ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡದ ಗುಂಟೂರು ಖಾರಂ!: ಆದರೂ, ಸಕ್ಸಸ್ ಪಾರ್ಟಿ ಮಾಡಿದ ಮಹೇಶ್ ಬಾಬು, ಶ್ರೀಲೀಲಾ!

ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಕಮರ್ಷಿಯಲ್ ಎಂಟರ್‌ಟೈನರ್ 'ಗುಂಟೂರು ಖಾರಂ' ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ತೆರೆಗೆ ಬಂದಿದೆ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳ ಹೊರತಾಗಿಯೂ ಚಿತ್ರವು ಒಳ್ಳೆ ಬಾಕ್ಸ್ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಹೀಗಾಗಿಯೇ ಮಹೇಶ್ ಬಾಬು ಮತ್ತು ಅವರ ಪತ್ನಿ ನಮ್ರತಾ ಶಿರೋಡ್ಕರ್ ಚಿತ್ರತಂಡಕ್ಕೆ ಪಾರ್ಟಿ ಕೊಟ್ಟಿದ್ದಾರೆ.

ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಮಹೇಶ್ ಬಾಬು ಅವರ ನಿವಾಸದಲ್ಲಿ ಗುಂಟೂರು ಖಾರಂ ಚಿತ್ರತಂಡ ಪಾರ್ಟೊ ಮಾಡಿದ್ದಾರೆ. ಮಹೇಶ್ ಬಾಬು ಮತ್ತು ನಟಿ ಶ್ರೀಲೀಲಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸೆಲಬ್ರೆಷನ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಹೇಶ್ ಬಾಬು ಈ ಚಿತ್ರಗಳಿಗೆ ಬ್ಲಾಕ್‌ಬ್ಲಸ್ಟರ್ ಆಚರಣೆ ಎಂದು ಶೀರ್ಷಿಕೆ ನೀಡಿದ್ದಾರೆ.

Guntur Kaaram success party: Mahesh Babu, Sreeleela, Namrata Shirodkar and others celebrate success

ನಟಿ ಶ್ರೀಲೀಲಾ ಕೂಡ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಗುಂಟೂರು ಖಾರಂ ಸಕ್ಸಸ್ ಸೆಲಬ್ರೇಷನ್ ಫೋಟೋಸ್ ಹಂಚಿಕೊಂಡು, ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಂದಿದ್ದಾರೆ. ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ಸೇರಿ ಚಿತ್ರತಂಡದ ನಟಿಯರು ಸಾಂಪ್ರದಾಯಿಕ ಉಡುಗೆಯಲ್ಲಿ ಸಕತ್ ಆಗಿ ಮಿಂಚಿದ್ದಾರೆ.

ಚಿತ್ರದ ನಿರ್ಮಾಪಕ ನಾಗ ವಂಶಿ ಮತ್ತು ವಿತರಕ ದಿಲ್ ರಾಜು ಅವರ ಪತ್ನಿಯೊಂದಿಗೆ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಮಹೇಶ್ ಬಾಬು ಅವರ ಪತ್ನಿ ನಮ್ರತಾ ಶಿರೋಡ್ಕರ್ ಅವರು ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಟಾಲಿವುಡ್ ನಟಿ ಶ್ರೀಲೀಲಾ ಅವರೊಂದಿಗಿನ ಫೋಟೋವನನು ಸ್ಟೋರಿಗೆ ಹಾಕಿದ್ದಾರೆ.

ನಮ್ರತಾ ಶಿರೋಡ್ಕರ್, ಶ್ರೀಲೀಲಾ ಅವರನ್ನು ಹೊಗಳಿದ್ದು, ಇದು 'ಬೆಸ್ಟ್ ಸೆಲ್ಫಿ' ಎಂದು ಹೇಳಿದ್ದಾರೆ. ನಾಗ ವಂಶಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಸ್ಟೋರಿ ಹಂಚಿಕೊಂಡು, ಗುಂಟೂರು ಖಾರಮ್‌ನ ಸೂಪರ್ ಹಿಟ್ ವೈಬ್‌ಗಳನ್ನು ಏಂಜಾಯ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

Guntur Kaaram success party: Mahesh Babu, Sreeleela, Namrata Shirodkar and others celebrate success

ಪಾರ್ಟಿಯಲ್ಲಿ ಇಲ್ಲ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್

ಗುಂಟೂರು ಖಾರಂ ಚಿತ್ರದ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಸಿನಿಮಾ ಯಶಸ್ಸಿನ ಸಂಭ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಚಿತ್ರದ ಸಂಗೀತ ನಿರ್ದೇಶಕ ಥಮನ್ ಎಸ್ ಕೂಡ ಮಹೇಶ್ ಬಂದಿರಲಿಲ್ಲ. ಚಿತ್ರತಂಡ ಯಶಸ್ಸು ಆಚರಿಸಿದ್ದರೂ ಕೂಡ, ಬಾಕ್ಸ್ ಅಫೀಸ್‌ನಲ್ಲಿ ಚಿತ್ರ ಅಂತಹ ಕಮಾಲ್ ಮಾಡಿಲ್ಲ. ಇದೇ ಸಿನಿಮಾ ಜೊತೆಗೆ ಬಿಡುಗಡೆಯಾದ 'ಹನುಮಾನ್' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಗುಂಟೂರು ಖಾರಂ

ಗುಂಟೂರು ಖಾರಂ ಸೂಪರ್‌ಸ್ಟಾರ್ ಮಹೇಶ್ ಬಾಬು ಮತ್ತು ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್‌ನ ಮೂರನೇ ಸಿನಿಮಾ. ಇವರಿಬ್ಬರು ಈ ಹಿಂದೆ ಅಥಡು ಮತ್ತು ಖಲೇಜಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಹೀಗಾಗಿಯೇ ಈ ತಾಯಿ- ಮಗನ ಸೆಂಟಿಮೆಂಟ್ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯಿತ್ತು.

ಗುಂಟೂರು ಖಾರಂ ಚಿತ್ರದಲ್ಲಿ ಮಹೇಶ್ ಬಾಬು ಅವರಲ್ಲದೆ, ಶ್ರೀಲೀಲಾ, ಮೀನಾಕ್ಷಿ ಚೌಧರಿ, ಅಜಯ್ ಘೋಷ್, ಜಯ ರಾಮ್, ರಾವ್ ರಮೇಶ್, ಪ್ರಕಾಶ್ ರೈ, ರಮ್ಯಾ ಕೃಷ್ಣ, ವೆನ್ನೆಲ ಕಿಶೋರ್ ಸೇರಿದಂತೆ ಹಲವರು ನಟಿಸಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಂಪಾದಕ ನವೀನ್ ನೂಲಿ ಸಂಕಲನ ಮಾಡಿದ್ದಾರೆ.

ಮಹೇಶ್ ಬಾಬು ಮುಂದಿನ ಸಿನಿಮಾಗಳು

ಗುಂಟೂರು ಖಾರಂ ನಂತರ, ಮಹೇಶ್ ಬಾಬು ಅವರ ಮುಂದಿನ ಸಿನಿಮಾ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಜೊತೆಯಲ್ಲಿ. ಚಿತ್ರದ ಶೀರ್ಷಿಕೆ ಇನ್ನೂ ಬಹಿರಂಗವಾಗಿಲ್ಲ. ವರದಿಗಳ ಪ್ರಕಾರ, ಇಂಡೋನೇಷ್ಯಾದ ನಟಿ ಚೆಲ್ಸಿಯಾ ಇಸ್ಲಾನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ವದಂತಿಗಳು ಇವೆ.

More from Filmibeat

English summary
Mahesh Babu, Sreeleela and others celebrate Guntur Kaaram success.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X