ಮಲೆನಾಡ ಮಣ್ಣಿನಲ್ಲಿ ಸಮಂತಾ ಹೋಳಿ ; ಶಿವಮೊಗ್ಗದ ಹೊಸನಗರದಲ್ಲಿ ಗಂಡ ರಾಜ್ ಜೊತೆ 'ಬಂಗಾರಂ' ಸಂಭ್ರಮ

ಶಿವಮೊಗ್ಗ ; ಹೋಳಿ ಹಬ್ಬವೆಂದರೆ ಬಣ್ಣದ ಓಕುಳಿ, ರಂಗುರಂಗಿನ ಕಚಗುಳಿ, ಬಣ್ಣದ ಚೆಲುವಿನ ಚಿತ್ತಾರ, ಎಲ್ಲೆಲ್ಲೂ ಸಂತಸದ ಮಂದಾರ... ಹೋಳಿಯೆಂದರೆ ಬರಿ ಬಣ್ಣಗಳಾಟವಲ್ಲ. ವಸಂತ ಋತುವಿನ ಆಗಮನದ ಸಂಕೇತ. ಜಾತಿ, ಮತ, ಭೇದಗಳನ್ನು ಮರೆತು ಎಲ್ಲರೂ ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಸಂಭ್ರಮಿಸುವ ದಿನ. ಇಂತಹ ಹೋಳಿ ಹಬ್ಬವನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತೆ.

ಅದರಲ್ಲಿಯೂ ಬಣ್ಣದ ಲೋಕದಲ್ಲಿ ಈ ಸಂಭ್ರಮ ತುಸು ಹೆಚ್ಚೇ ಇರುತ್ತೆ. ಆ ಭಾಷೆ ಈ ಭಾಷೆ ಅಂತಲ್ಲ. ಎಲ್ಲ ಭಾಷೆಯ ಚಿತ್ರರಂಗದಲ್ಲಿ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಸೆಲೆಬ್ರೆಟಿಗಳ ಹೋಳಿ ಹಬ್ಬದ ಸಂಭ್ರಮಾಚರಣೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆ ಪೈಕಿ ಸಮಂತಾ ರುತ್ ಪ್ರಭು ಅವರದ್ದು ಕೂಡ ಒಂದು.

Holi 2026 Newlyweds Samantha amp amp Raj Nidimoru Turn Maa Inti Bangaaram Sets Into A Vibrant Water War

ಹೌದು, ನಿರ್ಮಾಪಕ ನಿರ್ದೇಶಕ ರಾಜ್ ನಿಡಿಮೋರು ಜೊತೆ ಎರಡನೇ ಮದುವೆಯಾದ ಸಮಂತಾ ಬೇರೆ ನಾಯಕಿಯರಂತೆ ಮನೆ-ಗಂಡ-ಸಂಸಾರ ಎಂದು ಮುಳುಗಿ ಹೋಗಿಲ್ಲ. ಬದಲಿಗೆ ಚಿತ್ರರಂಗದಲ್ಲಿ ಇನ್ನೂ ಸಕ್ರಿಯರಾಗಿದ್ದಾರೆ. ''ಮಾ ಇಂಟಿ ಬಂಗಾರಂ'' ಚಿತ್ರವನ್ನು ಮಾಡಿದ್ದಾರೆ. ಇನ್ನೇನು ಈ ಚಿತ್ರ ಇದೇ ಮೇ 15ರಂದು ಬಿಡುಗಡೆಗೆ ಸಿದ್ಧವಾಗಿದೆ.

ಆದರೂ ಕೂಡ ಈ ಚಿತ್ರದ ಚಿತ್ರೀಕರಣ ಇನ್ನೂ ಮುಕ್ತಾಯವಾಗಿಲ್ಲ. ವಿಶೇಷ ಅಂದರೆ ಸದ್ಯ ಇದೇ ಚಿತ್ರದ ಚಿತ್ರೀಕರಣ ನಮ್ಮ ಕರುನಾಡಿನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆಯುತ್ತಿದೆ.ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಬಿಡುವಿನ ವೇಳೆ ಸಮಂತಾ ಹೋಳಿ ಹಬ್ಬವನ್ನು ಆಡಿದ್ದಾರೆ.

ಸಮಂತಾ ಅವರ ಈ ಹೋಳಿ ಸಂಭ್ರಮದಲ್ಲಿ ಅವರ ಪತಿ ರಾಜ್ ನಿಡಿಮೋರು ಕೂಡ ಭಾಗಿಯಾಗಿದ್ದು ವಿಶೇಷ. ಹೋಳಿ ಗನ್ ಹಿಡಿದು ತಮ್ಮ ಪತಿದೈವ ರಾಜ್ ನಿಡಿಮೋರು ಅವರಿಗೆ ಸಮಂತಾ ಬಣ್ಣ ಹಾಕಿದ್ದು, ಚಿತ್ರತಂಡದವರ ಜೊತೆ ಬಣ್ಣದ ಆಟವಾಡಿ ಸ್ಯಾಮ್ ಸಂಭ್ರಮಿಸಿದ್ದಾರೆ.

ಸಮಂತಾ ಅವರ ಈ ಹೋಳಿ ಹಬ್ಬದ ಸಂಭ್ರಮಾಚರಣೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೇವಲ 24 ಗಂಟೆಯಲ್ಲಿ 623,000ಕ್ಕೂ ಅಧಿಕ ಜನ ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಕಾಮೆಂಟ್‌ಗಳಿಗೆ ಲೆಕ್ಕ ಇಲ್ಲ. ಹಲವು ದಿನಗಳ ನಂತರ ಸಮಂತಾ ಅವರ ಮೊಗದಲ್ಲಿನ ಈ ನಗು ಮತ್ತು ಜೀವನೋತ್ಸಾಹವನ್ನು ಕಂಡು ಇವರ ಅಭಿಮಾನಿಗಳು ಸದ್ಯ ಖುಷಿಯಾಗಿದ್ದಾರೆ. ನಗುಗೆ ಕಾರಣವಾದ ರಾಜ್ ನಿಡಿಮೋರುಗೆ ಧನ್ಯವಾದ ಹೇಳಿದ್ದಾರೆ. ಸಮಂತಾ ಅವರಿಗೆ ಹೋಳಿ ಹಬ್ಬದ ಶುಭಾಶಯಗಳನ್ನು ಕೂಡ ಕೋರಿದ್ದಾರೆ.

Holi 2026 Newlyweds Samantha amp amp Raj Nidimoru Turn Maa Inti Bangaaram Sets Into A Vibrant Water War

''ಮಾ ಇಂಟಿ ಬಂಗಾರಂ'' ಚಿತ್ರಕ್ಕೆ ಸಮಂತಾ ಖುದ್ದು ಹಣ ಹೂಡಿದ್ದಾರೆ. ಇವರ ಪತಿ ರಾಜ್ ನಿಡಿಮೋರು ಈ ಚಿತ್ರದ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದಾರೆ. ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ಗುಲ್ಷನ್ ದೇವಯ್ಯ, ಕನ್ನಡದ ದೂದ್ ಪೇಡಾ ದಿಗಂತ್, ಗೌತಮಿ, ಶ್ರೀಮುಖಿ ಮುಂತಾದವರು ಇದ್ದಾರೆ.

ಇನ್ನುಳಿದಂತೆ ''ಮಾ ಇಂಟಿ ಬಂಗಾರಂ'' ಚಿತ್ರ ಹೊರತು ಪಡಿಸಿದರೆ ತೀರಾ ಇತ್ತೀಚೆಗಷ್ಟೇ ಬಾಲಿವುಡ್‌ನ ನಿರ್ಮಾಫಕ ಮತ್ತು ನಿರ್ದೇಶಕ ರಾಜ್ ನಿಡಿಮೋರು ಜೊತೆ ಎರಡನೇ ಮದುವೆಯಾದ ಸಮಂತಾ, ತಮ್ಮ ಪತಿ ರಾಜ್ ನಿಡಿಮೋರು ನಿರ್ಮಾಣದಲ್ಲಿಯೇ ಸಿದ್ಧವಾಗುತ್ತಿರುವ ''ರಕ್ತ ಬ್ರಹ್ಮಾಂಡ: ದಿ ಬ್ಲಡಿ ಕಿಂಗ್‌ಡಮ್'' ಎಂಬ ಹೊಸ ವೆಬ್ ಸರಣಿಯಲ್ಲಿ ಅಭಿನಯಿಸುತ್ತಿದ್ದಾರೆ. ಆದಿತ್ಯ ರಾಯ್ ಕಪೂರ್, ಅಲಿ ಫಜಲ್, ವಾಮಿಕಾ ಗಬ್ಬಿ ಮತ್ತು ಜೈದೀಪ್ ಅಹ್ಲಾವತ್ ಈ ಸರಣಿಯಲ್ಲಿ ಸಮಂತಾ ಜೊತೆ ಕಾಣಸಿಗಲಿದ್ದಾರೆ. ಮುಂದಿನ ವರ್ಷ ಈ ಸರಣಿ ಪ್ರಸಾರವಾಗುವ ನಿರೀಕ್ಷೆ ಇದೆ. ಇದಲ್ಲದೇ ನಿರ್ಮಾಪಕಿಯಾಗಿ ಕೂಡ ಸಮಂತಾ ಬ್ಯುಸಿಯಾಗಿದ್ದಾರೆ.

More from Filmibeat

English summary
Samantha Ruth Prabhu and husband Raj Nidimoru celebrate their 1st Holi post-wedding! Check out the viral video of the couple playing Holi with the Maa Inti Bangaaram film crew. Get all the details on their colorful celebrations, pichkari targets, and behind-the-scenes fun right here.
Read more about: samantha holi tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X