'ಛತ್ರಪತಿ' ಹಿಂದಿ ರಿಮೇಕ್: ಚಿತ್ರೀಕರಣಕ್ಕೂ ಮೊದಲೇ ಕೋಟಿ ಕೋಟಿ ನಷ್ಟ ಅನುಭವಿಸಿದ ಸಿನಿಮಾ

ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ನಟ ಪ್ರಭಾಸ್ ನಟನೆಯ ಸೂಪರ್ ಹಿಟ್ ಛತ್ರಪತಿ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಬಾಹುಬಲಿ ಬಳಿಕ ಬಹುಬೇಡಿಕೆಯ ನಟನಾಗಿರುವುದಲ್ಲದೆ ಪ್ರಭಾಸ್ ಹಳೆಯ ಸಿನಿಮಾಗಳಿಗೂ ಬೇಡಿಕೆ ಹೆಚ್ಚಾಗಿದೆ.

ನಿರ್ದೇಶಕ ರಾಜಮೌಳಿ ಮತ್ತು ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿಬಂದ ಮೊದಲ ಸಿನಿಮಾ ಛತ್ರಪತಿ. ಈ ಸಿನಿಮಾ ರಿಲೀಸ್ ಆಗಿ 16ವರ್ಷಗಳಾಗಿದೆ. ಈಗ ಈ ಸಿನಿಮಾ ಬಾಲಿವುಡ್ ನಲ್ಲಿ ಸದ್ದು ಮಾಡಲು ಸಿದ್ಧವಾಗುತ್ತಿದೆ. ಟಾಲಿವುಡ್ ನ ಭರವಸೆಯ ನಟ ಬೆಲ್ಲಂಕೊಂಡ ಸಾಯಿ ಶ್ರಿನಿವಾಸ್ ಛತ್ರಪತಿ ಹಿಂದಿ ರಿಮೇಕ್ ನಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ.

ಏಪ್ರಿಲ್ ನಿಂದ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿ ಹೈದರಾಬಾದ್ ನಲ್ಲಿ ಬೃಹತ್ ಸೆಟ್ ಕೂಡ ಹಾಕಲಾಗಿತ್ತು. ಆದರೆ ಚಿತ್ರೀಕರಣ ಪ್ರಾರಂಭವಾಗುವ ಮೊದಲೆ ಕೋಟಿ ಕೋಟಿ ನಷ್ಟ ಅನುಭವಿಸಿದೆ ಚಿತ್ರತಂಡ. 6 ಎಕರೆ ಜಾಗದಲ್ಲಿ ನಿರ್ಮಾಣ ಮಾಡಿದ್ದ ಹಳ್ಳಿ ಸೆಟ್ ಮಳೆಗೆ ಸಂಪೂರ್ಣ ಹಾನಿಯಾಗಿದೆ. ಈ ಸೆಟ್ ನಿರ್ಮಾಣಕ್ಕೆ ಬರೋಬ್ಬರಿ 3 ಕೋಟಿ ರೂ. ಖರ್ಚು ಮಾಡಿತ್ತು ಸಿನಿಮಾತಂಡ.

Heavy rain damage Chatrapathi Hindi remake sets worth 3 crore in Hyderabad

ಸೆಟ್ ನಿರ್ಮಾಣ ಮಾಡಿ ಚಿತ್ರೀಕರಣ ಪ್ರಾರಂಭ ಮಾಡುವ ಅಷ್ಟರಲ್ಲಿ ಕೊರೊನಾ ಹಾವಳಿ ಕಾರಣ ಮುಂದೂಡಲಾಗಿತ್ತು. ಇತ್ತೀಚಿಗೆ ಸುರಿದ ಭಾರಿ ಮಳೆಗೆ ಸೆಟ್ ಸಂಪೂರ್ಣ ನಾಶವಾಗಿದೆಯಂತೆ. ಚಿತ್ರೀಕರಣಕ್ಕೂ ಮೊದಲೇ ಛತ್ರಪತಿ ಹಿಂದಿ ರಿಮೇಕ್ ಸಿನಿಮಾಗೆ ಭಾರಿ ನಷ್ಟ ಅನುಭವಿಸಿದೆ.

ಇದೀಗ ಸೆಟ್ ಮತ್ತೆ ನಿರ್ಮಾಣ ಮಾಡಲಾಗುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಚಿತ್ರಕ್ಕಾಗಿ ನಟ ಸಾಯಿ ಶ್ರೀನಿವಾಸ್ ಕೂಡ ಸಿಕ್ಕಾಪಟ್ಟೆ ತಯಾರಿ ನಡೆಸಿದ್ದಾರೆ. ಛತ್ರಪತಿ ಪಕ್ಕ ಆಕ್ಷನ್ ಸಿನಿಮಾವಾಗಿದ್ದು, ಪಾತ್ರಕ್ಕಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ದೇಹ ಹುರಿಗೊಳಿಸಿದ್ದಾರೆ. ಛತ್ರಪತಿ ಚಿತ್ರಕ್ಕೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಬರೆದಿದ್ದು, ರಿಮೇಕ್ ಗೂ ಸಹ ಚಿತ್ರಕಥೆ ಬರೆದಿದ್ದಾರೆ.

Recommended Video

ಕನ್ನಡ ಚಿತ್ರರಂಗದ ಹಿರಿಯ ನಟಿ B Jayamma ವಿಧಿವಶ | Filmibeat Kannada

ಛತ್ರಪತಿ ಸಿನಿಮಾದಲ್ಲಿ ಪ್ರಭಾಸ್ ಶಿವಾಜಿ ಎನ್ನುವ ಪಾತ್ರವನ್ನು ನಿರ್ವಹಿಸಿದ್ದರು. ಶಿವಾಜಿ ಚಿಕ್ಕ ವಯಸ್ಸಿನಲ್ಲೇ ತಾಯಿ ಮತ್ತು ಸಹೋದರನಿಂದ ಬೇರೆಯಾಗಿ ಕುಗ್ರಾಮಕ್ಕೆ ಬಂದು ಜನರ ಮಧ್ಯೆ ಬೆಳೆಯುತ್ತಾನೆ. ತಾಯಿಯನ್ನು ಹುಡುಕುವುದು ಮತ್ತು ಆಕ್ಷನ್ ಸೇರಿದಂತೆ ಸಿನಿಮಾ ಅನೇಕ ತಿರುವುಗಳಿಂದ ಕುತೂಹಲ ಮೂಡಿಸಿತ್ತು. ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ ಛತ್ರಪತಿಯನ್ನು ಹಿಂದಿ ಮಂದಿ ಹೇಗೆ ಸ್ವೀಕಾರ ಮಾಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

More from Filmibeat

English summary
Heavy rain damage Chatrapathi Hindi remake sets worth 3 crore in Hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X