twitter
    For Quick Alerts
    ALLOW NOTIFICATIONS  
    For Daily Alerts

    ನಟಿ, ಶಾಸಕಿ ರೋಜಾ ಗೆ ಸಂಕಷ್ಟ: ಆಂಧ್ರ ಹೈಕೋರ್ಟ್‌ನಿಂದ ನೊಟೀಸ್

    |

    ಖ್ಯಾತ ನಟಿ, ರಾಜಕಾರಣಿ ರೋಜಾ, ಹೂಗಳಿಂದಲೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅವರಿಗೆ ನ್ಯಾಯಾಲಯವು ನೊಟೀಸ್ ಜಾರಿ ಮಾಡಿದ್ದು, ಉತ್ತರಿಸುವಂತೆ ಸೂಚಿಸಿದೆ.

    Recommended Video

    ಬಿವೈ ರಾಘವೇಂದ್ರ ಮಾಡಿದ ಕೆಲಸಕ್ಕೆ ನಟ ಅರುಣ್ ಸಾಗರ್ ಹೇಳಿದ್ದೇನು | Arun Sagar | BY Ragvendra

    ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದಿಂದ ಚುನಾವಣೆ ಗೆದ್ದು ಶಾಸಕಿಯೂ ಆಗಿರುವ ರೋಜಾ, ಇತ್ತೀಚೆಗೆ ವಿಡಿಯೋ ಒಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೇ ವಿಡಿಯೋದಿಂದಾಗಿ ಅವರು ನ್ಯಾಯಾಲಯದಿಂದ ನೊಟೀಸ್ ಎದುರಿಸುವಂತಾಗಿದೆ.

    ಶಾಸಕಿ ರೋಜಾ ಅವರನ್ನು ಏಪ್ರಿಲ್ 21 ರಂದು ಕುಡಿಯುವ ನೀರಿನ ಕೊಳಾಯಿ ಉದ್ಘಾಟನೆಗೆಂದು ಆಮಂತ್ರಿಸಲಾಗಿತ್ತು. ಲಾಕ್‌ಡೌನ್ ನಡುವೆಯೂ ಕಾರ್ಯಕ್ರಮ ರೋಜಾ ತೆರಳಿದ್ದರು. ಅಲ್ಲಿ ಅಭಿಮಾನಿಗಳು ತಮಗೆ ಕೋರಿದ ಸ್ವಾಗತದ ವಿಡಿಯೋವನ್ನು ರೋಜಾ ಹಂಚಿಕೊಂಡಿದ್ದರು. ಈ ವಿಡಿಯೋ ವಿವಾದದ ಕೇಂದ್ರಬಿಂದುವಾಗಿದೆ.

    ರೋಜಾ ಕಾಲಿಗೆ ಹೂ ಹಾಕಿದ್ದ ಅಭಿಮಾನಿಗಳು

    ರೋಜಾ ಕಾಲಿಗೆ ಹೂ ಹಾಕಿದ್ದ ಅಭಿಮಾನಿಗಳು

    ವಿಡಿಯೋದಲ್ಲಿರುವಂತೆ, ರೋಜಾ ಅವರು ಉದ್ಘಾಟನೆಗೆ ಬಂದಾಗ ಅವರ ಪಕ್ಕ ಸಾಲಾಗಿ ನಿಂತ ಜನರು ರೋಜಾ ಅವರು ಬರುತ್ತಿದ್ದ ದಾರಿಗೆ ಹೂವು ಹಾಕುತ್ತಿದ್ದರು. ಆ ವಿಡಿಯೋವನ್ನು ರೋಜಾ ಹಂಚಿಕೊಂಡಿದ್ದರು. ಇದು ಭಾರಿ ಟೀಕೆಗೆ ಗುರಿಯಾಗಿತ್ತು.

    ವಕೀಲ ಕಿಶೋರ್ ಇಂದ ದೂರು ದಾಖಲು

    ವಕೀಲ ಕಿಶೋರ್ ಇಂದ ದೂರು ದಾಖಲು

    ಅದೇ ವಿಡಿಯೋ ಆಧಾರವಾಗಿಟ್ಟುಕೊಂಡು ಶಾಸಕಿ ರೋಜಾ ಲಾಕ್‌ಡೌನ್ ಉಲ್ಲಂಘನೆ ಮಾಡಿದ್ದಾರೆಂದು ವಕೀಲ ಕಿಶೋರ್ ಎಂಬುವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು, ವಿಚಾರಣೆ ನಡೆದು ಇದೀಗ ನ್ಯಾಯಾಲಯವು ರೋಜಾ ಅವರಿಗೆ ನೊಟೀಸ್ ಜಾರಿ ಮಾಡಿದೆ. ನ್ಯಾಯಾಲಯಕ್ಕೆ ರೋಜಾ ಉತ್ತರ ನೀಡಬೇಕಾಗಿದೆ.

    ಸಾಮಾಜಿಕ ಅಂತರ ನಾಪತ್ತೆ

    ಸಾಮಾಜಿಕ ಅಂತರ ನಾಪತ್ತೆ

    ವಿಡಿಯೋದಲ್ಲಿರುವಂತೆ ಸಾಕಷ್ಟು ಮಂದಿ ಕಾರ್ಯಕ್ರಮದಲ್ಲಿ ನೆರೆದಿದ್ದು, ಸಾಮಾಜಿಕ ಅಂತರ ಇಲ್ಲವಾಗಿತ್ತು. ಕಾರ್ಯಕ್ರಮಕ್ಕೆ ಬಂದವರು ಮಾಸ್ಕ್ ಸಹ ಧರಿಸಿರಲಿಲ್ಲ. ಅಲ್ಲದೆ, ರೋಜಾ ಕಾಲಿಗೆ ಹೂವು ಹಾಕುತ್ತಿರುವುದು ಸಹ ಅತಿರೇಕ ಎಂದು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್‌ಗಳು ಬಂದಿದ್ದವು. ವಿಡಿಯೋದಿಂದ ವಿವಾದ ಉಂಟಾದ ಕಾರಣ ವಿಡಿಯೋವನ್ನು ರೋಜಾ ಡಿಲೀಟ್ ಮಾಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರೋಜಾ

    ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರೋಜಾ

    ಇನ್ನು ರೋಜಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಕೊರೊನಾ ಸಮಯದಲ್ಲಿ ತಾವು ಮಾಡುತ್ತಿರುವ ಸಹಾಯ, ಸ್ಯಾನಿಟೈಸೇಶನ್ ಕಾರ್ಯ, ಅಧಿಕಾರಿಗಳೊಂದಿಗೆ ಸಭೆಗಳು ಎಲ್ಲವನ್ನೂ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    ಕನ್ನಡದಲ್ಲಿಯೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ

    ಕನ್ನಡದಲ್ಲಿಯೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ

    ನಟಿಯಾಗಿದ್ದ ರೋಜಾ, ಕನ್ನಡದಲ್ಲಿಯೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಕಲಾವಿದ, ಸುಂದರ ಕಾಂಡ, ಗಡಿಬಿಡಿ ಗಂಡ, ಪ್ರೇಮೋತ್ಸವ, ಇಂಡಿಪೆಂಡೆನ್ಸ್ ಡೇ, ಪರ್ವ, ಮೌರ್ಯ ಸಿನಿಮಾಗಳು ಅವುಗಳಲ್ಲಿ ಕೆಲವು. ತೆಲುಗು-ತಮಿಳು ಸಿನಿರಂಗದಲ್ಲೂ ಅವರು ಖ್ಯಾತರು.

    English summary
    Andhra Pradesh high court issue notice to actress turned politician Roja over violating lockdown rules.
    Thursday, May 7, 2020, 13:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X