ಅರಮನೆಯಂತಹ ಮನೆ, ಖಾಸಗಿ ಜೆಟ್: ಮೆಗಾಸ್ಟಾರ್ ಚಿರಂಜೀವಿ ಹೊಂದಿರುವ ಐಷಾರಾಮಿ ವಸ್ತುಗಳ ಪಟ್ಟಿ
67 ವರ್ಷ ವಯಸ್ಸಿನ ಮೆಗಾಸ್ಟಾರ್ ಚಿರಂಜೀವಿ ಮಂಗಳವಾರ ವಾರ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಟ, ನಿರ್ಮಾಪಕ, ಸಮಾಜಸೇವಕ ಮತ್ತು ರಾಜಕಾರಣಿಯಾಗಿ ಪ್ರಸಿದ್ಧಿಯಾಗಿರುವ ಚಿರಂಜೀವಿ 150 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪದ್ಮಭೂಷಣ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ನಟ ಬಾಚಿಕೊಂಡಿದ್ದಾರೆ.
ಜಿರಂಜೀವಿ 1650 ಕೋಟಿ ನಿವ್ವಳ ಸಂಪತ್ತನ್ನು ಹೊಂದಿದ್ದಾರೆ ಎಂದು ಕ್ಯಾಕ್ನಾಲೆಡ್ಜ್ ವರದಿ ಮಾಡಿದೆ. ಚಿರಂಜೀವಿ ಮತ್ತು ಅವರ ಮಗ ರಾಮ್ ಚರಣ್ ಕೂಡ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಚಿರಂಜೀವಿ ತಮ್ಮ ಐಷಾರಾಮಿ ವಸ್ತುಗಳ ಜೊತೆಗೆ ಸಮಾಜ ಸೇವೆಗಳು ಮತ್ತು ಮಾನವೀಯ ಚಟುವಟಿಕೆಗಳ ಮೂಲಕ ಹೆಸರುವಾಸಿಯಾಗಿದ್ದಾರೆ.
ನಟ ಚಿರಂಜೀವಿ ಹೈದರಾಬಾದ್‌ನಲ್ಲಿ ಅರಮನೆಯಂತಹ ಮನೆಯನ್ನು ಹೊಂದಿದ್ದಾರೆ. ಐಷಾರಾಮಿ ಕಾರುಗಳು, ಖಾಸಗಿ ಜೆಟ್ ಕೂಡ ಹೊಂದಿದ್ದಾರೆ. ಆದರೂ ಕೂಡ ತಮ್ಮ ಸಾಮಾಜಿಕ ಕಾರ್ಯಗಳನ್ನು ಮರೆತಿಲ್ಲ. ಚಿರಂಜೀವಿ ಬ್ಲಡ್ ಮತ್ತು ಕಣ್ಣಿನ ಬ್ಯಾಂಕ್ ಮೂಲಕ ಹಲವರ ಜೀವನ ಉಳಿಸಲು ಮತ್ತು ಹಲವರ ಜೀವನಕ್ಕೆ ಬೆಳಕು ನೀಡಿದ್ದಾರೆ.

ಹೈದರಾಬಾದ್‌ನಲ್ಲಿರುವ ಅರಮನೆ
ಜುಬಿಲಿ ಹಿಲ್ಸ್‌ನಲ್ಲಿ 25,000 ಚದರ ಅಡಿಗಳಷ್ಟು ವಿಸ್ತಾರವಾಗಿರುವ ಐಷಾರಾಮಿ ಬಂಗಲೆಯಲ್ಲಿ ಮೆಗಾಸ್ಟಾರ್ ಚಿರಂಜೀವಿ ತಮ್ಮ ಪತ್ನಿ, ಮಗ ರಾಮ್ ಚರಣ್ ಮತ್ತು ಸೊಸೆಯೊಂದಿಗೆ ವಾಸಿಸುತ್ತಿದ್ದಾರೆ. ಏಸ್ ಫ್ಯಾಶನ್ ಡಿಸೈನರ್ ತರುಣ್ ತಹಿಲಿಯಾನಿ ಅವರ ಡಿಸೈನ್ ಮತ್ತು ಒಳಾಂಗಣ ವಿನ್ಯಾಸ ಸಂಸ್ಥೆಯಿಂದ ವಿನ್ಯಾಸಗೊಳಿಸಲಾದ ಈ ಅರಮನೆಗೆ 30 ಕೋಟಿ ರೂಪಾಯಿ ವೆಚ್ಚವಾಗಿದೆ. ಬೃಹತ್ ಹೊರಾಂಗಣ ಪೂಲ್, ಟೆನ್ನಿಸ್ ಕೋರ್ಟ್ ಮತ್ತು ಜಿಮ್ ಕೂಡ ಮನೆಯಲ್ಲಿದೆ.
ಐಷಾರಾಮಿ ಕಾರುಗಳು
ಚಿರಂಜೀವಿ ತಮ್ಮ ವಿಶಿಷ್ಟ ಕಾರುಗಳಿಗೆ ಹೆಸರುವಾಸಿಯಾಗಿದ್ದಾರೆ. ವರದಿಯೊಂದರ ಪ್ರಕಾರ 9 ರಿಂದ 10.50 ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಅವರ ಬಳಿಯಿದೆ. ರೇಂಜ್ ರೋವರ್ ಆಟೋಬಯಾಗ್ರಫಿ, ರೇಂಜ್ ರೋವರ್ ವೋಜ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್ ಹೊಂದಿದ್ದಾರೆ.
ರಿಯಲ್ ಎಸ್ಟೇಟ್ ಹೂಡಿಕೆಗಳು
ನಟ ಚಿರಂಜೀವಿ ರಿಯಲ್ ಎಸ್ಟೇಟ್‌ನಲ್ಲಿ ಹೆಚ್ಚು ಹೂಡಿಕೆ ಮಾಡಿದ್ದಾರೆ. ಹೈದರಾಬಾದ್ ಹೊರತುಪಡಿಸಿ ಬೆಂಗಳೂರು ಮತ್ತು ಚೆನ್ನೈನಲ್ಲಿ ಕೋಟ್ಯಾಂತರ ಮೌಲ್ಯದ ಬೃಹತ್ ಮನೆಗಳನ್ನು ಹೊಂದಿದ್ದಾರೆ ಎಂದು ಸಿಯಾಸಟ್ ವರದಿ ಮಾಡಿದೆ. 90 ರ ದಶಕದಲ್ಲಿ 70 ಕೋಟಿ ರೂಪಾಯಿಗೆ ಖರೀದಿಸಿದ್ದ ಫಿಲಂನಗರದ ಜಮೀನನ್ನು ಚಿರಂಜೀವಿ ಇತ್ತೀಚೆಗೆ ಮಾರಾಟ ಮಾಡಿದ್ದಾರೆ ಎಂದು ಇದೇ ವರದಿ ಹೇಳಿದೆ.

ಖಾಸಗಿ ಜೆಟ್
ಮೆಗಾಸ್ಟಾರ್ ಚಿರಂಜೀವಿ ಐಷಾರಾಮಿ ಖಾಸಗಿ ಜೆಟ್ ಹೊಂದಿದ್ದಾರುವ ಕೆಲವೇ ಕೆಲವು ನಟರ ಸಾಲಿಗೆ ಸೇರುತ್ತಾರೆ. ಆದರೆ ಇದರ ಬೆಲೆ ಇನ್ನು ತಿಳಿದಿಲ್ಲ.
ಪ್ರೊಡಕ್ಷನ್ ಹೌಸ್
ಚಿರಂಜೀವಿ, ಅವರ ಸಹೋದರ ನಾಗೇಂದ್ರ ಬಾಬು ಜೊತೆಗೆ 1988 ರಲ್ಲಿ ಅಂಜನಾ ಪ್ರೊಡಕ್ಷನ್ಸ್ ಎಂಬ ಪ್ರೊಡಕ್ಷನ್ ಹೌಸ್ ಅನ್ನು ಪ್ರಾರಂಭಿಸಿದರು. ಇದಕ್ಕೆ ಅವರ ತಾಯಿ ಅಂಜನಾ ದೇವಿ ಹೆಸರಿಡಲಾಗಿದೆ.
ಚಿರಂಜೀವಿ ಬ್ಲಡ್ ಮತ್ತು ಕಣ್ಣಿನ ಬ್ಯಾಂಕ್
ಚಿರಂಜೀವಿ ಅವರು 1998 ರಲ್ಲಿ ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ ಅನ್ನು ಸ್ಥಾಪಿಸಿದ್ದಾರೆ. ರಕ್ತದಾನ ಮಾಡುವುದು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡಲು ತಮ್ಮ ಅಭಿಮಾನಿಗಳಿಗೆ ಪ್ರೇರಣೆ ನೀಡುತ್ತಿದ್ದಾರೆ. ಈ ಬ್ಯಾಂಕ್‌ನಲ್ಲಿ ಈವರೆಗೆ ಸುಮಾರು 9.30 ಲಕ್ಷ ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ ಮತ್ತು ಇದರಲ್ಲಿ 70 ಪ್ರತಿಶತವನ್ನು ಬಡವರಿಗೆ ಉಚಿತವಾಗಿ ನೀಡಲಾಗುತ್ತದೆ ಎಂದು ನಟ ಚಿರಂಜೀವಿ ತಿಳಿಸಿದ್ದಾರೆ.

ಕೇರಳ ಬ್ಲಾಸ್ಟರ್ಸ್ (ISL ತಂಡ) ಸಹ-ಮಾಲೀಕ
ಚಿರಂಜೀವಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಫುಟ್‌ಬಾಲ್ ಲೀಗ್) ಹೂಡಿಕೆ ಮಾಡಿದ್ದಾರೆ. ದೇಶೀಯ ಫುಟ್ಬಾಲ್ ಲೀಗ್‌ನಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವನ್ನು ನಟ ನಾಗಾರ್ಜುನ ಮತ್ತು ಸಚಿನ್ ತೆಂಡೂಲ್ಕರ್ ಜೊತೆಗೆ ಸೇರಿ ಖರೀದಿಸಿದ್ದಾರೆ.
ಜಿರಂಜೀವಿ ಅವರ ನೆಟ್ ವರ್ತ್
ವರದಿಗಳ ಪ್ರಕಾರ, ಚಿರಂಜೀವಿ 1,650 ಕೋಟಿ ರೂಪಾಯಿಗಳ ಬೃಹತ್ ನೆಟ್ ವರ್ತ್ ಹೊಂದಿದ್ದಾರೆ. ಚಲನಚಿತ್ರಗಳಲ್ಲಿ ನಟಿಸುವುದರಿಂದ ಹಿಡಿದು ಚಲನಚಿತ್ರಗಳನ್ನು ನಿರ್ಮಿಸುವವರೆಗೆ ಕೆಲಸ ಮಾಡುತ್ತಾರೆ. ಜೊತೆಗೆ ಪ್ರತಿ ವರ್ಷ ತಮ್ಮ ನಿವ್ವಳ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











