ಮಹೇಶ್ ಬಾಬು 30ನೇ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ, ಹೊಂಬಾಳೆ ನಿರ್ಮಾಣ? ಪೋಸ್ಟರ್ ವೈರಲ್

Hombale Films and Prashanth Neel doing a movie for Mahesh Babu? Here is the fact

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟನೆಯ ನಿನ್ನಿಂದಲೇ ಚಿತ್ರವನ್ನು ನಿರ್ಮಿಸುವ ಮೂಲಕ ಸಿನಿಮಾ‌ ಕ್ಷೇತ್ರಕ್ಕೆ ಕಾಲಿಟ್ಟ ಹೊಂಬಾಳೆ ಫಿಲ್ಮ್ಸ್ ಬಳಿಕ ಯಶ್ ನಟನೆಯ ಮಾಸ್ಟರ್ ಪೀಸ್, ಪುನೀತ್ ರಾಜ್‍ಕುಮಾರ್ ನಟನೆಯ ರಾಜಕುಮಾರ ಚಿತ್ರಗಳಿಗೂ ಸಹ ಬಂಡವಾಳ ಹೂಡಿತ್ತು.

ರಾಜಕುಮಾರ ಇಂಡಸ್ಟ್ರಿ ಹಿಟ್ ಆದ ಬಳಿಕ ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2, ಯುವರತ್ನ, ಕಾಂತಾರ ಸಿನಿಮಾಗಳನ್ನು ನಿರ್ಮಿಸಿ ಭಾರತ ಚಿತ್ರರಂಗದಲ್ಲಿ ಬೃಹತ್ ಚಿತ್ರ ನಿರ್ಮಾಣ ಸಂಸ್ಥೆ ಎನಿಸಿಕೊಂಡ ಹೊಂಬಾಳೆ ಫಿಲ್ಮ್ಸ್ ಈ ವರ್ಷ ಫಹಾದ್ ಫಾಸಿಲ್ ನಟನೆಯ ಧೂಮಂ ಎಂಬ ಚಿತ್ರವನ್ನು ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್ ಕನ್ನಡ ಹೊರತುಪಡಿಸಿ ಬೇರೆ ಭಾಷೆಯ ಚಿತ್ರಗಳನ್ನೂ ಸಹ ನಿರ್ಮಿಸಲು ಶುರು‌ ಮಾಡಿದೆ.

ಇನ್ನು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಬಿಡುಗಡೆಗೊಂಡ ಮೊದಲ ಕನ್ನಡೇತರ ಚಿತ್ರ ಧೂಮಂ ಆದರೂ ಸಹ ಸಂಸ್ಥೆ ಮೊದಲು ಘೋಷಿಸಿದ ಮೊದಲ ಪರಭಾಷಾ ಚಿತ್ರವೆಂದರೆ ಅದು ಪ್ರಭಾಸ್ ನಟನೆಯ ತೆಲುಗು ಚಿತ್ರ ಸಲಾರ್. ಹೌದು, ಸಲಾರ್ ಸಿನಿಮಾ‌ ಘೋಷಿಸಿ ತೆಲುಗು ಚಿತ್ರರಂಗ ಪ್ರವೇಶಿಸಿದ ಹೊಂಬಾಳೆ ಫಿಲ್ಮ್ಸ್ ಟೈಸನ್ ಚಿತ್ರವನ್ನು ಘೋಷಿಸಿ ಮಲಯಾಳಂ ಚಿತ್ರರಂಗವನ್ನು ಪ್ರವೇಶಿಸಿತು ಹಾಗೂ ರಘು ತಾತ ಎಂಬ ಸಿನಿಮಾ ಘೋಷಿಸಿ ತಮಿಳು ಚಿತ್ರರಂಗಕ್ಕೂ ಸಹ ಕಾಲಿಟ್ಟಿತು.

ಹೀಗೆ ದಕ್ಷಿಣದ ಎಲ್ಲಾ ಚಿತ್ರರಂಗಗಳಿಗೂ ಸಹ ಕಾಲಿಟ್ಟಿರುವ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಮೊದಲ ತೆಲುಗು ಸಿ‌ನಿಮಾ ಸಲಾರ್ ಇದೇ ಸೆಪ್ಟೆಂಬರ್ 28ರಂದು ಬಿಡುಗಡೆಯಾಗಲಿದ್ದು, ಮೊನ್ನೆಯಷ್ಟೇ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ಈ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ ದೇಶದಲ್ಲೇ ಅತಿಹೆಚ್ಚು ವ್ಯೂಸ್ ಪಡೆದುಕೊಂಡ ಟೀಸರ್ ಎಂಬ ದಾಖಲೆ ಬರೆದಿದ್ದು, ಹೀಗಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ದೊಡ್ಡ ಸುದ್ದಿ ವೈರಲ್ ಆಗಿದೆ.

ಹೊಂಬಾಳೆ ಫಿಲ್ಮ್ಸ್ ಮಹೇಶ್ ಬಾಬು ನಟನೆಯ ಚಿತ್ರಕ್ಕೆ ಬಂಡವಾಳ ಹೂಡಲಿದೆ ಹಾಗೂ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂದೂ ಸಹ ಹೇಳಲಾಗ್ತಿದೆ. ಈ ರೀತಿಯ ಸುದ್ದಿ ವೈರಲ್ ಆಗಲು ಕಾರಣ ಹೊಂಬಾಳೆ ಫಿಲ್ಮ್ಸ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಮಾಡಲಾಗಿರುವ ಟ್ವೀಟ್. ಈ ಟ್ವೀಟ್ ಕಂಡ ಕೂಡಲೇ ಹಲವಾರು ಮಹೇಶ್ ಬಾಬು ಫ್ಯಾನ್ಸ್ ಶೇರ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಈ ಟ್ವೀಟ್ ನಿಜಾನಾ ಎಂದು ಆಶ್ಚರ್ಯ ಹೊರಹಾಕಿದ್ದಾರೆ.

ಆದರೆ ಅಸಲಿಯತ್ತು ಬೇರೆಯೇ ಇದೆ. ಏಕೆಂದರೆ ಈ ಟ್ವೀಟ್ ಬಂದಿರುವುದು ಹೊಂಬಾಳೆ ಫಿಲ್ಮ್ಸ್ ಹೆಸರಿನಲ್ಲಿ ಸೃಷ್ಟಿಸಿರುವ ನಕಲಿ ಖಾತೆಯಿಂದ. ಹೌದು, ಮಹೇಶ್ ಬಾಬು ಫೋಟೊವೊಂದನ್ನು ಪ್ರಶಾಂತ್ ನೀಲ್ ಚಿತ್ರಗಳ ಪೋಸ್ಟರ್ ರೀತಿಯೇ ಕಪ್ಪು ಶೇಡ್ ಬಳಸಿ ಎಡಿಟ್ ಮಾಡಲಾಗಿದ್ದು, ಮಹೇಶ್ ಬಾಬು‌ ನಟನೆಯ 30ನೇ ಚಿತ್ರ ( SSMB 30 ) ಎಂದು ಪೋಸ್ಟರ್ ನಲ್ಲಿ ಉಲ್ಲೇಖಿಸಲಾಗಿದೆ.

ಹೀಗೆ ನಕಲಿ ಖಾತೆಯಲ್ಲಿ ಮಾಡಿರುವ ಟ್ವೀಟ್ 14000ಕ್ಕೂ ಹೆಚ್ಚು ಲೈಕ್ಸ್ ಹಾಗೂ 1500ಕ್ಕಿಂತ ಹೆಚ್ಚು ಶೇರ್ ಆಗಿದ್ದು, ಅನೇಕರು ಇದನ್ನೇ ನಿಜ ಎಂದು ನಂಬಿ ಶೇರ್ ಮಾಡುತ್ತಿದ್ದಾರೆ.‌

More from Filmibeat

English summary
Hombale Films and Prashanth Neel doing a movie for Mahesh Babu? Here is the fact
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X