ಹುಟ್ಟುಹಬ್ಬದ ಸಂಭ್ರಮದಲ್ಲಿ ಸಾಯಿ ಪಲ್ಲವಿ; 'ಹ್ಯಾಪಿ ಬರ್ತಡೇ ಚಿನ್ನಿ' ಎಂದ ನಟ ನಾನಿ
ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು. ನ್ಯಾಚುರಲ್ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ಸಾಯಿ ಪಲ್ಲವಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ. ಅದ್ಭುತ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ಸಾಯಿ ಪಲ್ಲವಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಪ್ರೇಮಂ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಾಯಿ ಪಲ್ಲವಿ ಮೊದಲ ಸಿನಿಮಾದಲ್ಲೇ ದಕ್ಷಿಣ ಭಾರತೀಯ ಸಿನಿಪ್ರಿಯರ ಹೃದಯ ಗೆದ್ದಿದ್ದಾರೆ. ಮಲಯಾಳಂ ಸಿನಿಮಾ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ ಸಾಯಿ ಪಲ್ಲವಿ ಸದ್ಯ ತಮಿಳು ಮತ್ತು ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ.
ಸಾಯಿ ಪಲ್ಲವಿ ಹುಟ್ಟುಹಬ್ಬಕ್ಕೆ ತೆಲುಗು ಸ್ಟಾರ್ ನಾನಿ ವಿಶೇಷವಾಗಿ ವಿಶ್ ಮಾಡಿದ್ದಾರೆ. ಶ್ಯಾಮ್ ಸಿಂಗ್ ರಾಯ್ ಚಿತ್ರದ ಪೋಸ್ಟರ್ ಶೇರ್ ಮಾಡಿ, 'ಹುಟ್ಟುಹಬ್ಬದ ಶುಭಾಶಯಗಳು ಚಿನ್ನಿ ಗಾರು' ಎಂದು ಶುಭಾಶಯ ತಿಳಿಸಿದ್ದಾರೆ. ಶ್ಯಾಮ್ ಸಿಂಗ್ ರಾಯ್ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತ್ರಿಶೂಲ ಹಿಡಿದು ದೇವತೆ ಹಾಗೆ ಪೋಸ್ ನೀಡಿರುವ ಫಸ್ಟ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಈ ಸಿನಿಮಾ ಜೊತೆಗೆ ಸಾಯಿ ಪಲ್ಲವಿ ಲವ್ ಸ್ಟೋರಿ ಮತ್ತು ವಿರಾಟ ಪರ್ವ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಪ್ರೇಮಂ ಸುಂದರಿ ಬಿಡುಗಡೆ ಎದುರು ನೋಡುತ್ತಿದ್ದಾರೆ. ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಸಾಯಿ ಪಲ್ಲವಿ ಇತ್ತೀಚಿಗೆ ಪವನ್ ಕಲ್ಯಾಣ್ ಸಿನಿಮಾ ರಿಜೆಕ್ಟ್ ಮಾಡಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು.

ಸಂಭಾವನೆ ಕಾರಣಕ್ಕೆ ಸಾಯಿ ಪಲ್ಲವಿ, ಪವನ್ ಕಲ್ಯಾಣ್ ಸಿನಿಮಾ ತಿರಸ್ಕರಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಪವನ್ ಕಲ್ಯಾಣ್ ನಟನೆಯ ಅಯ್ಯಪ್ಪನುಂ ಕೋಶಿಯುಂ ಮಲಯಾಳಂ ರಿಮೇಕ್‌ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಪತ್ನಿಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಬೇಕಿತ್ತು. ಆದರೆ ಸಾಯಿ ರಿಜೆಕ್ಟ್ ಮಾಡಿದ್ದಾರೆ. ಸಾಯಿ ಪಲ್ಲವಿ ಪಾತ್ರದಲ್ಲಿ ನಟಿ ನಿತ್ಯಾ ಮೆನನ್ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











