'ಸಲಾರ್' ಪ್ರಭಾಸ್ ಮನೆಯ ಒಂದು ದಿನದ ಊಟದ ಖರ್ಚು ಎಷ್ಟು ಲಕ್ಷ ಗೊತ್ತಾ?
ಬಾಕ್ಸಾಫೀಸ್‌ನಲ್ಲಿ 'ಸಲಾರ್' ಆರ್ಭಟ ಜೋರಾಗಿದೆ. ಸಿನಿಮಾ 3 ದಿನಕ್ಕೆ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಕ್ರಿಸ್‌ಮಸ್ ವೀಕೆಂಡ್‌ನಲ್ಲಿ ಭರ್ಜರಿ ಗಳಿಕೆ ಕಂಡಿದೆ. 3 ಸಿನಿಮಾಗಳ ಸೋಲಿನ ಬಳಿಕ ಮತ್ತೆ ಡಾರ್ಲಿಂಗ್ ಗೆಲುವಿನ ಲಯಕ್ಕೆ ಮರಳಿದಂತೆ ಕಾಣುತ್ತಿದೆ. ವಿಶ್ವದಾದ್ಯಂತ ಸಿನಿಮಾ ಸಖತ್ ಸದ್ದು ಮಾಡ್ತಿದೆ.
ಸೂಪರ್ ಹಿಟ್ ಸಿನಿಮಾಗಳಿಂದ ಪ್ರಭಾಸ್ ಟಾಲಿವುಡ್ ಸೂಪರ್ ಸ್ಟಾರ್ ಆಗಿದ್ದಾರೆ. 'ಬಾಹುಬಲಿ' ಸರಣಿಯಿಂದ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ ಪ್ರಭಾಸ್ ಈಗ ಬ್ಯಾಕ್ ಟು ಬ್ಯಾಕ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಡಾರ್ಲಿಂಗ್ ನಂಬಿ ಈಗ ನಿರ್ಮಾಪಕರು ನೂರಾರು ಕೋಟಿ ಬಂಡವಾಳ ಸುರಿಯುತ್ತಿದ್ದಾರೆ. ಪ್ರಭಾಸ್ ನಟಿಸುವ ಸಿನಿಮಾಗಳ ಬಜೆಟ್ 200 ಕೋಟಿ ರೂ. ದಾಟುತ್ತಿದೆ. ಸದ್ಯ ಯಂಗ್ ರೆಬಲ್ ಸ್ಟಾರ್ ನಂಬಿ 1000 ಕೋಟಿ ರೂ.ಗೂ ಅಧಿಕ ಬಂಡವಾಳ ಹೂಡಿದ್ದಾರೆ.

ಪ್ರಭಾಸ್ ತಮ್ಮ ಸರಳ, ಸಜ್ಜನ ಗುಣಗಳಿಂದಲೂ ಆಪ್ತರಿಗೆ, ಅಭಿಮಾನಿಗಳಿಗೆ ಬಹಳ ಹತ್ತಿರವಾಗಿದ್ದಾರೆ. ಅದರಲ್ಲೂ ಊಟದ ವಿಚಾರದಲ್ಲಿ ಪ್ರಭಾಸ್ ಬಹಳ ಸುದ್ದಿಯಲ್ಲಿ ಇರುತ್ತಾರೆ. ಆಪ್ತರಿಗೆ ವಿವಿಧ ರೀತಿಯ ಭಕ್ಷ್ಯ ಭೋಜನ ಉಣಬಡಿಸುವುದು ಅಂದ್ರೆ ಡಾರ್ಲಿಂಗ್‌ಗೆ ಅಚ್ಚುಮೆಚ್ಚು. ಊಟ ಹಾಕಿ ಹಾಕಿ ಪ್ರಭಾಸ್ ಸಾಯಿಸಿಬಿಡುತ್ತಾನೆ ಎಂದು ಆಪ್ತರು ಹೇಳಿರುವುದು ಇದೆ.
ಭೋಜನ ಪ್ರಿಯರಾಗಿರುವ ಪ್ರಭಾಸ್ ವಿವಿಧ ರೀತಿಯ ವೆಜ್, ನಾನ್‌ವೆಜ್ ಊಟ ಸೇವಿಸುತ್ತಾರೆ. ನಾನ್‌ವೆಜ್ ಐಟಂಗಳಂದ್ರೆ ಪಂಚಪ್ರಾಣ. ಚೆನ್ನಾಗಿ ತಿನ್ನುವುದು, ತಿಂದಿದ್ದನ್ನು ಕರಸತ್ತು ಮಾಡಿ ಕರಗಿಸುವುದನ್ನು ಯಂಗ್ ರೆಬಲ್ ಸ್ಟಾರ್ ರೂಢಿಸಿಕೊಂಡಿದ್ದಾರೆ. ಪ್ರಭಾಸ್ ಊಟ ಮಾಡುವಂತೆ ಬಲವಂತ ಮಾಡುತ್ತಾರೆ. ಸೆಟ್‌ಗೆ ವಿವಿಧ ಬಗೆಯ ಊಟ ತರಿಸಿ ತಿನ್ನುವಂತೆ ಪಟ್ಟುಹಿಡಿಯುತ್ತಾರೆ ಎಂದು ಆಪ್ತರು ಹೇಳುತ್ತಿರುತ್ತಾರೆ. ಇದೇ ವಿಚಾರದ ಬಗ್ಗೆ ಈ ಹಿಂದೆ ನಟಿ ಪೂಜಾ ಹೆಗ್ಡೆ, ಶ್ರದ್ದಾ ಕಪೂರ್, ಶ್ರುತಿ ಹಾಸನ್, ದೀಪಿಕಾ ಪಡುಕೋಣೆ, ರಾಜಮೌಳಿ ಸೇರಿದಂತೆ ಹಲವರು ಮಾತನಾಡಿದ್ದಾರೆ.

ಇತ್ತೀಚೆಗೆ ನಟ ಪೃಥ್ವಿರಾಜ್ ಸುಕುಮಾರನ್ ಕೂಡ ಪ್ರಭಾಸ್ ಭೋಜನ ಪ್ರೀತಿಯ ಬಗ್ಗೆ ಮಾತನಾಡಿದ್ದರು. ಒಂದು ದಿನ ಪೃಥ್ವಿರಾಜ್ ಅವರ ಹೆಂಡತಿ ಮತ್ತು ಮಕ್ಕಳು ಸೆಟ್‌ಗೆ ಬಂದಿದ್ದರಂತೆ. ಅದನ್ನು ತಿಳಿದ ಪ್ರಭಾಸ್ ಡಿನ್ನರ್ ರೆಡಿ ಮಾಡಿಸಿದ್ದರು. ಒಂದು ಕೋಣೆಯ ತುಂಬಾ ವಿವಿಧ ರೀತಿ ಭಕ್ಷ್ಯಗಳನ್ನು ಸಿದ್ಧಪಡಿಸಿದನ್ನು ನೋಡಿ ಆಕೆ ಅಚ್ಚರಿಗೊಂಡಿದ್ದಳು. ಪ್ರಭಾಸ್ ಜೊತೆಗಿದ್ದರೆ ಡಯಟ್ ಫಾಲೋ ಮಾಡೋಕೆ ಆಗಲ್ಲ ಎಂದು ಪೃಥ್ವಿರಾಜ್ ಹೇಳಿದ್ದರು.
'ಸಲಾರ್' ಚಿತ್ರದಲ್ಲಿ ನಟಿಸಿರುವ ಟಿನ್ನು ಆನಂದ್ ಕೂಡ ಪ್ರಭಾಸ್ ಒಮ್ಮೆ ತಮಗೆ ಊಟದ ಡಬ್ಬಿ ಕಳುಹಿಸಿದ್ದನ್ನು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದರು. ನಿಮಗೆ ಊಟ ಕಳುಹಿಸುತ್ತೇನೆ ಎಂದು ಹೇಳಿ 3 ದೊಡ್ಡ ದೊಡ್ಡ ಬಾಕ್ಸ್‌ಗಳಲ್ಲಿ ಪ್ರಭಾಸ್ ಊಟ ಕಳುಹಿಸಿದ್ದರು. ಅದನ್ನು ನೋಡಿ ನಾನು ಶಾಕ್ ಆಗಿದ್ದೆ. ಅದು ಒಂದು ಸೈನ್ಯಕ್ಕೆ ಆಗುವಷ್ಟು ಇತ್ತು. ದಯವಿಟ್ಟು ಇನ್ನು ಮುಂದೆ ನನಗೆ ಊಟ ಕಳುಹಿಸಬೇಡಿ ಎಂದು ಪ್ರಭಾಸ್‌ಗೆ ಹೇಳಿದ್ದಾಗಿ ಟಿನ್ನು ಆನಂದ್ ವಿವರಿಸಿದ್ದರು.
ಪ್ರಾನ್ಸ್(ಸೀಗಡಿ) ಬಿರಿಯಾನಿ ಅಂದ್ರೆ ಪ್ರಭಾಸ್‌ಗೆ ಬಹಳ ಇಷ್ಟ. ಕೆಲ ದಿನಗಳ ಹಿಂದೆ ಈ ವಿಚಾರ ಬಹಿರಂಗಪಡಿಸಿದ್ದರು. ಇನ್ನು ಪ್ರಭಾಸ್ ಒಬ್ಬರೇ ಊಟ ಮಾಡುವುದಿಲ್ಲವಂತೆ. ಅವರೊಟ್ಟಿಗೆ ಸುತ್ತಾ ನಾಲ್ಕೈದು ಜನ ಇರಲೇಬೇಕಂತೆ. ಎಲ್ಲರಿಗೂ ಊಟ ಮನೆಯಲ್ಲಿ ಸಿದ್ಧವಾಗುತ್ತದೆ. ಊಟದ ಮೆನುವಿನಲ್ಲಿ ಮಟನ್, ಚಿಕನ್, ಸೀಗಡಿ ಮತ್ತು ಮೀನು ಇರಬೇಕು. ಇನ್ನು ಪ್ರಭಾಸ್ ಮನೆಯಲ್ಲಿ ಅಡುಗೆ ಮಾಡಲು ಒಂದು ತಂಡವೇ ಇದೆ. ಒಂದು ದಿನಕ್ಕೆ ಆತನಿಗಾಗಿ ತಯಾರಿಸುವ ಊಟಕ್ಕೆ 2 ಲಕ್ಷ ರೂ.ವರೆಗೆ ಖರ್ಚಾಗುತ್ತದೆ ಎಂದು ಟಾಲಿವುಡ್‌ನಲ್ಲಿ ಸುದ್ದಿ ವೈರಲ್ ಆಗುತ್ತಿದೆ.


Click it and Unblock the Notifications











