ತನ್ನ ಪತಿ VD ಆಗಿರಬೇಕು ಎಂದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ!
ಟಾಲಿವುಡ್, ಬಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಕ್ರೇಜ್ ಜೋರಾಗಿದೆ. ಒಂದು ಕ್ಷಣವೂ ಬಿಡುವು ಇಲ್ಲದಷ್ಟು ಬ್ಯುಸಿಯಾಗಿ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕೊಡಗಿನ ಬೆಡಗಿ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಬಾರಿ ಚರ್ಚೆ ಆಗುತ್ತಿರುತ್ತದೆ. ಮುಖ್ಯವಾಗಿ ಮದುವೆ, ರಿಲೇಷನ್‌ಶಿಪ್ ವಿಚಾರಕ್ಕೆ ಸದಾ ಸುದ್ದಿ ಆಗುತ್ತಿರುತ್ತಾರೆ.
'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ಜೊತೆ ಮದುವೆಗೆ ಸಜ್ಜಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗಲು ನಿಶ್ಚಯಿಸಿ ಕೊನೆಗೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ಎಂಗೇಜ್‌ಮೆಂಟ್ ಮುರಿದು ಬಿದ್ದು ಇಬ್ಬರೂ ದೂರಾಗಿದ್ದರು. ಸದ್ಯ ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

'ಗೀತಾ ಗೋವಿಂದಂ' ಚಿತ್ರದಲ್ಲಿ ನಟಿಸಿ ರಶ್ಮಿಕಾ ಮಂದಣ್ಣ ತೆಲುಗು ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದ್ದರು. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಜೋಡಿಗೆ ಒಳ್ಳೆ ಕ್ರೇಜ್ ಶುರುವಾಗಿತ್ತು. ಇನ್ನು ಇಬ್ಬರೂ ಬಹಳ ಆತ್ಮೀಯ ಸ್ನೇಹಿತರು ಆಗಿಬಿಟ್ಟರು. ವಿಜಯ್ ದೇವರಕೊಂಡ ಸ್ನೇಹಿತರ ಗ್ಯಾಂಗ್‌ನಲ್ಲಿ ರೋಶ್ ಕೂಡ ಸೇರಿಕೊಂಡರು. ಆಗಾಗ್ಗೆ ಭೇಟಿ, ಪಾರ್ಟಿ, ಟ್ರಿಪ್ ಅಂತ ಸ್ನೇಹಿತರು ಎಂಜಾಯ್ ಮಾಡುತ್ತಿರುತ್ತಾರೆ.
ವಿಜಯ್ ದೇವರಕೊಂಡ ಫ್ಯಾಮಿಲಿಗೂ ರಶ್ಮಿಕಾ ಮಂದಣ್ಣ ಬಹಳ ಆಪ್ತರಾಗಿದ್ದಾರೆ. ಹಬ್ಬಗಳ ಸಮಯದಲ್ಲಿ ಒಟ್ಟಿಗೆ ಸೇರಿ ಸಂಭ್ರಮಿಸುತ್ತಾರೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ. ಇಬ್ಬರೂ ಡೇಟಿಂಗ್ ನಡೆಸುತ್ತಾರೆ, ಮದುವೆ ಆಗುತ್ತಾರೆ ಎಂದು ಪದೇ ಪದೆ ಗುಲ್ಲಾಗುತ್ತದೆ. ಅದೆಲ್ಲ ಸುಳ್ಳು ಎಂದು ಇಬ್ಬರು ಹೇಳುತ್ತಲೇ ಬರುತ್ತಿದ್ದಾರೆ.
ಸದ್ಯ ರಶ್ಮಿಕಾ ಮಂದಣ್ಣ ತಾವು ಮದುವೆ ಆಗುವ ಹುಡುಗ ಹೇಗಿರಬೇಕು. ತಾನು ಮದುವೆ ಆಗುವವರ ಅರ್ಹತೆಗಳೇನು ಎನ್ನುವುದರ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ರಶ್ಮಿಕಾ ಮಂದಣ್ಣಗೆ ದೊಡ್ಡ ಅಭಿಮಾನಿ ಬಳಗ ಇದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫ್ಯಾನ್ ಪೇಜ್‌ಗಳಿವೆ. ರಶ್ಮಿಕಾ ಮಂದಣ್ಣ ಮದುವೆ ಆಗುವ ವ್ಯಕ್ತಿ ಹೇಗಿರಬೇಕು ಎಂದು ರಶ್ಮಿಕಾ ಡೆಲ್ಲಿ ಫ್ಯಾನ್ ಟ್ವಿಟ್ಟರ್ ಪೇಜ್‌ನಲ್ಲಿ ಒಂದು ಪೋಸ್ಟ್ ಆಗಿದೆ. ಅಚ್ಚರಿ ಎನ್ನುವಂತೆ ಅದಕ್ಕೆ ರಶ್ಮಿಕಾ ಮಂದಣ್ಣ ಅದಕ್ಕೆ ಸಹ ಸಮ ಸೂಚಿಸಿದ್ದಾರೆ.
ರಶ್ಮಿಕಾ ಮಂದಣ್ಣ ಪತಿಯಾಗಲು ಯಾವ ಅರ್ಹತೆಗಳು ಇರಬೇಕು? ಆಕೆ ನ್ಯಾಷನಲ್ ಕ್ರಶ್, ಹಾಗಾಗಿ ಆಕೆಯ ಪತಿ ಕೂಡ ವಿಶೇಷ ವ್ಯಕ್ತಿ ಆಗಿರಬೇಕು. ಆಕೆಯ ಪತಿ VD ರೀತಿ ಇರಬೇಕು. ಅಂದ್ರೆ ಆಕೆಯನ್ನು ರಕ್ಷಿಸುವಂತಹ ಬಹಳ ಡೇರಿಂಗ್(Very Daring) ವ್ಯಕ್ತಿ ಆಗಿರಬೇಕು. ಆಕೆಯನ್ನು ನಾವು ರಾಣಿ ಎಂದು ಕರೆಯುತ್ತೇವೆ. ಹಾಗಾಗಿ ಆಕೆಯ ಪತಿ ರಾಜನಂತೆ ಇರಬೇಕು" ಎಂದು ಪೋಸ್ಟ್ ಮಾಡಿದ್ದಾರೆ.
ಅಭಿಮಾನಿಗಳ ಈ ಪೋಸ್ಟ್‌ಗೆ ರಿಪ್ಲೇ ಮಾಡಿರುವ ರಶ್ಮಿಕಾ ಮಂದಣ್ಣ "ಹೌದು ಇದು ನಿಜ" ಎಂದು ಬರೆದು ನಗು ಹಾಗೂ ಲವ್ ಎಮೋಜಿ ಪೋಸ್ಟ್ ಮಾಡಿದ್ದಾರೆ. ಅಂದರೆ ಆ ಪೋಸ್ಟ್‌ನಲ್ಲಿ ಹೇಳಿರುವಂತಹ ವ್ಯಕ್ತಿ ನನ್ನ ಪತಿಯಾಗಿ ಬರಬೇಕು ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ವಿಜಯ್ ದೇವರಕೊಂಡನ ಅಭಿಮಾನಿಗಳು ಶಾರ್ಟ್ ಆಗಿ VD ಎಂದು ಕರೆಯುತ್ತಾರೆ. ಈ ಪೋಸ್ಟ್‌ನಲ್ಲಿ VD ಅಂದ್ರೆ ಬಹಳ ಧೈರ್ಯಶಾಲಿ ಎಂದು ಹೇಳಲಾಗಿದೆ. ಪರೋಕ್ಷವಾಗಿ ವಿಜಯ್ ದೇವರಕೊಂಡ ತರಹ ಧೈರ್ಯಶಾಲಿ ಎನ್ನುವ ಅರ್ಥ ಬರುವಂತೆಯೂ ಬರೆಯಲಾಗಿದೆ. ನಟ ವಿಜಯ್ ದೇವರಕೊಂಡ ತಮ್ಮ ಡೇರ್ ಆಟ್ಯಿಟ್ಯೂಡ್‌ನಿಂದ ಸದಾ ಗಮನ ಸೆಳೆಯುತ್ತಾರೆ. ಸದ್ಯ ಇದೇ ಕಾರಣಕ್ಕೆ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.


Click it and Unblock the Notifications











