For Quick Alerts
  ALLOW NOTIFICATIONS  
  For Daily Alerts

  ಬೈಕ್ ಮಾರಿದ ಹಣದಲ್ಲಿ ಆಕ್ಸಿಜನ್ ಸಾಂದ್ರಕ ದಾನ ಮಾಡಿದ ನಟ ಹರ್ಷವರ್ಧನ್ ರಾಣೆ

  |

  ಕೊರೊನಾ ಎರಡನೇ ಅಲೆಯ ಭೀಕರತೆಯಿಂದ ಸೃಷ್ಟಿಯಾಗಿರುವ ಆಮ್ಲಜನಕ ಕೊರತೆ ನೀಗಿಸಲು ಸಾಕಷ್ಟು ಮಂದಿ ಹರಸಾಹಸ ಪಡುತ್ತಿದ್ದಾರೆ. ಅನೇಕ ಸಿನಿ ಸೆಲೆಬ್ರಿಟಿಗಳು ಸಹ ಕೈಜೋಡಿಸಿದ್ದಾರೆ. ಆಕ್ಸಿಜನ್ ಸಿಗದೆ ಪರದಾಡುತ್ತಿರುವ ಸೋಂಕಿತರ ಪ್ರಾಣ ಉಳಿಸಲು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

  ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಸಹಾಯ ನಿಂತ ನಟರಲ್ಲಿ ಖ್ಯಾತ ನಟ ಹರ್ಷವರ್ಧನ್ ರಾಣೆ ಕೂಡ ಒಬ್ಬರು. ಆಮ್ಲಜನಕ ಕೊರತೆ ನೀಗಿಸಲು ಹರ್ಷವರ್ಧನ್ ತನ್ನ ಪ್ರೀತಿಯ ಬೈಕ್ ಅನ್ನೇ ಮಾರಾಟಕ್ಕೆ ಇಟ್ಟಿದ್ದರು. ಈ ಬಗ್ಗೆ ಹರ್ಷವರ್ಧನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸುವ ಜೊತೆಗೆ ತನ್ನ ನೆಚ್ಚಿನ ಬೈಕ್ ಫೋಟೋಗಳನ್ನು ಹಂಚಿಕೊಂಡಿದ್ದರು.

  ಆಕ್ಸಿಜನ್ ಖರೀದಿಗೆ ನೆಚ್ಚಿನ ಬೈಕ್ ಮಾರಾಟಕ್ಕಿಟ್ಟ ನಟ ಹರ್ಷವರ್ಧನ್ ರಾಣೆಆಕ್ಸಿಜನ್ ಖರೀದಿಗೆ ನೆಚ್ಚಿನ ಬೈಕ್ ಮಾರಾಟಕ್ಕಿಟ್ಟ ನಟ ಹರ್ಷವರ್ಧನ್ ರಾಣೆ

  'ಆಗತ್ಯ ಇರುವವರಿಗೆ ಆಮ್ಲಜನಕ ಸಾಂದ್ರಕಗಳನ್ನು ಖರೀದಿಸಲು ನನ್ನ ಬೈಕ್ ಮಾರಾಟ ಮಾಡುತ್ತಿದ್ದೇನೆ. ಹೈದರಾಬಾದ್ ನಲ್ಲಿ ಉತ್ತಮ ಆಕ್ಸಿಜನ್ ಸಾಂದ್ರಕ ಎಲ್ಲಿ ಸಿಗುತ್ತೆ ಹೇಳಿ' ಎಂದು ಪೋಸ್ಟ್ ಹಾಕಿದ್ದರು.

  ಸದ್ಯ ಹರ್ಷವರ್ಧನ್ ಅವರ ನೆಚ್ಚಿನ ಹಳದಿ ಬಣ್ಣದ ರಾಯಲ್ ಎನ್ ಫೀಲ್ಡ ಬೈಕ್ ಮಾರಾಟವಾಗಿದ್ದು, ಅದರಿಂದ ಬಂದ ಹಣದಿಂದ ಆಕ್ಸಿಜನ್ ಸಾಂದ್ರಕ ಖರೀದಿಸಿ ಹೈದರಾಬಾದ್ ಸೈಬರ್ ಪೋಲೀಸರಿಗೆ ದಾನ ಮಾಡಿದ್ದಾರೆ. ಹರ್ಷವರ್ಧನ್ ಎನ್ ಜಿ ಒ ಜೊತೆ ಕೈಜೋಡಿಸಿದ್ದು, ಕೊರೊನಾ ಸಂಕಷ್ಟ ಈ ಸಮಯದಲ್ಲಿ ಫ್ರಂಟ್ ಲೈನ್ ಕೆಲಸಗಾರರ ಸಹಾಯಕ್ಕೆ ನಿಂತಿದ್ದಾರೆ.

  ನನ್ನ ತಾಯಿ ಯಾರು ಅಂತಾ ಗೊತ್ತಾಗೋದೇ ಬೇಡ ಅಂದ್ರು ಶರಣ್ | Filmibeat Kannada

  ಸನಮ್ ತೇರಿ ಕಸಮ್ ಸಿನಿಮಾ ಮೂಲಕ ಸಿನಿಪ್ರೇಕ್ಷಕರ ಹೃದಯ ಗೆದ್ದಿರುವ ತೆಲುಗು ನಟ ಹರ್ಷವರ್ಧನ್ ಅವರ ಮಾನವೀಯ ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹರ್ಷವರ್ಧನ್ ಬಳಿ ಉತ್ತಮ ಬೈಕ್ ಮತ್ತು ಕಾರ್ ಕಲೆಕ್ಷನ್ ಗಳಿವೆ. ಹರ್ಷವರ್ಧನ್ ಬೈಕ್ ಕ್ರೇಜ್ ಬಗ್ಗೆ ಅವರ ಅಭಿಮಾನಿಗಳಿಗೆ ಗೊತ್ತಿರುವ ವಿಚಾರ. ಇದೀಗ ಕೊರೊನಾ ರೋಗಿಗಳಿಗೆ ಸಹಾಯ ಮಾಡಲು ತನ್ನ ನೆಚ್ಚಿನ ಬೈಕ್ ಅನ್ನೇ ಮಾರಾಟ ಮಾಡಿ ರಿಯಲ್ ಹೀರೋ ಆಗಿದ್ದಾರೆ.

  English summary
  Actor Harshvardhan Rane sells his bike to donate Oxygen concentrator to Cyberabad police.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X