ಬೇಸರದಲ್ಲಿದ್ದ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಗುಡ್ ನ್ಯೂಸ್!

ಕೆಲವು ದಿನಗಳಿಂದ ಬೇಸರದಲ್ಲಿದ್ದ ರಶ್ಮಿಕಾ ಮಂದಣ್ಣಾ ಅಭಿಮಾನಿಗಳ ಮುಖದಲ್ಲಿ ಮತ್ತೆ ಮಂದಹಾಸ ಮೂಡಿಸುವ ಸುದ್ದಿಯೊಂದು ಬಂದಿದೆ.

Recommended Video

ಧ್ರುವ ಅಭಿಮಾನಿಗಳಿಗೆ ಜಬರ್ದಸ್ತ್ ಸುದ್ದಿ..! | Dhruva Sarja | Pogaru | Rashmika Mandanna

ಪುಷ್ಪಾ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಹಿಗ್ಗಿದ್ದ ಅಭಿಮಾನಿಗಳು ಆ ನಂತರ ನಡೆದ ಬೆಳವಣಿಗೆಗಳಿಂದ ಬೇಸರಗೊಂಡಿದ್ದರು.

'ಪುಷ್ಪಾ' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಲ್ಲಿ, ಬದಲಿಗೆ ಮತ್ತೊಬ್ಬ ಪ್ರಮುಖ ನಟಿ ಸಿನಿಮಾದ ನಾಯಕಿ, ರಶ್ಮಿಕಾ ಮಂದಣ್ಣ ನಾಯಕನಿಗೆ ಸಹಾಯ ಮಾಡುವ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರಷ್ಟೆ ಎನ್ನಲಾಗಿತ್ತು, ಇದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು, ಆದರೆ ಈಗ ಬಂದಿರುವ ಸುದ್ದಿ ರಶ್ಮಿಕಾ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.

ರಶ್ಮಿಕಾ ಎದುರಾಗಿ ಮತ್ತೊಬ್ಬ ನಟಿ?

ರಶ್ಮಿಕಾ ಎದುರಾಗಿ ಮತ್ತೊಬ್ಬ ನಟಿ?

ಬಹುನಿರೀಕ್ಷಿತ ಚಿತ್ರ 'ಪುಷ್ಪಾ' ದಲ್ಲಿ ರಶ್ಮಿಕಾ ಗೆ ಎದುರಾಗಿ ಇನ್ನಾವುದೇ ನಾಯಕಿ ಇರುವುದಿಲ್ಲವಂತೆ. ರಶ್ಮಿಕಾ ಅವರೇ ಚಿತ್ರದ ನಾಯಕಿಯಾಗಿದ್ದಾರೆ ಎಂದು ಚಿತ್ರತಂಡವೇ ಸ್ಪಷ್ಟನೆ ನೀಡಿದೆ ಎನ್ನಲಾಗಿದೆ.

ಅಲ್ಲು ಅರ್ಜುನ್ ನಾಯಕಿಯಾಗಿ ನಿವೇದಾ ಥಾಮಸ್?

ಅಲ್ಲು ಅರ್ಜುನ್ ನಾಯಕಿಯಾಗಿ ನಿವೇದಾ ಥಾಮಸ್?

ಪುಷ್ಪಾ ಸಿನಿಮಾದಲ್ಲಿ ನಿವೇದಾ ಥಾಮಸ್ ನಾಯಕಿಯಾಗಿ ನಟಿಸುತ್ತಿದ್ದಾರೆ. ರಶ್ಮಿಕಾ ಎರಡನೇ ನಾಯಕಿಯ ಪಾತ್ರದಲ್ಲಿದ್ದು, ಅರಣ್ಯಾಧಿಕಾರಿ ನಾಯಕನಿಗೆ ಸಹಾಯ ಮಾಡುವ ಪಾತ್ರ ಅವರದ್ದಾಗಿದೆ ಎಂಬ ಗುಲ್ಲು ಹರಿದಾಡಿತ್ತು. ಆದರೀಗ ಅದೆಲ್ಲವೂ ಸುಳ್ಳಾಗಿದೆ.

ರಶ್ಮಿಕಾ ಮಂದಣ್ಣ ನಾಯಕಿ

ರಶ್ಮಿಕಾ ಮಂದಣ್ಣ ನಾಯಕಿ

ಸುಕುಮಾರ್ ನಿರ್ದೇಶನದ ಈ ಬಹುನಿರೀಕ್ಷಿತ 'ಪುಷ್ಪಾ' ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರೇ ನಾಯಕಿಯಾಗಿದ್ದು, ಅವರು ಅರಣ್ಯಾಧಿಕಾರಿ ಪಾತ್ರ ನಿರ್ವಹಿಸುತ್ತಿದ್ದಾರೆಯೋ ಅಥವಾ ಅಲ್ಲು ಅರ್ಜುನ್ ನ ಪ್ರೇಯಸಿಯ ಪಾತ್ರವೋ ಗೊತ್ತಾಗಬೇಕಿದೆ.

ಡಾಲಿ ಧನಂಜಯ್ ನಟನೆ

ಡಾಲಿ ಧನಂಜಯ್ ನಟನೆ

ಇನ್ನು ಪುಷ್ಪಾ ಸಿನಿಮಾದಲ್ಲಿ ಅಲ್ಲು ಅರ್ಜುನ್ ಎದುರಾಗಿ ನಟ ಡಾಲಿ ಧನಂಜಯ್ ನಟಿಸುತ್ತಿದ್ದಾರೆ. ವಿಜಯ್ ಸೇತುಪತಿ ನಿರ್ವಹಿಸಬೇಕಿದ್ದ ಈ ಪಾತ್ರಕ್ಕೆ ಡಾಲಿ ಆಯ್ಕೆ ಆಗಿದ್ದಾರೆ. ವಿಲನ್ ಆಗಿ ಪ್ರತಿಭೆಯನ್ನು ಸಾಬೀತುಪಡಿಸಿರುವ ಡಾಲಿ, ನೆರೆಯ ರಾಜ್ಯದಲ್ಲಿ ಮಿಂಚುತ್ತಾರಾ ನೋಡಬೇಕಿದೆ.

More from Filmibeat

English summary
Allu Arjun starer 'Pushpa' movie team said that no other heroine against Rashmika Mandanna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X