ಉತ್ತಮ ಆರಂಭ ಕಂಡು 2ನೇ ದಿನವೇ ಕುಸಿದ ಮಹೇಶ್ ಬಾಬು ನಟನೆಯ ಗುಂಟೂರು ಖಾರಂ! ಗಳಿಸಿದ್ದೇಷ್ಟು?
ವರ್ಷದ ಮೊದಲ ಬಿಡುಗಡೆ, ಸಂಕ್ರಾಂತಿಗೆ ಉಡುಗೊರೆ ಎಂದು ಬಿಡುಗಡೆಯಾಗಿದ್ದ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ ಗುಂಟೂರು ಖಾರಂ ಸಿನಿಮಾ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದಿತ್ತು. ಮಹೇಶ್ ಬಾಬು ಅವರ ಬಹು ನಿರೀಕ್ಷಿತ ಚಿತ್ರ ಮಿಶ್ರ ವಿಮರ್ಶೆಗಳ ನಡುವೆ ಮೊದಲ ದಿನ 40 ಕೋಟಿಗೂ ಹೆಚ್ಚು ಗಳಿಸಿತ್ತು.
Sacnilk.com ಹಂಚಿಕೊಂಡ ಆರಂಭಿಕ ಅಂದಾಜಿನ ಪ್ರಕಾರ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನ ಚಿತ್ರವು ಎರಡನೇ ದಿನ ಕೇವಲ 13 ಕೋಟಿಗೆ ಕುಸಿದಿದೆ. ಅಂದರೆ ದೇಶಿಯ ಮಾರುಕಟ್ಟೆಯಲ್ಲಿ ಈವರೆಗೆ 54.3 ಕೋಟಿ ಕಲೆಕ್ಷನ್ ಮಾಡಿದೆ. ಆದರೆ, ಚಿತ್ರತಂಡ ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, 'ಗುಂಟೂರು ಖಾರಂ' ವಿಶ್ವಾದ್ಯಂತ 94 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ.

ಗುಂಟೂರು ಖಾರಂ ಮತ್ತು ಹನುಮಾನ್ ಪೈಪೋಟಿ
ಸಿನಿಮಾ ಬಿಡುಗಡೆಯಾದ ಎರಡನೇ ದಿನ ಅಂದರೆ ಶನಿವಾರದಂದು ಮಹೇಶ್ ಬಾಬು ಅವರ 'ಗುಂಟೂರು ಖಾರಂ' ಒಟ್ಟಾರೆ 46.02 ಶೇಕಡಾ ತೆಲುಗು ಆಕ್ಯುಪೆನ್ಸನ್ನು ಹೊಂದಿತ್ತು. ಈ ಚಿತ್ರವು ಮತ್ತೊಂದು ತೆಲುಗು ಚಿತ್ರ ತೇಜಾ ಸಜ್ಜಾ ನಟನೆಯ 'ಹನುಮಾನ್' ಜೊತೆಗೆ ಬಿಡುಗಡೆಯಾಗಿತ್ತು. ಹನುಮಾನ್ ಸಿನಿಮಾ ಕೂಡ ಶನಿವಾರ 'ಗುಂಟೂರು ಖಾರಂ'ಗೆ ಟಕ್ಕರ್ ಕೊಟ್ಟಿದೆ.
ಶನಿವಾರದಂದು ನಟ ಮಹೇಶ್ ಬಾಬು ಅವರು ಪ್ರೇಕ್ಷಕರೊಂದಿಗೆ 'ಗುಂಟೂರು ಖಾರಂ' ವೀಕ್ಷಿಸಲು ಹೈದರಾಬಾದ್‌ನ ಥಿಯೇಟರ್‌ಗೆ ಭೇಟಿ ನೀಡಿದರು. ನಟನನದನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಸೂಪರ್‌ಸ್ಟಾರ್ ಕೂಡ ತನ್ನ ಅಭಿಮಾನಿಗಳ ಜೊತೆಯಲ್ಲಿ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ.

'ಗುಂಟೂರು ಖಾರಂ'
'ಗುಂಟೂರು ಖಾರಂ' ಸಿನಿಮಾ ತ್ರಿವಿಕ್ರಮ್ ಮತ್ತು ಮಹೇಶ್ ಬಾಬು ಅವರ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾವಾಗಿತ್ತು. ಅಥಾಡು ಮತ್ತು ಖಲೇಜಾ ಸೂಪರ್ ಹೊಟ್ ಸಿನಿಮಾಗಳ ನಂತರ ಅವರ ಮೂರನೇ ಚಿತ್ರ ಗುಂಟೂರು ಖಾರಂ. ಈ ಎಮೋಷನಲ್ ಆಕ್ಷನ್ ಡ್ರಾಮಾದಲ್ಲಿ ಶ್ರೀಲೀಲಾ, ಮೀನಾಕ್ಷಿ ಚೌಧರಿ, ಜಗಪತಿ ಬಾಬು, ರಮ್ಯಾ ಕೃಷ್ಣನ್, ಜಯರಾಮ್, ಪ್ರಕಾಶ್ ರಾಜ್ ಮತ್ತು ಸುನೀಲ್ ಕೂಡ ನಟಿಸಿದ್ದಾರೆ.
ತಾಯಿ ಮಗನ ಸೆಂಟಿಮೆಂಟ್. ತಾಯಿಯಿಂದ ದೂರಾದ ಮೆಣಸಿನಕಾಯಿ ವ್ಯಾಪಾರ ಮಾಡುವ ಕುಟುಂಬದ ಕುಡಿ ರಮಣನ ಕಥೆಯಿದು. ಇದಕ್ಕೆ ಸ್ವಲ್ಪ ರಾಜಕೀಯದ ಟಚ್ ನೀಡಲಾಗಿದೆ. ಇನ್ನು, ಎಮೋಷನಲ್ ಸಿನಿಮಾ ಆಗಿದ್ದರು ಕೂಡ ಹೆಚ್ಚು ಆಕ್ಷನ್ ಸಿನಿಮಾ ಎನಿಸಿಕೊಂಡಿದೆ. ಮಹೇಶ್ ಬಾಬು ಅವರ ಇನ್ ಮ್ಯಾನ್ ಶೋ ಎನ್ನುವಂತಿದೆ. ಬಹಳಷ್ಟು ಪಾತ್ರಗಳಿಗೆ ಸ್ಕ್ರೀನ್ ಸ್ಪೇಸ್ ಕೊಟ್ಟಿಲ್ಲ. ಬಂದ ಪುಟ್ಟ ಹೊದ ಪುಟ್ಟ ಎನ್ನುವಂತಿವೆ ಹಲವು ನಟರ ಪಾತ್ರಗಳು.
ಮಹೇಶ್ ಬಾಬುಗೆ ಶಾರುಖ್ ಖಾನ್ ಸಾಥ್
ಇನ್ನು, 'ಗುಂಟೂರು ಖಾರಂ' ಸಿನಿಮಾಗೆ ಬಾಲಿವುಡ್ ಬಾದ್‌ಷಾನ ಬೆಂಬಲ ಸಿಕ್ಕಿದೆ. ಮಹೇಶ್ ಬಾಬು ಅವರ ಸಿನಿಮಾಗೆ ಶಾರುಖ್ ಖಾನ್ ಸಾಥ್ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಗುಂಟೂರು ಖಾರಂ ಟ್ರೈಲರ್ ಅನ್ನು ಹಂಚಿಕೊಂಡು ಸಿನಿಮಾ ನೋಡುವುದಾಗಿ ತಿಳಿಸಿದ್ದಾರೆ. ಜೊತೆಗೆ " 'ಗುಂಟೂರು ಖಾರಂ' ನಲ್ಲಿ ನನ್ನ ಸ್ನೇಹಿತ ಮಹಶ್ ಬಾಬುಗಾಗಿ ಎದುರುನೋಡುತ್ತಿದ್ದೇನೆ!!! ಆಕ್ಷನ್, ಭಾವನೆ ಮತ್ತು ಭರವಸೆಯ ಸವಾರಿ ಕೋರ್ಸ್ ಇದು....ಫುಲ್ ಮಾಸ್!!!" ಎಂದಿದ್ದಾರೆ.


Click it and Unblock the Notifications











