twitter
    For Quick Alerts
    ALLOW NOTIFICATIONS  
    For Daily Alerts

    RRR ಹುಟ್ಟಿದ್ದು ಹೇಗೆ: ಕಥೆಗಾರ ಬಿಚ್ಚಿಟ್ಟ 'RRR' ಕತೆಯ ಕತೆ!

    |

    'RRR' ಸಿನಿಮಾ ಭರ್ಜರಿ ಹಿಟ್ ಆಗಿದೆ. ಕೇವಲ ಐದೇ ದಿನದಲ್ಲಿ ವಿಶ್ವದಾದ್ಯಂತ ಸುಮಾರು 600 ಕೋಟಿ ಹಣ ಗಳಿಸಿದೆ.

    ಸಿನಿಮಾದ ಕತೆಗೆ ಪ್ರೇಕ್ಷಕ ಫಿದಾ ಆಗಿದ್ದಾನೆ. ಉತ್ತಮ ಕತೆಗೆ ರಾಜಮೌಳಿ ನೀಡಿರುವ ಟಚ್ ಅಂತೂ ಅತ್ಯದ್ಭುತ ಎಂಬ ಮಾತುಗಳು ಕೇಳಿ ಬರುತ್ತಿದೆ.

    RRR Hindi Box Office collection : ಹಿಂದಿ ಪ್ರದೇಶದಲ್ಲಿ ಹಿಂದಿ ಸಿನಿಮಾಗಳನ್ನೇ ಹಿಂದಿಕ್ಕಿದ RRRRRR Hindi Box Office collection : ಹಿಂದಿ ಪ್ರದೇಶದಲ್ಲಿ ಹಿಂದಿ ಸಿನಿಮಾಗಳನ್ನೇ ಹಿಂದಿಕ್ಕಿದ RRR

    ಕತೆಗಾರ ವಿಜಯೇಂದ್ರ ಪ್ರಸಾದ್ 'RRR' ಮೂಲಕ ತಾವು ಎಂಥಹಾ ಅದ್ಭುತ ಕತೆಗಾರ ಎಂಬುದನ್ನು ಸಾಬೀತು ಮಾಡಿದ್ದಾರೆ. ರಾಜಮೌಳಿ ತಂದೆಯೇ ಆಗಿರುವ ವಿಜಯೇಂದ್ರ ಪ್ರಸಾದ್, 'ಬಾಹುಬಲಿ', ಹಿಂದಿಯ 'ಭಜರಂಗಿ ಬಾಯಿಜಾನ್' ಸೇರಿ ಹಲವು ಅತ್ಯುತ್ತಮ ಸಿನಿಮಾಗಳಿಗೆ ಅತ್ಯುತ್ತಮ ಕತೆಗಳನ್ನು ಒದಗಿಸಿದ್ದಾರೆ. 'RRR' ಸಿನಿಮಾಕ್ಕೂ ಕತೆ ನೀಡಿರುವ ವಿಜಯೇಂದ್ರ ಪ್ರಸಾದ್ ಈ ಸಿನಿಮಾದ ಕತೆ ಹುಟ್ಟಿದ್ದು ಹೇಗೆ ಎಂಬುದರ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

    RRR ಗೆ ಹೊಸ ವ್ಯಾಖ್ಯಾನ ಕೊಟ್ಟು ತನ್ನ ಪ್ರಾಡಕ್ಟ್ ಮಾರಲು ಮುಂದಾದ ಕಾಂಡೋಮ್ ಕಂಪನಿRRR ಗೆ ಹೊಸ ವ್ಯಾಖ್ಯಾನ ಕೊಟ್ಟು ತನ್ನ ಪ್ರಾಡಕ್ಟ್ ಮಾರಲು ಮುಂದಾದ ಕಾಂಡೋಮ್ ಕಂಪನಿ

    ಕತೆಯನ್ನು ನಾನು ಬರೆದುಕೊಳ್ಳುವುದಿಲ್ಲ: ವಿಜಯೇಂದ್ರ ಪ್ರಸಾದ್

    ಕತೆಯನ್ನು ನಾನು ಬರೆದುಕೊಳ್ಳುವುದಿಲ್ಲ: ವಿಜಯೇಂದ್ರ ಪ್ರಸಾದ್

    ''ಯಾವುದೇ ಸಿನಿಮಾದ ಕತೆಯನ್ನು ಮೊದಲಿಗೆ ನಾನು ಬರೆದುಕೊಳ್ಳುವುದಿಲ್ಲ ಬದಲಿಗೆ ಐಡಿಯಾವನ್ನು ಲಾಕ್ ಮಾಡಿಕೊಳ್ಳುತ್ತೇನೆ. ಈ ಕಾಲಘಟ್ಟದಲ್ಲಿ, ಈ ಸಂದರ್ಭ ಸೃಷ್ಟಿಯಾದರೆ ಹೇಗಿರಬಹುದು ಎಂಬ ಊಹೆಯನ್ನು ಮೊದಲು ಲಾಕ್ ಮಾಡಿಕೊಳ್ಳುತ್ತೇನೆ. ನಂತರ ಅದಕ್ಕೆ ಪಾತ್ರಗಳನ್ನು, ಘಟನೆಗಳನ್ನು ಸೇರಿಸುತ್ತಾ ಹೋಗುತ್ತೇನೆ. 'RRR' ಸಿನಿಮಾ ಸಹ ಹೀಗೆಯೇ ಆಗಿದ್ದು'' ಎಂದಿದ್ದಾರೆ ಕತೆಗಾರ ವಿಜಯೇಂದ್ರ ಪ್ರಸಾದ್.

    RRR ಸಿನಿಮಾದ ಕತೆ ಇದ್ದದ್ದು ಬೇರೆ ರೀತಿ

    RRR ಸಿನಿಮಾದ ಕತೆ ಇದ್ದದ್ದು ಬೇರೆ ರೀತಿ

    ''RRR' ಸಿನಿಮಾದ ಕತೆ ಆರಂಭದಲ್ಲಿ ಹೀಗಿರಲಿಲ್ಲ. ಒಂದು ವಿಶೇಷ ಕಾರಣಕ್ಕಾಗಿ ಬ್ರಿಟೀಷರ ಪಡೆಯಲ್ಲಿ ಕೆಲಸ ಮಾಡುವ ನಾಯಕ ಹಾಗೂ ಆಗಷ್ಟೆ ಜೈಲಿನಿಂದ ತಪ್ಪಿಸಿಕೊಂಡ ಒಬ್ಬ ವ್ಯಕ್ತಿಯ ನಡುವಿನ ಕತೆ ಇದಾಗಿತ್ತು. ರಾಜಮೌಳಿಗೂ ಇದು ಇಷ್ಟವಾಯಿತು. ಬಳಿಕ ಯಾವುದೋ ಒಂದು ಕಾಲಘಟ್ಟದಲ್ಲಿ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಅವರನ್ನು ನಮ್ಮ ಸಿನಿಮಾದ ನಾಯಕರಂತೆ ಪ್ರೆಸೆಂಟ್ ಮಾಡಿದರೆ ಹೇಗೆ ಎಂಬ ಐಡಿಯಾ ಬಂದು. ಅದೇ ಐಡಿಯಾಗೆ ಸ್ಟಿಕ್ ಆದೆವು. ಆ ಬಳಿಕ ನಾನು ಮತ್ತು ರಾಜಮೌಳಿ ಪ್ರತಿದಿನ ಕನಿಷ್ಟ ಎರಡರಿಂದ ನಾಲ್ಕು ಗಂಟೆ ಕಾಲ ಕುಳಿತು ಚರ್ಚಿಸಿ ಕತೆಯನ್ನು ಅಂತಿಮಗೊಳಿಸಿದೆವು'' ಎಂದು ಕತೆ ಹುಟ್ಟಿದ ಬಗೆ ವಿವರಿಸಿದ್ದಾರೆ ವಿಜಯೇಂದ್ರ ಪ್ರಸಾದ್.

    'RRR' ಸಿನಿಮಾದ ಎರಡನೇ ಭಾಗ ಬರಬಹುದಾ?

    'RRR' ಸಿನಿಮಾದ ಎರಡನೇ ಭಾಗ ಬರಬಹುದಾ?

    'RRR' ಎರಡನೇ ಭಾಗ ಬರಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಪ್ರಸಾದ್, ''ಇಬ್ಬರು ನಾಯಕ ನಟರು ದೇಶ ಬಿಟ್ಟು ಹೊರಗೆ ಸಾಹಸ ಯಾತ್ರೆಗೆ ಹೋಗುವ ಕತೆಯನ್ನು ಮಾಡಬಹುದು. 1920 ರ ಸಮಯದಲ್ಲಿ ಭಾರತ ಮಾತ್ರವೇ ಅಲ್ಲದೆ ಇತರ ಕೆಲವು ದೇಶಗಳಲ್ಲೂ ಬ್ರಿಟೀಷ್ ರಾಜ್ಯಭಾರ ಇತ್ತಾದ್ದರಿಂದ ಅದೊಂದು ಸಾಹಸ ಯಾತ್ರೆಯ ಕತೆ ಮಾಡಬಹುದು. ಆದರೆ ಇದರ ಸಾಧ್ಯತೆಗಳ ಬಗ್ಗೆ ನಾನು ಹಾಗೂ ರಾಜಮೌಳಿ ಮಾತನಾಡಿಕೊಂಡಿಲ್ಲ. ಅಲ್ಲದೆ ಈಗ ನಾವು ಮಹೇಶ್ ಬಾಬು ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ದೊಡ್ಡ ಪ್ರಾಜೆಕ್ಟ್ ಆಗಿರುವ ಅದು ಮುಗಿಯಲು ಕನಿಷ್ಟ ಎರಡು ವರ್ಷ ಬೇಕು ಹಾಗಾಗಿ ಈ ಸಧ್ಯಕ್ಕಂತೂ 'RRR' ಮುಂದುವರೆದ ಭಾಗ ಬರುವುದು ಅನುಮಾನ'' ಎಂದಿದ್ದಾರೆ ವಿಜಯೇಂದ್ರ ಪ್ರಸಾದ್.

    Recommended Video

    RRR Collection | ಎಲ್ಲರ ಹುಬ್ಬೇರುವಂತೆ ಮಾಡಿದ RRR ಕಲೆಕ್ಷನ್
    ಭಾರತದ ಅತ್ಯುತ್ತಮ ಸಿನಿಮಾ ಕತೆಗಾರ

    ಭಾರತದ ಅತ್ಯುತ್ತಮ ಸಿನಿಮಾ ಕತೆಗಾರ

    ವಿಜಯೇಂದ್ರ ಪ್ರಸಾದ್ ಅವರು ಭಾರತದ ಅತ್ಯುತ್ತಮ ಸಿನಿಮಾ ಕತೆಗಾರರು. ಕನ್ನಡದ 'ಅಪ್ಪಾಜಿ', 'ಕುರುಬನ ರಾಣಿ', 'ಜಾಗ್ವಾರ್' 'ಪಾಂಡುರಂಗ ವಿಠಲ', ಸೇರಿದಂತೆ ತೆಲುಗಿನ 'ಬಾಹುಬಲಿ', 'ಸಿಂಹಾದ್ರಿ', 'ಈಗ', 'ಯಮದೊಂಗ', 'ಮಗಧೀರ', 'ವಿಕ್ರಮಾರ್ಕುಡು', ಹಿಂದಿಯ 'ಭಜರಂಗಿ ಭಾಯಿಜಾನ್', 'ಮಣಿಕರ್ಣಿಕ', ತಮಿಳಿನ 'ತಲೈವಿ' ಸೇರಿದಂತೆ ಹಲವು ಸಿನಿಮಾಗಳಿಗೆ ಕತೆ ಬರೆದಿದ್ದಾರೆ. ಇದೀಗ 'ಭಜರಂಗಿ ಭಾಯಿಜಾನ್' ಮುಂದುವರೆದ ಭಾಗದ ಜೊತೆಗೆ ತಾವೇ ಕತೆ ಬರೆದು ನಿರ್ದೇಶಿಸಲಿರುವ 'ಸೀತಾ' ಸಿನಿಮಾದ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ.

    English summary
    How RRR movie story idea came to story writer KS Vijayendra Prasad. He said he does not write the story.
    Wednesday, March 30, 2022, 17:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X