Peddi X Hombale: 'ಪೆದ್ದಿ' ರಾಮ್‌ಚರಣ್ ಜೊತೆ ಕೈಜೋಡಿಸಿದ ಹೊಂಬಾಳೆ.. ಹೊಸ ಅಧ್ಯಾಯ ಆರಂಭ

ದಿಢೀರನೆ ಹೊಂಬಾಳೆ ಫಿಲ್ಮ್ಸ್ ಸೈಲೆಂಟ್ ಆಗಿದೆ. ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಿಸುತ್ತಿದ್ದ ಸಂಸ್ಥೆ ಸದ್ಯ ಯಾವುದೇ ಚಿತ್ರ ಆರಂಭಿಸಿಲ್ಲ. ಕೆಲ ಸಿನಿಮಾಗಳು ಘೋಷಣೆಯಲ್ಲೇ ನಿಂತು ಹೋಗಿದೆ. ಆಗೊಮ್ಮೆ ಈಗೊಮ್ಮೆ ಕೆಲ ಪರಭಾಷಾ ಸಿನಿಮಾಗಳನ್ನು ಸಂಸ್ಥೆ ವಿತರಣೆ ಮಾಡುತ್ತಿದೆ.

ಇದೀಗ ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಮೂಲಕ ಹೊಂಬಾಳೆ ಸಂಸ್ಥೆ ಹೊಸ ಅಧ್ಯಾಯ ಆರಂಭಿಸುತ್ತಿದೆ. ಓವರ್‌ಸೀಸ್ ಅಂದ್ರೆ ವಿದೇಶಗಳಲ್ಲಿ ಸಿನಿಮಾಗಳನ್ನು ವಿತರಣೆ ಮಾಡಲು ಸಂಸ್ಥೆ ಮುಂದಾಗಿದೆ. ಕೆಲ ದಿನಗಳ ಹಿಂದೆಯೇ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದರು. ಇದೀಗ 'ಪೆದ್ದಿ' ಸಿನಿಮಾ ಮೂಲಕ ಆ ಹಾದಿಯಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಜೂನ್ 4ರಂದು ಸಿನಿಮಾ ವಿಶ್ವದಾದ್ಯಂತ ಏಕಕಾಲಕ್ಕೆ ತೆರೆಗೆ ಬರಲಿದೆ.

Hombalefilms first overseas distribution starts with Ramcharan s Peddi

ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಮಾಡುವ ತಯಾರಿ ನಡೀತಿದೆ. ಮುಂಬೈನಲ್ಲಿ ಭಾರೀ ಈವೆಂಟ್ ಮಾಡಿ ಟ್ರೈಲರ್ ಅನಾವರಣ ಮಾಡಲು ಚಿತ್ರತಂಡ ಮುಂದಾಗಿದ್ದಾರೆ. ಈಗಾಗಲೇ 'ಜೇಮ್ಸ್' ಚಿತ್ರ ನಿರ್ಮಾಪಕ ಕರ್ನಾಟಕದಲ್ಲಿ ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿದ್ದಾರೆ.

ಐಪಿಎಲ್ ಟೂರ್ನಿ ಮುಗಿಯುತ್ತಿದ್ದಂತೆ 'ಪೆದ್ದಿ' ಸಿನಿಮಾ ತೆರೆಗೆ ಬರಲಿದೆ. ಏಪ್ರಿಲ್ 30ಕ್ಕೆ ತೆರೆಗೆ ಬರಬೇಕಿದ್ದ ಚಿತ್ರವನ್ನು ಕೊಂಚ ತಡವಾಗಿ ಬಿಡುಗಡೆ ಮಾಡಲಾಗುತ್ತಿದೆ. ಚಿತ್ರದಲ್ಲಿ ಕ್ರಿಕೆಟ್ ಆಟಗಾರ ಹಾಗೂ ಕುಸ್ತಿ ಪೈಲ್ವಾನ್ ಆಗಿ ಎರಡು ಶೇಡ್‌ಗಳಿರೋ ಪಾತ್ರದಲ್ಲಿ ರಾಮ್‌ಚರಣ್ ನಟಿಸಿದ್ದಾರೆ. ಮತ್ತೊಂದು ಅವತಾರದಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಹೊಂಬಾಳೆ ಸಂಸ್ಥೆ ಚಿತ್ರದ ಓವರ್‌ಸೀಸ್ ರೈಟ್ಸ್ ಕೊಂಡುಕೊಂಡಿರುವುದು ವಿಶೇಷ.

ಭಾರತೀಯ ಮಾರುಕಟ್ಟೆ ಮಾತ್ರವಲ್ಲದೆ ವಿಶ್ವದಾದ್ಯಂತ ಭಾರತೀಯ ಸಿನೆಮಾಗಳಿಗೆ ಹೊಸ ಪ್ರೇಕ್ಷಕರನ್ನು ಪರಿಚಯಿಸಲು ಹೊಂಬಾಳೆ ಸಂಸ್ಥೆ ಈ ಪ್ರಯತ್ನಕ್ಕೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ತಮ್ಮ ಸಂಸ್ಥೆಯಲ್ಲಿ ನಿರ್ಮಾಣವಾಗುವ ಸಿನಿಮಾಗಳನ್ನು ವಿದೇಶಗಳಲ್ಲಿ ಬಿಡುಗಡೆ ಮಾಡಲು ಸಂಸ್ಥೆ ಮುಂದಾಗಿದೆ. 'ಜೇಮ್ಸ್' ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ 18 ಕೋಟಿ ರೂ. ಕೊಟ್ಟು 'ಪೆದ್ದಿ' ಕರ್ನಾಟಕ ರೈಟ್ಸ್ ಖರೀದಿಸಿದ್ದಾರೆ.

'ಪೆದ್ದಿ' ಚಿತ್ರದಲ್ಲಿ ರಾಮ್‌ಚರಣ್ ಜೋಡಿಯಾಗಿ ಜಾನ್ವಿ ಕಪೂರ್ ನಟಿಸಿದ್ದಾರೆ. ಕುಸ್ತಿ ಪೈಲ್ವಾನ್ ಪೆದ್ದಿ ಗುರುವಿನ ಪಾತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಬಣ್ಣ ಹಚ್ಚಿದ್ದಾರೆ. ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಎ. ಆರ್ ರಹಮಾನ್ ಸಂಗೀತ, ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿದೆ.

90ರ ದಶಕದ ಹಳ್ಳಿ ಹಿನ್ನೆಲೆಯ ಕಥೆ 'ಪೆದ್ದಿ' ಚಿತ್ರದಲ್ಲಿದೆ. ಹಳ್ಳಿಯ ಕ್ರಿಕೆಟ್ ಆಟಗಾರನಾಗಿ ರಾಮ್‌ಚರಣ್ ಮಿಂಚಿದ್ದಾರೆ. ವಿಭಿನ್ನ ಅವತಾರದಲ್ಲಿ ರಗಡ್ ಹೈದನಾಗಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಈ ಹಿಂದೆ 'ಉಪ್ಪೆನ' ಸಿನಿಮಾ ನಿರ್ದೇಶಿಸಿದ್ದ ಗೆದ್ದಿದ್ದ ಬುಚ್ಚಿಬಾಬು ಮತ್ತೊಂದು ವಿಭಿನ್ನ ಕಥೆ ಹೊತ್ತು ಬರ್ತಿದ್ದಾರೆ. ಭಾರೀ ಮೊತ್ತಕ್ಕೆ ಚಿತ್ರದ ವಿತರಣೆ ಹಕ್ಕುಗಳು ಮಾರಾಟವಾಗುತ್ತಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ಓಪನಿಂಗ್ ನಿರೀಕ್ಷಿಸಲಾಗುತ್ತಿದೆ.

ಪಾತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿ ರಾಮ್‌ಚರಣ್ ನಟಿಸಿದ್ದಾರೆ. ಬರೀ ಸಸ್ಯಹಾರ ಸೇವಿಸಿ ಮೈ ದಂಡಿಸಿ ದೇಹ ಕಟ್ಟಿದ್ದಾರೆ. ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೇ 18ರಂದು ಟ್ರೈಲರ್ ಬಿಡುಗಡೆ ಆಗಲಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಭಾರೀ ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸಿದ್ದಾರೆ. ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಶ್ರುತಿ ಹಾಸನ್ ಹೆಜ್ಜೆ ಹಾಕಿದ್ದಾರೆ.

Read more about: ramcharan shivarajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X