ಅಕ್ಕಿನೇನಿ ಕುಟುಂಬಕ್ಕೆ ಬ್ರೇಕಪ್-ವಿಚ್ಛೇದನ ಹೊಸದೇನಲ್ಲ

ನಟಿ ಸಮಂತಾ ಮತ್ತು ನಾಗಚೈತನ್ಯ ದಾಂಪತ್ಯ ಕೊನೆಗೊಂಡಿದೆ. ನಾಲ್ಕು ವರ್ಷಗಳ ಸುಖ ಸಂಸಾರವನ್ನು ಪರಸ್ಪರ ಇಬ್ಬರು ಅಂತ್ಯಗೊಳಿಸಿದ್ದಾರೆ. ಅಕ್ಟೋಬರ್ 2 ರಂದು ಸಮಂತಾ ಮತ್ತು ನಾಗಚೈತನ್ಯ ದೂರವಾಗುತ್ತಿರುವ ಬಗ್ಗೆ ಅಧಿಕೃತವಾಗಿ ಸುದ್ದಿ ಪ್ರಕಟಿಸಿದರು. ಸ್ಯಾಮ್ ಮತ್ತು ಚೈ ದೂರವಾಗುತ್ತಿದ್ದಂತೆ ಅಕ್ಕಿನೇನಿ ಕುಟುಂಬದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರು. ಸ್ವತಃ ನಾಗಾರ್ಜುನ ಸಹ ಬೇಸರದಿಂದ ಈ ಸುದ್ದಿಯನ್ನು ಅಭಿಮಾನಿಗಳಿಗೆ ಮನವರಿಕೆ ಮಾಡಿದರು.

ಅಕ್ಕಿನೇನಿ ಕುಟುಂಬ ತೆಲುಗು ಇಂಡಸ್ಟ್ರಿಯ ಪ್ರಭಾವಿ ಮನೆತನಗಳಲ್ಲಿ ಒಂದು. ಟಾಲಿವುಡ್ ಲೆಜೆಂಡ್ ಅಕ್ಕಿನೇನಿ ನಾಗೇಶ್ವರ ರಾವ್ ಚಿತ್ರರಂಗದಲ್ಲಿ ಬಹಳ ದೊಡ್ಡ ಹೆಸರು. ಈ ಕುಟುಂಬದ ಮೂರು ತಲೆಮಾರು ಚಿತ್ರರಂಗದಲ್ಲಿ ತೊಡಗಿಕೊಂಡಿದೆ. ಅಂದ್ಹಾಗೆ, ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನ ಈ ಕುಟುಂಬಕ್ಕೆ ಹೊಸದೇನಲ್ಲ. ಇದಕ್ಕೂ ಮುಂಚೆ ವಿಚ್ಛೇದನ, ಬ್ರೇಕ್‌ಅಪ್‌ಗಳು ಈ ಕುಟುಂಬದಲ್ಲಿ ನೋಡಬಹುದು. ಮುಂದೆ ಓದಿ...

ಮೊದಲ ಪತ್ನಿಗೆ ಡಿವೋರ್ಸ್ ಕೊಟ್ಟಿರುವ ನಾಗಾರ್ಜುನ

ಮೊದಲ ಪತ್ನಿಗೆ ಡಿವೋರ್ಸ್ ಕೊಟ್ಟಿರುವ ನಾಗಾರ್ಜುನ

ಅಕ್ಕಿನೇನಿ ನಾಗಾರ್ಜುನ ಅವರಿಗೆ ಇಬ್ಬರು ಪತ್ನಿಯರು. ನಟಿ ಅಮಲಾ ಜೊತೆ ವಿವಾಹವಾಗುವುದಕ್ಕೂ ಮುಂಚೆ ಲಕ್ಷ್ಮಿ ದಗ್ಗುಬಾಟಿ ಜೊತೆ ಮದುವೆಯಾಗಿದ್ದರು. 1984ರಲ್ಲಿ ಲಕ್ಷ್ಮಿ ಜೊತೆ ಮದುವೆಯಾಗಿದ್ದ ನಾಗಾರ್ಜುನ 1990ರಲ್ಲಿ ಡಿವೋರ್ಸ್ ಕೊಟ್ಟರು. ಅಂದ್ಹಾಗೆ, ಲಕ್ಷ್ಮಿ ದಗ್ಗುಬಾಟಿ, ನಟ ವೆಂಕಟೇಶ್ ದಗ್ಗುಬಾಟಿ ಅವರ ಸಹೋದರಿ. ನಾಗಾರ್ಜುನ ಮತ್ತು ಲಕ್ಷ್ಮಿ ದಗ್ಗುಬಾಟಿ ದಂಪತಿಯ ಮಗನೇ ನಾಗಚೈತನ್ಯ. 1992ರಲ್ಲಿ ನಟಿ ಅಮಲಾ ಜೊತೆ ನಾಗಾರ್ಜುನ ಎರಡನೇ ಮದುವೆ ಆದರು. ನಾಗಾರ್ಜುನ್ ಮತ್ತು ಅಮಲಾ ದಂಪತಿಯ ಮಗ ಅಖಿಲ್ ಅಕ್ಕಿನೇನಿ.

ಅಖಿಲ್ ನಿಶ್ಚಿತಾರ್ಥ ಬ್ರೇಕ್ ಅಪ್

ಅಖಿಲ್ ನಿಶ್ಚಿತಾರ್ಥ ಬ್ರೇಕ್ ಅಪ್

ನಾಗಾರ್ಜುನ-ಅಮಲಾ ಅಕ್ಕಿನೇನಿ ದಂಪತಿಯ ಮಗ ಅಖಿಲ್ ಅಕ್ಕಿನೇನಿ 2016ರಲ್ಲಿ ಶ್ರಿಯಾ ಭೂಪಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಆಂಧ್ರಪ್ರದೇಶದ ಖ್ಯಾತ ಉದ್ಯಮಿ ಜಿವಿ ಕೃಷ್ಣ ರೆಡ್ಡಿ ಅವರ ಮೊಮ್ಮಗಳು ಶ್ರಿಯಾ ಭೂಪಾಲ್. 2017ರಲ್ಲಿ ವಿವಾಹ ನಡೆಸಲು ತೀರ್ಮಾನಿಸಲಾಗಿತ್ತು. ಈ ನಡುವೆ ನಿಶ್ಚಿತಾರ್ಥವೇ ಮುರಿದು ಬಿತ್ತು. ಅದಕ್ಕೆ ನಿಜವಾದ ಕಾರಣ ಮಾತ್ರ ಬಹಿರಂಗವಾಗಿಲ್ಲ.

ನಾಗಾರ್ಜುನ ಸೋದರಳಿಯ ವಿಚ್ಛೇದನ

ನಾಗಾರ್ಜುನ ಸೋದರಳಿಯ ವಿಚ್ಛೇದನ

ನಾಗಾರ್ಜುನ ಅವರ ಸಹೋದರಿ ಸತ್ಯವತಿ ಅಕ್ಕಿನೇನಿ ಅವರ ಮಗ ಸುಮಂತ್ ಯರ್ಲಗಡ್ಡಾ ಸಹ ಪತ್ನಿಗೆ ವಿಚ್ಛೇದನ ಕೊಟ್ಟಿದ್ದಾರೆ. ನಟ-ನಿರ್ಮಾಪಕರೂ ಆಗಿರುವ ಸುಮಂತ್, 2004ರಲ್ಲಿ ನಟಿ ಕೀರ್ತಿ ರೆಡ್ಡಿ ಜೊತೆ ಮದುವೆಯಾದರು. ಎರಡು ವರ್ಷದ ಬಳಿಕ ವಿಚ್ಛೇದನ ಪಡೆದುಕೊಂಡರು. ಸುಮಂತ್ ಯರ್ಲಗಡ್ಡಾ ಜೊತೆಗಿನ ದಾಂಪತ್ಯ ಅಂತ್ಯಗೊಳಿಸಿಕೊಂಡ ನಟಿ ಕೀರ್ತಿ ರೆಡ್ಡಿ ಎರಡನೇ ಮದುವೆಯಾಗಿ ಯುಎಸ್‌ನಲ್ಲಿ ನೆಲೆಸಿದ್ದಾರೆ. ಆದರೆ, ಸುಮಂತ್ ಒಂಟಿಯಾಗಿ ಉಳಿದುಕೊಂಡರು.

ಸುಮಂತ್ ಸಹೋದರಿ ಸುಪ್ರಿಯಾ

ಸುಮಂತ್ ಸಹೋದರಿ ಸುಪ್ರಿಯಾ

ನಾಗಾರ್ಜುನ ಅವರ ಸಹೋದರಿ ಸತ್ಯವತಿಯ ಪುತ್ರಿ ಸುಪ್ರಿಯಾ ಯರ್ಲಗಡ್ಡಾ ಸಹ ಪತಿಯಿಂದ ದೂರವಿರುವ ಬಗ್ಗೆ ಹಲವು ವೆಬ್‌ಸೈಟ್‌ಗಳು ವರದಿ ಮಾಡಿದೆ. ಆದರೆ, ಅಧಿಕೃತವಾಗಿ ವಿಚ್ಛೇದನ ಅಥವಾ ಬ್ರೇಕ್‌ಅಪ್‌ ಬಗ್ಗೆ ಮಾಹಿತಿ ಇಲ್ಲ. ಸುಪ್ರಿಯಾ ಯರ್ಲಗಡ್ಡಾ, ನಾಗಾರ್ಜುನ ಅವರಿಗೆ ಸೋದರ ಸೊಸೆಯಾಗಬೇಕು.

ಸಮಂತಾ-ನಾಗಚೈತನ್ಯ

ಸಮಂತಾ-ನಾಗಚೈತನ್ಯ

ಸಮಂತಾ ಮತ್ತು ನಾಗಚೈತನ್ಯ 2017ರ ಅಕ್ಟೋಬರ್ ತಿಂಗಳಲ್ಲಿ ಮದುವೆಯಾಗಿದ್ದರು. ಸುಮಾರು ನಾಲ್ಕು ವರ್ಷದ ದಾಂಪತ್ಯದ ನಂತರ 2021ರ ಅಕ್ಟೋಬರ್ 2 ರಂದು ವಿವಾಹ ಮುರಿದುಕೊಂಡಿರುವ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದರು. ವಿವಾಹಪೂರ್ವದಲ್ಲಿ ಸಮಂತಾ ಮತ್ತು ನಾಗಚೈತನ್ಯ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು.

More from Filmibeat

English summary
History of divorces and separations in the tollywood Akkineni Nagarjuna Family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X