For Quick Alerts
  ALLOW NOTIFICATIONS  
  For Daily Alerts

  ನಮಿತಾ ಅಶ್ಲೀಲ ವಿಡಿಯೋ ಮತ್ತು ಆನ್‌ಲೈನ್ ಬೆದರಿಕೆ: ಏನಿದು ವಿವಾದ?

  |

  ತಮ್ಮ ಮಾದಕ ಲುಕ್‌ನಿಂದ ಕೋಟ್ಯಂತರ ಪಡ್ಡೆ ಹುಡುಗರ ನಿದ್ದೆ ಕದ್ದಿರುವ ನಟಿ ನಮಿತಾ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

  ನಮಿತಾ ಅವರದ್ದು ಎಂದು ಹೇಳಲಾಗುತ್ತಿರುವ ಪಾರ್ನ್ ವಿಡಿಯೋ ಕುರಿತು ವ್ಯಕ್ತಿಯೊಬ್ಬ ಹಾಕಿರುವ ಆನ್‌ಲೈನ್ ಬೆದರಿಕೆ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ಹೌದು, ಹಾಟ್ ತಾರೆ ನಮಿತಾಗೆ ವ್ಯಕ್ತಿಯೊಬ್ಬ ಆನ್‌ಲೈನ್‌ ನಲ್ಲಿ ಬೆದರಿಕೆ ಹಾಕಿದ್ದಾನಂತೆ. ತಮಗೆ ಬೆದರಿಕೆ ಹಾಕಿದ ವ್ಯಕ್ತಿಯ ಚಿತ್ರವನ್ನು ನಮಿತ ಸಾಮಾಜಿಕ ಜಾಲತಾಣದಲ್ಲಿ ನಮಿತಾ ಬಹಿರಂಗಪಡಿಸಿದ್ದಾರೆ.

  ನಮಿತಾ ಅವರ ಪಾರ್ನ್ ವಿಡಿಯೋಗಳನ್ನು ಆ ವ್ಯಕ್ತಿ ನೋಡಿದ್ದಾನಂತೆ. ಹಣ ನೀಡದೇ ಇದ್ದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸುತ್ತೀನಿ ಎಂದು ನಮಿತಾ ಗೆ ಬೆದರಿಕೆ ಹಾಕಿದ್ದಾನೆ. ಇದಕ್ಕೆ ನಮಿತಾ ಏನು ಮಾಡಿದರು? ಮುಂದೆ ಓದಿ...

  ಮೊದಲು ಖಾಸಗಿ ಮೆಸೆಜ್ ಮಾಡಿ ಕೆಟ್ಟದಾಗಿ ಮಾತನಾಡಿದ ಯುವಕ

  ಮೊದಲು ಖಾಸಗಿ ಮೆಸೆಜ್ ಮಾಡಿ ಕೆಟ್ಟದಾಗಿ ಮಾತನಾಡಿದ ಯುವಕ

  ವ್ಯಕ್ತಿಯೊಬ್ಬ ನಮಿತಾ ಗೆ ಖಾಸಗಿ ಮೆಸೆಜ್ ಮಾಡಿ, 'ಹೇಯ್ ಐಟಮ್' ಹಾಗೂ ಇನ್ನಿತರೆ ಕೀಳು ಪದಗಳನ್ನು ಹೆಸರಿಸಿ ಕರೆದಿದ್ದನಂತೆ. ಇದಕ್ಕೆ ನಮಿತಾ ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ಆತ ಅಕೌಂಟ್ ಹ್ಯಾಕ್ ಆಗಿದೆ ಎಂದು ಸಬೂಬು ಹೇಳಿದ್ದಾರೆ.

  ಪಾರ್ನ್ ವಿಡಿಯೋ ಇಂಟರ್ನೆಟ್‌ ಗೆ ಹಾಕುತ್ತೀನಿ: ಬೆದರಿಕೆ

  ಪಾರ್ನ್ ವಿಡಿಯೋ ಇಂಟರ್ನೆಟ್‌ ಗೆ ಹಾಕುತ್ತೀನಿ: ಬೆದರಿಕೆ

  ಆದರೆ ನಂತರ, ಅದೇ ವ್ಯಕ್ತಿ ನಮಿತಾ ಗೆ 'ನಾನು ನಿಮ್ಮ ಪಾರ್ನ್ ವಿಡಿಯೋ ನನ್ನ ಬಳಿ ಇದೆ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸುತ್ತೇನೆ' ಎಂದು ಬೆದರಿಕೆ ಹಾಕಿದ್ದಾನೆ.

  ಪಾರ್ನ್ ವಿಡಿಯೋ ಬಹಿರಂಗಪಡಿಸುವಂತೆ ನಮಿತಾ ಸವಾಲು

  ಪಾರ್ನ್ ವಿಡಿಯೋ ಬಹಿರಂಗಪಡಿಸುವಂತೆ ನಮಿತಾ ಸವಾಲು

  ಇದಕ್ಕೆ ಆತನಿಗೆ ಉತ್ತರಿಸಿದ ನಮಿತಾ, 'ಬಹಿರಂಗ ಪಡಿಸು' ಎಂದು ಹೇಳಿದ್ದಾರೆ. ಅಷ್ಟೆ ಅಲ್ಲದೆ, ತಮಗೆ ಬೆದರಿಕೆ ಹಾಕಿದವನ ಚಿತ್ರವನ್ನು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಪ್ರಕಟಿಸಿ, ಆತನಿಗೆ ಛೀಮಾರಿ ಹಾಕಿದ್ದಾರೆ. ನಮಿತಾ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಲೆ ಆತ ತನ್ನ ಖಾತೆಯನ್ನು ಡಿಲೀಟ್ ಮಾಡಿದ್ದಾನೆ.

  ನನ್ನ ಮೌನವನ್ನು ಬಲಹೀನತೆ ಎಂದುಕೊಳ್ಳಬೇಡಿ: ನಮಿತಾ

  ನನ್ನ ಮೌನವನ್ನು ಬಲಹೀನತೆ ಎಂದುಕೊಳ್ಳಬೇಡಿ: ನಮಿತಾ

  ನಾನು ಏಕೆ ಆತನ ಮಾತನ್ನು ಕೇಳಬೇಕು, ನಾನು ಗ್ಲಾಮರ್ ಉದ್ದಿಮೆಯಲ್ಲಿರುವುದಕ್ಕಾ? ನಾನು ಸೆಲೆಬ್ರಿಟಿ ಆಗಿರುವುದಕ್ಕಾ? ನಾನು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ರೀತಿಯಲ್ಲಿಯೇ ವೈಯಕ್ತಿಕವಾಗಿ ಇದ್ದೇನೆ ಎಂದುಕೊಂಡಿದ್ದಾನಾ? ಆತ ನನ್ನನ್ನು ವೈಯಕ್ತಿಕವಾಗಿ ಬಲ್ಲನಾ? 'ನನ್ನ ಮೌನವನ್ನು ನನ್ನ ಬಲಹೀನತೆ ಎಂದುಕೊಳ್ಳಬೇಡ'' ಎಂದು ಆತನಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ ನಮಿತಾ.

  ದುರ್ಗಾ ಪೂಜೆ, ಮಹಿಳಾ ದಿನಾಚರಣೆ ಮಾಡಿದರೆ ಸಾಲದು: ನಮಿತಾ

  ದುರ್ಗಾ ಪೂಜೆ, ಮಹಿಳಾ ದಿನಾಚರಣೆ ಮಾಡಿದರೆ ಸಾಲದು: ನಮಿತಾ

  ''ನಾನು ಚಿತ್ರರಂಗದ ಹಿನ್ನೆಲೆಯಿಂದ ಬಂದಿದ್ದೇನೆ ಎಂಬ ಕಾರಣಕ್ಕೆ ಆತ ಹೀಗೆಲ್ಲಾ ಹೀಗಳೆಯುವ ಪ್ರಯತ್ನ ಮಾಡುತ್ತಿದ್ದಾನೆ. ಇಂತಹಾ ಕೆಟ್ಟ ಮನಸ್ಥಿತಿ ಇಟ್ಟುಕೊಂಡವರು, ನವರಾತ್ರಿ ದುರ್ಗಾ ಪೂಜೆ, ಮಹಿಳಾ ದಿನ ಆಚರಣೆ ಮಾಡಿದರೆ ಏನು ಪ್ರಯೋಜನ. ಮಹಿಳೆಯನ್ನು ಗೌರವಿಸುವುದನ್ನು ಮೊದಲು ಕಲಿಯಿರಿ'' ಎಂದು ಆಕ್ರೋಶ ಪ್ರಕಟಿಸಿದ್ದಾರೆ.

  English summary
  A guy threatened Namitha that he will release intimate videos to internet. Namitha defamed him by posting his photo in her Instagram.
  Wednesday, March 18, 2020, 13:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X