ಸಿನಿಮಾಗಳಲ್ಲಿ ದಿನಕ್ಕೆ 2 ಕೋಟಿ ಸಂಭಾವನೆ ಪಡೆಯುವ ಪವನ್, ಶಾಸಕರಾಗಿ ತಿಂಗಳಿಗೆ ಎಷ್ಟು ಸಂಬಳ ಪಡೀತ್ತಾರೆ?

ತೆಲುಗು ನಟ ಪವನ್ ಕಲ್ಯಾಣ್‌ ಇದೀಗ ಆಂಧ್ರಪ್ರದೇಶದ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಜನಸೇನಾ ಪಕ್ಷವನ್ನು ಗೆಲ್ಲಿಸಿಕೊಂಡು ಉಪ ಮುಖ್ಯಮಂತ್ರಿ ಕುರ್ಚಿ ಮೇಲೂ ಕಣ್ಣಿಟ್ಟಿದ್ದಾರೆ. ಈಗಾಗಲೇ ಆ ಬಗ್ಗೆ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಭಾರೀ ಬೇಡಿಕೆ ಇರುವ ಸಮಯದಲ್ಲೇ ಪವರ್ ಸ್ಟಾರ್ ಆಂಧ್ರಪ್ರದೇಶನದ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಶಾಸಕರಾಗಿ ಆಯ್ಕೆ ಆದ ಬಳಿಕ ಪವನ್ ಕಲ್ಯಾಣ್ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಾರಾ? ಇಲ್ವಾ? ಎನ್ನುವ ಗೊಂದಲ ಅಭಿಮಾನಿಗಳಲ್ಲಿದೆ. ಈಗಾಗಲೇ 3 ಸಿನಿಮಾಗಳು ಪವನ್ ಕಲ್ಯಾಣ್ ನಟಿಸುತ್ತಿದ್ದು ಅರ್ಧಕ್ಕೆ ನಿಂತಿವೆ. ಆ ಸಿನಿಮಾಗಳು ಯಾವಾಗ ತೆರೆಗೆ ಬರುತ್ತದೆ ಎನ್ನುವ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಸದ್ಯ ಆಂಧ್ರದಲ್ಲಿ ಹೊಸ ಸರ್ಕಾರ ರಚನೆ ಕಸರತ್ತು ಆರಂಭವಾಗುತ್ತಿದೆ. ಅದರಲ್ಲಿ ಪವನ್ ಕಲ್ಯಾಣ್ ಜವಾಬ್ದಾರಿ ಹೆಚ್ಚಿದೆ. ಹಾಗಾಗಿ ಸಿನಿಮಾಗಳ ಬಗ್ಗೆ ಸದ್ಯಕ್ಕೆ ಮಾತನಾಡಲು ಸಾಧ್ಯವಿಲ್ಲ.

How much salary does Telugu actor Pawan Kalyan get as andhra MLA What did he say about this

ಅಣ್ಣ ಚಿರಂಜೀವಿ ಹಾದಿಯಲ್ಲೇ ಪವನ್ ಕಲ್ಯಾಣ್ ಚಿತ್ರರಂಗಕ್ಕೆ ಬಂದರು. ಆದರೆ ತಮ್ಮದೇ ವಿಭಿನ್ನ ಮ್ಯಾನರಿಸಂ, ಸ್ಟೈಲ್‌, ಅಭಿನಯದಿಂದ ಕ್ರೇಜ್ ಸೃಷ್ಟಿಸಿಕೊಂಡವರು. ಕೇವಲ 30 ಸಿನಿಮಾಗಳಲ್ಲಿ ನಟಿಸಿ 100 ಸಿನಿಮಾಗಳಿಗಾಗುವಷ್ಟು ನೇಮು, ಫೇಮು ಸಂಪಾದಿಸಿದ್ದಾರೆ. ಪವನ್ ಸಿನಿಮಾಗಳು ಆಂಧ್ರ, ತೆಲಂಗಾಣ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿ ಹೊರ ದೇಶಗಳಲ್ಲಿ ಸದ್ದು ಮಾಡುತ್ತವೆ. ಅದೇ ಕಾರಣಕ್ಕೆ ನಿರ್ಮಾಪಕರು ಕೋಟಿ ಕೋಟಿ ಸಂಭಾವನೆ ಕೊಟ್ಟಿ ಕಾಲ್‌ಶೀಟ್ ಪಡೆಯುತ್ತಾರೆ.

ಪವರ್ ಸ್ಟಾರ್ ಕ್ರೇಜ್ ಹೇಗಿದೆ ಎಂದರೆ ಇತ್ತೀಚೆಗೆ 'ಬ್ರೋ' ಎನ್ನುವ ಚಿತ್ರಕ್ಕೆ ದಿನವೊಂದಕ್ಕೆ 2 ಕೋಟಿ ರೂ. ಸಂಭಾವನೆ ಸಿಕ್ಕಿತ್ತು. ಈ ವಿಚಾರವನ್ನು ಖುದ್ದು ಪವನ್ ಕಲ್ಯಾಣ್ ಹೇಳಿದ್ದರು. ಚಿತ್ರದ ವಿಶೇಷ ಪಾತ್ರದಲ್ಲಿ ಅವರು ನಟಿಸಿದ್ದರು. 22 ದಿನಗಳ ಕಾಲ್‌ಶೀಟ್ ಕೊಟ್ಟು 45 ಕೋಟಿ ರೂ. ಸಂಭಾವನೆ ಪಡೆದಿದ್ದರು. ಅಂದರೆ ದಿನಕ್ಕೆ 2 ಕೋಟಿ ರೂ. ಎನ್ನಬಹುದು. ಈ ಪಾಟಿ ಡಿಮ್ಯಾಂಡ್ ಇರುವ ಪವನ್ ಕಲ್ಯಾಣ್ ಜನಸೇವೆ ಮಾಡಲು ರಾಜಕೀಯರಂಗ ಪ್ರವೇಶಿಸಿದ್ದಾರೆ.

How much salary does Telugu actor Pawan Kalyan get as andhra MLA What did he say about this

ಕೋಟಿ ಕೋಟಿ ವ್ಯಯಿಸಿ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವ ಶಾಸಕರಿಗೆ, ಸಂಸದರಿಗೆ ಸಿಗುವ ಸಂಬಳ, ಭತ್ಯೆ, ಸವಲತ್ತುಗಳು ಒಂದೆರಡಲ್ಲ. ಸಂಬಳ, ಭತ್ಯೆ ಎಲ್ಲಾ ಸೇರಿ ಪ್ರತಿ ತಿಂಗಳ ಲಕ್ಷಾಂತರ ರೂಪಾಯಿ ಸಿಗುತ್ತದೆ. ಪವನ್ ಕಲ್ಯಾಣ್ ಬಹಳ ದಿನಗಳಿಂದ ಶಾಸಕರಾಗಿ ಆಯ್ಕೆ ಆದ ಬಳಿಕ ಸಂಬಳ ಪಡೆಯುವ ಬಗ್ಗೆ ಯೋಚಿಸುತ್ತಿದ್ದರಂತೆ. ಕೆಲ ಶ್ರೀಮಂತರು ಶಾಸಕರಾಗಿ, ಸಂಸದರಾಗಿ ಆಯ್ಕೆ ಆದಾಗ ನಾಮಮಾತ್ರಕ್ಕೆ ಕೇವಲ ಒಂದು ರೂಪಾಯಿ ಸಂಬಳ ಪಡೆಯುತ್ತೇವೆ, ನಾವು ಜನರ ಸೇವೆ ಮಾಡಲು ಇಲ್ಲಿಗೆ ಬಂದಿರೋದು ಎಂದು ಹೇಳುತ್ತಿರುತ್ತಾರೆ. ಈ ಬಗ್ಗೆ ನಟ ಪವನ್ ಕಲ್ಯಾಣ್ ಮಾತನಾಡಿದ್ದಾರೆ.

"ನಾನು ಅದೇ ರೀತಿ ಆಲೋಚಿಸುತ್ತಿದ್ದೆ. ಒಂದು ವೇಳೆ ಶಾಸಕನಾಗಿ ಆಯ್ಕೆ ಆದರೆ ಎಷ್ಟು ಸಂಬಳ ಪಡೆಯಬೇಕು. 1 ರೂಪಾಯಿ ಪಡೆಯಬೇಕಾ? ಹೇಗೆ? ಅಂತ ಅಂದುಕೊಳ್ಳುತ್ತಿದ್ದೆ. ಆದರೆ ಈಗ ಹೇಳುತ್ತೇನೆ, ಒಂದು ಪೈಸೆ ಬಿಡದೇ ನಾನು ಸರ್ಕಾರಿ ಸಂಬಳ ಪಡೆಯುತ್ತೇನೆ. ಅದಕ್ಕೆ ಸಾವಿರಪಟ್ಟು ವಾಪಸ್ ಕೊಡುತ್ತೇನೆ. ತೆಗೆದುಕೊಂಡ ಸಂಬಳಕ್ಕೆ ಸರಿಯಾಗಿ ಕೆಲಸ ಮಾಡುತ್ತೇನೆ. ಯಾಕಂದರೆ ನಾನು ಪಡೆಯುವ ಸಂಬಳ ಜನರ ಶ್ರಮ, ಬೆವರಿನಿಂದ ಬಂದ ಹಣ. ಜನರು ಕಟ್ಟುವ ತೆರಿಗೆಯಿಂದ ನಮಗೆ ಸಂಬಳ ಬರುತ್ತದೆ. ಆ ಹಣ ಮುಟ್ಟಿದಾಗ ನನನೆ ಜವಾಬ್ದಾರಿ ನೆನಪಾಗಬೇಕು" ಎಂದಿದ್ದಾರೆ.

ಸದ್ಯ ಶಾಸಕರಾಗಿ ಚುನಾಯಿತರಾಗಿರುವ ಪವನ್ ಕಲ್ಯಾಣ್‌ಗೆ ಪ್ರತಿ ತಿಂಗಳು ಎಷ್ಟು ಸಂಬಳ ಬರುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ತೆಲಂಗಾಣ ಶಾಸಕರಿಗೆ ದೇಶದ ಬೇರೆಲ್ಲಿಯೂ ಇರದಂತೆ ಅತ್ಯಧಿಕ ಮಾಸಿಕ ರೂ.4 ಲಕ್ಷಗಳನ್ನು ನೀಡಲಾಗುತ್ತದೆ. ದೆಹಲಿ ಶಾಸಕರು ರೂ. 3.90 ಲಕ್ಷ, ಉತ್ತರ ಪ್ರದೇಶದ ಶಾಸಕರು ರೂ.3.65 ಲಕ್ಷ ಮತ್ತು ಮಹಾರಾಷ್ಟ್ರದ ಶಾಸಕರು ರೂ.3.40 ಲಕ್ಷ ಪಡೆಯುತ್ತಿದ್ದಾರೆ. ತ್ರಿಪುರಾ ಶಾಸಕರು ದೇಶದಲ್ಲೇ ಅತ್ಯಂತ ಕಡಿಮೆ ಸಂಬಳ ರೂ. 1.05 ಲಕ್ಷ ಪಡೆಯುತ್ತಿದ್ದಾರೆ. ಇನ್ನು ಆಂಧ್ರಪ್ರದೇಶದ ವಿಚಾರಕ್ಕೆ ಬಂದರೆ ಶಾಸಕರಿಗೆ ತಲಾ ರೂ. 3.35 ಲಕ್ಷ ಮಾಸಿಕ ವೇತನ ನೀಡಲಾಗುತ್ತಿದೆ. ಸಚಿವರಾಗಿ ಆಯ್ಕೆ ಆದರೆ ಇದು ಮತ್ತಷ್ಟು ಹೆಚ್ಚಾಗುತ್ತದೆ.

More from Filmibeat

English summary
Pawan Kalyan's monthly salary as Pithapuram MLA
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X