ಅತಿವೇಗವಾಗಿ 1 ಲಕ್ಷ ಲೈಕ್ಸ್; ಎನ್‌ಟಿಆರ್, ಪ್ರಭಾಸ್ ದಾಖಲೆ ಹಿಂದಿಕ್ಕುವಲ್ಲಿ ವಿಫಲರಾದ ಮಹೇಶ್ ಬಾಬು!
ನಿನ್ನೆ ( ಮೇ 31 ) ತೆಲುಗಿನ ಮೇರು ನಟ ದಿವಂಗತ ಕೃಷ್ಣ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಪುತ್ರ ಮಹೇಶ್ ಬಾಬು ನಟನೆಯ ಮುಂದಿನ ಚಿತ್ರದ ವಿಶೇಷ ಗ್ಲಿಂಪ್ಸ್ ವಿಡಿಯೊವನ್ನು ಬಿಡುಗಡೆ ಮಾಡಲಾಯಿತು. ಈ ದಿನ ಗುಂಟೂರು ಕಾರಂ ಎಂದು ಚಿತ್ರಕ್ಕೆ ಶೀರ್ಷಿಕೆಯನ್ನು ಇಟ್ಟಿರುವ ವಿಷಯವನ್ನೂ ಸಹ ಬಹಿರಂಗಪಡಿಸಲಾಯಿತು.
ಇನ್ನು 1.04 ನಿಮಿಷದ ಗ್ಲಿಂಪ್ಸ್ ಅನ್ನು ಬಿಡುಗಡೆ ಮಾಡಲಾಗಿದ್ದು, ಮೊದಲೇ ಊಹಿಸಿದಂತೆ ಚಿತ್ರದಲ್ಲಿನ ಫೈಟ್ ದೃಶ್ಯವೊಂದರ ಗ್ಲಿಂಪ್ಸ್ ಇದಾಗಿದೆ. ಮಹೇಶ್ ಬಾಬು ತಮ್ಮ ಇತ್ತೀಚೆಗಿನ ಚಿತ್ರಗಳಲ್ಲಿನ ಲುಕ್ ಬಿಟ್ಟು ಸಿಕ್ಕಾಪಟ್ಟೆ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪುಟ್ಟ ಟೀಸರ್‌ನಲ್ಲಿನ ದೃಶ್ಯಗಳಲ್ಲಿನ ಮಹೇಶ್ ಬಾಬು ಲುಕ್ ಕಂಡ ಸಿನಿ ರಸಿಕರು ಹಾಗೂ ಮಹೇಶ್ ಬಾಬು ಅಭಿಮಾನಿಗಳು ಹಳೆಯ ಮಹೇಶ್ ಬಾಬುವನ್ನು ಈ ಚಿತ್ರದಲ್ಲಿ ನಾವು ಮತ್ತೆ ನೋಡಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನು ಇಡೀ ಟೀಸರ್‌ನಲ್ಲಿ ಮಹೇಶ್ ಬಾಬು ಬೀಡಿ ಹಚ್ಚಿಕೊಂಡು ಖಳ ನಾಯಕರಿಗೆ ಹೊಡೆಯುವ ದೃಶ್ಯಗಳಿವೆ. ಎಸ್ ಎಸ್ ಥಮನ್ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಮಜಾ ಕೊಡ್ತಿದೆ. ಗುಂಟೂರು ತೆಲುಗಿನಲ್ಲಿ ಮಹೇಶ್ ಬಾಬು ಹೇಳುವ 'ಏನು ಹಾಗ್ ನೋಡ್ತಾ ಇದ್ದೀಯಾ, ಬೀಡಿ ತ್ರೀಡಿಲಿ ಕಾಣಿಸ್ತಾ ಇದಿಯಾ' ಎಂಬ ಡೈಲಾಗ್ ಮಹೇಶ್ ಫ್ಯಾನ್ಸ್‌ಗೆ ಸಖತ್ ಕಿಕ್ ಕೊಡ್ತಿದೆ.
ಹೀಗೆ ನಿನ್ನೆ ಸಂಜೆ ಆರು ಗಂಟೆಗೆ ಬಿಡುಗಡೆಗೊಂಡ ಈ ಗ್ಲಿಂಪ್ಸ್ ಯುಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಮಿಲಿಯನ್‌ಗಟ್ಟಲೇ ವ್ಯೂಸ್ ಪಡೆದುಕೊಳ್ಳುತ್ತಿದೆ. ಇನ್ನು ಈ ವೀಕ್ಷಣೆಗಳ ಸಂಖ್ಯೆಯ ವಿಚಾರದಲ್ಲಿ ಸಾಮಾನ್ಯವಾಗಿ ಯಾವ ದಾಖಲೆಗಳನ್ನು ಈ ಗ್ಲಿಂಪ್ಸ್ ಮುರಿದಿದೆ ಎಂಬ ಲೆಕ್ಕಾಚಾರಗಳು ನಡೆಯುತ್ತಿದ್ದು, ವೇಗವಾಗಿ 1 ಲಕ್ಷ ಲೈಕ್ಸ್ ಮುಟ್ಟಿದ್ದು ಯಾವ ಚಿತ್ರದ ಗ್ಲಿಂಪ್ಸ್ ಎಂಬ ದಾಖಲೆಯಲ್ಲಿ ಹೋಲಿಕೆ ನಡೆಯುತ್ತಿದೆ.
ವೇಗವಾಗಿ 1 ಲಕ್ಷ ಲೈಕ್ಸ್ ಮುಟ್ಟಿದ ಗ್ಲಿಂಪ್ಸ್ ದಾಖಲೆಯಲ್ಲಿ ಗುಂಟೂರು ಕಾರಂ ಚಿತ್ರದ ಗ್ಲಿಂಪ್ಸ್ ಆರ್‌ಆರ್‌ಆರ್, ಉಸ್ತಾದ್ ಭಗತ್ ಸಿಂಗ್ ಹಾಗೂ ರಾಧೆ ಶ್ಯಾಮ್ ದಾಖಲೆಯನ್ನು ಹಿಂದಿಕ್ಕುವಲ್ಲಿ ವಿಫಲಗೊಂಡಿದೆ. ಹಾಗಿದ್ದರೆ ಅತಿವೇಗವಾಗಿ ಒಂದು ಲಕ್ಷ ಲೈಕ್ಸ್ ಪಡೆದುಕೊಂಡ ಗ್ಲಿಂಪ್ಸ್‌ನ ಟಾಪ್ 4 ಪಟ್ಟಿ ಹೇಗಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ಆರ್‌ಆರ್ಆರ್ ಗ್ಲಿಂಪ್ಸ್ - 12 ನಿಮಿಷಗಳಲ್ಲಿ ಒಂದು ಲಕ್ಷ ಲೈಕ್ಸ್ ಪಡೆದಿದೆ.
2. ಉಸ್ತಾದ್ ಭಗತ್ ಸಿಂಗ್ ಗ್ಲಿಂಪ್ಸ್ - 13 ನಿಮಿಷಗಳಲ್ಲಿ ಒಂದು ಲಕ್ಷ ಲೈಕ್ಸ್ ಪಡೆದಿದೆ
3. ರಾಧೆ ಶ್ಯಾಮ್ ಗ್ಲಿಂಪ್ಸ್ - 23 ನಿಮಿಷಗಳಲ್ಲಿ ಒಂದು ಲಕ್ಷ ಲೈಕ್ಸ್ ಪಡೆದಿದೆ.
4. ಗುಂಟೂರು ಕಾರಂ ಗ್ಲಿಂಪ್ಸ್ - 44 ನಿಮಿಷಗಳಲ್ಲಿ ಒಂದು ಲಕ್ಷ ಲೈಕ್ಸ್ ಪಡೆದಿದೆ.
ಈ ಮೂಲಕ ಆರ್ ಆರ್ ಆರ್ ಚಿತ್ರದ ಗ್ಲಿಂಪ್ಸ್ ದಾಖಲೆಯನ್ನು ತದನಂತರ ಬಂದ ಯಾವ ಚಿತ್ರವೂ ಸಹ ಮುರಿಯಲಾಗದೇ ವಿಫಲವಾಗಿವೆ. ಆರ್ ಆರ್ ಆರ್ ದಾಖಲೆಯನ್ನು ಮಹೇಶ್ ಬಾಬು ನಟನೆಯ ಗುಂಟೂರು ಕಾರಂ ಚಿತ್ರ ಮುರಿಯಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈ ಚಿತ್ರವೂ ಸಹ ಈ ದಾಖಲೆ ಮುರಿಯುವಲ್ಲಿ ವಿಫಲವಾಗಿದೆ.


Click it and Unblock the Notifications











