ಪ್ರಭಾಸ್ ನಟನೆಯ 'ಸ್ಪಿರಿಟ್' ಚಿತ್ರದ ನಾಯಕಿ ಸಂಭಾವನೆ ₹20 ಕೋಟಿ!

ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಶುರುವಾದ ಬಳಿಕ ನಟ, ನಟಿಯರ ಸಂಭಾವನೆ ಜಾಸ್ತಿಯಾಗಿದೆ. 5 ಕೋಟಿ 10 ಕೋಟಿ ದಾಟಿ ನಾಯಕ ನಟರು ನೂರಾರು ಕೋಟಿ ಸಂಭಾವನೆ ಜೇಬಿಗಿಳಿಸುತ್ತಿದ್ದಾರೆ. ನಾಯಕನ ರೇಂಜಿಗೆ ಅಲ್ಲದೇ ಇದ್ದರೂ ನಟಿಯರ ಸಂಭಾವನೆ ಕೂಡ ಹಲವು ಪಟ್ಟು ಹೆಚ್ಚಾಗಿದೆ.

ಸದ್ಯ ಪ್ರಭಾಸ್ ಹೀರೊ ಆಗಿ 'ಸ್ಪಿರಿಟ್' ಎಂಬ ಸಿನಿಮಾ ನಿರ್ಮಾಣವಾಗುತ್ತಿದೆ. ಸಂದೀಪ್ ರೆಡ್ಡಿ ವಂಗಾ ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಚಿತ್ರದ ನಾಯಕಿ ಯಾರು ಎನ್ನುವ ಬಗ್ಗೆ ಭಾರೀ ಚರ್ಚೆ ನಡೀತಿದೆ. ಪ್ರಭಾಸ್ ಜೊತೆ ಈ ಬಾರಿ ಬಾಲಿವುಡ್ ಟಾಪ್ ನಟಿ ಡ್ಯುಯಟ್ ಆಡುತ್ತಾರೆ ಎನ್ನಲಾಗ್ತಿದೆ.

Heroine of Prabhas s Spirit is reportedly being paid a salary of Rs 20 crore

'ಅರ್ಜುನ್ ರೆಡ್ಡಿ' ಹಾಗೂ 'ಅನಿಮಲ್' ರೀತಿಯ ಸೆನ್ಸೇಷನಲ್ ಸಿನಿಮಾಗಳನ್ನು ಸಂದೀಪ್ ರೆಡ್ಡಿ ವಂಗಾ ಕಟ್ಟಿ ಕೊಟ್ಟಿದ್ದರು. ಎರಡು ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅದಕ್ಕಿಂತ ಮುಖ್ಯವಾಗಿ ಸಂದೀಪ್ ಸಿನಿಮಾ ಮೇಕಿಂಗ್ ಸ್ಟೈಲ್ ಎಲ್ಲರ ಹುಬ್ಬೇರಿಸಿತ್ತು. ಸಿಕ್ಕಾಪಟ್ಟೆ ರಾ ಆಗಿ ಸಿನಿಮಾಗಳನ್ನು ಕಟ್ಟಿ ಕೊಡುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಬರುವ 'ಸ್ಪಿರಿಟ್' ಸಿನಿಮಾ ಕೂಡ ಕುತೂಹಲ ಮೂಡಿಸಿದೆ.

ಟೀ- ಸೀರಿಸ್ ಸಂಸ್ಥೆ 'ಸ್ಪಿರಿಟ್' ಚಿತ್ರವನ್ನು ನಿರ್ಮಾಣ ಮಾಡಲಿದೆ. 250 ಕೋಟಿ ರೂ. ಬಜೆಟ್‌ನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮೂಡಿ ಬರಲಿದೆ. ಪ್ರಭಾಸ್ ಸದ್ಯ 'ರಾಜಾಸಾಬ್' ಹಾಗೂ 'ಫೌಜಿ' ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆ ಬಳಿಕ 'ಸ್ಪಿರಿಟ್' ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತವಾ ಮಾಹಿತಿ ಇನ್ನು ಬಂದಿಲ್ಲ.

Heroine of Prabhas s Spirit is reportedly being paid a salary of Rs 20 crore

ಅಂದಹಾಗೆ 'ಸ್ಪಿರಿಟ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ದೀಪಿಕಾ ಪಡುಕೋಣೆ 20 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು 'ಇಂಡಿಯಾ ಟುಡೇ' ವರದಿ ಮಾಡಿದೆ. ಇತ್ತೀಚೆಗೆ ಚಿರಂಜೀವಿ ಜೊತೆ ನಟಿಸಲು ನಯನತಾರಾ 18 ಕೋಟಿ ರೂ. ಸಂಭಾವನೆ ಕೇಳಿದ್ದಾರೆ ಎಂದು ಗುಲ್ಲಾಗಿತ್ತು. ಆದರೆ ಅದೆಲ್ಲಾ ಸುಳ್ಳು ಎನ್ನುವ ಮಾತುಗಳು ಕೇಳಿಬಂದಿತ್ತು. ಇದೀಗ 'ಸ್ಪಿರಿಟ್' ಚಿತ್ರದ ದೀಪಿಕಾ ಸಂಭಾವನೆ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ.

ಕಳೆದ ವರ್ಷ ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ ದುವಾ ಪಡುಕೋಣೆ ಸಿಂಗ್ ಎಂದು ನಾಮಕರಣ ಮಾಡಿದ್ದರು. ಸದ್ಯ ಮಗಳ ಲಾಲನೆ ಪಾಲನೆಯಲ್ಲಿ ಡಿಪ್ಪಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಸಿನಿಮಾಗಳಿಂದ ಕೊಂಚ ಬಿಡುವು ಮಾಡಿಕೊಂಡಿದ್ದಾರೆ. ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಮೊದಲು ನಟಿಸಿದ್ದು ಕನ್ನಡದ 'ಐಶ್ವರ್ಯ' ಚಿತ್ರದಲ್ಲಿ. ಬಳಿಕ ಬಾಲಿವುಡ್ ಪ್ರವೇಶಿಸಿ ಸಕ್ಸಸ್ ಕಂಡರು. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಸೌತ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಪ್ರಭಾಸ್ ಜೊತೆ 'ಕಲ್ಕಿ 2898 AD' ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದರು. ಚಿತ್ರದಲ್ಲಿ ಸುಮತಿ(SUM 80) ಪಾತ್ರದಲ್ಲಿ ಮಿಂಚಿದ್ದರು. ತುಂಬು ಗರ್ಭಿಣಿ ಆಗಿದ್ದಾಗಲೂ ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಆಕೆ ಭಾಗಿ ಆಗಿದ್ದರು. 'ಸ್ಪಿರಿಟ್' ಚಿತ್ರದಲ್ಲಿ ಪ್ರಭಾಸ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಲಿದ್ದಾರೆ. ಅವರ ಮಡದಿ ಪಾತ್ರದಲ್ಲಿ ಡಿಪ್ಪಿ ನಟಿಸೋ ಸಾಧ್ಯತೆಯಿದೆ.

ಪ್ಯಾನ್ ಇಂಡಿಯಾ ಜಮಾನದಲ್ಲಿ ಸಿನಿಮಾಗಳ ಬಜೆಟ್, ಕಲಾವಿದರು- ತಂತ್ರಜ್ಞರ ಸಂಭಾವನೆ, ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್, ಓಟಿಟಿ ರೈಟ್ಸ್ ಬೆಲೆ ಎಲ್ಲವೂ ಹೆಚ್ಚಾಗಿದೆ. ಹಾಗಾಗಿ ನಟ, ನಟಿಯರ ಸಂಭಾವನೆ ವಿಚಾರ ಭಾರೀ ಕುತೂಹಲ ಮೂಡಿಸಿದೆ.

More from Filmibeat

English summary
The female lead in 'Spirit', starring Prabhas, is reportedly being paid a whopping Rs 20 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X