿಕಾರಿಗಳು ಮಂಗಳವಾರ ಕಚೇರಿಗಳಲ್ಲಿ ಶೋಧ ಕಾರ್ಯ ಕೈಗೊಂಡಿದ್ದರು. ಇನ್ನು ಸಿನಿಮಾಗಳ ರಿಲೀಸ್ ಸಮಯದಲ್ಲಿ ತೆರಿಗೆ ವಂಚನೆ ಆಗಿದ್ಯಾ ಎನ್ನುವ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಜಿಎಸ್‌ಟಿ ಇಲಾಖೆ ಅಧಿಕಾರಿಗಳು ಯಾವುದೇ ಹೇಳಿಕೆ ನೀಡಿಲ್ಲ.

    ಪ್ರಭಾಸ್‌ಗೆ ಸೋಲಿನ ಭೀತಿ: ಸಂಕ್ರಾಂತಿ ರೇಸ್‌ನಿಂದ ಹೊರಬಿದ್ದ 'ಆದಿಪುರುಷ್'?ಪ್ರಭಾಸ್‌ಗೆ ಸೋಲಿನ ಭೀತಿ: ಸಂಕ್ರಾಂತಿ ರೇಸ್‌ನಿಂದ ಹೊರಬಿದ್ದ 'ಆದಿಪುರುಷ್'?

    ಯುವಿ ಕ್ರಿಯೇಶನ್ಸ್ ಸಂಸ್ಥೆ ಮಾತ್ರ ಇಂತಹ ತನಿಖೆ ಸರ್ವೇ ಸಾಧಾರಣ ಎಂದು ಹೇಳಿದೆ. ಪ್ರಭಾಸ್ ಸೋದರ ಸಂಬಂಧಿ ಪ್ರಮೋದ್ ಉಪ್ಪಾಲಪಾಟಿ 2013ರಲ್ಲಿ ಈ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದರು. ದೊಡ್ಡ ದೊಡ್ಡ ಸಿನಿಮಾಗಳ ನಿರ್ಮಾಣ ಹಾಗೂ ವಿತರಣೆಯನ್ನು ಈ ಸಂಸ್ಥೆ ಮಾಡುತ್ತಾ ಬರ್ತಿದೆ.

     'ಮಿರ್ಚಿ' ಚಿತ್ರದಿಂದ ಸಂಸ್ಥೆ ಆರಂಭ

    'ಮಿರ್ಚಿ' ಚಿತ್ರದಿಂದ ಸಂಸ್ಥೆ ಆರಂಭ

    ಹೀರೊ ಪ್ರಭಾಸ್ ಸಹೋದರ ಪ್ರಮೋದ್ ಉಪ್ಪಲಪಾಟಿ ತಮ್ಮ ಸ್ನೇಹಿತರಾದ ವಂಶಿಕೃಷ್ಣಾರೆಡ್ಡಿ, ವಿಕ್ರಮ್ ಕೃಷ್ಣಾರೆಡ್ಡಿ ಜೊತೆ ಸೇರಿ ಮುಂಬೈನ ಬೇಸ್‌ ಮಾಡಿ ಸಂಸ್ಥೆ ಆರಂಭಿಸಿದ್ದರು. ಈ ಸಂಸ್ಥೆಯಲ್ಲಿ ಮೊದಲಿಗೆ ನಿರ್ಮಾಣವಾದ ಸಿನಿಮಾ 'ಮಿರ್ಚಿ'. ಕೊರಟಾಲ ಶಿವ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅನುಷ್ಕಾ ಶೆಟ್ಟಿ ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಮಿಂಚಿದ್ದರು. ಈ ಚಿತ್ರವನ್ನು 'ಮಾಣಿಕ್ಯ' ಹೆಸರಿನಲ್ಲಿ ಕಿಚ್ಚ ಸುದೀಪ್ ಕನ್ನಡಕ್ಕೆ ರೀಮೆಕ್ ಮಾಡಿದ್ದರು.

     'ರಾಧೆಶ್ಯಾಮ್' ಚಿತ್ರದಿಂದ ಭಾರೀ ನಷ್ಟ

    'ರಾಧೆಶ್ಯಾಮ್' ಚಿತ್ರದಿಂದ ಭಾರೀ ನಷ್ಟ

    ನಾನಿ ನಾಯಕನಾಗಿ ನಟಿಸಿದ 'ಭಲೇ ಭಲೇ ಮಗಾಡಿವೋಯ್', ಶರ್ವಾನಂದ್ ನಟನೆಯ 'ಎಕ್ಸ್‌ಪ್ರೆಸ್‌ ರಾಜಾ', 'ರನ್ ರಾಜಾ ರನ್', 'ಮಹಾನುಭಾವುಡು' ಹಾಗೂ ಗೋಪೀಚಂದ್ ನಾಯಕನಾಗಿ 'ಜಿಲ್', 'ಪಕ್ಕಾ ಕಮರ್ಷಿಯಲ್', ಶೋಭನ್ ನಾಯಕನಾಗಿ 'ಏಕ್ ಮಿನಿ ಕಥಾ' ವಿಜಯ್ ದೇವರಕೊಂಡ ಹೀರೊ ಆಗಿ 'ಟ್ಯಾಕ್ಸಿವಾಲ' ಚಿತ್ರಗಳನ್ನು ನಿರ್ಮಾಣ ಯುವಿ ಕ್ರಿಯೇಷನ್ಸ್ ಸಂಸ್ಥೆ ಸಿನಿಮಾಗಳನ್ನು ನಿರ್ಮಿಸಿದೆ. ಪ್ರಭಾಸ್ ನಟನೆಯ 'ರಾಧೇಶ್ಯಾಮ್' ಹಾಗೂ 'ಸಾಹೋ' ಚಿತ್ರಗಳಿಗೂ ಇದೇ ಸಂಸ್ಥೆ ಬಂಡವಾಳ ಹೂಡಿತ್ತು.

     ಈ ಸಂಸ್ಥೆ ತೆಕ್ಕೆಗೆ 'ಆದಿಪುರುಷ್' ರೈಟ್ಸ್

    ಈ ಸಂಸ್ಥೆ ತೆಕ್ಕೆಗೆ 'ಆದಿಪುರುಷ್' ರೈಟ್ಸ್

    ಪ್ರಭಾಸ್ ನಟನೆಯ 'ಆದಿಪುರುಷ್' ಚಿತ್ರದ ಆಂಧ್ರ ಹಾಗೂ ತೆಲಂಗಾಣ ಡಿಸ್ಟ್ರಿಬ್ಯೂಷನ್ ರೈಟ್ಸ್‌ನ ಯುವಿ ಕ್ರಿಯೇಷನ್ಸ್ ಸಂಸ್ಥೆ ಕೊಂಡುಕೊಂಡಿದೆ. 'ರಾಧೇಶ್ಯಾಮ್' ಚಿತ್ರದಿಂದ ಆದ ನಷ್ಟವನ್ನು ಸರಿದೂಗಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಮುಂದಿನ ವರ್ಷ ಸಮ್ಮರ್‌ನಲ್ಲಿ 'ಆದಿಪುರುಷ್' ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ರಾಮಾಯಣ ಕಾವ್ಯವನ್ನು ಆಧರಿಸಿ ಓಂ ರಾವುತ್ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರದ ಟೀಸರ್, ಪೋಸ್ಟರ್ ಭಾರೀ ಸದ್ದು ಮಾಡಿತ್ತು.

     6 ಕೋಟಿ ರೂ. ಜಿಎಸ್‌ಟಿ ಬಾಕಿ?

    6 ಕೋಟಿ ರೂ. ಜಿಎಸ್‌ಟಿ ಬಾಕಿ?

    ಯುವಿ ಕ್ರಿಯೇಷನ್ಸ್ ಸಂಸ್ಥೆ ಆದಾಯಕ್ಕೂ, ಜಿಎಸ್‌ಟಿ ಪಾವತಿಗೂ ತಾಳೆ ಆಗುತ್ತಿಲ್ಲ ಎನ್ನುವ ಆರೋಪ ಕೇಳಿಬರ್ತಿದೆ. ಅಧಿಕಾರಿಗಳ ಪ್ರಾಥಮಿಕ ಪರಿಶೀಲನೆಯಲ್ಲಿ ಸಂಸ್ಥೆ 6 ಕೋಟಿ ರೂ.ಗೂ ಅಧಿಕ ಜಿಎಸ್‌ಟಿ ಬಾಕಿ ಉಳಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಯುವಿ ಕ್ರಿಯೇಷನ್ಸ್ ಸಂಸ್ಥೆ ನಿರ್ಮಿಸುತ್ತಿರುವ ಸಿನಿಮಾಗಳು ಸಾಲು ಸಾಲಾಗಿ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸುತ್ತಿದೆ. ಆದರೆ ಮತ್ತೊಂದು ಕಡೆ ಸಿನಿಮಾಗಳ ನಿರ್ಮಾಣ ಮುಂದುವರೆದಿದೆ. ಇದು ಕೆಲವರು ಅನುಮಾನಕ್ಕೆ ಕಾರಣವಾಗಿದೆ.

    ಎರಡನೇ ಸಲ 'ಕಾಂತಾರ' ವೀಕ್ಷಿಸಿದ ಪ್ರಭಾಸ್; ತಡವಾಗಿ ವೀಕ್ಷಿಸಿದ ಪ್ರತಾಪ್ ಸಿಂಹರಿಂದ ಸಂದೇಶಎರಡನೇ ಸಲ 'ಕಾಂತಾರ' ವೀಕ್ಷಿಸಿದ ಪ್ರಭಾಸ್; ತಡವಾಗಿ ವೀಕ್ಷಿಸಿದ ಪ್ರತಾಪ್ ಸಿಂಹರಿಂದ ಸಂದೇಶ

    English summary
    GST officials raid Hydrabad office of UV creations. Suspecting that the company has evaded tax, the GST officials have conducted searches in the office. Know more.
    Wednesday, November 2, 2022, 17:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X