Don't Miss!
- News
'ದೇವರ' ಲೋಕ ಈ 'ಮನೆ'; ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರಿಲ್ಲ
- Sports
SL-w vs IND-w 2ನೇ ಟಿ20: ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಕೌರ್ ಪಡೆ; ಪಂದ್ಯ ಯಾವಾಗ, ಎಲ್ಲಿ?
- Finance
ಡೇಟಿಂಗ್ ಆಪ್ ಪರಿಚಯ: ಯುವತಿಗೆ ರೂಪಾಯಿ 5.7 ಕೋಟಿ ನೀಡಿದ ಬ್ಯಾಂಕ್ ಮ್ಯಾನೇಜರ್ ಬಂಧನ
- Automobiles
ಹೇಗಿವೆ ಗೊತ್ತಾ ರಾಯಲ್ ಎನ್ಫೀಲ್ಡ್ ಕಸ್ಟಮೈಸ್ಡ್ ಬೈಕ್ಗಳು: ಅಭಿಮಾನಿಗಳಿಗಾಗಿ 4 ಮಾದರಿಗಳ ಪ್ರದರ್ಶನ
- Education
BECIL Recruitment 2022 : 44 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಆಪಲ್ನಿಂದ ಬ್ಯಾಕ್ ಟು ಸ್ಕೂಲ್ ಪ್ರೋಗ್ರಾಂ ಘೋಷಣೆ! ಏನೆಲ್ಲಾ ಡಿಸ್ಕೌಂಟ್?
- Lifestyle
ಪುರುಷರಲ್ಲಿ ಲೈಂಗಿಕ ಶಕ್ತಿಯ ಸಮಸ್ಯೆಗೆ ಈ ಹಣ್ಣುಗಳೇ ಪವರ್ಫುಲ್ ಮದ್ದು
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಪವಿತ್ರ ಲೋಕೇಶ್, ಸುಚೇಂದ್ರ ಪ್ರಸಾದ್ ನಡುವೆ ಆಗಿದಿದ್ದೇನು? ಯಾರು ಈ ನರೇಶ್!
ಸದ್ಯ ಎಲ್ಲೆಲ್ಲೂ ಪವಿತ್ರ ಲೋಕೇಶ್ ಅವರ ಮದುವೆ ವಿಚಾರ ಜೋರಾಗಿ ಸದ್ದು ಮಾಡುತ್ತಾ ಇದೆ. ಪವಿತ್ರ ಲೋಕೆಶ್ ತೆಲುಗು ನಟನನ್ನು ಮದುವೆ ಆಗಿದ್ದಾರೆ ಎನ್ನುವ ವಿಚಾರ ಸಖತ್ ಸೌಂಡ್ ಮಾಡುತ್ತಿದೆ. ಕನ್ನಡ ಚಿತ್ರರಂಗದ ಪೋಷಕ ನಟಿ ಪವಿತ್ರ ಲೋಕೇಶ್ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಅಣ್ಣನ ಜೊತೆ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ನರೇಶ್ ಹಾಗೂ ಪವಿತ್ರ ಲೋಕೇಶ್ ಇಬ್ಬರು ಒಟ್ಟಿಗೆ ಮಹಾಬಲೇಶ್ವರಕ್ಕೆ ತೆರಳಿದ್ದಾರೆ. ಅಲ್ಲಿನ ಸ್ವಾಮಿಗಳ ಬಳಿ ಆಶೀರ್ವಾದ ಕೂಡ ಪಡೆದುಕೊಂಡು ಬಂದಿದ್ದಾರಂತೆ. ಮಹಾಬಲೇಶ್ವರ ಭೇಟಿ ಬೆನ್ನಲ್ಲೆ ಇವರ ಮದುವೆ ಗಾಸಿಪ್ ಹಬ್ಬಿದೆ.

ಕನ್ನಡದ ಪೋಷಕ ಕಲಾವಿದ ಸುಚೇಂದ್ರ ಪ್ರಸಾದ್ ಅವರ ಜೊತೆ ಪವಿತ್ರಾ ಲೋಕೇಶ್ ಖುಷಿ ಖುಷಿಯಾಗಿಯೇ ಇದ್ದಾರೆ ಎಂದು ನಂಬಲಾಗಿತ್ತು. ಇದ್ದಕ್ಕಿದ್ದ ಹಾಗೆ ಪವಿತ್ರ ಲೋಕೇಶ್ ಮತ್ತೊಂದು ಮದುವೆಯಾಗಿದ್ದಾರೆ ಎಂದ ಸುದ್ದಿ ಬಂದಿದ್ದು, ಇದು ಎಲ್ಲರಿಗೂ ಶಾಕ್ ಕೊಟ್ಟಿದೆ. ಅಷ್ಟಕ್ಕೂ ಪವಿತ್ರಾ ಲೋಕೇಶ್ ಹಾಗೂ ಸುಚೇಂದ್ರ ಪ್ರಸಾದ್ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಪವಿತ್ರ ಲೋಕೇಶ್-ಸುಚೇಂದ್ರ ಪ್ರಸಾದ್ ಎರಡನೇ ಮದುವೆ!
2007ರಲ್ಲಿ ಸಹ ನಟರಾದ ಸುಚೇಂದ್ರ ಪ್ರಸಾದ್ ಮತ್ತು ಪವಿತ್ರ ಲೋಕೇಶ್ ವಿವಾಹವಾಗಿದ್ದಾರೆ. ಇನ್ನು ಇಬ್ಬರೂ ಕೂಡ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ. 2007ರಲ್ಲಿ ಮದುವೆಯಾದ ಈ ಜೋಡಿಗೆ ಇದು ಎರಡನೆಯ ಮದುವೆ. ಅಂದರೆ ಇಬ್ಬರಿಗೂ ಕೂಡ ಇದು ಎಡನೆಯ ಮದುವೆ. ಇವರಿಗೆ ಇಬ್ಬರು ಮುದ್ದಾದ ಮಕ್ಕಳು ಸಹ ಇದ್ದಾರೆ. ಇಬ್ಬರ ಮಕ್ಕಳ ಜೊತೆಗೆ ಸಳ ಸುಂದರ ಜೀವನ ನಡೆಸುತ್ತಿದ್ದ ಇವರ ನಡುವೆ ಈಗ ಬಿರುಕು ಮೂಡಿರುವ ಸುದ್ದಿ ಹಬ್ಬಿದೆ.
ನಾಗಚೈತನ್ಯ,
ಶೋಭಿತಾ
ಡೇಟಿಂಗ್
ಬಗ್ಗೆ
ಸಮಂತಾ
ಬೇಸರ:
ಅಚ್ಚರಿಯಾಗಿದೆ
ಬೇಸರದ
ಕಾರಣ!

ದಾಂಪತ್ಯದಲ್ಲಿ ಬಿರುಕು ಮುಡಿದ್ದೇಕೆ?
ಕೆಲವೊಂದು ಮಾಹಿತಿಗಳ ಪ್ರಕಾರ ಕೆಲ ವರ್ಷಗಳಿಂದ ಸುಚೇಂದ್ರ ಪ್ರಸಾದ್ ಹಾಗೂ ಪವಿತ್ರ ಲೋಕೇಶ್ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಅವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡುವುದಕ್ಕೆ ಸುಚೇಂದ್ರ ಪ್ರಸಾದ್ ಅವರ ಕೋಪವೇ ಕಾರಣ ಎನ್ನುವ ಗುಸು-ಗುಸು ಕೂಡ ಕೇಳಿ ಬರುತ್ತಿದೆ. ಹಲವು ವರ್ಷಗಳಿಂದ ಈ ಜೋಡಿ ದೂರ ದೂರ ವಾಸ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಈಗ ಬೆಳಕಿಗೆ ಬಂದಿದೆ.

ಇಷ್ಟ ಪಟ್ಟು ಮದುವೆ ಆದ ಜೋಡಿ!
ಸುಚೇಂದ್ರ ಪ್ರಸಾದ್ ಅಪ್ಪಟ ಕನ್ನಡದ ನಟ. ಸ್ಪಷ್ಟವಾಗಿ ಕನ್ನಡ ಮಾತನಾಡಿ ನಟಿಸುವವರು ಯಾರಾದರೂ ಇದ್ದರೆ ಅದು ಸುಚೇಂದ್ರ ಪ್ರಸಾದ್ ಮಾತ್ರ. ಸಿನಿಮಾಗಳಲ್ಲಿ ಅಷ್ಟೇ ಅಲ್ಲ, ವೈಯಕ್ತಿಕವಾಗಿಯೂ ಕನ್ನಡ ಅಂದರೆ ಅವರಿಗೆ ಗೌರವ. ಬೇರೆ ಯಾವ ಭಾಷೆಯನ್ನು ಸುಚೇಂದ್ರ ಪ್ರಸಾದ್ ಬಳಸಲ್ಲ. ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಪವಿತ್ರ ಲೋಕೇಶ್ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳ ಮೂಲಕವೇ ಪರಸ್ಪರ ಭೇಟಿ ಆಗಿ ಮದುವೆ ಆಗಿದ್ದಾರೆ ಈ ಜೋಡಿ.
ಮತ್ತೆ
ಬಾಲಿವುಡ್ಗೆ
ಎಂಟ್ರಿ
ಕೊಟ್ಟ
ರಾಮ್
ಚರಣ್:
ಈ
ಬಾರಿ
ಸ್ಟಾರ್
ನಟನ
ಜೊತೆ

ನರೇಶ್ ಯಾರು?
ಪವಿತ್ರ ಲೋಕೇಶ್ ಅವರೆ ಜೊತೆಗೆ ನಟ ನರೇಶ್ ಹೆಸರು ಕೇಳಿ ಬರುತ್ತಿದೆ. ಈ ನರೇಶ್, ತೆಲುಗಿನ ಸೂಪರ್ ಸ್ಟಾರ್ ಕೃಷ್ಣ ಅವರ ಮಗ. ಮಹೇಶ್ ಬಾಬು ತಂದೆ ಕೃಷ್ಣ ಅವರ ಎರಡನೇ ಹೆಂಡತಿ ಮಗ ಈ ನರೇಶ್. ಕೃಷ್ಣ ಅವರ ಎರಡನೇ ಹೆಂಡತಿ ವಿಜಯ ನಿರ್ಮಲ. ವಿಜಯ ನಿರ್ಮಲ ಮತ್ತು ಅವರ ಮೊದಲ ಪತಿ ಕೆ.ಎಸ್ ಮೂರ್ತಿ ಅವರ ಮಗ ನರೇಶ್. ಕೆ.ಎಸ್ ಮೂರ್ತಿ ಜೊತೆ ಡಿವೋರ್ಸ್ ಪಡೆದು ಕೃಷ್ಣ ಅವರನ್ನು ಮದುವೆಯಾಗಿದ್ದರು ವಿಜಯ ನಿರ್ಮಲ.