For Quick Alerts
  ALLOW NOTIFICATIONS  
  For Daily Alerts

  ಬಾಲಯ್ಯ ವಿರುದ್ಧ ಮಂಗಳಮುಖಿಯರಿಂದ ದೂರು? ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ?

  |

  ಟಾಲಿವುಡ್ ನಟಸಿಂಹ ಬಾಲಕೃಷ್ಣ 'ಅಖಂಡ' ಸಿನಿಮಾ ಮೂಲಕ ಬಾಕ್ಸಾಫೀಸ್ ಶೇಕ್ ಮಾಡಿದ್ದರು. ಹಿಂದೂಪುರದ ಶಾಸಕರು ಆಗಿರುವ ಬಾಲಯ್ಯ ಸಿನಿಮಾ ಶೂಟಿಂಗ್ ಜೊತೆ ಜೊತೆಗೆ ತಮ್ಮ ಕ್ಷೇತ್ರದ ಕೆಲಸಗಳನ್ನು ನಿಭಾಯಿಸುತ್ತಿದ್ದಾರೆ. ಬಾಲಕೃಷ್ಣ 107ನೇ ಸಿನಿಮಾ ಶೂಟಿಂಗ್ ವಿದೇಶಗಳಲ್ಲಿ ನಡೀತಿದೆ. ಇತ್ತ ಹಿಂದೂಪುರದ ಸ್ಥಳೀಯ ಮಂಗಳ ಮುಖಿಯರು ನಮ್ಮ ಶಾಸಕರಾದ ಬಾಲಕೃಷ್ಣ ಕಾಣಿಸುತ್ತಿಲ್ಲ ಹುಡುಕಿಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ಧಾರೆ.

  ಆಂಧ್ರದಲ್ಲಿ ಸದ್ಯ ಎನ್‌ಟಿಆರ್ ಹೆಲ್ತ್ ಯೂನಿವರ್ಸಿಟಿ ಹೆಸರನ್ನು ಬದಲಿಸುವ ವಿಚಾರಕ್ಕೆ ಸಂಬಂಧಿದಂತೆ ಭಾರೀ ಹೈಡ್ರಾಮಾ ನಡೀತಿದೆ. ಸಿಎಂ ಜಗನ್ ಮೋಹನ್ ರೆಡ್ಡಿ ಎನ್‌ಟಿಆರ್ ಹೆಲ್ತ್ ಯೂನಿವರ್ಸಿಟಿಗೆ ತಮ್ಮ ತಂದೆ ವೈಎಸ್ ರಾಜಶೇಖರ್ ರೆಡ್ಡಿ ಹೆಸರು ನಾಮಕರಣ ಮಾಡಲು ಮುಂದಾಗಿದ್ದಾರೆ. ಇದಕ್ಕೆ ವಿರೋಧ ಪಕ್ಷದ ನಾಯಕರು ಹಾಗೂ ಎನ್‌ಟಿಆರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸ್ತಿದ್ಧಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ನಟ, ಶಾಸಕ ಬಾಲಕೃಷ್ಣ ಆಡಳಿತ ಪಕ್ಷದ ವಿರುದ್ಧ ಕೆಂಡಕಾರಿದ್ದರು. ಅದಕ್ಕೆ ವೈಸಿಪಿ ನಾಯಕರು ಈಗ ತಿರುಗೇಟು ನೀಡಿದ್ದಾರೆ.

  ಚಂದ್ರಬಾಬು ನಾಯ್ಡು ವಿರುದ್ಧ ಸೇಡು ತೀರಿಸಿಕೊಳ್ಳಿ.. ಜಗನ್ ಮೇಲೆ ಅಲ್ಲ: ಬಾಲಯ್ಯಗೆ ರೋಜಾ ಟಾಂಗ್!ಚಂದ್ರಬಾಬು ನಾಯ್ಡು ವಿರುದ್ಧ ಸೇಡು ತೀರಿಸಿಕೊಳ್ಳಿ.. ಜಗನ್ ಮೇಲೆ ಅಲ್ಲ: ಬಾಲಯ್ಯಗೆ ರೋಜಾ ಟಾಂಗ್!

  ಇದೀಗ ಹಿಂದೂಪುರದ ಮಂಗಳ ಮುಖಿಯರು ತಮ್ಮ ಶಾಸಕ ನಂದಮೂರಿ ಬಾಲಕೃಷ್ಣ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಮ್ಮ ಶಾಸಕರನ್ನು ಹುಡುಕಿ ಕೊಡಿ. ಅವರು ನಮ್ಮ ಕೈಗೆ ಸಿಗುವುದಿಲ್ಲ. ಹೀಗೆ ಬಂದು ಹಾಗೆ ಹೊರಟು ಹೋಗುತ್ತಾರೆ. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಅದನ್ನು ಬಗೆಹರಿಸುವುದು ಬಿಟ್ಟು ಯಾವಾಗಲೂ ಸಿನಿಮಾ ಎಂದು ಓಡಾಡಿಕೊಂಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹಿಂದೂಪುರದ ಕೆಲ ವೈಸಿಪಿ ನಾಯಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಮಂಗಳಮುಖಿಯರ ಬೆಂಬಲಕ್ಕೆ ನಿಂತಿದ್ದಾರೆ.

  ಹುಟ್ಟುಹಬ್ಬಕ್ಕೆ NBK107 ಟೀಸರ್ ರಿಲೀಸ್ ಆದರೂ 'ಬ್ರೋ ಐ ಡೋಂಟ್ ಕೇರ್' ಎಂದ ಬಾಲಕೃಷ್ಣ!ಹುಟ್ಟುಹಬ್ಬಕ್ಕೆ NBK107 ಟೀಸರ್ ರಿಲೀಸ್ ಆದರೂ 'ಬ್ರೋ ಐ ಡೋಂಟ್ ಕೇರ್' ಎಂದ ಬಾಲಕೃಷ್ಣ!

  Hijras Complaint to the Police Against Hindupur MLA Actor Nandamuri Balakrishna

  2024ರ ಚುನಾವಣೆಯಲ್ಲಿ ಟಿಡಿಪಿಗೆ ಒಂದೇ ಒಂದು ಸ್ಥಾನ ಸಿಗದಂತೆ ತಡೆಯುವುದು ಸಿಎಂ ಜಗನ್ ಪ್ಲ್ಯಾನ್. ಚಂದ್ರಬಾಬು ಅವರನ್ನು ಸೋಲಿಸುವುದರಜೊತೆಗೆ ಟಿಡಿಪಿಯ ಭದ್ರಕೋಟೆಯಾಗಿರುವ ಹಿಂದೂಪುರವನ್ನು ವಶಪಡಿಸಿಕೊಳ್ಳಲು ವೈಸಿಪಿ ಮುಂದಾಗಿದೆ. ಅದರ ಹಿನ್ನೆಲೆಯಲ್ಲಿ ಹಿಂದೂಪುರದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಹೆಲ್ತ್ ಯೂನಿವರ್ಸಿಟಿ ವಿವಾರದಲ್ಲಿ ಬಾಲಯ್ಯ ಆರೋಪಗಳಿಗೆ ಕೌಂಟರ್ ಕೊಡುವ ಕೆಲಸ ನಡೀತಿದೆ. ಮಂಗಳಮುಖಿಯ ಮೂಲಕ ಬಾಲಯ್ಯಗೆ ಅವರ ಸ್ವಂತ ಕ್ಷೇತ್ರದಲ್ಲಿಯೇ ಕೌಂಟರ್ ಕೊಟ್ಟಿದ್ದಾರೆ. ಇದಕ್ಕೆ ಬಾಲಕೃಷ್ಣ ಹೇಗೆ ಪ್ರತಿಕ್ರಿಯಿಸುತ್ತಾರೋ ನೋಡಬೇಕು.

  English summary
  Hijras Complaint to the Police Against Hindupur MLA Actor Nandamuri Balakrishna. Know More.
  Wednesday, September 28, 2022, 20:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X