For Quick Alerts
  ALLOW NOTIFICATIONS  
  For Daily Alerts

  ಹಿಟ್ ದಿ ಸೆಕೆಂಡ್ ಕೇಸ್‌ ಬಿಡುಗಡೆ ದಿನಾಂಕ ಘೋಷಣೆ; ಕೇಡಿಯಾದ 'ಮೇಜರ್'

  |

  ಕೊರೋನಾವೈರಸ್ ಹೊಡೆತಕ್ಕೆ ನಿರೀಕ್ಷಿಸಿದ ಥಿಯೆಟ್ರಿಕಲ್ ಯಶಸ್ಸು ಗಳಿಸದೇ ನಿರಾಸೆಗೊಳಗಾದ ಚಿತ್ರಗಳ ಪೈಕಿ ತೆಲುಗಿನ 'ಹಿಟ್ ದ ಫಸ್ಟ್ ಕೇಸ್' ಚಿತ್ರ ಕೂಡ ಒಂದು. 2020ರ ಫೆಬ್ರವರಿ 28ರಂದು ಬಿಡುಗಡೆಯಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಲು ಬೇಕಿದ್ದ ಎಲ್ಲಾ ಅಂಶವನ್ನು ಕೂಡ ಹೊಂದಿತ್ತು. ಆದರೆ ಕೊರೋನಾ ಭಯ ಜನ ಚಿತ್ರಮಂದಿರದತ್ತ ಮುಖ ಮಾಡುವುದನ್ನು ಕಡಿಮೆ ಮಾಡಿಸಿತು ಹಾಗೂ ನಂತರದ ದಿನಗಳಲ್ಲಿ ಚಿತ್ರಮಂದಿರಕ್ಕೆ ಬೀಗ ಕೂಡ ಬಿತ್ತು. ಹೀಗಾಗಿಯೇ ಹಿಟ್ ದ ಫಸ್ಟ್ ಕೇಸ್ ಸಿನಿಮಾ ಚಿತ್ರಮಂದಿರಕ್ಕಿಂತ ಓಟಿಟಿಯಲ್ಲಿಯೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

  'ಈ ನಗರಾನಿಕಿ ಏಮೈಂದಿ' ರೀತಿಯ ಕಾಮಿಡಿ ಎಂಟರ್ ಟೈನರ್ ಚಿತ್ರದ ನಟನಾಗಿದ್ದ ವಿಶ್ವಕ್ ಸೇನ್ ಈ ಚಿತ್ರದಲ್ಲಿ ಪೊಲೀಸ್ ತನಿಖಾಧಿಕಾರಿಯಾಗಿ ಅಭಿನಯಿಸಿ ಹುಬ್ಬೇರುವಂತೆ ಮಾಡಿದ್ದರು. ಸೀಟ್ ಎಡ್ಜ್ ಕ್ರೈಂ ಥ್ರಿಲ್ಲರ್ ಆಗಿದ್ದ ಈ ಸಿನಿಮಾ ತೆಲುಗು ಮಾತ್ರವಲ್ಲದೆ ದಕ್ಷಿಣ ಭಾರತದ ಸಿನಿ ರಸಿಕರಿಗೆ ಸಖತ್ ಇಷ್ಟವಾಯ್ತು. ಅಲ್ಲದೆ ಇದೇ ವರ್ಷ ಈ ಚಿತ್ರ ಹಿಂದಿಗೂ ಅದೇ ಟೈಟಲ್ ಅಡಿಯಲ್ಲಿ ರಿಮೇಕ್ ಆಗಿತ್ತು, ಆದರೆ ತೆಲುಗಿನಲ್ಲಿ ಪಡೆದ ಯಶಸ್ಸನ್ನು ಹಿಂದಿಯಲ್ಲಿ ಪಡೆಯುವಲ್ಲಿ ವಿಫಲವಾಯಿತು.

  ಇನ್ನು ಫಸ್ಟ್ ಕೇಸ್ ಮೂಲಕ ಗೆದ್ದಿದ್ದ ನಿರ್ದೇಶಕ ಶೈಲೇಶ್ ಕೋಲನು ಇದೀಗ ಸೆಕೆಂಡ್ ಕೇಸ್ ತೆಗೆದುಕೊಂಡು ಪ್ರೇಕ್ಷಕರ ಮುಂದೆ ಬರಲು ದಿನಾಂಕ ನಿಗದಿಯಾಗಿದೆ. ಹಿಟ್ ದಿ ಫಸ್ಟ್ ಕೇಸನ್ನು ಬಗೆಹರಿಸಿದ್ದ ವಿಶ್ವಕ್ ಸೇನ್ ಬದಲಾಗಿ ಈ ಸೀಕ್ವೆಲ್ ಚಿತ್ರದಲ್ಲಿ ಮೇಜರ್ ಖ್ಯಾತಿಯ ಅಡಿವಿ ಶೇಷ್ ನಾಯಕ ನಟನಾಗಿ ಅಭಿನಯಿಸುತ್ತಿದ್ದು ಎರಡನೇ ಕೇಸನ್ನು ಇದೇ ವರ್ಷದ ಡಿಸೆಂಬರ್ 2ರಂದು ಕೈಗೆತ್ತಿಕೊಳ್ಳಲಿದ್ದಾರೆ.

  ಹೌದು, ಹಿಟ್ ದಿ ಸೆಕೆಂಡ್ ಕೇಸ್ ಡಿಸೆಂಬರ್ 2ರಂದು ಬಿಡುಗಡೆಯಾಗಲಿದೆ ಎಂಬ ಸುದ್ದಿಯನ್ನು ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಪ್ರಕಟಿಸಿದೆ. ಚಿತ್ರದಲ್ಲಿ ಅಡಿವಿ ಶೇಷ್ ಕೃಷ್ಣದೇವ್ ಅಲಿಯಾಸ್ ಕೆಡಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಹಾಗೂ ರವಿತೇಜ ಖಿಲಾಡಿ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಮೀನಾಕ್ಷಿ ಚೌಧರಿ ಈ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಹಾಗೂ ಭಾನುಚಂದರ್, ರಾವ್ ರಮೇಶ್, ಪೊಸಾನಿ ಕೃಷ್ಣಮುರಳಿ ಮುಂತಾದ ಕಲಾವಿದರು ತಾರಾಗಣದಲ್ಲಿದ್ದಾರೆ.

  English summary
  Telugu movie Hit the first case's sequel Hit the second case to hit the silver screens on December 2nd. Read on.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X