For Quick Alerts
  ALLOW NOTIFICATIONS  
  For Daily Alerts

  ಭಾರಿ ಬೇಡಿಕೆ: ಗಗನ ಮುಟ್ಟಿದ ಕೆಜಿಎಫ್ 2 ತೆಲುಗು ರೈಟ್ಸ್ ಬೆಲೆ!

  |

  ಕೆಜಿಎಫ್ 2 ಗಾಗಿ ಸಿನಿಮಾ ಪ್ರೇಮಿಗಳು ಹೇಗೆ ನಿರೀಕ್ಷೆಯಿಂದ ಕಾಯುತ್ತಿದ್ದಾರೆಂಬುದು ಟೀಸರ್ ಬಿಡುಗಡೆ ಆದಾಗಲೇ ಗೊತ್ತಾಗಿದೆ. ಕೆಲವೇ ಗಂಟೆಗಳಲ್ಲಿ ಕೆಜಿಎಫ್ 2 ಟೀಸರ್ ದಾಖಲೆಗಳನ್ನು ಬರೆದು, ವಿಶ್ವದಲ್ಲೇ ಅತಿ ಹೆಚ್ಚು ನೋಡಲ್ಪಟ್ಟ ಟೀಸರ್‌ ಎಂಬ ಖ್ಯಾತಿ ಗಳಿಸಿದೆ.

  ಟೀಸರ್ ಬಿಡುಗಡೆ ಬಳಿಕ ಕೆಜಿಎಫ್ 2 ಹವಾ ಎಂಥಹದ್ದು ಎಂಬುದು ಬಹುತೇಕರಿಗೆ ಅರ್ಥವಾಗಿದ್ದು. ಸಿನಿಮಾದ ಬೇಡಿಕೆ ಸಹ ಗಗನ ಮುಟ್ಟಿದೆ. ವಿವಿಧ ಭಾಷೆಗಳಲ್ಲಿ ಕೆಜಿಎಫ್ 2 ಸಿನಿಮಾದ ಹಕ್ಕುಗಳನ್ನು ಕೊಳ್ಳಲು ಮುಗಿಬೀಳುತ್ತಿದ್ದಾರೆ ಜನ.

  'ಕನ್ನಡ ಇಂಡಸ್ಟ್ರಿಯ ತಾಕತ್ ಜಗತ್ತಿಗೆ ಗೊತ್ತಾಯ್ತು': ರಾಜಮೌಳಿಗೆ ಗುನ್ನ ಕೊಟ್ಟ ವರ್ಮಾ

  ಕೆಜಿಎಫ್ 2 ಸಿನಿಮಾವು ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು. ಆಯಾ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಆಯಾ ರಾಜ್ಯದ ಪ್ರಮುಖ ನಿರ್ಮಾಣ ಮತ್ತು ವಿತರಣೆ ಸಂಸ್ಥೆಗಳೊಂದಿಗೆ ಮಾತುಕತೆ ಆಗಿದೆ.

  ಕೆಜಿಎಫ್ 2 ಹಕ್ಕಿಗೆ ಭಾರಿ ಬೇಡಿಕೆ

  ಕೆಜಿಎಫ್ 2 ಹಕ್ಕಿಗೆ ಭಾರಿ ಬೇಡಿಕೆ

  ಇದೀಗ ತೆಲುಗು ಮಾಧ್ಯಮಗಳೇ ವರದಿ ಮಾಡಿರುವಂತೆ. ಕೆಜಿಎಫ್ 2 ಪ್ರಸಾರ ಹಕ್ಕಿಗಾಗಿ ಭಾರಿ ಬೇಡಿಕೆ ಉಂಟಾಗಿದೆಯಂತೆ. ವಿತರಣೆ ಹಕ್ಕು ಈಗಾಗಲೇ ವಾರಾಹಿ ಮೂವೀಸ್ ಪಾಲಾಗಿದ್ದು. ಡಿಜಿಟಲ್ ಹಾಗೂ ಸ್ಯಾಟಲೈಟ್‌ ಹಕ್ಕು ಬರೋಬ್ಬರಿ 60 ಕೋಟಿ ರೂಪಾಯಿಗೆ ಮಾರಾಟವಾಗಲಿದೆ ಎನ್ನಲಾಗುತ್ತಿದೆ.

  ಮೊದಲ ಸಿನಿಮಾಕ್ಕೆ ಐದು ಕೋಟಿ ನೀಡಲಾಗಿತ್ತು

  ಮೊದಲ ಸಿನಿಮಾಕ್ಕೆ ಐದು ಕೋಟಿ ನೀಡಲಾಗಿತ್ತು

  ಕೆಜಿಎಫ್ ಮೊದಲ ಚಾಪ್ಟರ್ ಅನ್ನು ಐದು ಕೋಟಿಗೆ ಮಾತ್ರವೇ ಖರೀದಿಸಿದ್ದ ವಿತರಕರು ಭಾರಿ ಹಣ ಸಂಪಾದಿಸಿದರು. ಆದರೆ ಈ ಬಾರಿ ಕೇವಲ ಗುಂಟೂರು ವ್ಯಾಪ್ತಿಯಲ್ಲಿ ಬಿಡುಗಡೆ ಮಾಡಲು ಐದು ಕೋಟಿಗೂ ಹೆಚ್ಚು ಹಣ ನೀಡಲು ವಿತರಕರು ತಯಾರಾಗಿದ್ದಾರೆ ಎನ್ನಲಾಗುತ್ತಿದೆ.

  ಕೆಜಿಎಫ್ 2 ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಸುರಿದಿರುವುದು ಕೆಲವು ಕೋಟಿಗಳಲ್ಲ!

  ತೆಲುಗು ರಾಜ್ಯಗಳಲ್ಲಿ ಕೆಜಿಎಫ್ 2 ಗೆ ಭಾರಿ ಬೇಡಿಕೆ

  ತೆಲುಗು ರಾಜ್ಯಗಳಲ್ಲಿ ಕೆಜಿಎಫ್ 2 ಗೆ ಭಾರಿ ಬೇಡಿಕೆ

  ಕೆಜಿಎಫ್ ಸಿನಿಮಾ ಸರಣಿಗೆ ಎರಡೂ ತೆಲುಗು ರಾಜ್ಯಗಳಲ್ಲಿ ಭಾರಿ ಬೇಡಿಕೆ ಇದ್ದು, ಅಭಿಮಾನಿಗಳು ಕೆಜಿಎಫ್ 2 ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ. ಯಶ್ ಸಹ ತಮ್ಮದೇ ರಾಜ್ಯದ ಸ್ಟಾರ್ ನಟ ಎಂಬಂತೆ ತೆಲುಗಿನ ಸಿನಿಪ್ರೇಮಿಗಳು ಭಾವಿಸಿದ್ದು, ಕೆಜಿಎಫ್ ಸಹ ತಮ್ಮದೇ ಸಿನಿಮಾ ಎಂಬಂತೆ ಸ್ವೀಕರಿಸಲು ತಯಾರಾಗಿದ್ದಾರೆ.

  ತೆಲುಗಿನಲ್ಲಿ ವರಾಹಿ ಮೂವೀಸ್

  ತೆಲುಗಿನಲ್ಲಿ ವರಾಹಿ ಮೂವೀಸ್

  ಇನ್ನು ಕೆಜಿಎಫ್ 2 ಸಿನಿಮಾವನ್ನು ತೆಲುಗಿನಲ್ಲಿ ವರಾಹಿ ಮೂವೀಸ್, ಹಿಂದಿಯಲ್ಲಿ ಫರ್ಹಾನ್ ಅಖ್ತರ್‌ ರವರ ಎಕ್ಸೆಲ್ ಎಂಟರ್ಟೈನ್‌ಮೆಂಟ್, ಮಲಯಾಳಂ ನಲ್ಲಿ ಪೃಥ್ವಿರಾಜ್ ಪ್ರೊಡಕ್ಷನ್ಸ್, ತಮಿಳಿನಲ್ಲಿ ಎಎ ಫಿಲಮ್ಸ್‌ ನವರು ಬಿಡುಗಡೆ ಮಾಡಲಿದ್ದಾರೆ. ಕನ್ನಡದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಮೂಲಕ ಬಿಡುಗಡೆ ಆಗಲಿದೆ.

  English summary
  Huge demand for Yash's KGF 2 movie Telugu rights. Varahi movies is distributing KGF 2 Telugu movie in Telugu states.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X