Yash: ಬಾಲಿವುಡ್ ಲೆಕ್ಕಾಚಾರ ತಲೆಕೆಳಗೆ ಮಾಡಿದ ಸೌತ್ ನಟರು ಇವರೇ!

ಒಂದು ಮಾತಿತ್ತು. ಬಾಲಿವುಡ್ ಸಿನಿಮಾಗಳ ಮುಂದೆ ಯಾವ ಚಿತ್ರಗಳು ಅಬ್ಬರಿಸಲು ಸಾಧ್ಯವಿಲ್ಲ ಎಂದು. ಬಾಲಿವುಡ್ ಸಿನಿಮಾಗಳೆ ಜನರ ಮೋಸ್ಟ್ ಫೇವರಿಟ್. ಬಾಲಿವುಡ್ ಚಿತ್ರಗಳನ್ನು ಯಾರು ಬೀಟ್ ಮಾಡಲು ಸಾಧ್ಯವಿಲ್ಲ ಎನ್ನುವ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿತ್ತು.

ಆದರೇ ಈಗ ಕಾಲ ಬದಲಾಗಿದೆ. ಬಿಟೌನ್ ಸಿನಿಮಾಗಳ ಅಬ್ಬರ ಕಮ್ಮಿ ಆಗಿದೆ. ಸೌತ್ ಸಿನಿಮಾಗಳು ಹಿಂದಿ ಭಾಷೆಯಲ್ಲಿ ಮಾಡುತ್ತಿರುವ ಕಮಾಲ್ ಮುಂದೆ ಹಿಂದಿ ಚಿತ್ರಗಳ ಹವಾ ಕಮ್ಮಿ ಆಗಿದೆ.

ಹಾಗಿದ್ದರೆ ಸೌತ್ ಹೀರೋಗಳು ಯಾರ್ಯಾರು ಹಿಂದಿಯಲ್ಲಿ ಕಮಾಲ್ ಮಾಡಿದ್ದಾರೆ, ಸೌತ್ ಸಿನಿಮಾಗಳಿಗೆ ಇದು ಹೇಗೆ ಸಾದ್ಯವಾಯ್ತು ಇದೆಲ್ಲದರ ಬಗ್ಗೆ ಒಂದು ಸಣ್ಣ ವರದಿ ಮುಂದೆ ಇದೆ ನೋಡಿ .

ರಜನಿಯ ಈ ಸಿನಿಮಾ ಸಖತ್ ಫೇವರಿಟ್

ರಜನಿಯ ಈ ಸಿನಿಮಾ ಸಖತ್ ಫೇವರಿಟ್

ಬಾಲಿವುಡ್‌ನಲ್ಲಿ ಖಾನ್‌ಗಳ ಅಬ್ಬರ ಇದೀಗ ಕಮ್ಮಿ ಆಗಿದೆ. ಅದೆಷ್ಟೇ ಸಿನಿಮಾಗಳನ್ನು ಮಾಡಿದ್ರು ಅಲ್ಲಿನ ಜನರನ್ನೇ ಹೆಚ್ಚು ಥಿಯೇಟರ್‌ಗೆ ಸೆಳೆಯಲು ಹಿಂದಿ ಚಿತ್ರಗಳು ವಿಫಲವಾಗುತ್ತಿದೆ. ಸಾಲು ಸಾಲು ಚಿತ್ರಗಳು ರಿಲೀಸ್ ಆದರೂ ಒಂದು ಕೂಡ ಬ್ಲಾಕ್ ಬಸ್ಟರ್ ಹಿಟ್ ಅನ್ನುವ ಸಾಕ್ಷಿಗಳೇ ಇಲ್ಲ. ಇನ್ನು ಹಿಂದಿ ಸಿನಿಮಾಗಳ ಅಬ್ಬರ ಇದ್ದಾಗಲೇ ಹಿಂದಿ ಭಾಷೆಯಲ್ಲಿ ಸೈ ಎನ್ನಿಸಿಕೊಂಡವರು ನಟ ತಲೈವಾ ರಜನಿ ಕಾಂತ್. ಹೌದು ರಜನಿಕಾಂತ್ ಸಾಕಷ್ಟು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೇ ಅಕ್ಷಯ್ ಕುಮಾರ್ ಮತ್ತು ರಜಿನಿಕಾಂತ್ ಕಾಂಬಿನೇಷನ್‌ನಲ್ಲಿ ಬಂದ '2.0' ಚಿತ್ರ ಮೊದಲಿಗೆ ಹಿಂದಿಯಲ್ಲಿ ಸಖತ್ ಮೋಡಿ ಮಾಡಿತ್ತು. 500ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಚಿತ್ರ ಹಿಂದಿ ಭಾಷೆಯಲ್ಲಿ ಒಂದರಲ್ಲೆ 200ಕೋಟಿ ಕಲೆಕ್ಷನ್ ಮಾಡಿತ್ತು. ಈ ಮೂಲಕ ನಟ ರಜನಿಕಾಂತ್ ಸೌತ್ ಸಿನಿಮಾದ ಮೂಲಕ ಹಿಂದಿಯಲ್ಲಿ ಮೋಡಿ ಮಾಡಿದ್ರು.

ಬಾಹುಬಲಿ ಚಿತ್ರದಿಂದ ಪ್ಯಾನ್ ಇಂಡಿಯಾ ನಟ

ಬಾಹುಬಲಿ ಚಿತ್ರದಿಂದ ಪ್ಯಾನ್ ಇಂಡಿಯಾ ನಟ

ತದನಂತರದಲ್ಲಿ ಬಂದ ತೆಲುಗು ಬ್ಲಾಕ್ ಬಸ್ಟರ್ ಸಿನಿಮಾ 'ಬಾಹುಬಲಿ' ಚಿತ್ರ ಸೌತ್‌ನಲ್ಲಿ ಎಷ್ಟು ಜನಮೆಚ್ಚುಗೆ ಪಡೆಯಿತೊ ಅಂತೆಯೆ ಹಿಂದಿ ಸಿನಿ ಪ್ರಿಯರನ್ನು ತನ್ನಡೆಗೆ ಸೆಳೆಯುವಲ್ಲಿ ಸಕ್ಸಸ್ ಆಗಿತ್ತು. ಪ್ಯಾನ್ ಇಂಡಿಯಾ ಸಿನಿಮಾವಾಗಿ ಎಲ್ಲೆಡೆ ರಿಲೀಸ್ ಆದ ಈ ಚಿತ್ರದಿಂದ ನಟ ಪ್ರಭಾಸ್ ಬಾಲಿವುಡ್‌ನಲ್ಲಿ ಗುರುತಿಸಿಕೊಂಡರು. ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಎರಡೂ ಭಾಗಗಳಾಗಿ ಬಂದ 'ಬಾಹುಬಲಿ' ಚಿತ್ರಗಳು ಹಿಂದಿಯಲ್ಲಿ ತನ್ನದೇ ಆದ ಚಾಪು ಮೂಡಿಸಿತ್ತು. ಅಲ್ಲದೇ ಪ್ರಭಾಸ್ ಕೂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡರು. ಈ ಸಿನಿಮಾದಿಂದ ಪ್ರಭಾಸ್‌ಗೆ 'ಸಾಹೋ' ಸಿನಿಮಾದಿಂದ ಅವಕಾಶ ಕೂಡ ಬಂತು. 'ಸಾಹೋ' ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಸೌಂಡ್ ಆಗಲಿಲ್ಲ. ಆದರೆ 'ಬಾಹುಬಲಿ' ಸಿನಿಮಾ ಮೂಲಕ ನಟ ಪ್ರಭಾಸ್ ಮಾತ್ರ ಸಖತ್ ಶೈನ್ ಆದರು.

'ಕೆಜಿಎಫ್ 2' ಟ್ರೈಲರ್ ಹಿಂದಿಯಲ್ಲೆ ಹೆಚ್ಚಿನ ವೀವ್ಸ್

'ಕೆಜಿಎಫ್ 2' ಟ್ರೈಲರ್ ಹಿಂದಿಯಲ್ಲೆ ಹೆಚ್ಚಿನ ವೀವ್ಸ್

'ಬಾಹುಬಲಿ' ಪಾರ್ಟ್ ಒಂದು ಮತ್ತು ಎರಡು ರಿಲೀಸ್ ಬೆನ್ನಲ್ಲೆ ಮತ್ತೆ ಬಾಲಿವುಡ್‌ನಲ್ಲಿ ದಾಳಿ ಮಾಡಿದ್ದು ಕನ್ನಡದ ಕೆಜಿಎಫ್ ಪಾರ್ಟ್ 1. ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಯಶ್ ಅಭಿನಯದ ಈ ಸಿನಿಮಾ ವರ್ಲ್ಡ್ ವೈಡ್ ಇಷ್ಟು ಹೆಸರುವಾಸಿ ಆಗುತ್ತೆ ಅಂತ ಯಾರು ಅಂದುಕೊಂಡಿರಲಿಲ್ಲಾ. ಆದರೆ ಚಿತ್ರ ರಿಲೀಸ್ ಆಗಿ ಎಲ್ಲೆಡೆ ಉತ್ತಮ ಪ್ರಸಂಶೆ ಪಡೆಯಿತು. ಈ ಸಿನಿಮಾ ಮೂಲಕ ನಟ ರಾಕಿಂಗ್ ಸ್ಟಾರ್ ಯಶ್ ಎಲ್ಲೆಡೆ ರಾಖಿ ಬಾಯ್ ಎಂದೇ ಪ್ರಖ್ಯಾತರಾದರೂ. ಹಿಂದಿ ನಾಡಿನಲ್ಲಂತೂ ಯಶ್ ಅವರಿಗೆ ಈಗ ದೊಡ್ಡ ಅಭಿಮಾನಿ ಬಳಗವೆ ಇದೆ. 'ಕೆಜಿಎಫ್ ಪಾರ್ಟ್ 1' ಮೂಲಕ ಗುರುತಿಸಿಕೊಂಡ ನಟ ಯಶ್ ಅವರ 'ಕೆಜಿಎಫ್ ಪಾರ್ಟ್‌ 2' ಗಾಗಿ ಅದೆಷ್ಟೋ ಮಂದಿ ಕಾದು ಕೂತಿದ್ದಾರೆ. ಅದರಲ್ಲೂ ಇತ್ತೀಚೆಗೆ ರಿಲೀಸ್ ಆಗ 'ಕೆಜಿಎಫ್ 2' ಟ್ರೈಲರ್ ಹಿಂದಿಯಲ್ಲೆ ಹೆಚ್ಚಿನ ವೀವ್ಸ್ ಕೂಡ ಪಡೆದುಕೊಂಡಿದೆ.

ಹಿಟ್ ಆದ 'ಪುಷ್ಪ' ಸಿನಿಮಾ

ಹಿಟ್ ಆದ 'ಪುಷ್ಪ' ಸಿನಿಮಾ

ಇನ್ನು ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಾದರಿಯಲ್ಲಿ ರಿಲೀಸ್ ಆಗಿ ಎಲ್ಲಾ ಭಾಷೆಯಲ್ಲೂ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಅಲ್ಲದೆ ಬಾಲಿವುಡ್ ಸಿನಿಮಾಗಳ ರುಚಿಯಿಂದ ಹೊರ ಬರದೆ ಇದ್ದ ಅದೆಷ್ಟೊ ಮಂದಿಗೆ 'ಪುಷ್ಪ' ಸಿನಿಮಾ ಬೇರೆಯದ್ದೇ ಟೇಸ್ಟ್ ಪರಿಚಯಿಸಿದೆ. 'ಪುಷ್ಪ' ಸಿನಿಮಾ ಮೂಲಕ ಸೌತ್ ಸಿನಿಮಾಗಳ ಬಗ್ಗೆ ಹಿಂದಿ ಆಡಿಯನ್ಸ್ ಹೆಚ್ಚು ಒಲವನ್ನು ತೋರಿಸಲು ಆರಂಭಿಸಿದ್ದಾರೆ. ಈ ಸಿನಿಮಾದ ಮೂಲಕ ನಟ ಅಲ್ಲು ಅರ್ಜುನ್ ಹಿಂದಿ ನಾಡಿನಲ್ಲಿ ತನ್ನದೇ ಛಾಪು ಮೂಡಿಸಿರೋದಂತು ಸುಳ್ಳಲ್ಲ.

Recommended Video

KGF 2 ಮೊದಲ ದಿನದ ಕಲೆಕ್ಷನ್ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಪತ್ರಕರ್ತ | Yash | Raveena Tandon
ಸೌತ್ ಸಿನಿಮಾಗಳಿಗಾಗಿ ಎದುರು ನೋಡುತ್ತಿದ್ದಾರೆ

ಸೌತ್ ಸಿನಿಮಾಗಳಿಗಾಗಿ ಎದುರು ನೋಡುತ್ತಿದ್ದಾರೆ

'ಬಾಹುಬಲಿ' ನಂತದ 'RRR' ಸಿನಿಮಾ ಮೂಲಕ ಮತ್ತೆ ರಾಜಮೌಳಿ ಹಿಂದಿ ಭಾಷೆಯಲ್ಲಿ ಮೋಡಿ ಮಾಡಿದ್ದಾರೆ. 'RRR' ಸಿನಿಮಾ ಮೂಲಕ ಈ ಸಿನಿಮಾದ ನಟರುಗಳಾದ ರಾಮ್ ಚರಣ್ ಮತ್ತು ಜೂ.ಎನ್‌ಟಿಆರ್ ಕೂಡ ಬಾಲಿವುಡ್ ಪ್ರೇಕ್ಷಕರ ಮನಗೆದ್ದಿದ್ದಾರೆ. ಬಾಲಿವುಡ್ ಸಿನಿಮಾಗಳನ್ನು ಬಿಟ್ಟು ಇದೀಗ ಅದೆಷ್ಟೊ ಮಂದಿ 'RRR' ಕ್ರೇಜ್ ಗೆ ಒಳಗಾಗಿದ್ದಾರೆ. ಸೌತ್‌ನಲ್ಲಿ ಇಷ್ಟು ಅದ್ಭುತ ಸಿನಿಮಾಗಳು ಬರುತ್ತಾ ಎಂದು ಅಚ್ಚರಿಗೊಳಗಾಗಿದ್ದಾರೆ. ಜೊತೆಗೆ ಮತ್ತಷ್ಟು ಸೌತ್ ಸಿನಿಮಾಗಳಿಗಾಗಿ ಬಾಲಿವುಡ್ ಮಂದಿ ಎದುರು ನೋಡುತ್ತಿದ್ದಾರೆ. ಈ ಬೆಳವಣಿಗೆಗಳನ್ನು ಕಂಡು ಬಾಲಿವುಡ್ ಸ್ಟಾರ್ಸ್ ತಲೆಕೆಡಿಸಿಕೊಂಡಂತಿದೆ.

More from Filmibeat

English summary
The manner in which south films are getting wide release and even being appreciated through box office numbers shows what kind of a craze our films have in Hindi these days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X