ತೆಲುಗು ನಟ ನಾಗ ಶೌರ್ಯ ತಂದೆ ಬಂಧನ- ಜಾಮೀನು ಪಡೆದು ರಿಲೀಸ್!
ತೆಲುಗು ನಟ ನಾಗ ಶೌರ್ಯ ಅವರ ತಂದೆ ಶಿವಲಿಂಗ ಪ್ರಸಾದ್ ಅವರನ್ನು ಹೈದರಾಬಾದ್ ಪೊಲೀಸರು ಬುಧವಾರ ಬಂಧಿಸಿದ್ದರು. ಅವರ ತೋಟದ ಮನೆಯಲ್ಲಿ ಇತ್ತೀಚೆಗೆ ನಡೆದ ಜೂಜು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಲಿಂಗ ಪ್ರಸಾದ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ನಾಗ ಶೌರ್ಯ ಅವರ ತಂದೆ ಶಿವಲಿಂಗ ಪ್ರಸಾದ್ ಮತ್ತು ಪ್ರಮುಖ ಆರೋಪಿ ಗುತ್ತಾ ಸುಮನ್ ಚೌಧರಿ ಅವರು ಭೋಗ್ಯಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾದ ಮಂಚಿರೇವುಳ ಫಾರ್ಮ್‌ಹೌಸ್‌ನಲ್ಲಿ ಜೂಜಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಒಟಿ ಪೊಲೀಸರು ಈಗಾಗಲೇ ಹಲವರನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆ ನಂತರ ಶಿವಲಿಂಗ ಪ್ರಸಾದ್, ಕಿಂಗ್ ಪಿನ್ ಗುತ್ತಾ ಸುಮನ್ ಜೊತೆ ಅಕ್ರಮವಾಗಿ ಜೂಜು ದಂಧೆ ನಡೆಸುತ್ತಿದ್ದರು ಎಂಬುದಕ್ಕೆ ಪುರಾವೆಗಳು ಸಿಕ್ಕಿರುವ ಸಲುವಾಗಿ ಪೊಲೀಸರು ಆತನನ್ನು ಬಂಧಿಸಿ, ಉಪ್ಪರಪಳ್ಳಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇದೇ ವೇಳೆ ಶಿವಲಿಂಗ ಪ್ರಸಾದ್ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ನಂತರ ಶಿವಲಿಂಗ ಪ್ರಸಾದ್‌ಗೆ ಜಾಮೀನು ಸಿಕ್ಕಿದೆ ಎಂಬ ಸುದ್ದಿ ಕೇಳಿ ಬಂದಿದೆ.

ಕೆಲ ದಿನಗಳ ಹಿಂದೆ ಹೈದರಾಬಾದ್ ಪೊಲೀಸರು ಅಕ್ರಮ ಚಟುವಟಿಕೆಗಳ ಮಾಹಿತಿ ಮೇರೆಗೆ ಹೈದರಾಬಾದ್ ನಗರದ ಹೊರ ವಲಯದಲ್ಲಿರುವ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ್ದರು. ವಿವರವಾಗಿ ತನಿಖೆ ನಡೆಸಿದಾಗ, ಫಾರ್ಮ್ ಹೌಸ್ ಅನ್ನು ಯುವ ಟಾಲಿವುಡ್ ಹೀರೋ ನಾಗ ಶೌರ್ಯ ತಂದೆ ಶಿವಲಿಂಗ ಪ್ರಸಾದ್ ಭೋಗ್ಯಕ್ಕೆ ಪಡೆದಿದ್ದಾರೆ ಎಂದು ಪೊಲೀಸರಿಗೆ ತಿಳಿದುಬಂದಿದೆ. ಪ್ರಾಥಮಿಕ ತನಿಖೆ ನಂತರ ಪೊಲೀಸರು ನಾಗ ಶೌರ್ಯ ತಂದೆ ಶಿವಲಿಂಗ ಪ್ರಸಾದ್ ಅವರಿಗೆ ನೋಟಿಸ್ ಜಾರಿ ಮಾಡಿದ್ದರು

ಶಿವಲಿಂಗ ಪ್ರಸಾದ್ ಮತ್ತು ಪ್ರಮುಖ ಆರೋಪಿ ಗುತ್ತಾ ಸುಮನ್ ಅವರನ್ನು ವಿಚಾರಣೆ ನಡೆಸಿದ ಪೊಲೀಸರು, ಮಾಜಿ ಆರೋಪಿಗಳನ್ನು ಬಂಧಿಸಿದ್ದರು. ಗುತಾ ಸುಮನ್ ಮತ್ತು ಶಿವಲಿಂಗ ಪ್ರಸಾದ್ ಅವರು ಜಂಟಿಯಾಗಿ ಖಾಸಗಿ ಫಾರ್ಮ್ ಹೌಸ್‌ನಲ್ಲಿ ಜೂಜು ನಡೆಸುತ್ತಿದ್ದಾರೆ ಎನ್ನುವುದು ಪೊಲೀಸರಿಗೆ ಗೊತ್ತಾಗಿದೆ.ನಾಗ ಶೌರ್ಯ ಅವರು ತಮ್ಮ ತಂದೆಯ ಬಂಧನದಿಂದ ತೀವ್ರವಾಗಿ ಅಸಮಾಧಾನ ಗೊಂಡಿದ್ದಾರೆ. ಆದರೆ ಈ ಪ್ರಕರಣದ ಬಗ್ಗೆ ನಟ ನಾಗ ಶೌರ್ಯ ಪ್ರತ್ರಿಕ್ರಿಯೆ ನೀಡಿಲ್ಲ.


Click it and Unblock the Notifications











