ನಾಗಚೈತನ್ಯ ಮತ್ತು ಶೋಭಿತಾ ಮೊದಲು ಭೇಟಿಯಾಗಿದ್ದು ಎಲ್ಲಿ ? ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು ಹೇಗೆ..?

ಪ್ರೀತಿ ಪ್ರೇಮ ಎಲ್ಲವೂ ಸಹಜ ಆದರೆ ಎಲ್ಲಿ ಅನ್ಯೋನ್ಯತೆ ಮತ್ತು ನಂಬಿಕೆಯ ಕೊರತೆ ಇರುತ್ತದೆಯೋ ಅಲ್ಲಿ ಮನಸ್ತಾಪಗಳು ಎದುರಾಗುತ್ತಾವೆ. ಪ್ರೀತಿ ಒಂದು ಸುಂದರ ಅನುಭವ, ಅದನ್ನು ಖುಷಿಯಿಂದ ಅನುಭವಿಸಬೇಕು. ಕಷ್ಟದಲ್ಲಾದರೂ ಸುಖದಲ್ಲಾದರೂ ಒಬ್ಬರಿಗೊಬ್ಬರು ಜೊತೆಯಾಗಿ ನಂಬಿಕೆಯಿಂದ ಇದ್ದರೆ ಮಾತ್ರ ಪ್ರೇಮದಾನಂದ ಅನುಭವಿಸಲು ಸಾಧ್ಯ. ಸದ್ಯ ಇಂತಹದ್ದೇ ಆನಂದದಲ್ಲಿ ತೇಲಲು ಸಿದ್ಧರಾದ ನಾಗಚೈತನ್ಯ ಮತ್ತು ಶೋಭಿತಾ ನಡುವೆ ಹೃದಯದ ಪಿಸು ಮಾತು ಮೊದಲ ಬಾರಿ ಶುರುವಾಗಿದ್ದೆಲ್ಲಿ ಎನ್ನುವುದು ಬಹುತೇಕರಿಗೆ ಗೊತ್ತಿರದ ವಿಚಾರ.

ನಿಮಗೆ ಗೊತ್ತಿರಲಿ .. 2021ರಲ್ಲಿ ಸಮಂತಾ ಅವರಿಂದ ದೂರವಾದ ನಂತರ ನಾಗಚೈತನ್ಯ ಮತ್ತೊಂದು ಮದುವೆ, ಮತ್ತೊಂದು ಪ್ರೇಮದ ಬಗ್ಗೆ ಯೋಚನೆ ಮಾಡಿರಲಿಲ್ಲ. ಆದರೆ, ಅದೊಂದು ಕಾರ್ಯಕ್ರಮ ನಾಗಚೈತನ್ಯ ಅವರನ್ನು ಶೋಭಿತಾ ಅವರ ಮನದ ಬಾಗಿಲವರೆಗೆ ಕರೆದೊಯ್ದಿತು.

How Naga Chaitanya and Sobhita Dhulipala Fell in Love A Look Back at Their Love Story

ಹೌದು, ಅಸಲಿಗೆ ನಾಗಚೈತನ್ಯ ಓಟಿಟಿಯ ಕಾರ್ಯಕ್ರಮವೊಂದಕ್ಕೆ ಮುಂಬೈಗೆ ತೆರಳಿದ್ದರು. ಈ ಕಾರ್ಯಕ್ರಮಕ್ಕೆ ಶೋಭಿತಾ ಕೂಡ ಬಂದಿದ್ದರು. ಇಬ್ಬರು ಮುಖಾಮುಖಿಯಾಗಿದ್ದು ಮುಕ್ತವಾಗಿ ಮಾತನಾಡಿದ್ದು ಇಲ್ಲಿಯೇ. ಹೀಗೆ ಶುರುವಾದ ಪರಿಚಯ ಆ ನಂತರ ಸ್ನೇಹಕ್ಕೆ ಮತ್ತು ಪ್ರೇಮಕ್ಕೆ ತಿರುಗಿತು. ಆದರೆ ಈ ಪ್ರೇಮಕಥೆಯ ಸುಳಿವು ಯಾರಿಗೂ ಇರಲಿಲ್ಲ. ಆದರೆ ಇವರಿಬ್ಬರ ಲಂಡನ್ ಪ್ರವಾಸ ಇವರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಎನ್ನುವುದಕ್ಕೆ ಪುಷ್ಠಿ ನೀಡಿತ್ತು. ಯಾಕೆಂದರೆ ಶೋಭಿತಾ ಜೊತೆ ಡಿನ್ನರ್ ಡೇಟ್ ಗೆ ಅಲ್ಲಿನ ಪಂಚತಾರಾ ಹೊಟೇಲ್ ಗೆ ಹೋದ ಸಂದರ್ಭದಲ್ಲಿ ನಾಗಚೈತನ್ಯ ಅಲ್ಲಿಯ ಶೆಫ್ ಸುರೇಂದರ್ ಮೋಹನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಅವತ್ತು ಶೋಭಿತಾ ಮುಖ ಮುಚ್ಚಿಕೊಂಡಿದ್ದರಾದರೂ ಅನೇಕರಿಗೆ ನಾಗಚೈತನ್ಯ ಜೊತೆ ಇರುವ ಚೆಲುವೆ ಶೋಭಿತಾ ಅವರೇ ಎನ್ನುವುದು ಗೊತ್ತಾಗಿತ್ತು.

ಇದಾದ ನಂತರ ತಿಪೇಶ್ವರ್ ವನ್ಯಜೀವಿಧಾಮದಿಂದ ಪ್ರತೈಕವಾಗಿ ಫೋಟೋ ಹಂಚಿಕೊಳ್ಳುವ ಮೂಲಕ ಅನೇಕರಲ್ಲಿದ್ದ ಅನುಮಾನವನ್ನು ಇಬ್ಬರು ಇನ್ನು ಹೆಚ್ಚಿಸಿದರು. ಆ ನಂತರ ಯುರೋಪ್‌ನಲ್ಲಿ ರಜಾ-ಮಜಾ ಕಾರ್ಯಕ್ರಮವನ್ನು ಜಂಟಿಯಾಗಿ ಹಮ್ಮಿಕೊಂಡು ಅನೇಕರ ಹುಬ್ಬೇರಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಸಂಬಂಧದ ಕುರಿತು ಇವರ ಅಭಿಮಾನಿಗಳನ್ನು ಸೇರಿ ಅನೇಕರು ಚರ್ಚೆ ಮಾಡಲು ಶುರು ಮಾಡಿದರು.

ಇದೆಲ್ಲದರ ನಡುವೆ ಅಲ್ಲಲ್ಲಿ ಸಮಂತಾ ತಮ್ಮ ಮನದ ನೋವನ್ನು ಹೊರ ಹಾಕುತ್ತಾ ಬಂದಿದ್ದರು. ನಾಗಚೈತನ್ಯ ಮತ್ತು ಶೋಭಿತಾ ಅವರ ಆತ್ಮೀಯತೆಯಿಂದ ಅಸಮಾಧಾನಗೊಂಡು ಸಂಬಂಧಗಳ ಕುರಿತು ಪರೋಕ್ಷವಾಗಿ ಪಾಠವನ್ನು ಮಾಡಿದರು. ಹೀಗೆ ಜೊತೆಯಾಗಿ ಹಿತವಾಗಿ ನಡೆಯುತ್ತಾ ಬಂದ ನಾಗಚೈತನ್ಯ ಮತ್ತು ಶೋಭಿತಾ ಕಳೆದ ಆಗಸ್ಟ್ 08ರಂದು ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ಸದ್ದಿಲ್ಲದೇ ನಿಶ್ಚಿತಾರ್ಥವನ್ನು ಮಾಡಿಕೊಂಡರು.

ಅಂದ್ಹಾಗೇ ನಾಗಚೈತನ್ಯ ಮತ್ತು ಸಮಂತಾ ನಡುವೆ ವಯಸ್ಸಿನ ಅಂತರ ಇರಲಿಲ್ಲ. ಇದ್ದಿದ್ದು ಕೇವಲ ಐದು ತಿಂಗಳಿನ ಅಂತರವಷ್ಟೇ. ಆದರೆ .. ನಾಗ ಚೈತನ್ಯ ಮತ್ತು ಶೋಭಿತಾ ನಡುವೆ ಐದು ವರ್ಷಗಳ ಅಂತರ ಇದೆ. ನಾಗಚೈತನ್ಯ ಅವರಿಗೆ ಈಗ 37 ವರ್ಷವಾದರೆ, ಶೋಭಿತಾ ಅವರಿಗೆ ಈಗ 32 ವರ್ಷ.ಇನ್ನೂ ವಯಸ್ಸಿನಲ್ಲಿ ನಾಗಚೈತನ್ಯ ಅವರಿಗಿಂತ ಶೋಭಿತಾ ಚಿಕ್ಕವರಾದರೂ, ಚಿತ್ರರಂಗದಲ್ಲಿ ಶೋಭಿತಾ ಮಾಡಿರುವ ಸಾಧನೆ ದೊಡ್ಡದು. ನಾಗಚೈತನ್ಯ ಅವರಂತೆ ಇವರಿಗೆ ಸಿನಿಮಾ ಹಳೆಯದ್ದಲ್ಲ ಬದಲಿಗೆ ಹೊಸದು. ಇವರ ಕುಟುಂಬದಲ್ಲಿ ಸಿನಿಮಾ ಹಿನ್ನೆಲೆ ಹೊಂದಿರುವವರು ಯಾರು ಇಲ್ಲ. ಆದರೂ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಿದವರು ಶೋಭಿತಾ. ಇನ್ನುಳಿದಂತೆ ಇಂದು ನಾಗಚೈತನ್ಯ ಮತ್ತು ಶೋಭಿತಾ ಅವರ ಮದುವೆ ಸಮಾರಂಭ ಅದ್ದೂರಿಯಾಗಿ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆಯಲಿದೆ. ಇಬ್ಬರ ಮದುವೆ ಸಮಾರಂಭಕ್ಕೆ ಭಾರತೀಯ ಚಿತ್ರರಂಗದ ಅನೇಕ ದಿಗ್ಗಜರು ಆಗಮಿಸುವ ನಿರೀಕ್ಷೆ ಇದೆ.

More from Filmibeat

Read more about: naga chaitanya love tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X