ಚಿರಂಜೀವಿ ಹುಟ್ಟುಹಬ್ಬ: ತಂದೆಗಾಗಿ ಸುಶ್ಮಿತಾ ಕೊನಿಡೇಲಾ ಭರ್ಜರಿ ಉಡುಗೊರೆ
ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅವರು ಆಗಸ್ಟ್ 22 ರಂದು ತ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಸಿನಿ ಪ್ರಿಯರನ್ನು ತಮ್ಮ ಅಸಾಧಾರಣ ನಟನಾ ಸಾಮರ್ಥ್ಯ ಮತ್ತು ವರ್ಚಸ್ಸಿನಿಂದ ರಂಜಿಸುತ್ತಿರುವ ನಟನಿಗೆ ಅಭಿಮಾನಿಗಳು ಪ್ರೀತಿಯಿಂದ ಶುಭಾಶಯಗಳನ್ನು ಕೋರಿದ್ದಾರೆ.
ಬೆಳ್ಳಿತೆರೆಯಲ್ಲಿ ತಮ್ಮದೆ ವಿಶಿಷ್ಟ ಅಲಂಕರಿಸಿರುವ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಶುಭ ಹಾರೈಸಿದ್ದಾರೆ. ಇದಲ್ಲದೆ ಅವರ ಹುಟ್ಟುಹಬ್ಬದ ಹಿನ್ನೆಲೆ ಹಲವಾರು ಸಿನಿಮಾಗಳು ಘೋಷಣೆಯಾಗಲಿದೆ. ಅದರಲ್ಲಿ ಒಂದು ಸಿನಿಮಾವನ್ನು ಸ್ವಂತ ಮಗಳು ಸುಶ್ಮಿತಾ ಕೊನಿಡೇಲಾ ನಿರ್ಮಾಣ ಮಾಡುತ್ತಿದ್ದಾರೆ.

ಚಿರು ಹುಟ್ಟುಹಬ್ಬಕ್ಕೆ ಮಗಳ ಗಿಫ್ಟ್!
ಚಿತ್ರರಂಗದಲ್ಲಿ ಚಿರಂಜೀವಿ ಪಯಣ ಅದ್ಭುತವಾದದ್ದು, ನಾಲ್ಕು ದಶಕಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ತಾವು ನಟಿಸುವ ಪಾತ್ರಗಳಿಗೆ ಜೀವ ತುಂಬುವ ಮೂಲಕ ಪ್ರೇಕ್ಷಕನ್ನು ಹಿಡಿದಿಟ್ಟುಕೊಂಡಿದ್ದಾರೆ.
ಚಿರು ಹುಟ್ಟು ಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಅಭಿಮಾನಿಗಳ ಜೊತೆ ಮನೆಯವರೊಮದಿಗೂ ಚಿರಂಜೀವಿ ಉತ್ತಮ ಬಾಂಧವ್ಯ ಬೆಸೆದುಕೊಂಡಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯ ನಡುವೆ, ಅವರ ಮುಂಬರುವ ಸಿನಿಮಾ ಬಗ್ಗೆ ಅಧಿಕೃತವಾಗಿ ಘೋಷಿಸಲಾಗಿದೆ. ಬಹು ನಿರೀಕ್ಷಿತ 'ಮೆಗಾ 156' ಅನ್ನು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಈ ಸಿನಿಮಾದ ನಿರ್ಮಾಣವನ್ನು ಚಿರಂಜೀವಿ ಅವರ ಪುತ್ರಿ ಮತ್ತು ಸ್ಟೈಲಿಸ್ಟ್ ಸುಶ್ಮಿತಾ ಕೊನಿಡೇಲಾ ಮಾಡಲಿದ್ದಾರೆ. ಈ ಮೂಲಕ ತಂದೆಯ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡುತ್ತಿದ್ದಾರೆ.
ಚಿರಂಜೀವಿ ಅವರ ವೃತ್ತಿಜೀವನದಲ್ಲಿ 156 ನೇ ಸಿನಿಮಾವು ಗೋಲ್ಡ್ ಬಾಕ್ಸ್ ಎಂಟರ್ಟೈನ್ಮೆಂಟ್ಸ್ನ ಬ್ಯಾನರ್ ಅಡಿಯಲ್ಲಿ ಬೆಳ್ಳಿ ಪರದೆಯನ್ನು ಅಲಂಕರಿಸಲು ಸಿದ್ಧವಾಗಿದೆ. ನಿರ್ದೇಶಕ ಮತ್ತು ನಾಯಕಿಯ ಹೆಸರು ಇನ್ನು ಬಹಿರಂಗಪಡಿಸಿಲ್ಲ.
ಪ್ರೊಡಕ್ಷನ್ ಹೌಸ್ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ನಾಲ್ಕು ದಶಕಗಳಿಂದ ಬೆಳ್ಳಿತೆರೆಯನ್ನು ಆಳಿದ ಪರಂಪರೆ! ಬಹುಸಂಖ್ಯೆಯ ಭಾವನೆಗಳನ್ನು ಪ್ರಚೋದಿಸುವ ವ್ಯಕ್ತಿತ್ವ! ತೆರೆಯ ಮೇಲೆ ಮತ್ತು ಹೊರಗೆ ಎರಡನ್ನೂ ಸಂಭ್ರಮಿಸುವ ವ್ಯಕ್ತಿ.
155 ಗಮನಾರ್ಹ ಚಲನಚಿತ್ರಗಳ ಜೊತೆಗೆ ಮುಂಬರುವ MEGA 156 ಒಂದು ರೋಮಾಂಚನಕಾರಿ ಮೆಗಾಹಿಟ್ ಆಗಲಿದೆ. ಚಿರಂಜೀವಿ ಅವರಿಗೆ ಹೃತ್ಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು" ಎಂದು ಹೇಳಿದೆ.

ಖೈದಿ ನಂ 150 ಸಿನಿಮಾದ ನಂತರ ತನ್ನ ತಂದೆ ಚಿರಂಜೀವಿ ಅವರ ಸ್ಟೈಲಿಂಗ್ ಅನ್ನು ನೋಡಿಕೊಳ್ಳುತ್ತಿರುವ ಸುಶ್ಮಿತಾ ಕೊನಿಡೇಲಾ ಅವರ ಗೋಲ್ಡ್ ಬಾಕ್ಸ್ ಎಂಟರ್ಟೈನ್ಮೆಂಟ್ಸ್ನ ಬ್ಯಾನರ್ ಸಿನಿಮಾ ನಿರ್ಮಿಸುವ ಅವಕಾಶ ತೆಗೆದುಕೊಂಡಿದ್ದಾರೆ.
ಇನ್ನು, ಇದರ ಜೊತೆಗೆ ಮೆಗಾಸ್ಟಾರ್ ಜನ್ಮದಿನದ ಅಂಗವಾಗಿ 157ನೇ ಸಿನಿಮಾ ಅನೌನ್ಸ್ ಆಗಿದೆ. ಇದು ಫ್ಯಾಂಟಸಿ ಎಂಟರ್‌ಟೈನರ್ ಆಗಲಿದ್ದು, ಬಿಂಬಿಸಾರ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ವಸಿಷ್ಠ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಯುವಿ ಕ್ರಿಯೇಷನ್ಸ್‌ನ ಯಶಸ್ವಿ ಬ್ಯಾನರ್ ಅಡಿಯಲ್ಲಿ ವಿ ವಂಶಿ ಕೃಷ್ಣಾ ರೆಡ್ಡಿ, ಪ್ರಮೋದ್ ಉಪ್ಪಲಪಟ್ಟಿ ಮತ್ತು ವಿಕ್ರಮ್ ರೆಡ್ಡಿ ನಿರ್ಮಿಸಲಿರುವ Mega157 ಚಿತ್ರ ಚಿರಂಜೀವಿ ಅವರ ವೃತ್ತಿಜೀವನದಲ್ಲಿ ಅತ್ಯಂತ ದುಬಾರಿ ಚಿತ್ರ ಎನ್ನಲಾಗಿದೆ.
ನಿರ್ದೇಶಕ ವಸಿಷ್ಠ ಈ ಸಿನಿಮಾ ಮೂಲಕ ಮೆಗಾ ಮಾಸ್ ಯೂನಿವರ್ಸ್ ನ್ನು ಸಿನಿರಸಿಕರಿಗೆ ಪರಿಚಯಿಸಲಿದ್ದಾರೆ. ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶದಂತಹ ಪಂಚಭೂತಗಳನ್ನು ತ್ರಿಶೂಲದೊಂದಿಗೆ ನಕ್ಷತ್ರಾಕಾರದ ಅಂಶವನ್ನು ಹೊಂದಿರುವ ಪೋಸ್ಟರ್ ಅನಾವರಣ ಮಾಡಲಾಗಿದೆ.


Click it and Unblock the Notifications











