twitter
    For Quick Alerts
    ALLOW NOTIFICATIONS  
    For Daily Alerts

    RRR: ಚಿತ್ರವನ್ನು ಯಾಕೆ ನೋಡಬೇಕು? 3 ಕಾರಣ ಇಲ್ಲಿವೆ ನೋಡಿ!

    |

    RRR ಚಿತ್ರ ಸದ್ಯ ರಿಲೀಸ್ ಆಗಿ ವಿಶ್ವದಾದ್ಯಂತ ಅಬ್ಬರಿಸುತ್ತಿದೆ. ಸಿನಿಮಾ ನೋಡಲು ಕಾತರರಾಗಿದ್ದ ಚಿತ್ರ ಪ್ರೇಮಿಗಳು ಸಿನಿಮಾ ನೋಡಲು ಮುಗಿ ಬಿದಿದ್ದಾರೆ. ಮಧ್ಯರಾತ್ರಿಯಿಂಲೆ ಪ್ರದರ್ಶನ ಆರಂಭ ಆಗಿದ್ದು, ಎಲ್ಲೆಡೆ ಸಿನಿಮಾ ನೋಡಲು ಜನ ಮುಗಿ ಬಿದ್ದಿದ್ದಾರೆ. ರಾಜಮೌಳಿ ಅವರ ಸಿನಿಮಾಗಳ ಮೇಲೆ ಹೆಚ್ಚಿನ ನಿರೀಕ್ಷೆ ಸಹಜವಾಗಿಯೆ ಇರುತ್ತದೆ. ಅದನ್ನು RRR ಚಿತ್ರ ಉಳಿಸಿಕೊಂಡಿದೆ ಎನ್ನುವ ವಿಮರ್ಶೆಗಳು ಬರುತ್ತಿವೆ.

    ಬಾಹುಬಲಿ ಚಿತ್ರಕ್ಕೂ ಮೊದಲು ಮತ್ತು ಬಾಹುಬಲಿ ನಂತರ ಎಂದು ರಾಜಮೌಳಿ ಅವರ ನಿರ್ದೇಶನವನ್ನು ನೋಡಬೇಕಾಗುತ್ತದೆ. ಅಷ್ಟರ ಮಟ್ಟಿಗೆ ಬಾಹುಬಲಿ ಸಿನಿಮಾ ಪ್ರಭಾವ ಬೀರಿದೆ, ದಾಖಲೆ ಬರೆದಿದೆ. ಈಗ RRR ಚಿತ್ರವನ್ನು ನೋಡಲು ಬರುವವರು ಸಹಜವಾಗಿಯೇ ರಾಜಮೌಳಿಯ ಬಾಹುಬಲಿ ನಿರ್ದೇಶನವನ್ನು ತಲೆಯಲ್ಲಿ ಇಟ್ಟುಕೊಂಡು ಬರುತ್ತಾರೆ.

    RRR Movie Review: ಪ್ರತಿ ನಿಮಿಷವೂ ರೋಚಕ, ಮೈನವಿರೇಳಿಸುವ ದೃಶ್ಯ ವೈಭವRRR Movie Review: ಪ್ರತಿ ನಿಮಿಷವೂ ರೋಚಕ, ಮೈನವಿರೇಳಿಸುವ ದೃಶ್ಯ ವೈಭವ

    Recommended Video

    RRR Movie Review In Kannada : ಮೈನವಿರೇಳಿಸೊ ದೃಶ್ಯ ವೈಭವ | Jr NTR-Ram Charan Tej

    ಹಾಗೆ ಬಾಹುಬಲಿಯನ್ನು ನೆನೆದು ಬಂದರೂ ಈ ಚಿತ್ರ ನಿರಾಸೆ ಮಾಡುವುದಿಲ್ಲ. ಅಷ್ಟರ ಮಟ್ಟಿಗೆ ರಾಜಮೌಳಿ ಈ ಚಿತ್ರವನ್ನು ಕಾಪಾಡಿಕೊಂಡಿದ್ದಾರೆ. ಇನ್ನು RRR ಚಿತ್ರವನ್ನು ಯಾಕೆ ನೋಡಬೇಕು? ಇಲ್ಲಿ ಮುಖ್ಯವಾದ ಮೂರು ಕಾರಣಗಳು ಇವೆ. ಇವು ಚಿತ್ರದ ಹೈಲೈಟ್. ಚಿತ್ರದಲ್ಲಿ ಏನೇ ಮಿಸ್ ಮಾಡಿಕೊಂಡರೂ, ಈ ಮೂರು ಅಂಗಳನ್ನು ಮಿಸ್ ಮಾಡದೇ ನೋಡಬೇಕು.

    ನಾಯಕರ ಅದ್ಬುತವಾದ ಇಂಟ್ರೊಡಕ್ಷನ್!

    ನಾಯಕರ ಅದ್ಬುತವಾದ ಇಂಟ್ರೊಡಕ್ಷನ್!

    RRR ಚಿತ್ರದಲ್ಲಿ ಮಿಸ್ ಮಾಡದೆ ನೋಡಲೆ ಬೇಕಾದ ರೋಮಾಂಚನಕಾರಿ ದೃಶ್ಯ ಅಂದರೆ ಅದು ಚಿತ್ರದ ನಾಯಕ ನಟರ ಇಂಟ್ರೊಡಕ್ಷನ್ ಸೀನ್. ನಟ ರಾಮ್‌ ಚರಣ್ ತೇಜಾ ಮತ್ತು ಜೂ.ಎನ್‌ಟಿಆರ್ ಇಬ್ಬರ ಇಂಟ್ರೋಡಕ್ಷನ್ ಅತ್ಯದ್ಭುತ ಎನ್ನುತ್ತಾರೆ ಸಿನಿಮಾ ನೋಡಿದವರು. ರಾಜಮೌಳಿ ಸಿನಿಮಾಗಳಲ್ಲಿ ಕಥೆಗೆ ತಕ್ಕಂತೆ ಪಾತ್ರಗಳನ್ನು ವಿನ್ಯಾಸ ಮಾಡಲಾಗುತ್ತದೆ. ಹಾಗಾಗಿ ಕತೆಯ ಮುಖ್ಯ ಪಾತ್ರಗಳ ಪರಿಚಯವನ್ನು ವಿಶೇಷವಾಗಿಯೆ ಮಾಡಿಕೊಡುತ್ತಾರೆ ರಾಜಮೌಳಿ. ಅದಕ್ಕೆ RRR ಚಿತ್ರವೂ ಸಾಕ್ಷಿ ಆಗಿದೆ. ರಾಮ್ ಚರಣ್ ಮತ್ತು ಜೂ.ಎನ್‌ಟಿಆರ್ ಇಬ್ಬರ ಭಿನ್ನ ರೋಚಕ ಇಂಟ್ರೊಡಕ್ಷನ್ ಈ ಚಿತ್ರದಲ್ಲಿ ಕಾಣ ಬಹುದು.

    RRR Box Office Collection: RRR ಕಲೆಕ್ಷನ್ ಟಾರ್ಗೆಟ್ 800 ಕೋಟಿ, ಇದು ಸಾವಿರ ಕೋಟಿ ಆಗುತ್ತಾ?RRR Box Office Collection: RRR ಕಲೆಕ್ಷನ್ ಟಾರ್ಗೆಟ್ 800 ಕೋಟಿ, ಇದು ಸಾವಿರ ಕೋಟಿ ಆಗುತ್ತಾ?

    ಇಂಟರ್ವೆಲ್ ಬ್ಲಾಕ್‌ನಲ್ಲಿ ರೋಚಕ ಟ್ವಿಸ್ಟ್!

    ಇಂಟರ್ವೆಲ್ ಬ್ಲಾಕ್‌ನಲ್ಲಿ ರೋಚಕ ಟ್ವಿಸ್ಟ್!

    ಇನ್ನು ಬಾಹುಬಲಿ ಸಿನಿಮಾ ಬಂದಾಗಲೇ ಪಾರ್ಟ್ 2 ಚಿತ್ರಕ್ಕೆ ಮಹತ್ತರ ಲೀಡ್ ಕೊಟ್ಟು, ಟ್ವಿಸ್ಟ್ ಇಟ್ಟು ರಾಜಮೌಳಿ ಗೆದ್ದಿದ್ದಾರೆ. ಮಧ್ಯಂತರ ಅಂದರೆ ಚಿತ್ರದ ಇಂಟ್ರವೆಲ್ ಸಮಯದಲ್ಲಿ ಪ್ರೇಕ್ಷಕರನ್ನು ಹೇಗೆ ಕುತೂಹಲದಿಂದ ಹಿಡಿದಿಡಬೇಕು ಎನ್ನುವ ಕಲೆಯನ್ನು ರಾಜಮೌಳಿ ಕರಗತ ಮಾಡಿಕೊಂಡಿದ್ದಾರೆ. ಅವರ ಸಿನಿಮಾಗಳಲ್ಲಿ ಇಂಟರ್ವೆಲ್ ಘಟ್ಟವೇ ಹೆಚ್ಚಿನ ಪ್ರಾಮುಖ್ಯತೆ ಪಡೆದು ಕೊಂಡಿರುತ್ತದೆ. RRR ಚಿತ್ರ ಇಂಟರ್ವೆಲ್ ಘಟ್ಟ ಅತ್ಯಂತ ರೋಚಕತೆಯಿಂದ ಕೂಡಿದ್ದು, ಇಂತಹ ಜಾದು ಮಾಡಲು ರಾಜಮೌಳಿ ಇಂದ ಮಾತ್ರ ಸಾಧ್ಯ ಎನಿಸುತ್ತದೆ.

    RRR ಕ್ಲೈಮ್ಯಾಕ್ಸ್ ಚಿತ್ರದ ಹೈಲೈಟ್!

    RRR ಕ್ಲೈಮ್ಯಾಕ್ಸ್ ಚಿತ್ರದ ಹೈಲೈಟ್!

    ರಾಜಮೌಳಿ ಸಿನಿಮಾಗಳಲ್ಲಿ ಕ್ಲೈಮ್ಯಾಕ್ಸ್ ಹೈಲೈಟ್. ಸಿನಿಮಾ ಶುರುವಿನಿಂದ ಹಿಡಿದು, ಕೊನೆಯ ತನಕ ಏನಾಗುತ್ತದೆ ಎನ್ನುವ ಕುತೂಹಲವನ್ನು ಸಾಮಾನ್ಯವಾಗಿ ಕಟ್ಟಿಕೊಟ್ಟಿರುತ್ತಾರೆ ರಾಜಮೌಳಿ. ಆದರೆ ಸಿನಿಮಾ ಕ್ಲೈಮ್ಯಾಕ್ಸ್ ಮಾತ್ರ ಊಹೆಯನ್ನು ಮೀರಿದ್ದಾಗಿರುತ್ತದೆ. ಅಂತೆಯೇ RRR ಚಿತ್ರದ ಕ್ಲೈಮ್ಯಾಕ್ಸ್ ಕೂಡ ಅತ್ಯಂತ ರೋಚಕತೆಯಿಂದ ಕೂಡಿದೆ. ಹ್ಯಾಪಿ ಎಂಡಿಂಗ್ ಆದರೂ ಕೂಡ ಊಹೆಗೂ ಮೀರಿದ ಟ್ವಿಸ್ಟ್ ಕ್ಲೈಮ್ಯಾಕ್ಸ್‌ನಲ್ಲಿ ಇದೆ. ಇದು ರಾಜಮೌಳಿ ನಿರ್ದೇಶನದ ಕಲೆಗೆ ಹಿಡಿದ ಕನ್ನಡಿ ಎನ್ನಬಹುದು.

    RRR Twitter Review: ಟ್ವಿಟರ್‌ನಲ್ಲೂ ಬೆಂಕಿ ಹಚ್ಚಿದ ರಾಜಮೌಳಿ 'RRR'RRR Twitter Review: ಟ್ವಿಟರ್‌ನಲ್ಲೂ ಬೆಂಕಿ ಹಚ್ಚಿದ ರಾಜಮೌಳಿ 'RRR'

    RRRನಲ್ಲಿ ಅದ್ದೂರಿ ದೃಶ್ಯ ವೈಭವ!

    RRRನಲ್ಲಿ ಅದ್ದೂರಿ ದೃಶ್ಯ ವೈಭವ!

    ಬಾಹುಬಲಿ ಸಿನಿಮಾವನ್ನು ತಲೆಯಲ್ಲಿ ಇಟ್ಟುಕೊಂಡು RRR ಚಿತ್ರವನ್ನು ನೋಡಲು ಬರುವವರಿಗೆ ರಾಜಮೌಳಿ ನಿರಾಸೆ ಮಾಡಿಲ್ಲ. ಕಥೆಯನ್ನು ಚೆನ್ನಾಗಿ ಕಟ್ಟಿ ಕೊಡುವುದರ ಜೊತೆಗೆ ಸಿನಿಮಾದಲ್ಲಿ ಅದ್ಭುತ ದೃಶ್ಯ ವೈಭವವನ್ನು ಸೃಷ್ಟಿಸಿದ್ದಾರೆ. ಬಾಹುಬಲಿ ಸಿನಿಮಾದ ಮಾದರಿಯಲ್ಲಿ ಈ ಚಿತ್ರದಲ್ಲೂ ದೃಶ್ಯ ವೈಭವ ಇದೆ. ಏನಿಲ್ಲ ಅಂದರೂ ಸಿನಿಮಾದಲ್ಲಿ ಕಟ್ಟಿಕೊಡಲಾದ ಅದ್ಭುತ ದೃಶ್ಯಾವಳಿಗಳನ್ನು ನೋಡಲೆಂದೆ ಸಿನಿಮಾ ನೋಡಬಹುದು. ಅಷ್ಟರ ಮಟ್ಟಿಗೆ RRR ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

    English summary
    Here Is 3 Reasons To Dont Miss Watching RRR Movie In Theaters.
    Friday, March 25, 2022, 13:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X