Hi Nanna teaser: ಅಪ್ಪ- ಮಗಳ ಭಾವನಾತ್ಮಕ ಪಯಣದಲ್ಲಿ ಗೊಂದಲದ ಹೊಸ ಪ್ರೇಮ ಕಥೆ

ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಬಹುನಿರೀಕ್ಷಿತ 30ನೇ ಸಿನಿಮಾ ಹಾಯ್ ನಾನ್ನ ಟೀಸರ್ ಭಾನುವಾರ (ಅಕ್ಟೋಬರ್ 15) ಅನಾವರಣಗೊಂಡಿದೆ. ನಟ ನಾನಿಗೆ ನಟಿ ಮೃಣಾಲ್ ಠಾಕೂರ್ ಜೋಡಿಯಾಗಿದ್ದಾರೆ. ಟೀಸರ್‌ನಲ್ಲಿ ತಂದೆ ಮತ್ತು ಮಗಳ ಬಾಂಧವ್ಯವೇ ಹೈಲೆಟ್ ಆಗಿದೆ.

ನಾನಿ ನಟಿಸುತ್ತಿರುವ 30ನೇ ಸಿನಿಮಾ ಹಾಯ್ ನಾನ್ನ. ಇತ್ತೀಚೆಗಷ್ಟೇ ಈ ಚಿತ್ರದ ಹಾಡು ಬಿಡುಗಡೆಯಾಗಿ ಭಾರೀ ಸದ್ದು ಮಾಡಿತ್ತು. ತಾಯಿ ಇಲ್ಲದ ಮಗಳಿಗೆ ಅಪ್ಪನೇ ಸರ್ವಸ್ವ. ಅಪ್ಪನಿಗೆ ಮಗಳೇ ಜೀವ. ಈ ತಂದೆ - ಮಗಳ ಮುದ್ದು ಬಾಂಧವ್ಯದ ನಡುವೆ ಎಂಟ್ರಿಯಾಗುವ ನಾಯಕಿ. ಅಲ್ಲೊಂದು ಗೊಂದಲದ ಪ್ರೇಮ ಕಥೆ.

Hi Nanna teaser: Nani film shows heartwarming sweet father-daughter bond

ಹಾಯ್ ನಾನ್ನ ಟೀಸರ್

ಸುಮಾರು ಎರಡು ನಿಮಿಷಗಳ ಅವಧಿಯ ಹಾಯ್ ನಾನ್ನ ಟೀಸರ್‌ನಲ್ಲಿ ನಾನಿ ಸಿಂಗಲ್ ಫಾದರ್ ಆಗಿ ಕಾಣಿಸಿಕೊಂಡಿದ್ದಾರೆ. ಮಗಳಾಗಿ ಬಾಲನಟಿ ಕಿಯಾರಾ ಖಾನ್ (ಮಹಿ) ಅಭಿನಯಿಸಿದ್ದಾರೆ. ಇಬ್ಬರ ನಡುವಿನ ಬಾಂಧವ್ಯ ತುಂಬಾ ಚೆನ್ನಾಗಿ ತೋಡಿಸಲಾಗಿದ್ದು, ಮೃಣಾಲ್ ಠಾಕೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಮನೆಯಲ್ಲಿ ತಂದೆ ಮತ್ತು ಮಗಳ ನಡುವಿನ ಸಂಭಾಷಣೆಯೊಂದಿಗೆ ಟೀಸರ್ ಆರಂಭವಾಗುತ್ತದೆ. ಮಹಿ ತನ್ನ ತರಗತಿಯಲ್ಲಿ ವರುಣ್ ಎಂಬ ಹುಡುಗನಿದ್ದಾನೆ ಎಂದು ಮಾತು ಶುರು ಮಾಡುತ್ತಾಳೆ. ಇದು ನಾನಿಗೆ ಶಾಕ್ ನೀಡುತ್ತದೆ. ಜೊತೆಗೆ ತನ್ನ ತಂದೆಯನ್ನು ಆತ್ಮೀಯ ಸ್ನೇಹಿತ ಎಂದು ಕರೆಯುತ್ತಾಳೆ. ಜೊತೆಗೆ ಆತ ತನ್ನ ಮೇಲೆ ಕೋಪ ಮಾಡಿಕೊಳ್ಳುವುದಿಲ್ಲ ಎಂದು ವಿವರಿಸುತ್ತಾಳೆ.

ಇಷ್ಟರ ನಡುವೆ ನಟಿ ಮೃಣಾಲ್ ಠಾಕೂರ್ ಪಾತ್ರ ಕಾಣಿಸಿಕೊಳ್ಳುತ್ತದೆ. ಆಕೆಗೆ ಈಗಾಗಲೇ ಇನ್ನೊಬ್ಬರ ಜೊತೆಗೆ ಮದುವೆ ಫಿಕ್ಸ್ ಆಗಿದ್ದು, ನಾನಿಯನ್ನು ಪ್ರೀತಿಸುವ ಗೊಂದಲದಲ್ಲಿರುವ ಯುವತಿಯ ಪಾತ್ರದಲ್ಲಿ ಚಿತ್ರಿಸಲಾಗಿದೆ.

Hi Nanna teaser: Nani film shows heartwarming sweet father-daughter bond

ಹಾಯ್ ನಾನ್ನ ಟೀಸರ್‌ಗೆ ಅಭಿಮಾನಿಗಳ ಪ್ರತಿಕ್ರಿಯೆ

ಹಾಯ್ ನಾನ್ನ ಟೀಸರ್‌ಗೆ ಅಭಿಮಾನಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಯೊಬ್ಬರು "ಎಂತಹ ಸುಂದರ ಭಾವಪೂರ್ಣ ಟೀಸರ್. ನಾನಿ ಎಂದಿನಂತೆ ಅದ್ಭುತವಾಗಿ ನಟಿಸಿದ್ದಾರೆ. ಮೃಣಾಲ್ ಠಾಕೂರ್ ಪ್ರತಿಭೆಗೆ ಉತ್ತಮ ಅವಕಾಶ ಸಿಕ್ಕಿದೆ" ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬ ನೆಟ್ಟಿಗ "ನಾನಿ ಯಾವಾಗಲೂ ಮೋಡಿ ಮಾಡುತ್ತಾರೆ. ಅವರನ್ನು ಮೃಣಾಲ್ ಜೊತೆ ನೋಡಲು ಇಷ್ಟಪಡುತ್ತೇನೆ. ತಂದೆಯಾಗಿ ಅವರು ಮತ್ತು ಅವರ ಮಗಳೊಂದಿಗಿನ ಈ ಸುಂದರ ಬಾಂಧವ್ಯ ನನ್ನನ್ನು ಕಟ್ಟಿಹಾಕುತ್ತಿದೆ. ಈ ಚಿತ್ರವನ್ನು ಪ್ರೀತಿ ಮತ್ತು ಖುಷಿಯಿಂದ ತಬ್ಬಿಕೊಳ್ಳಲು ಉತ್ಸುಕನಾಗಿದ್ದೇನೆ" ಎಂದು ಕಾಮೆಂಟ್ ಮಾಡಿದ್ದಾರೆ. "ಬ್ಯೂಟಿಫುಲ್ ಟೀಸರ್... ನಾನಿ ಮತ್ತು ಮೃಣಾಲ್ ಜೋಡಿ.. ತಂದೆ ಮತ್ತು ಮಗಳು... ಮತ್ತು ಸುಂದರವಾದ ದೃಶ್ಯಗಳು... ಈ ಚಿತ್ರಕ್ಕಾಗಿ ವೇಟಿಂಗ್...." ಎಂದು ಮತ್ತೊಬ್ಬ ಅಭಿಮಾನಿ ಹೇಳಿದ್ದಾರೆ.

ಹಾಯ್ ನಾನ್ನ ಸಿನಿಮಾ

ಹಾಯ್ ನಾನ್ನ ಸಿನಿಮಾಗೆ ಯುವ ನಿರ್ದೇಶಕ ಶೌರ್ಯುವ್ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶಕನಾಗಿ ಇದು ಅವರ ಚೊಚ್ಚಲ ಸಿನಿಮಾವಾಗಿದೆ. ಮೋಹನ್ ಚೆರುಕುರಿ, ಮೂರ್ತಿ ಕಲಗಾರ, ಡಾ. ವಿಜೇಂದ್ರ ರೆಡ್ಡಿ ಅವರು 'ವೈರ ಎಂಟರ್ಟೇನ್ಮೆಂಟ್' ಬ್ಯಾನರ್ ಮೂಲಕ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕ್ಕೆ ಸಾನೂ ಜಾನ್ ವರ್ಗೀಸ್ ಛಾಯಾಗ್ರಹಣ ಇರಲಿದ್ದು, ಹೃದಯಂ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಹಾಯ್ ನಾನ್ನ ಡಿಸೆಂಬರ್ 7ಕ್ಕೆ ಐದು ಭಾಷೆಯಲ್ಲಿ ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ.

More from Filmibeat

English summary
Hi Nanna teaser: Nani film shows heartwarming sweet father-daughter bond.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X