For Quick Alerts
  ALLOW NOTIFICATIONS  
  For Daily Alerts

  ಜ್ಯೂ. ಎನ್‌ಟಿಆರ್ ಧರಿಸಿರೋ ಈ ಟೀ-ಶರ್ಟ್ ಬೆಲೆ ಕೇಳಿ ಅಭಿಮಾನಿಗಳು ಶಾಕ್!

  |

  ಚಿತ್ರವೊಂದಕ್ಕೆ ಹತ್ತಾರು ಕೋಟಿ ರೂ. ಸಂಭಾವನೆ ಪಡೆಯುವ ಸ್ಟಾರ್‌ಗಳು ಅಷ್ಟೇ ಐಷಾರಾಮಿ ಜೀವನ ನಡೆಸುತ್ತಾರೆ. ಇತ್ತೀಚೆಗೆ ತೆಲುಗಿನ 'ಬಿಂಬಿಸಾರ' ಸಿನಿಮಾ ಪ್ರೀ-ರಿಲೀಸ್ ಈವೆಂಟ್‌ಗೆ ಜ್ಯೂನಿಯರ್ ಎನ್‌ಟಿಆರ್ ಧರಿಸಿದ್ದ ಟೀ- ಶರ್ಟ್ ಬೆಲೆ ಕೇಳಿದವರು ಶಾಕ್ ಆಗಿದ್ದಾರೆ.

  ರಾಜಮೌಳಿ ನಿರ್ದೇಶನದ '' ಚಿತ್ರದಲ್ಲಿ ನಟಿ 'RRR' ಗೆದ್ದ ಜ್ಯೂ. ಎನ್‌ಟಿಆರ್‌ ಸದ್ಯ ಕೊರಟಾಲ ಶಿವ ನಿರ್ದೇಶನದ ಚಿತ್ರಕ್ಕೆ ಸಿದ್ಧತೆ ನಡೆಸಿದ್ದಾರೆ. ಮೊನ್ನೆ ಸಹೋದರ ಕಲ್ಯಾಣ್‌ ರಾಮ್‌ ನಟನೆಯ 'ಬಿಂಬಿಸಾರ' ಸಿನಿಮಾ ಪ್ರೀ ರಿಲೀಸ್ ಈವೆಂಟ್‌ಗೆ ಹಾಜರಾಗಿದ್ದರು. ಈ ವೇಳೆ ತಾರಕ್ ಧರಿಸಿದ್ದ ಕಪ್ಪು ಬಣ್ಣದ ಉದ್ದ ತೋಳಿನ ಟೀ- ಶರ್ಟ್‌ ಗಮನ ಸೆಳೆದಿತ್ತು. ಅದರ ಬೆಲೆ ಎಷ್ಟಿರಬಹುದು ಎಂದು ಪರಿಶೀಲಿಸಿದ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಇದೇ ವಿಚಾರ ಈಗ ಟಾಲಿವುಡ್‌ನಲ್ಲಿ ಹಾಟ್‌ ಟಾಪಿಕ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆ ಟೀ-ಶರ್ಟ್ ಫೋಟೊ ವೈರಲ್‌ ಆಗುತ್ತಿದೆ.

  RRR :ಜೂ.ಎನ್‌ಟಿಆರ್‌ಗಿಂತ ರಾಮ್ ಚರಣ್ ಪಾತ್ರಕ್ಕೆ ಜಾಸ್ತಿ ಅಂಕ ಕೊಟ್ಟ ರಾಜಮೌಳಿ ತಂದೆ!RRR :ಜೂ.ಎನ್‌ಟಿಆರ್‌ಗಿಂತ ರಾಮ್ ಚರಣ್ ಪಾತ್ರಕ್ಕೆ ಜಾಸ್ತಿ ಅಂಕ ಕೊಟ್ಟ ರಾಜಮೌಳಿ ತಂದೆ!

  ತಾತ ಎನ್‌ಟಿಆರ್‌, ತಂದೆ ಹರಿಕೃಷ್ಣ ಹಾದಿಯಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಜ್ಯೂ. ಎನ್‌ಟಿಆರ್ ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ಮಾಸ್‌ ಹೀರೊ ಆಗಿ ಅಭಿಮಾನಿಗಳನ್ನು ರಂಜಿಸುತ್ತಿದ್ದು, ಬಾಲಿವುಡ್ ಮಂದಿ ಕೂಡ ಈತನ ಅಭಿನಯಕ್ಕೆ ಬೆರಗಾಗಿದ್ದಾರೆ. ಚಿತ್ರವೊಂದಕ್ಕೆ ಕೋಟಿ ಕೋಟಿ ರೂ. ಸಂಭಾವನೆ ಪಡೆಯುವ ತಾರಕ್ ರಾಯಲ್ ಲೈಫ್ ಲೀಡ್ ಮಾಡುತ್ತಿರುತ್ತಾರೆ. ಯಂಗ್ ಟೈಗರ್ ಎನ್‌ಟಿಆರ್‌ ಧರಿಸುವ ಬಟ್ಟೆ, ಆಕ್ಸಸರೀಸ್ ಎಲ್ಲವೂ ಬಹಳ ದುಬಾರಿ ಆಗಿರುತ್ತದೆ. ಈ ಹಿಂದೆ ಕೆಲ ಕಾರ್ಯಕ್ರಮಗಳಲ್ಲಿ ಕೋಟ್ಯಾಂತರ ಬೆಲೆಯ ವಾಚ್‌ಗಳನ್ನು ಧರಿಸಿ ಅಭಿಮಾನಿಗಳ ಪ್ರೀತಿಯ ಯಮದೊಂಗ ಎಲ್ಲರ ಹುಬ್ಬೇರಿಸಿದ್ದರು.

   ತಾರಕ್ ಧರಿಸಿದ್ದ ಟೀ-ಶರ್ಟ್ ಬೆಲೆ 24 ಸಾವಿರ ರೂ.?

  ತಾರಕ್ ಧರಿಸಿದ್ದ ಟೀ-ಶರ್ಟ್ ಬೆಲೆ 24 ಸಾವಿರ ರೂ.?

  ನಟ, ನಟಿಯರು ಬಹುತೇಕ ಬ್ರ್ಯಾಂಡೆಡ್‌ ವಸ್ತುಗಳನ್ನೇ ಬಳಸುತ್ತಾರೆ. ಬಟ್ಟೆ, ಶೂ, ವಾಚ್ ಹೀಗೆ ಅವರು ಬಳಸುವ ಪ್ರತಿಯೊಂದು ಬ್ರ್ಯಾಂಡೆಡ್‌ ಹಾಗೂ ದುಬಾರಿ ವೆಚ್ಚದಾಗಿರುತ್ತದೆ. ಇನ್ನು ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರು ಬಳಸುವ ವಸ್ತುಗಳ ಬೆಲೆ ತಿಳಿದುಕೊಳ್ಳಲು ಇಷ್ಟಪಡುತ್ತಾರೆ. 'ಬಿಂಬಿಸಾರ' ಸಿನಿಮಾ ಪ್ರೀ ರಿಲೀಸ್ ಈವೆಂಟ್‌ಗೆ ತಾರಕ್‌ ಧರಿಸಿ ಬಂದಿದ್ದ ಟೀ-ಶರ್ಟ್ ಬೆಲೆ ಆನ್‌ಲೈನ್‌ನಲ್ಲಿ 24,000 ರೂ. ಎಂದು ಗೊತ್ತಾಗಿ ಅಚ್ಚರಿಗೊಂಡಿದ್ದಾರೆ.

  ಟಾಲಿವುಡ್ ಸ್ಟಾರ್‌ ನಟರ ಸಿನಿಮಾ ಕಲೆಕ್ಷನ್ ರಿಪೋರ್ಟ್ ಎಲ್ಲಾ ಸುಳ್ಳು, ಮೋಸ!ಟಾಲಿವುಡ್ ಸ್ಟಾರ್‌ ನಟರ ಸಿನಿಮಾ ಕಲೆಕ್ಷನ್ ರಿಪೋರ್ಟ್ ಎಲ್ಲಾ ಸುಳ್ಳು, ಮೋಸ!

   ಕೋಟ್ಯಾಂತರ ಬೆಲೆಯ ವಾಚ್ ಧರಿಸಿದ್ದ ತಾರಕ್

  ಕೋಟ್ಯಾಂತರ ಬೆಲೆಯ ವಾಚ್ ಧರಿಸಿದ್ದ ತಾರಕ್

  ತಾರಕ್‌ಗೆ ದುಬಾರಿ, ಬ್ರ್ಯಾಂಡೆಡ್‌ ಆಕ್ಸಸರೀಸ್‌ ಕ್ರೇಜ್‌ ಜಾಸ್ತಿ. ಈ ಹಿಂದೆ 'ಆರ್‌ಆರ್‌ಆರ್' ಸಿನಿಮಾ ಕಾರ್ಯಕ್ರಮದಲ್ಲಿ ಯಂಗ್‌ ಟೈಗರ್ ಎನ್‌ಟಿಆರ್‌ ಬರೋಬ್ಬರಿ 3 ಕೋಟಿ 99 ಲಕ್ಷ ರೂ. ಬೆಲೆಯ ವಾಚ್‌ ಧರಿಸಿದ್ದರು ಎಂದು ಸುದ್ದಿಯಾಗಿತ್ತು. ಅದಕ್ಕಿಂತ ಹಿಂದೆ ಒಮ್ಮೆ 1.70 ಕೋಟಿ ರೂ. ಬೆಲೆಗೆ ವಾಚ್ ಧರಿಸಿ ಕಾಣಿಸಿಕೊಂಡಿದ್ದರು.

   ಶುಕ್ರವಾರ 'ಬಿಂಬಿಸಾರ' ಸಿನಿಮಾ ತೆರೆಗೆ

  ಶುಕ್ರವಾರ 'ಬಿಂಬಿಸಾರ' ಸಿನಿಮಾ ತೆರೆಗೆ

  ನಂದಮೂರಿ ಕಲ್ಯಾಣ್‌ ರಾಮ್ ನಟನೆಯ ಫ್ಯಾಂಟಸಿ ಆಕ್ಷನ್ ಸಿನಿಮಾ 'ಬಿಂಬಿಸಾರ' ಸಿನಿಮಾ ಇದೇ ಶುಕ್ರವಾರ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಕಲ್ಯಾಣ್‌ ರಾಮ್‌ ತಮ್ಮದೇ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಿಸಿದ್ದು, ರಾಜ 'ಬಿಂಬಿಸಾರ'ನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

   ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ತಾರಕ್

  ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ತಾರಕ್

  'ಆರ್‌ಆರ್‌ಆರ್‌' ನಂತರ ಬ್ಯಾಕ್‌ ಟು ಬ್ಯಾಕ್ ಪ್ಯಾನ್‌ ಇಂಡಿಯಾ ಸಿನಿಮಾಗಳಿಗೆ ಜ್ಯೂ. ಎನ್‌ಟಿಆರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಸಿನಿಮಾ ನಂತರ ಪ್ರಶಾಂತ್ ನೀಲ್‌ ನಿರ್ದೇಶನದಲ್ಲಿ ಯಂಗ್ ಟೈಗರ್ ಘರ್ಜಿಸಲಿದ್ದಾರೆ. ಇನ್ನು ಹೆಸರಿಡದ ಒಂದೆರಡು ಸಿನಿಮಾಗಳು ಮಾತುಕತೆ ಹಂತದಲ್ಲಿವೆ.

  English summary
  How Much Does Jr Ntr Worn T- Shirt Cost On Bimbisara Pre Release Event. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X