'ಗುಂಟೂರು ಖಾರಂ' ಸೆಟ್‌ನಲ್ಲಿ ಪೂಜಾ ಹೆಗ್ಡೆ; ಫೋಟೊಗಳು ವೈರಲ್ ಆಗಿ ಟ್ರೋಲ್

ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ ಗುಂಟೂರು ಖಾರಂ ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿತ್ತು. ತ್ರಿವಿಕ್ರಮ್ ನಿರ್ದೇಶನದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಸುಗ್ಗಿ ಸಂಭ್ರಮದಲ್ಲಿ ಸಿನಿಮಾ ಒಂದು ಹಂತಕ್ಕೆ ಗಳಿಕೆ ಕಂಡಿತ್ತು. ಚಿತ್ರದಲ್ಲಿ ಶ್ರೀಲೀಲಾ ಹಾಗೂ ಮೀನಾಕ್ಷಿ ಚೌಧರಿ ನಾಯಕಿಯರಾಗಿ ಮಿಂಚಿದ್ದರು.

ಸದ್ಯ 'ಗುಂಟೂರು ಖಾರಂ' ಒಂದಷ್ಟು ಮೇಕಿಂಗ್ ಫೋಟೊಗಳು ವೈರಲ್ ಆಗುತ್ತಿದೆ. ಅದರಲ್ಲಿ ಶ್ರೀಲೀಲಾ ಜೊತೆಗೆ ಬಾಲಿವುಡ್ ಬ್ಯೂಟಿ ಪೂಜಾ ಹೆಗ್ಡೆ ಕೂಡ ಕಾಣಿಸಿಕೊಂಡಿದ್ದಾರೆ. ಹೌದು ಚಿತ್ರಕ್ಕೆ ಮೊದಲ ನಾಯಕಿಯಾಗಿ ಪೂಜಾ ಆಯ್ಕೆ ಆಗಿದ್ದರು. ಕಾರಣಾಂತರಗಳಿಂದ ಆಕೆ ಹೊರ ಬಂದು ಆ ಪಾತ್ರವನ್ನು ಶ್ರೀಲೀಲಾ ಮಾಡುವಂತಾಯಿತು.

Guntur Kaaram movie Mahesh babu and Pooja Hegde Unseen stills goes viral

ಆಕ್ಷನ್ ಎಂಟರ್‌ಟೈನರ್ 'ಗುಂಟೂರು ಖಾರಂ' ಸಿನಿಮಾ ಮೇಕಿಂಗ್ ಹಂತದಲ್ಲಿ ಸಾಕಷ್ಟು ಗೊಂದಲಕ್ಕೀಡಾಗಿತ್ತು. ಕಥೆ ಇಷ್ಟವಾಗದೇ ಮಹೇಶ್ ಬಾಬು ಸಾಕಷ್ಟು ಬದಲಾವಣೆಗಳನ್ನು ಮಾಡಿದರು. ಇದೇ ಕಾರಣಕ್ಕೆ ನಿರ್ದೇಶಕರ ಜೊತೆ ಭಾರೀ ತಿಕ್ಕಾಟ ಕೂಡ ನಡೀತು ಎನ್ನುವ ಗುಸುಗುಸು ಕೇಳಿಬಂದಿತ್ತು. 'ಅತಡು' ಹಾಗೂ 'ಖಲೇಜಾ' ಸಿನಿಮಾಗಳಲ್ಲಿ ತ್ರಿವಿಕ್ರಮ್ ಹಾಗೂ ಮಹೇಶ್ ಬಾಬು ಒಟ್ಟಿಗೆ ಕೆಲಸ ಮಾಡಿದ್ದರು. ಆದರೆ 3 ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರ ನಡುವೆ ಎಲ್ಲವೂ ಸರಿಯಾಗಿ ಇರಲಿಲ್ಲ ಎನ್ನಲಾಗುತ್ತದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷ ಏಪ್ರಿಲ್ ಅಂತ್ಯಕ್ಕೆ 'ಗುಂಟೂರು ಖಾರಂ' ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕಥೆಯನ್ನು ಪದೇ ಪದೆ ಬದಲಾಯಿಸಿದ ಕಾರಣ ತಡವಾಯಿತು ಎನ್ನುವ ವಾದವೂ ಇದೆ. ಇದೆಲ್ಲದರ ನಡುವೆ ನಾಯಕಿಯರ ಬದಲಾವಣೆ ವಿಚಾರವೂ ಭಾರೀ ಚರ್ಚೆ ಹುಟ್ಟುಹಾಕಿತ್ತು. ಒಂದು ಚಿತ್ರಕ್ಕೆ ಆಯ್ಕೆ ಆಗುವ ನಟ, ನಟಿಯರು ಹೊರಬರುವುದು ಹೊಸ ವಿಷಯವೇನೂ ಅಲ್ಲ. ಆದರೆ 'ಗುಂಟೂರು ಖಾರಂ' ಚಿತ್ರದಿಂದ ಪೂಜಾ ಹೆಗ್ಡೆ ಹೊರಬಂದಿತ್ತು ಭಾರೀ ಸುದ್ದಿ ಆಗಿತ್ತು.

ಕೆಲವರ ಪ್ರಕಾರ ತ್ರಿವಿಕ್ರಮ್ ಶ್ರೀನಿವಾಸ್ ಮೊದಲು ಬರೆದಿದ್ದ ಕಥೆಯಲ್ಲಿ ಪೂಜಾ ಹೆಗ್ಡೆ ಮಾತ್ರ ನಾಯಕಿಯಾಗಿ ಇದ್ದರಂತೆ. ಕಥೆ ಬದಲಿಸಿದ ಬಳಿಕ ಪೂಜಾ ಜೊತೆಗೆ ಶ್ರೀಲೀಲಾ ಸೇರಿಕೊಂಡಿದ್ದರು. ಮತ್ತೆ ಬದಲಾವಣೆ ಮಾಡಿದಾಗ ಶ್ರೀಲೀಲಾ ಹಾಗೂ ಮೀನಾಕ್ಷಿ ನಟಿಸುವಂತಾಯಿತು ಎನ್ನುತ್ತಿದ್ದಾರೆ. ಅಂದಹಾಗೆ ಪೂಜಾ ಹೆಗ್ಡೆ ಮೊದಲ ನಾಯಕಿಯಾಗಿ ಆಯ್ಕೆ ಆಗಿದ್ದರೆ ಶ್ರೀಲೀಲಾ 2ನೇ ನಾಯಕಿಯಾಗಿದ್ದರು. ಪೂಜಾ ಹೊರ ಬಂದ ಮೇಲೆ ಆ ಪಾತ್ರ ಶ್ರೀಲೀಲಾ ಪಾಲಾಗಿತ್ತು. ಶ್ರೀಲೀಲಾ ಮಾಡಬೇಕಿದ್ದ ಪಾತ್ರಕ್ಕೆ ಮೀನಾಕ್ಷಿ ಆಗಮನವಾಗುವಂತಾಯಿತು.

'ಗುಂಟೂರು ಖಾರಂ' ಚಿತ್ರದಲ್ಲಿ ಶ್ರೀಲೀಲಾ ಹಾಗೂ ಮೀನಾಕ್ಷಿ ಚೌದರಿ ಇಬ್ಬರ ಪಾತ್ರಗಳಿಗೂ ಹೆಚ್ಚಿನ ಮಹತ್ವ ಇಲ್ಲ. ಆದರೂ ಯಾಕೆ ನಾಯಕಿಯರನ್ನು ಪದೇ ಪದೆ ಬದಲಿಸಿದರು. ಪೂಜಾ ಹೆಗ್ಡೆ ಯಾಕೆ ಅರ್ಧಕ್ಕೆ ಹೊರ ಬಂದರು ಗೊತ್ತಿಲ್ಲ. ಪೂಜಾ ಹೆಗ್ಡೆ ನಟಿಸಿದ್ದ ಒಂದಷ್ಟು ದೃಶ್ಯಗಳ ಚಿತ್ರೀಕರಣ ನಡೆದಿತ್ತು. ಅದಕ್ಕೆ ಸಂಬಂಧಿಸಿದ ಫೋಟೊಗಳು ಈ ವೈರಲ್ ಆಗುತ್ತಿದೆ.

ಹೇಗಿದ್ದರೂ 'ಗುಂಟೂರು ಖಾರಂ' ಸಿನಿಮಾ ಮುಗ್ಗರಿಸಿತು. ಪೂಜಾ ಹೆಗ್ಡೆ ಹೊರಬಂದು ಒಳ್ಳೆ ಕೆಲಸ ಮಾಡಿದರು ಎನ್ನುವುದು ಅಭಿಮಾನಿಗಳು ಅಭಿಪ್ರಾಯ. ಆದರೆ ಪೂಜಾ ಹೆಗ್ಡೆ ಇರುವ 'ಗುಂಟೂರು ಖಾರಂ' ಮೇಕಿಂಗ್ ಫೋಟೊಗಳು ಟ್ರೋಲ್ ಮಾಡಲಾಗುತ್ತಿದೆ. ಸಿನಿಮಾ ಚಿತ್ರೀಕರಣದ ವೇಳೆ ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ನಡುವಿನ ಕ್ರಿಯೇಟಿವ್ ಡಿಫರೆಂಟ್ಸ್ ಬಗ್ಗೆ ಮತ್ತೆ ಚರ್ಚೆ ಆಗುತ್ತಿದೆ.

Guntur Kaaram movie Mahesh babu and Pooja Hegde Unseen stills goes viral

ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ತ್ರಿವಿಕ್ರಮ್ ಇವತ್ತಿನ ಟ್ರೆಂಡ್‌ಗೆ ತಕ್ಕಂತೆ ಒಂದು ಸಿನಿಮಾ ಮಾಡೋಕೆ ಆಗಲ್ವಾ? ಚಿತ್ರೀಕರಣದ ವೇಳೆ ಅಷ್ಟೆಲ್ಲಾ ಗೊಂದಲ ಯಾಕೆ? ಇಷ್ಟೆಲ್ಲಾ ಮಾಡಿ ಸಾಧಿಸಿದ್ದು ಏನು? ಸಿನಿಮಾ ಕೂಡ ಗೆಲ್ಲಲಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಫೋಟೊಗಳಲ್ಲಿ ಶ್ರೀಲೀಲಾ ಇರುವ ಜಾಗದಲ್ಲಿ ಪೂಜಾ ಹೆಗ್ಡೆ, ಮೀನಾಕ್ಷಿ ಚೌಧರಿ ಮಾಡಿದ್ದ ಪಾತ್ರದಲ್ಲಿ ಶ್ರೀಲೀಲಾ ಇದ್ದಾರೆ ನೋಡಿ ಎಂದು ಕೆಲವರು ಹೇಳುತ್ತಿದ್ದಾರೆ.

More from Filmibeat

English summary
Pooja hegde and Sreeleela Guntur Kaaram Sets Photos goes viral now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X