For Quick Alerts
  ALLOW NOTIFICATIONS  
  For Daily Alerts

  ಈ ನಾಲ್ಕು ಹುಡುಗರು ಈಗ ಸ್ಟಾರ್ ನಟರು! ಯಾರೆಂದು ಗುರುತಿಸಿ?

  |

  ಟಾಲಿವುಡ್ ಮೆಗಾಸ್ಟಾರ್ ಕುಟುಂಬದಲ್ಲಿ ಹಲವು ಜನ ಹೀರೋಗಳಿದ್ದಾರೆ. ಚಿರಂಜೀವಿ, ಅವರ ಸಹೋದರರಾದ ಪವನ್ ಕಲ್ಯಾಣ್, ನಾಗಬಾಬು ಬಳಿಕ ಈಗ ಅವರ ಮಕ್ಕಳು ಚಿತ್ರರಂಗದಲ್ಲಿ ಸ್ಟಾರ್ ಗಳಾಗಿ ಮಿಂಚುತ್ತಿದ್ದಾರೆ.

  ನಾಗಬಾಬು ಅವರ ಮಗ ವರುಣ್ ತೇಜ ತಮ್ಮ ಬಾಲ್ಯದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಾಕಂದ್ರೆ, ಈ ಫೋಟೋದಲ್ಲಿರುವ ನಾಲ್ಕು ಜನ ಹುಡುಗರು ಈಗ ತೆಲುಗು ಇಂಡಸ್ಟ್ರಿಯಲ್ಲಿ ಹೀರೋಗಳೇ.

  ವರುಣ್ ತೇಜ ಈ ಫೋಟೋ ಹಂಚಿಕೊಂಡಿರುವ ಹಿನ್ನೆಲೆ ಅವರೊಬ್ಬರು ಎನ್ನುವುದು ಗೊತ್ತಾಗಿದೆ. ಉಳಿದ ಮೂವರು ಯಾರು ಎಂದು ನೋಡುವುದಾರೇ ಅವರು ಕೂಡ ಮೆಗಾ ಫ್ಯಾಮಿಲಿ ಸದ್ಯಸರು.

  'ದಕ್ಷಿಣ ಭಾರತೀಯ ಚಿತ್ರರಂಗವನ್ನು ಕಡೆಗಣಿಸಲಾಗಿದೆ': ಮೋದಿಗೆ ರಾಮ್ ಚರಣ್ ಪತ್ನಿ ಪ್ರಶ್ನೆ'ದಕ್ಷಿಣ ಭಾರತೀಯ ಚಿತ್ರರಂಗವನ್ನು ಕಡೆಗಣಿಸಲಾಗಿದೆ': ಮೋದಿಗೆ ರಾಮ್ ಚರಣ್ ಪತ್ನಿ ಪ್ರಶ್ನೆ

  ಹೌದು, ಈ ಫೋಟೋದಲ್ಲಿ ವರುಣ್ ತೇಜ, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ಮೆಗಾಸ್ಟಾರ್ ಪುತ್ರ ರಾಮ್ ಚರಣ್ ಹಾಗೂ ಚಿರಂಜೀವಿ ಅಳಿಯ ಸಾಯಿ ಧರಮ್ ತೇಜ ಮತ್ತು ಚಿರಂಜೀವಿ ಪುತ್ರಿ ಸುಶ್ಮಿತಾ ಇದ್ದಾರೆ.

  ಇತ್ತೀಚಿಗಷ್ಟೆ ಅಲ್ಲು ಅರ್ಜುನ್ ಇನ್ನೊಂದು ಫೋಟೋ ಹಂಚಿಕೊಂಡಿದ್ದರು. ತೆಲುಗು ಇಂಡಸ್ಟ್ರಿಯ ಖ್ಯಾತ ದಿವಂಗತ ನಟ ಅಲ್ಲು ರಾಮಲಿಂಗಯ್ಯ ಅವರು ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಡೆದು ವಾಪಸ್ ಆದ ಸಂದರ್ಭದಲ್ಲಿ ಸೆರೆ ಹಿಡಿದಿದ್ದ ಫೋಟೋ ಶೇರ್ ಮಾಡಿದ್ದರು. ಆ ಫೋಟೋದಲ್ಲಿ ಅಲ್ಲು ಅರ್ಜುನ್ ಸೇರಿ ಮೆಗಾಸ್ಟಾರ್ ಫ್ಯಾಮಿಲಿ ಹಾಗೂ ಅಲ್ಲು ಫ್ಯಾಮಿಲಿ ಹುಡುಗರಿದ್ದರು.

  ಅಲ್ಲು ಅರ್ಜುನ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಪಾತ್ರ ಬಹಿರಂಗಅಲ್ಲು ಅರ್ಜುನ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಪಾತ್ರ ಬಹಿರಂಗ

  ಸದ್ಯ ಅಲ್ಲು ಅರ್ಜುನ್ ವೈಕುಂಠಪುರಂಲ್ಲೋ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಪೂಜಾ ಹೆಗ್ಡೆ ಈ ಚಿತ್ರಕ್ಕೆ ನಾಯಕಿ. ರಾಮ್ ಚರಣ್ ತೇಜ ಅವರು ರಾಜಮೌಳಿ ಜೊತೆ ಆರ್ ಆರ್ ಆರ್ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರದಲ್ಲಿ ಜೂನಿಯರ್ ಎನ್ ಟಿ ಆರ್ ಕೂಡ ನಟಿಸುತ್ತಿದ್ದಾರೆ. ಈ ಕಡೆ ತಮಿಳಿನ ಜಿಗರ್ ಥಂಡ ಸಿನಿಮಾವನ್ನ ತೆಲುಗಿನಲ್ಲಿ ವರುಣ್ ತೇಜ ರೀಮೇಕ್ ಮಾಡಿದ್ದರು. ಸಿನಿಮಾ ರಿಲೀಸ್ ಆಗಿ ಸೋಲು ಕಂಡಿದೆ.

  English summary
  Tollywood actor varun tej shares flashback picture of his childhood. guess this four actor, who all are in one frame?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X