Guntur Kaaram: "ತೆಲುಗಿನಲ್ಲಿ ಇದೇ ನನ್ನ ಕೊನೆಯ ಸಿನ್ಮಾ"; ಮಹೇಶ್ ಬಾಬು ಮಾತಿನ ಮರ್ಮವೇನು?

ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ. ಆದರೂ ಹಬ್ಬದ ಸಂಭ್ರಮದಲ್ಲಿ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಪರಿಣಾಮ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಮಿಂಚಿದ್ದಾರೆ.

'ಗುಂಟೂರು ಖಾರಂ'ಗಿಂತ ತೇಜ ಸಜ್ಜಾ ನಟನೆಯ 'ಹನುಮಾನ್' ಸಿನಿಮಾ ಹೆಚ್ಚು ಸದ್ದು ಮಾಡ್ತಿದೆ. ಬಾಕ್ಸಾಫೀಸ್‌ನಲ್ಲೂ ಧೂಳೆಬ್ಬಿಸಿದೆ. ತ್ರಿವಿಕ್ರಮ್- ಮಹೇಶ್ ಹ್ಯಾಟ್ರಿಕ್ ಕಾಂಬಿನೇಷನ್ ಸಿನಿಮಾ ಮ್ಯಾಜಿಕ್ ಮಾಡದೇ ಹೋಗಿದೆ. ಆದರೂ ಕೂಡ ಚಿತ್ರತಂಡ ಸಕ್ಸಸ್ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಿದೆ. ಚಿತ್ರದಲ್ಲಿ ಔಟ್ ಅಂಡ್ ಔಟ್ ಮಾಸ್ ರೋಲ್‌ನಲ್ಲಿ ಬೀಡಿ ಸೇದುತ್ತಾ ಮಾಸ್ ಮ್ಯಾನರಿಸಂನೊಂದಿಗೆ ಮಹೇಶ್ ಬಾಬು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

Guntur Kaaram is the One of the Last Telugu Film, Says Mahesh babu

'ಗುಂಟೂರು ಖಾರಂ' ಚಿತ್ರವನ್ನು ಹಾಗೂ ಮಹೇಶ್ ಬಾಬು ಪಾತ್ರವನ್ನು ಈ ರೀತಿ ಡಿಸೈನ್ ಮಾಡೋಕೆ ಒಂದು ಕಾರಣ ಇದೆ. ಅದನ್ನು ಸ್ವತಃ ಮಹೇಶ್ ಬಾಬು ಈಗ ರಿವೀಲ್ ಮಾಡಿದ್ದಾರೆ. ಚಿತ್ರದಲ್ಲಿ ಮಾಸ್ ಅಂಶಗಳು ಹೆಚ್ಚಾಗಿರಬೇಕು ಎಂದು ಪ್ರಿನ್ಸ್ ಮೊದಲೇ ಹೇಳಿದ್ದರಂತೆ. ಚಿತ್ರದಲ್ಲಿ ಎರಡು ಮಾಸ್ ಟಪ್ಪಾಂಗುಚ್ಚಿ ಸಾಂಗ್ಸ್ ಇರಬೇಕು ಎಂದು ಸೂಚಿಸಿದ್ದಲ್ಲದೇ ಕೊರಿಯೋಗ್ರಫರ್‌ಗೆ ಹೇಳಿ ಬಿಂದಾಸ್ ಡ್ಯಾನ್ಸ್ ಕಂಪೋಸ್ ಮಾಡಿಸಿದ್ದರಂತೆ. ಅದಕ್ಕೆಲ್ಲಾ ಕಾರಣ ಈಗ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಮಹೇಶ್ ಬಾಬು "ಗುಂಟೂರು ಖಾರಂ ಚಿತ್ರವನ್ನು ಸಖತ್ ಎಂಜಾಯ್ ಮಾಡುತ್ತಾ ಮುಗಿಸಿದೆವು. ಚಿತ್ರದಲ್ಲಿ 2 ಮಾಸ್ ಸಾಂಗ್ಸ್ ಇರಬೇಕು ಎಂದು ನಾನು, ನಿರ್ದೇಶಕರು ನಿರ್ಧರಿಸಿದ್ದೆವು. ಈ ಸಿನಿಮಾ ಬಳಿಕ ತೆಲುಗಿನಲ್ಲಿ ಸಿನಿಮಾ ಮಾಡುವ ಅವಕಾಶ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಬಹುಶಃ ಇದೇ ನನ್ನ ಕೊನೆಯ ತೆಲುಗು ಸಿನಿಮಾ ಆಗಬಹುದು" ಎಂದಿದ್ದಾರೆ. ಇದನ್ನು ಕೇಳಿ ಕೆಲವರು ಶಾಕ್ ಆಗಿದ್ದಾರೆ. ಫಿಲ್ಮ್ ಮೇಕರ್ಸ್ ಕೂಡ ಇನ್ಮುಂದೆ ಮಹೇಶ್ ಬಾಬು ಜೊತೆ ಸಿನಿಮಾ ಮಾಡೋದು ಕಷ್ಟ ಕಷ್ಟ ಎನ್ನುತ್ತಿದ್ದಾರೆ.

Guntur Kaaram is the One of the Last Telugu Film, Says Mahesh babu

ಇನ್ನು ಶ್ರೀಲೀಲಾ ಜೊತೆ ಡ್ಯಾನ್ಸ್ ಮಾಡುವುದು ಬಹಳ ಕಷ್ಟ. ಆಕೆಯ ಎನರ್ಜಿಗೆ ಮ್ಯಾಚ್ ಮಾಡಿ ಡ್ಯಾನ್ಸ್ ಮಾಡಬೇಕು ಎಂದು ಅಂದುಕೊಂಡೆ. ಅದಕ್ಕೆ ತಕ್ಕಂತೆ ತಯಾರಿ ನಡೆಸಿದೆ. ಕೊರಿಯೋಗ್ರಫರ್‌ಗಳಿಗೂ ಹೇಳಿದೆ. ಈಗ ಎಲ್ಲರೂ ಆ ಹಾಡುಗಳನ ಬಗ್ಗೆಯೇ ಮಾತನಾಡುತ್ತಿದ್ದಾರೆ. 'ಕುರ್ಚಿ ಮಡತಪೆಟ್ಟಿ'ನನ್ನ ಕರಿಯರ್ ಬೆಸ್ಟ್ ಸಾಂಗ್ ಎಂದು ಮಹೇಶ್ ಬಾಬು ಹೇಳಿದ್ದಾರೆ.

'ಗುಂಟೂರು ಖಾರಂ' ನನ್ನ ಕೊನೆಯ ತೆಲುಗು ಸಿನಿಮಾ ಆಗಬಹುದು ಎಂದು ಮಹೇಶ್ ಬಾಬು ಹೇಳುವುದಕ್ಕೆ ಕಾರಣವಿದೆ. ಅದು ಪ್ರಿನ್ಸ್ ಮುಂದಿನ ಸಿನಿಮಾ. ರಾಜಮೌಳಿ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಮಹೇಶ್ ಬಾಬು ನಟಿಸೋಕೆ ಸಿದ್ಧತೆ ನಡೆಸಿದ್ದಾರೆ. ಆ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗುವುದು ಪಕ್ಕಾ. ಆ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲೇ ಪ್ರಿನ್ಸ್ ಸಿನಿಮಾಗಳು ನಿರ್ಮಾಣವಾಗುತ್ತದೆ. ಬರೀ ತೆಲುಗಿನಲ್ಲಿ ಸಿನಿಮಾ ಮಾಡುವುದು ಅನುಮಾನ. ಅದೇ ಕಾರಣಕ್ಕೆ ಮಹೇಶ್ ಬಾಬು ಈ ಮಾತು ಹೇಳಿದ್ದಾರೆ ಎನ್ನಲಾಗ್ತಿದೆ.

'RRR' ಬಳಿಕ ರಾಜಮೌಳಿ ಮತ್ತೊಂದು ಮೆಹಾ ಪ್ರಾಜೆಕ್ಟ್ ಪ್ಲ್ಯಾನ್ ಮಾಡುತ್ತಿದ್ದಾರೆ. ತಮ್ಮದೇ ತಂಡ ಕಟ್ಟಿಕೊಂಡು ಒಂದು ಹಾಲಿವುಡ್ ರೇಂಜ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದು 1000 ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುವ ಸಾಧ್ಯತೆಯಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಸಹ ಈ ಚಿತ್ರದಲ್ಲಿ ನಟಿಸುವ ಸಾಧ್ಯತೆಯಿದೆ. ಇದು ಮಹೇಶ್ ಬಾಬು 39ನೇ ಸಿನಿಮಾ ಆಗಲಿದೆ.

More from Filmibeat

English summary
Why Mahesh babu Say Guntur Kaaram might may my last telugu film?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X