ರವಿಚಂದ್ರನ್, ದರ್ಶನ್‌ ನಾಯಕಿಗೆ ಬರ್ತ್‌ಡೇ ಸಂಭ್ರಮ: ಇಂದೇ ಸರ್ಪ್ರೈಸ್ ಕೊಡ್ತಾರಂತೆ ನಮಿತಾ

ಸ್ಯಾಂಡಲ್‌ವುಡ್‌ ಸೇರಿದಂತೆ ಹಲವು ಚಿತ್ರರಂಗದಲ್ಲಿ ಮಿಂಚಿದ ಬಹುಭಾಷಾ ನಟಿ ನಮಿತಾ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿಗೆ ಸ್ನೇಹಿತರು, ಸೆಲೆಬ್ರೆಟಿಗಳು ಸಾಮಾಜಿಕ ಜಾಲತಾಣದ ಮೂಲಕ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಹಲವಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಫೇಮಸ್‌ ಆಗಿದ್ದ ನಟಿ ನಮಿತಾ ಅವರು ಇಂದು 41ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ನಮಿತಾ ಅನೇಕ ಸ್ಟಾರ್‌ ನಟರ ಜೊತೆ ಸ್ಕ್ರೀನ್ ಶೇರ್‌ ಮಾಡಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲೂ ನಟಿಸುವ ಮೂಲಕ ಎಲ್ಲಾ ಚಿತ್ರರಂಗದಲ್ಲೂ ಬಹುಬೇಡಿಕೆಯ ನಟಿಯಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ನಮಿತಾ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. 2017ರಲ್ಲಿ ಗೆಳೆಯ ವೀರೇಂದ್ರ ಅವರನ್ನು ಮದುವೆಯಾದ ಬಳಿಕ ಸಿನಿಮಾ ಕ್ಷೇತ್ರದಿಂದ ಸ್ವಲ್ಪ ದೂರವೇ ಉಳಿದಿದ್ದರು. ಈಗಲೂ ಸಹ ಅವರ ಅಪಾರ ಅಭಿಮಾನಿಗಳು ಮತ್ತೆ ನಮಿತಾ ಬಣ್ಣದ ಪರದೆ ಮೇಲೆ ಬರಬೇಕು ಎಂದು ಬಯಸುತ್ತಿದ್ದಾರೆ.

ಕನ್ನಡದಲ್ಲಿ ಕೇಜ್ರಿಸ್ಟಾರ್ ರವಿಚಂದ್ರನ್ ಜೊತೆ ನಮಿತಾ 'ಹೂ', 'ನೀಲಕಂಠ' ಸಿನಿಮಾಗಳಲ್ಲಿ ಅಭಿನಯಿಸಿ ಪಡ್ಡೆ ಹುಡುಗರ ಮನ ಗೆದ್ದಿದ್ದರು. ಇದಾದ ಬಳಿಕ ನಟ ದರ್ಶನ್ ಜೊತೆ 'ಇಂದ್ರ' ಸಿನಿಮಾದಲ್ಲೂ ತಮ್ಮ ಅದ್ಬುತ ನಟನೆ ಮೂಲಕವೇ ಕನ್ನಡಿಗ ಪ್ರೇಕ್ಷರನ್ನ ರಂಜಿಸುವಲ್ಲಿ ನಮಿತಾ ಯಶಸ್ವಿಯಾಗಿದ್ದರು. ನಂತರ 'ಬೆಂಕಿ ಬಿರುಗಾಳಿ' ಎಂಬ ಸಿನಿಮಾದಲ್ಲೂ ನಟಿಸಿದ್ದರು. ಹೀಗಾಗಿ ನಮಿತಾ ಕನ್ನಡ ಚಿತ್ರರಂಗದಲ್ಲೂ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ ನಮಿತಾ ಮತ್ತೆ ಸಿನಿಮಾಗಳನ್ನು ಮಾಡಬೇಕು ಎಂಬುದು ಅಭಿಮಾನಿಗಳ ಆಸೆ.

Happy Birthday Namitha : Fans Wishes Actress on Her Birthday

ಇಂದು (ಮೇ 10) ನಮಿತಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದೇ ಅಭಿಮಾನಿಗಳಿಗೆಲ್ಲಾ ಸ್ಪೆಷಲ್ ನ್ಯೂಸ್‌ ನೀಡುವುದಾಗಿ ನಮಿತಾ ತಿಳಿಸಿದ್ದಾರೆ. ಹೀಗಾಗಿ ಫ್ಯಾನ್ಸ್‌ ಕೂಡ ಸ್ಪೆಷಲ್ ನ್ಯೂಸ್‌ಗಾಗಿ ಕಾಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಷಿವ್ ಆಗಿರುವ ನಮಿತಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ.

Happy Birthday Namitha : Fans Wishes Actress on Her Birthday

1998 ರಲ್ಲಿ, ನಮಿತಾ ತನ್ನ 17ನೇ ವಯಸ್ಸಿನಲ್ಲೇ ಮಿಸ್ ಸೂರತ್ ಕಿರೀಟವನ್ನು ಪಡೆದುಕೊಂಡಿದ್ದರು. ಆದಾದ ಬಳಿಕ 2001 ರಲ್ಲಿ ಮಿಸ್‌ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿಯಾಗಿ ಮೂರನೇ ರನ್ನರ್ ಆಪ್ ಆಗಿದ್ದರು. ಬಳಿಕ ಟಿವಿ ಸಿರಿಯಲ್‌ನಲ್ಲಿ ನಟಿಸಿ ಬೆಳ್ಳಿತೆರೆಗೆ 2002ರಲ್ಲಿ ತೆಲುಗಿನ 'ಸೊಂತಮ್' ಸಿನಿಮಾದ ಮೂಲಕ ಪಾದಾರ್ಪಣೆ ಮಾಡಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಸದ್ಯಕ್ಕೆ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿರುವ ನಮಿತಾ ಬಿಜೆಪಿ ಸದಸ್ಯರಾಗಿಯೂ ಕೆಲಸ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ನಮಿತಾ ಮತ್ತೆ ಸಿನಿಮಾ ಲೋಕಕ್ಕೆ ಬರಲಿ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಲ್ಲದೆ ಇಂದು ನಟಿ ನಮಿತಾ ಕೊಡುವ ಸ್ಪೆಷಲ್ ನ್ಯೂಸ್‌ ಏನೆಂದು ತಿಳಿಯಲು ಅಭಿಮಾನಿಗಳು ಕಾತುರರಾಗಿದ್ದಾರೆ.

More from Filmibeat

English summary
Happy Birthday Namitha: Fans wishes Actress Namitha on her Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X